ಫ್ಲೆಕ್ಸ್ ವಿವಾದ, ಶಿವಮೊಗ್ಗದಲ್ಲಿ ಕೋಟಿ ಕೋಟಿ ನಷ್ಟ, ‘ಬ್ರ್ಯಾಂಡ್ ಶಿವಮೊಗ್ಗ’ಕ್ಕೆ ಕಪ್ಪು ಚುಕ್ಕೆ

Flex-Controversy-Special-Coverage-Cover-photo

ಶಿವಮೊಗ್ಗ| ಸಾವರ್ಕರ್ ಫೋಟೊ (SAVARKAR FLEX CONTROVERSY) ವಿವಾದ ಶಿವಮೊಗ್ಗ ನಗರದಲ್ಲಿ ಎರಡು ದಿನದ ವ್ಯಾಪಾರ ವಹಿವಾಟನ್ನು (BUSINESS) ಕಸಿದುಕೊಂಡಿದೆ. ಕೋಟ್ಯಂತರ ರೂ. ನಷ್ಟವನ್ನು ಉಂಟ ಮಾಡಿದೆ. ಹಲವರ ತುತ್ತು ಚೀಲಕ್ಕೆ ಕುತ್ತು ತಂದಿದೆ. ಆ.15ರಂದು ಮಧ್ಯಾಹ್ನ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ತಕ್ಷಣದಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. ಇದರಿಂದ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ನಗರದ ವ್ಯಾಪಾರಿಗಳು ಹೈರಾಣು ಶಿವಮೊಗ್ಗದ ಬಿ.ಹೆಚ್.ರಸ್ತೆ, ನೆಹರೂ … Read more

ಸಹಜ ಸ್ಥಿತಿಯತ್ತ ಶಿವಮೊಗ್ಗ, ಇವತ್ತು ಹೇಗಿದೆ ಪರಿಸ್ಥಿತಿ? ಬಸ್ಸು, ವಾಹನ ಸಂಚಾರವಿದ್ಯಾ?

Shimoga-City-During-144-Section

ಶಿವಮೊಗ್ಗ| ನಗರ ಇವತ್ತು ಸಹಜ ಸ್ಥಿತಿಗೆ ಮರಳುತ್ತಿದೆ. ಶಾಲೆ, ಕಾಲೇಜುಗಳು (SCHOOL COLLEGE) ಪುನಾರಂಭವಾಗಿವೆ. ಜನ ಮತ್ತು ವಾಹನ ಸಂಚಾರವು ನಿಧಾನಕ್ಕೆ ಆರಂಭವಾಗುತ್ತಿದೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ (BANDOBASTH) ನಿಯೋಜನೆ ಮಾಡಲಾಗಿದೆ. ಸಾವರ್ಕರ್ ಫ್ಲೆಕ್ಸ್ (SAVARKAR FLEX) ವಿವಾದದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಇವತ್ತು ನಗರ ಸಹಜ … Read more

ನಾಟಕ ಪ್ರದರ್ಶನ ಅರ್ಧಕಕ್ಕೆ ಮೊಟಕು, ಆಕ್ರೋಶದಲ್ಲಿ ಕಲಾವಿದರು, ಮಾಜಿ ಸಿಎಂ ಟ್ವೀಟ್

Anavatti-Drama-Stopped-Controversy

SHIVAMOGGA LIVE NEWS | SORABA | 5 ಜುಲೈ 2022 ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅಡ್ಡಿಪಡಿಸಿದ್ದರಿಂದ ನಾಟಕವೊಂದರ (DRAMA CONTROVERSY) ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಬೆಳವಣಿಗೆ ಪರ ಮತ್ತು ವಿರೋಧ ತೀವ್ರ ಚರ್ಚೆ ಹುಟ್ಟುಹಾಕಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಟ್ವೀಟ್ ಮಾಡಿದ್ದಾರೆ. ಸೊರಬ ತಾಲೂಕು ಆನವಟ್ಟಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ನಾಟಕ ಪ್ರದರ್ಶನಕ್ಕೆ … Read more

ಶಿವಮೊಗ್ಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ, ಹಿಜಾಬ್ ತೆಗೆಯಲು ಒಪ್ಪದೆ ಮನೆ ಕಡೆ ಹೊರಟಿದ್ದ ವಿದ್ಯಾರ್ಥಿನಿಯ ಮನವೊಲಿಕೆ

SSLC-exam-in-Shimoga.

