ಗಜಾನನ ಸಾರಿಗೆ ಸಂಸ್ಥೆಯಲ್ಲಿ ಗುಂಪುಗಳ ನಡುವೆ ಹೊಡೆದಾಟ, ಇಬ್ಬರಿಗೆ ಗಾಯ, ಗಲಾಟೆಗೇನು ಕಾರಣ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಗಜಾನನ ಸಾರಿಗೆ ಸಂಸ್ಥೆಯ ಎರಡು ಗುಂಪುಗಳ ನಡುವೆ ಹೊಡೆದಾಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಸಂಬಂಧ ಸಾಗರ ನಗರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಗಲಾಟೆಗೆ ಕಾರಣವೇನು? ಲಾಕ್‍ಡೌನ್ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸೋಮವಾರದಿಂದ ಹಲವು ಮಾರ್ಗದಲ್ಲಿ ಬಸ್ ಸಂಚಾರ ಪುನಾರಂಭವಾಗಲಿದೆ ಎಂಬ ಮಾಹಿತಿ ಹಿನ್ನೆಲೆ ಕಾರ್ಮಿಕರು ಕಂಪನಿಗೆ ಆಗಮಿಸಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಮುಸುಕಿನ ಗುದ್ದಾಟ ಬಹಿರಂಗ … Read more

ಸೀಲ್ ಡೌನ್ ವ್ಯಾಪ್ತಿಯಲ್ಲಿಲ್ಲ ಶಿವಮೊಗ್ಗ KSRTC, ಖಾಸಗಿ ಬಸ್ ನಿಲ್ದಾಣ, BH ರೋಡಲ್ಲಿ ಸಂಚಾರಕ್ಕಿದ್ಯಾ ಅವಕಾಶ?

010220 KSRTC and Private Bus Stand 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2020 ಹಳೆ ಶಿವಮೊಗ್ಗ ಭಾಗವನ್ನು ಜುಲೈ 23ರಿಂದ ಸಂಪೂರ್ಣ ಸೀಲ್ ಡೌನ್ ಮಾಡಲಾಗುತ್ತಿದೆ. ಸೀಲ್ ಡೌನ್ ಸಂಬಂಧ ಮಹಾನಗರ ಪಾಲಿಕೆ ಹೊರಡಿಸಿರುವ ಆದೇಶದಲ್ಲಿ ಅಶೋಕ ವೃತ್ತವನ್ನು ಸೇರಿಸಲಾಗಿದೆ. ಆದರೆ ಬಸ್ ನಿಲ್ದಾಣಗಳು ಈ ವ್ಯಾಪ್ತಿಯಿಂದ ಹೊರಗೆ ಇರಲಿವೆ. ಅಶೋಕ ಸರ್ಕಲ್ ಕಂಟೈನ್ಮೆಂಟ್ ಜೋನ್ ವ್ಯಾಪ್ತಿಗೆ ಬರಲಿದೆ. ಆದರೆ ಕೆಎಸ್ಆರ್‍ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣಗಳು ಈ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ಸರ್ಕಾರಿ ಮತ್ತು ಖಾಸಗಿ … Read more

ಬೆಂಗಳೂರು ಟೂ ಶಿವಮೊಗ್ಗ, ಚೆಕ್‌ಪೋಸ್ಟ್‌ನಲ್ಲಿ ಗಂಟೆಗಟ್ಟಲೆ ಕಾದು ಜನ ಹೈರಾಣು, ಊರಿಗೆ ಬಂದವರಿಗೆ ಕಾಂಗ್ರೆಸ್‌ನಿಂದ ಊಟ

070520 Congress Issues Food Packets 1

ಶಿವಮೊಗ್ಗ ಲೈವ್.ಕಾಂ | SHIMOGA | 7 ಮೇ 2020 ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿರುವವರಿಗೆ ಊಟ, ನೀರಿಗು ಸಮಸ್ಯೆ ಆಗುತ್ತಿದೆ. ಇನ್ನು ತಮ್ಮೂರಿಗೆ ತಲುಪುವುದಕ್ಕೆ ಹರಸಾಹಸಪಡುವಂತಾಗಿದೆ. ಇತ್ತ ಶಿವಮೊಗ್ಗಕ್ಕೆ ಬರುವವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. ಚೆಕ್‍ಪೋಸ್ಟ್‌ನಲ್ಲಿ ಕಾದು ಕಾದು ಹೈರಾಣು ಬೆಂಗಳೂರಿನಿಂದ ಸರ್ಕಾರಿ ಬಸ್ಸುಗಳಲ್ಲಿ ಬರುವವರು ಜಿಲ್ಲೆಯ ಕಾರೇಹಳ್ಳಿ ಚೆಕ್‍ಪೋಸ್ಟ್‌ನಲ್ಲಿ ತಡೆದು ತಪಾಸಣೆ ನಡೆಸಲಾಗುತ್ತದೆ. ಬಸ್ಸಿನಲ್ಲಿ ಬರುವ ಪ್ರತಿ ಪ್ರಯಾಣಿಕರನ್ನು ಕೆಳಗಿಳಿಸಿ, ತಪಾಸಣೆ ನಡೆಸಲಾಗುತ್ತದೆ. ಆನಂತರವೆ ಬಸ್ಸನ್ನು ಜಿಲ್ಲೆಯೊಳಗೆ … Read more

