ತರಗತಿಗೆ ಬಂದವರಿಗೆ ಸಿಕ್ತು ಇಂಜೆಕ್ಷನ್, ಹೇಗಿತ್ತು ಮೊದಲ ದಿನದ ಪದವಿ ಕ್ಲಾಸ್? ಶೇ.40ರಷ್ಟು ವಿದ್ಯಾರ್ಥಿಗಳು ಗೈರಾಗಿದ್ದೇಕೆ?

270721 Degree Colleges Restarts at Shimoga District 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಜುಲೈ 2021 ನಾಲ್ಕು ತಿಂಗಳ ಬಳಿಕ ಪದವಿ ಕಾಲೇಜುಗಳು ಪುನಾರಂಭವಾಗಿದೆ. ಮೊದಲ ದಿನ ಶೇ.60ರಷ್ಟು ಹಾಜರಾತಿ ಇತ್ತು. ಕರೋನಾ ಲಾಕ್‍ ಡೌನ್ ಹಿನ್ನೆಲೆ ಪದವಿ ಕಾಲೇಜುಗಳು ಬಂದ್ ಆಗಿದ್ದವು. ನಾಲ್ಕು ತಿಂಗಳ ಬಳಿಕ ಆರಂಭವಾಗಿದ್ದು, ವಿದ್ಯಾರ್ಥಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತರಗತಿಗಳಲ್ಲಿ ಪಾಠಗಳು ಶುರುವಾಗಿದೆ. ಹೇಗಿತ್ತು ಮೊದಲ ದಿನ? ಜಿಲ್ಲೆಯಲ್ಲಿ 8 ಅನುದಾನಿತ ಕಾಲೇಜು, 16 ಸರ್ಕಾರಿ ಪದವಿ ಕಾಲೇಜು, 60ಕ್ಕೂ ಅಧಿಕ ಖಾಸಗಿ ಕಾಲೇಜುಗಳಿವೆ. ಅನುದಾನಿತ … Read more

ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ, ಯಾರೆಲ್ಲ ಲಸಿಕೆ ಪಡೆಯಬಹುದು? ಸ್ಥಳ ಎಲ್ಲಿ?

Covid Vaccine General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2021 ಶಿವಮೊಗ್ಗದ ನಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗುತ್ತಿದೆ. ಜುಲೈ 23ರಿಂದ ಕೋವಿಶೀಲ್ಡ್‍ ಲಸಿಕೆ ನೀಡಲಾಗುತ್ತದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. 18 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತದೆ. ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಲಸಿಕೆ ನೀಡಲಾಗುತ್ತದೆ. ಪ್ರತಿ ಲಸಿಕೆಗೆ 780 ರೂ. ಇರಲಿದೆ. ಆನ್‍ಲೈನ್ ಬುಕಿಂಗ್ ಅಥವಾ ನೇರವಾಗಿ ಆಸ್ಪತ್ರೆಗೆ … Read more

ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ, ಹೆಸರು ರಿಜಿಸ್ಟರ್ ಮಾಡಿಕೊಳ್ಳಲು ಸೂಚನೆ

Covid Vaccine General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2021 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‍ಒಯು) ಶಿವಮೊಗ್ಗದ ಪ್ರದೇಶಿಕ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಆದ್ದರಿಂದ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಕೆಎಸ್‍ಓಯು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಸಿಕೆ ಪಡೆಯಲು ವಿದ್ಯಾರ್ಥಿಗಳು ಶಿವಮೊಗ್ಗದ ಸಾಗರ ರಸ್ತೆಯ ಆಲ್ಕೊಳ ಸರ್ಕಲ್‍ನಲ್ಲಿರುವ ಕೆಎಸ್‍ಓಯು ಪ್ರಾದೇಶಿಕ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-250367 … Read more