SHIVAMOGGA LIVE NEWS | 28 ಮಾರ್ಚ್ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯುತ್ತಿದೆ. ವಿವಾದಗಳನ್ನು ಪಕ್ಕಕ್ಕಿಟ್ಟು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಹಿಜಾಬ್ ಧರಿಸಲು ಅವಕಾಶ ನೀಡದ ಕಾರಣ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದ ವಿದ್ಯಾರ್ಥಿನಿಯ ಮನವೊಲಿಸಲಾಗಿದೆ. ಜಿಲ್ಲೆಯಾದ್ಯಂತ 94 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 24,381 ವಿದ್ಯಾರ್ಥಿಗಳು ಇವತ್ತು ಪರೀಕ್ಷೆ ಎದುರಿಸುತ್ತಿದ್ದಾರೆ. ಹಿಜಾಬ್ ವಿವಾದದ ಬೆನ್ನಿಗೆ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಹೈಕೋರ್ಟ್ ತೀರ್ಪು ನೀಡುತ್ತು. ಆ ನಂತರವು ಹಿಜಾಬ್ ಪರ ವಿದ್ಯಾರ್ಥಿನಿಯರು ಹೋರಾಟ ಮುಂದುವರೆಸಿದ್ದರು. … Read more

ಜಾತ್ರೆಯ ಮಳಿಗೆಗಳ ಮುಂದೆ ಜನವೋ ಜನ, ಅಲಂಕಾರಿಕ ವಸ್ತುಗಳತ್ತ ಮಾನಿನಿಯರ ಚಿತ್ತ, ಆಟಿಕೆಗಳಿಗಾಗಿ ಮಕ್ಕಳ ಹಠ

Shops-in-Shimoga-Marikamba-Jathre

SHIVAMOGGA LIVE NEWS | 23 ಮಾರ್ಚ್ 2022 ಕೋಟೆ ರಸ್ತೆಯಲ್ಲಿ ಸ್ಥಾಪನೆ ಮಾಡಲಾಗಿರುವ ಮಳಿಗೆಗಳು ಶ್ರೀ ಮಾರಿಕಾಂಬ ದೇವಿ ಜಾತ್ರೆಯ ಮೆರಗು ಹೆಚ್ಚಿಸಿವೆ. ಜಾತ್ರೆಗೆ ಬಂದ ಭಕ್ತರು ಮಳಿಗೆಗಳ ಮುಂದೆ ಗುಂಪುಗೂಡಿದ್ದು, ಹಲವು ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಮಳಿಗೆಗಳ ಮೇಲೆ ಕೇಸರಿ ಧ್ವಜ ಜಾತ್ರೆಯ ಮಳಿಗೆ ಹಂಚಿಕೆ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ಹಿಂದೂಗಳ ಹೊರತು ಅನ್ಯ ಧರ್ಮಿಯರು ಮಳಿಗೆ ಸ್ಥಾಪಿಸಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಹಾಗಾಗಿ ಮಳಿಗೆಗಳ ಸಂಖ್ಯೆ ಕಡಿಮೆಯಾಗಿದೆ. ಈಗ ಸ್ಥಾಪನೆ ಆಗಿರುವ … Read more

ಕೋಟೆ ಮಾರಿಕಾಂಬ ಜಾತ್ರೆ ಮಳಿಗೆ ಹಂಚಿಕೆ ವಿವಾದ, ಟೆಂಡರ್ ಪಡೆದಿದ್ದವನಿಗೆ ಜೀವ ಬೆದರಿಕೆಯ ಆರೋಪ

Kote-Marikamba-Jathre-Preparation-

SHIVAMOGGA LIVE NEWS | 20 ಮಾರ್ಚ್ 2022 ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಮಳಿಗೆ ಹಂಚಿಕೆ ಸಂಬಂಧ ವಿವಾದ ಸೃಷ್ಟಿಯಾಗಿದೆ. ಮಳಿಗೆಗಳ ಟೆಂಡರ್ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಒಡ್ಡಿರುವ ಆರೋಪವು ಕೇಳಿ ಬಂದಿದೆ. ಅನ್ಯ ಧರ್ಮಿಯರಿಗೆ ಮಳಿಗೆ ಕೊಡಬಾರದು ಎಂದು ಹಿಂದೂ ಸಂಘಟನೆಗಳ ಮುಖಂಡರು ಪಟ್ಟು ಹಿಡಿದಿದ್ದಾರೆ. ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯು ಶಿವಮೊಗ್ಗ ನಗರದ ಊರ ಹಬ್ಬ ಎಂದು ಖ್ಯಾತಿ ಪಡೆದಿದೆ. ಎರಡು … Read more

ತೀರ್ಪು ಬಂದರೂ ಶಿವಮೊಗ್ಗದಲ್ಲಿ ಕೆಲವು ವಿದ್ಯಾರ್ಥಿನಿಯರಿಂದ ಹಿಜಾಬ್’ಗೆ ಪಟ್ಟು

Hijab-Controversy-Continues-in-Shimoga-College.

