ಶಿವಮೊಗ್ಗದ ವಿವಿಧೆಡೆ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರೆಂಟ್‌ ಇರಲ್ಲ

power cut mescom ELECTRICITY

ಶಿವಮೊಗ್ಗ: ನಗರ ಉಪವಿಭಾಗ-1ರ ಘಟಕ-1ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ನ.25 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ವಿವಿಧೆಡೆ ಕರೆಂಟ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಮೆಹಬೂಬ್ ನಗರ, ವಾದಿ ಎ ಹುದಾ, ಬೈಪಾಸ್ ರಸ್ತೆ, ನಿಸರ್ಗ ಬಡಾವಣೆ, ಊರಗಡೂರು, ಸೂಳೆಬೈಲು, ಪುಟ್ಟಪ್ಪ ಕ್ಯಾಂಪ್, ಕ್ರಷರ್ ರಸ್ತೆ, ಮಳಲಿಕೊಪ್ಪ, ಇಂದಿರಾನಗರ, ಎಕೆಎಸ್ ಲೇಔಟ್, ಪಟೇಲ್ ಕಾಂಪೌಂಡ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ … Read more

ರಿಂಗ್‌ ರಸ್ತೆಯಲ್ಲಿ ಓಡಾಡುವಾಗ ಹುಷಾರ್‌, ಬೈಕಿನಲ್ಲಿ ತೆರಳಿದ್ದ ಯುವಕ, ಯುವತಿಯಿಂದ ಕೇಸ್‌ ದಾಖಲು

Police-Jeep-at-Shimoga-General-Image

ಶಿವಮೊಗ್ಗ: ವಿದ್ಯಾರ್ಥಿ ಮತ್ತು ಆತನ ಸ್ನೇಹಿತೆಗೆ (ಇಬ್ಬರ ಹೆಸರು ಗೌಪ್ಯ) ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಾಕು ತೋರಿಸಿ ಚಿನ್ನದ ಸರಗಳು, ಮೊಬೈಲ್‌ ಫೋನ್‌ ಕಸಿದು ಪರಾರಿಯಾಗಿದ್ದಾರೆ. ಶಿವಮೊಗ್ಗದ ಹೊಸ ರಿಂಗ್‌ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ವಿದ್ಯಾರ್ಥಿ ಮತ್ತು ಆತನ ಸ್ನೇಹಿತೆ ಪೆಸೆಟ್‌ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ಯಾಂಪಸ್‌ ಸೆಲೆಕ್ಷನ್‌ಗೆ ಬೈಕಿನಲ್ಲಿ ತೆರಳುತ್ತಿದ್ದರು. ರಿಂಗ್‌ ರಸ್ತೆಯಲ್ಲಿ ಮಧ್ಯಾಹ್ನ 1.30ರ ಹೊತ್ತಿಗೆ ಬೈಕ್‌ ನಿಲ್ಲಿಸಿ ಇಬ್ಬರು ಫೋಟೊ ಕ್ಲಿಕ್ಕಿಸಿಕೊಳ್ಳೂತ್ತಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿದ್ಯಾರ್ಥಿ ಮತ್ತು ಸ್ನೇಹಿತೆಗೆ … Read more

ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ಕುಡಿಯುವ ನೀರು ಪೂರೈಕೆ ಅನುಮಾನ

Drinking-Water-Tap

ಶಿವಮೊಗ್ಗ: ನಗರದ ಮಂಡ್ಲಿ ಭಾಗದಲ್ಲಿ ಮೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿದ್ದು, ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ನ. 14 ರಂದು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಆದ್ದರಿಂದ ನ.14 ಮತ್ತು 15 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗಲಿದೆ. ಈ ಪ್ರದೇಶಗಳ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಹಲವೆಡೆ ನಾಳೆ ಅರ್ಧ … Read more

ತೀರ್ಥಹಳ್ಳಿ ಮುಖ್ಯರಸ್ತೆಯಲ್ಲೇ ಬಸ್‌ ಬ್ರೇಕ್ ಫೇಲ್‌, ಬೈಕುಗಳು ಜಖಂ

bus-incident-at-koppa-circle-in-Thirthahalli-city.

ತೀರ್ಥಹಳ್ಳಿ: ತಾಂತ್ರಿಕ ದೋಷದಿಂದಾಗಿ ಖಾಸಗಿ ಬಸ್ಸೊಂದು (Bus) ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ತೀರ್ಥಹಳ್ಳಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಕೊಪ್ಪ ಸರ್ಕಲ್‌ ಸಮೀಪ ಅಪಘಾತಕ್ಕೀಡಾಗಿದೆ. ತೀರ್ಥಹಳ್ಳಿ ನಿಲ್ದಾಣದಿಂದ ಆಜಾದ್‌ ನಗರ ಮಾರ್ಗವಾಗಿ ತೆರಳುತಿತ್ತು. ಕೊಪ್ಪ ಸರ್ಕಲ್‌ ಬಳಿ ಬಸ್ಸಿನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಬ್ರೇಕ್‌ ಹಿಡಿಯುತ್ತಿರಲಿಲ್ಲ. ಎಚ್ಚೆತ್ತುಕೊಂಡ ಚಾಲಕ ಜಾಗರೂಕೆ ವಹಿಸಿ ಬಸ್‌ ನಿಲ್ಲಿಸಿಲು ಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸ್‌ ಬ್ಯಾರಿಕೇಡ್‌, ಫುಟ್‌ಪಾತ್‌ನ ರೇಲಿಂಗ್‌ ಮತ್ತು ದ್ವಿಚಕ್ರ ವಾಹನಗಳಿಗೆ ಬಸ್‌ … Read more

ಶಿವಮೊಗ್ಗ ಸಿಟಿಯ ರಸ್ತೆ ಗುಂಡಿಗಳನ್ನು ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌, ಯಾವಾಗ?