ಹೊಳೆಹೊನ್ನುರು ಬಳಿ ಭೀಕರ ಅಪಘಾತ, ಬೈಕ್, ಮದುವೆ ದಿಬ್ಬಣದ ಬಸ್ ಮುಖಾಮುಖಿ ಡಿಕ್ಕಿ, ಗರ್ಭಿಣಿ ಸೇರಿ ಮೂವರು ಸಾವು

ಶಿವಮೊಗ್ಗ ಲೈವ್.ಕಾಂ | BHADRAVATHI | 16 ಫೆಬ್ರವರಿ 2020 ಮದುವೆ ದಿಬ್ಬಣದ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂಡಲ ವಿಠಲಾಪುರ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಹನುಂತಾಪುರದ ಈರಪ್ಪ (45), ಆಶಾ (34), ಹೇಮಂತ್ (7) ಮೃತ ದುರ್ದೈವಿಗಳು. ಹೊಳೆಹೊನ್ನೂರು ಆಸ್ಪತ್ರೆಗೆ ತೆರಳುವಾಗ ದುರ್ಘಟನೆ ಸಂಭಿವಿಸಿದೆ. ಜವರಾಯನಾದ ದಿಬ್ಬಣದ ಬಸ್ ಆರೋಗ್ಯ ತಪಾಸಣೆಗಾಗಿ ಗರ್ಭಿಣಿ ಪತ್ನಿಯನ್ನು ಈರಪ್ಪ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. … Read more

ಶಿವಮೊಗ್ಗದ ಸಿಟಿ ಬಸ್ಸುಗಳಿಗೆ ಮತ್ತೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್, ಒಂದೇ ದಿನ 13 ಬಸ್ಸುಗಳ ಮೇಲೆ ಕೇಸ್

Shimoga City Nehru Road General Image 1

ಶಿವಮೊಗ್ಗ ಲೈವ್.ಕಾಂ | SHIMOGA | 24 ಜನವರಿ 2020 ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವ ಶಿವಮೊಗ್ಗದ ಸಿಟಿ ಬಸ್’ಗಳಿಗೆ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ. ನಿರಂತರವಾಗಿ ದಂಡ ಪ್ರಯೋಗ ಮಾಡುತ್ತಿದ್ದಾರೆ. ಇದೇ ರೀತಿ ವರ್ತನೆ ಮುಂದುವರೆಸಿದರೆ ಇನ್ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿವಮೊಗ್ಗ ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಸಾರ್ವಜನಿಕರ ದೂರು ಹೆಚ್ಚಾದ ಹಿನ್ನೆಲೆ, ಶಿವಮೊಗ್ಗ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ … Read more

ಶಿವಮೊಗ್ಗ ಸಿಟಿ ಬಸ್, ಬೈಕ್ ನಡುವೆ ಡಿಕ್ಕಿ, ಸವಾರ ಸಾವು, ರೊಚ್ಚಿಗೆದ್ದ ಜನರಿಂದ ಬಸ್ ಮೇಲೆ ಕಲ್ಲು, ಗ್ಲಾಸ್ ಪೀಸ್ ಪೀಸ್

ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020 ಶಿವಮೊಗ್ಗದ ಮಿಳಘಟ್ಟ ರಸ್ತೆಯಲ್ಲಿ ಬೈಕ್ ಮತ್ತು ಸಿಟಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನನ್ನು ಸಾದಿಕ್ (31) ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳದಲ್ಲೇ ಸಾದಿಕ್ ಕೊನೆಯುಸಿರೆಳೆದಿದ್ದಾರೆ. ಅಪಘಾತವಾಗುತ್ತಿದ್ದಂತೆ ಸಾರ್ವಜನಿಕರು ಗುಂಪುಗೂಡಿದ್ದಾರೆ. ಅಲ್ಲದೆ ಸಿಟಿ ಬಸ್’ಗೆ ಕಲ್ಲು ತೂರಿದ್ದಾರೆ. ಗಾಜು ಪುಡಿ ಪುಡಿಯಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಘಟನೆಯಿಂದಾಗಿ ಮಿಳಘಟ್ಟ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ … Read more

ಇದು ಶಿವಮೊಗ್ಗದಿಂದ ಹೊರಡುವ ಸಾಮಾನ್ಯ ಬಸ್ಸಲ್ಲ, ಒಳಗಿರುವುದು ಸಾಮಾನ್ಯ ವ್ಯವಸ್ಥೆಯು ಅಲ್ಲ, ಏನೇನಿದೆ ಗೊತ್ತಾ?