SHIVAMOGGA LIVE NEWS | 16 ಮಾರ್ಚ್ 2022 ಹೈಕೋರ್ಟ್ ತೀರ್ಪು ಹಿನ್ನೆಲೆ ಹಿಜಾಬ್ ಧರಿಸಿ ಬಂದವರಿಗೆ ಶಾಲೆ, ಕಾಲೇಜುಗಳ ತರಗತಿ ಪ್ರವೇಶವನ್ನು ನಿರಾಕರಿಸಲಾಯಿತು. ಬಹುತೇಕ ಕಡೆ ವಿದ್ಯಾರ್ಥಿನಿಯರು ತೀರ್ಪಿಗೆ ಮನ್ನಣೆ ನೀಡಿದರು. ನಗರದ ಒಂದು ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಹಠ ಹಿಡಿದರು. ಕಾಲೇಜು ಬಳಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ತರಗತಿಗೆ ತೆರಳಿದ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪು ಬಂದ ನಂತರ ಇವತ್ತು ಶಾಲೆ, ಕಾಲೇಜುಗಳ ತರಗತಿ ಪುನಾರಂಭವಾಗಿವೆ. ಬಹುತೇಕ ಕಡೆ … Read more

‘ಮುಸ್ಲಿಂ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗದ ರೀತಿ ಸರ್ಕಾರ ಯೋಚಿಸಲಿದೆ’

Minister KS Eshwarappa

SHIVAMOGGA LIVE NEWS | 15 ಮಾರ್ಚ್ 2022 ಸರ್ಕಾರದ ತೀರ್ಮಾನವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗದ ರೀತಿಯಲ್ಲಿ ಸರ್ಕಾರ ಯೋಚನೆ ಮಾಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಕೋರ್ಟ್ ತೀರ್ಮಾನವನ್ನು ಸ್ವಾಗತ ಮಾಡುತ್ತೇನೆ. ದೇಶದಲ್ಲಿ ಇರುವ ಗೊಂದಲ ನಿವಾರಣೆ ಆಗಿದೆ. ಎಲ್ಲಾ ವಿದ್ಯಾರ್ಥಿಗಳು ತಕ್ಷಣದಿಂದ ಶಾಲೆ, ಕಾಲೇಜುಗಳಿಗೆ ತೆರಳಬೇಕು ಎಂದು ಸಲಹೆ ನೀಡಿದರು. ಮಕ್ಕಳ ಶಿಕ್ಷಣ ಹಾಳಾಗಿದೆ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಆಗಿದೆ. … Read more

ಶಿವಮೊಗ್ಗದಲ್ಲಿ ಇವತ್ತು ನಿಷೇಧಾಜ್ಞೆ, ಹೇಗಿದೆ ಬಂದೋಬಸ್ತ್? ಎಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ?

Police Bus at Shimoga BH Road

SHIVAMOGGA LIVE NEWS | 15 ಮಾರ್ಚ್ 2022 ಹಿಜಾಬ್ ವಿವಾದ ಕುರಿತು ಇವತ್ತು ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಶಿವಮೊಗ್ಗದಲ್ಲಿ 8 KSRP ತುಕಡಿಗಳು, 8 DAR ತುಕಡಿಗಳು, 1 RAF ತುಕಡಿಗಳನ್ನು ಬಂದೋಬಸ್ತ್’ಗೆ ನಿಯೋಜನೆ ಮಾಡಲಾಗಿದೆ. ಇನ್ನು, ಹೈಕೋರ್ಟ್ ತೀರ್ಪು ಪ್ರಕಟವಾದ … Read more

BREAKING NEWS | ಶಿವಮೊಗ್ಗದಲ್ಲಿ ಮಾ.15ರಂದು ನಡೆಯಬೇಕಿದ್ದ ಪರೀಕ್ಷೆಗಳ ಕುರಿತು ಜಿಲ್ಲಾಧಿಕಾರಿ ಆದೇಶ

breaking news graphics

SHIVAMOGGA LIVE NEWS | 14 ಮಾರ್ಚ್ 2022 ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ನಡುವೆ ಮಾರ್ಚ್ 15ರಂದು ನಡೆಯಲಿರುವ ಕೆಲವು ಪರೀಕ್ಷೆಗಳ ಕುರಿತು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಮಾರ್ಚ್ 15ರಂದು ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ನಿಗದಿಯಾಗಿತ್ತು. ಆ ಪರೀಕ್ಷೆಯನ್ನ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ … Read more