MLA-Channabasappa-gives-deadline-to-clear-pot-holes.

ಶಿವಮೊಗ್ಗ: ಪಾಲಿಕೆ ಇಂಜಿನಿಯರ್‌ಗಳು ತಮ್ಮ ವ್ಯಾಪ್ತಿಯ ರಸ್ತೆ ಗುಂಡಿಗಳ (Pot Holes) ಬಗ್ಗೆ ವರದಿ ಸಲ್ಲಿಸಬೇಕು. ಶೂನ್ಯ ಗುಂಡಿ ಅಭಿಯಾನದ ಮೂಲಕ ಅವುಗಳನ್ನು ಮುಚ್ಚಬೇಕು ಎಂದು ಶಾಸಕ ಎಸ್‌.ಎನ್.ಚನ್ನಬಸಪ್ಪ ಡೆಡ್‌ಲೈನ್‌ ಫಿಕ್ಸ್‌ ಮಾಡಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಸ್ತೆ ಗುಂಡಿಗಳನ್ನು ಬಂದ್‌ ಮಾಡುವಂತೆ ಸೂಚಿಸಿದರು. ಸಂಜೆ ಪರಿಶೀಲನೆ ಕಡ್ಡಾಯ ವಿದ್ಯುತ್ ನಿಧಿಯನ್ನು ಸಮರ್ಥವಾಗಿ ಬಳಸಿಕೊಂಡು, ನಗರದಾದ್ಯಂತ ಹಾಳಾಗಿರುವ ಬೀದಿ ದೀಪಗಳನ್ನು ತ್ವರಿತವಾಗಿ ಸರಿಪಡಿಸಬೇಕು. ಪ್ರತಿ ಸಂಜೆ 6 ಗಂಟೆಯ ನಂತರ … Read more

ಶಿವಮೊಗ್ಗ ನಗರದಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿ

SHIMOGA-CITY-NEWS-ENGLISH

ಶಿವಮೊಗ್ಗ ಸಿಟಿ: ನಗರದಲ್ಲಿ (city news) ಬುಧವಾರ ಇಡೀ ದಿನ ಏನೇನೆಲ್ಲ ನಡೆಯಿತು. ಇದಲ್ಲಿ ಕಂಪ್ಲೀಟ್‌ ಸುದ್ದಿ. ಒಂದೇ ಕ್ಲಿಕ್‌ನಲ್ಲಿ ಶಿವಮೊಗ್ಗ ನಗರದ ಸಂಪೂರ್ಣ ಸುದ್ದಿ. ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಕೋಟೆ ರಸ್ತೆ: ಬಾಲಕೀಯರ ವಸತಿ ನಿಲಯದ ಟೆರೇಸ್‌ ಮೇಲೆ ವಿದ್ಯಾರ್ಥಿನಿ ವನಿಷಾ (21) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವನಿಷಾ, ಭದ್ರಾವತಿ ತಾಲೂಕು ಗಂಗೂರು ಗ್ರಾಮದವರು. ಡಿವಿಎಸ್‌ ಪದವಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ಓದುತ್ತಿದ್ದರು. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ … Read more

ಮೈಸೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಉದ್ಯಮಿ ಕುಟುಂಬಕ್ಕೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

ಶಿವಮೊಗ್ಗ: ಕುಟುಂಬದವರೆಲ್ಲ ಮೈಸೂರಿನ ಚರ್ಚ್‌ಗೆ ತೆರಳಿದ್ದ ಸಂದರ್ಭ ಶಿವಮೊಗ್ಗದ ಕೀರ್ತಿನಗರದಲ್ಲಿರುವ ಮನೆಯಲ್ಲಿ ಕಳ್ಳತನವಾಗಿದೆ. ಕೊಠಡಿಯ ವಾರ್ಡ್‌ರೋಬ್‌ನಲ್ಲಿದ್ದ ಚಿನ್ನಾಭರಣ, ವಾಚುಗಳು, ಕ್ಯಾಮರಾಗಳು ಕಳುವಾಗಿವೆ (Theft) ಎಂದು ಆರೋಪಿಸಲಾಗಿದೆ. ಕೀರ್ತಿನಗರದಲ್ಲಿರುವ ಉದ್ಯಮಿ ಜೇಮ್ಸ್‌ ಸ್ಟೀವನ್‌, ಕುಟುಂಬ ಸಹಿತ ಮೈಸೂರಿನ ಡೋರನಹಳ್ಳಿಯ ಚರ್ಚ್‌ಗೆ ತೆರಳಿದ್ದರು. ಅಲ್ಲಿಂದ ವಾಪಾಸಾದಾಗ ಮನೆಯ ಗೇಟ್‌ ಮತ್ತು ಬಾಗಿಲಿನ ಬೀಗ ಮುರಿದಿರುವುದು ಗೊತ್ತಾಗಿದೆ. ಒಳಗೆ ಪರಿಶೀಲಿಸಿದಾಗ ವಾರ್ಡ್‌ ರೋಬ್‌ನಲ್ಲಿದ್ದ ₹45,000 ಮೌಲ್ಯದ 870 ಗ್ರಾಂನ ಬೆಳ್ಳಿ ವಸ್ತುಗಳು, ₹33,000 ಮೌಲ್ಯದ 7 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್‌, … Read more