071119 Kannada Ratha KSRTC Bus In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019 ಇದು ಸಮಾನ್ಯ KSRTC ಬಸ್ ಅಲ್ಲ. ಇದರಲ್ಲಿ ಪ್ರಯಾಣ ಮಾಡುವುದು ಒಂದು ವಿಶೇಷ ಅನುಭವ. ನೂರಾರು ಬಸ್ಸುಗಳ ನಡುವೆಯು ಕಣ್ಸೆಳೆಯುತ್ತದೆ ಈ ವಾಹನ. ಯಾಕೆಂದರೆ ಇದು ಶಿವಮೊಗ್ಗದಿಂದ ಹೊರಡುವ ಕನ್ನಡದ ರಥ. ಶಿವಮೊಗ್ಗ – ಹುಬ್ಬಳ್ಳಿ ನಡುವೆ ಪ್ರತಿದಿನ ಸಂಚರಿಸುವ ಸರ್ಕಾರಿ ಬಸ್ಸು, ಹಲವರನ್ನು ತನ್ನತ್ತ ಸೆಳೆಯುತ್ತಿದೆ. ಎಷ್ಟೊ ಬಾರಿ ಪ್ರಯಾಣಿಕರು ಬೇರೆ ಬಸ್ಸುಗಳನ್ನು ಬಿಟ್ಟು ಈ ಬಸ್ಸು ಹತ್ತಿ ಪ್ರಯಾಣ ಮಾಡಿದ ಉದಹಾರಣೆ ಇದೆ. … Read more

ಶಿವಮೊಗ್ಗ ಸಾಗರ ರಸ್ತೆಯಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತ, ಪ್ರಯಾಣಿಕರು ಸೇಫ್

ಶಿವಮೊಗ್ಗ ಲೈವ್.ಕಾಂ | SAGARA | 16 ಅಕ್ಟೋಬರ್ 2019 ಶಿವಮೊಗ್ಗ ಸಾಗರ ರಸ್ತೆಯಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಅತಿ ವೇಗವೆ ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಆನಂದಪುರ ಬಳಿಯ ಹೊಸೂರು ರೈಲ್ವೆ ಗೇಟ್ ಬಳಿ ರೈಲ್ವೆ ತಡೆಗೋಡೆಗೆ ಬಸ್ ಡಿಕ್ಕಿಯಾಗಿದೆ. ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಹೋಗಿದೆ. ಬಸ್ಸಿನಿಂದ ಕೆಳಗಿಳಿಯಲು ಪ್ರಯಾಣಿಕರ ಹರಸಾಹಸ ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿದ್ದರಿಂದ ಬಸ್ಸಿನ … Read more

ಆನಂದಪುರ ಬಳಿ ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ

ಶಿವಮೊಗ್ಗ ಲೈವ್.ಕಾಂ | ಆನಂದಪುರ | 13 ಜುಲೈ 2019 ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ರಸ್ತೆಗೆ ದಿಢೀರ್ ಬಂದ ದನಗಳಿಗೆ ಡಿಕ್ಕಿ ಹೊಡೆಯಲು ತಪ್ಪಿಸಲು ಹೋಗಿ, ಅಪಘಾತ ಸಂಭವಿಸಿದೆ. ಆನಂದಪುರ ಬಳಿಯ ಮುಂಬಾಳುವಿನಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಥಳೀಯರ ನೆರವಿನಿಂದ ಪ್ರಯಾಣಿಕರನ್ನು ಬಸ್ಸಿನಿಂದ ಹೊರಗೆ ಕರೆತರಲಾಗಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ … Read more

ಶಿವಮೊಗ್ಗದಲ್ಲಿ ಬಿಜೆಪಿ ಸಮಾವೇಶಕ್ಕೆ ಜನರನ್ನು ಕರೆತಂದಿದ್ದ ಬಸ್ಸುಗಳು ಸೀಜ್, ಉಚಿತವಾಗಿ ಊಟ ಹಂಚುತ್ತಿದ್ದ ವಾಹನ ವಶಕ್ಕೆ

shivamogga graphics map

ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ ಮತ್ತು ಸಮಾವೇಶದ ಸಂದರ್ಭ, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆ ಎರಡು ಬಸ್ ಸೇರಿ ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ, ಶಿವಮೊಗ್ಗ ಲೈವ್.ಕಾಂಗೆ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್, ಎನ್ಇಎಸ್ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ, ಬಿಜೆಪಿ ಧ್ವಜ ಮತ್ತು ಬ್ಯಾನರ್ ಹಾಕಿಕೊಂಡು ಖಾಸಗಿ ಬಸ್’ಗಳಲ್ಲಿ ಜನರನ್ನು ಕರೆತರಲಾಗುತ್ತಿತ್ತು. ಈ ಸಂಬಂಧ ಎರಡು ಬಸ್’ಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ … Read more