ಜಂಬೂ ಸವಾರಿ ಆನೆಗಳು ಇನ್ನು ಮೂರ್ನಾಲ್ಕು ದಿನ ಫುಲ್ ರೆಸ್ಟ್, ವೈದ್ಯರು, ಮಾವುತರಿಂದ ತೀವ್ರ ನಿಗಾ, ಯಾಕೆ ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 10 ಅಕ್ಟೋಬರ್ 2019 ಶಿವಮೊಗ್ಗ ದಸರಾದ ಮೆರಗು ಹೆಚ್ಚಿಸಿದ್ದ ಆನೆಗಳು ಸಕ್ರೆಬೈಲಿನಲ್ಲಿರುವ ಬಿಡಾರಕ್ಕೆ ಹಿಂತಿರುಗಿವೆ. ಇವತ್ತಿನಿಂದ ಮೂರ್ನಾಲ್ಕು ದಿನ ಈ ಆನೆಗಳ ಮೇಲೆ ನಿಗಾ ವಹಿಸಲಾಗುತ್ತದೆ. ಅವುಗಳ ಚಲನವಲನ, ಆಹಾರ ಸೇವಿಸುವುದು ಸೇರಿದಂತೆ ಪ್ರತಿ ಆಗುಹೋಗುವಿನ ಕುರಿತು ಎಚ್ಚರ ವಹಿಸಲಾಗುತ್ತದೆ. ಅಂಬಾರಿ ಹೊತ್ತ ಸಾಗರ್, ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಗಂಗೆ ಮತ್ತು ಭಾನುಮತಿ ಆನೆಗಳನ್ನು ಇನ್ನು ಮೂರ್ನಾಲ್ಕು ದಿನ ಸಕ್ರೆಬೈಲಿನ ಕ್ಯಾಂಪ್‌ನಲ್ಲಿ ಇರಿಸಲಾಗುತ್ತದೆ. ಅವುಗಳ ಆರೋಗ್ಯದ ಸಂಪೂರ್ಣ ತಪಾಸಣೆ ನಡೆಸಲಾಗುತ್ತದೆ. … Read more