ಶಿವಮೊಗ್ಗ ಸಿಟಿಯಲ್ಲಿ ದೀಪಾವಳಿ ಮೆರಗು ಹೆಚ್ಚಿಸಿದ ಅಂಟಿಗೆ ಪಂಟಿಗೆ

211025-Antige-Pantige-in-shimoga-city.webp

SHIMOGA : ದೀಪಾವಳಿ ಸಂದರ್ಭ ಮಲೆನಾಡಿನಲ್ಲಿ ಅಂಟಿಗೆ ಪಂಟಿಗೆ (Antige Pantige) ಜ್ಯೋತಿ ಕೊಂಡೊಯ್ಯುವ ಸಂಪ್ರದಾಯ ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವತಿಯಿಂದ ಶಿವಮೊಗ್ಗ ನಗರದ ವಿವಿಧ ಬಡಾವಣೆಯ ಮನೆಗಳಿಗೆ ಅಂಟಿಗೆ ಪಂಟಿಗೆ ಜ್ಯೋತಿ ಕೊಂಡೊಯ್ಯಲಾಯಿತು. ಈ ಮೂಲಕ ನಗರದ ಪ್ರದೇಶದ ಜನರಿಗು ಅಂಟಿಗೆ ಪಂಟಿಗೆ ಪರಿಚಯಿಸುವ ಪ್ರಯತ್ನವಾಯಿತು. ಆದಿಚುಂಚನಗಿರಿ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಅಂಟಿಗೆ ಪಂಟಿಗೆ (Antige Pantige) ತಂಡಗಳಿಗೆ ಚಾಲನೆ ನೀಡಲಾಯಿತು. ಶಿವಮೊಗ್ಗ ‌ಶಾಖಾ ಮಠದ ನಾದನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಕಾಲಭೈರವೇಶ್ವರ ದೇವಸ್ಥಾನದಿಂದ‌ ಸಂಜೆ ಹೊರಟ … Read more

ಶಿವಮೊಗ್ಗದಲ್ಲಿ RSS ಪಥ ಸಂಚಲನ, ಹೇಗಿತ್ತು? ಇಲ್ಲಿವೆ ಸಾಲು ಸಾಲು ಫೋಟೊ ಸಹಿತ ಮಾಹಿತಿ

RSS-route-march-in-Shimoga-city

ಶಿವಮೊಗ್ಗ: RSS ಶತಮಾನೋತ್ಸವ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಇವತ್ತು ವೈಭವದ ಪಥಸಂಚಲನ ನಡೆಯಿತು. ಸುಮಾರು ಐದು ಸಾವಿರ ಕಾರ್ಯಕರ್ತರು ಪಥ ಸಂಚಲನದಲ್ಲಿ (Route March) ಪಾಲ್ಗೊಂಡಿದ್ದರು. ಕೋಟೆ ರಸ್ತೆಯ ಜೈನ್‌ ಸಮುದಾಯ ಭವನದ ಬಳಿ ಸಂಘಟನೆಯ ಧ್ವಜ ಪ್ರಮುಖ ಕೋ.ನಂ.ರವೀಂದ್ರ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಕ್ಕೆ ನಮನ ಸಲ್ಲಿಸಿದ ಬಳಿಕ ಪಥ ಸಂಚಲನ ಆರಂಭವಾಯಿತು. ರಾಮಣ್ಣ ಶ್ರೇಷ್ಠಿ ಪಾರ್ಕ್‌, ಗಾಂಧಿ ಬಜಾರ್‌, ಶಿವಮೂರ್ತಿ ಪ್ರತಿಮೆ, ಎ.ಎ.ಸರ್ಕಲ್‌, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್‌ ಸರ್ಕಲ್‌, ಜೈಲ್‌ … Read more

RSS Route March in Shivamogga on October 12

111025-all-set-for-RSS-route-march-in-Shimoga.webp

Shivamogga: A route march has been organized in Shivamogga on October 12th by the Rashtriya Swayamsevak Sangh (RSS) to mark its centenary year and the occasion of Vijayadashami. Final preparations are underway in the city for the event. The route march is scheduled to begin at 4 PM on Sunday from the Kote Marikamba Temple … Read more