ಬೈಕ್, ಪಿಕಪ್ ಡಿಕ್ಕಿ, ತೀರ್ಥಹಳ್ಳಿ ತುಂಗಾ ಕಾಲೇಜು ನಿವೃತ್ತ ಪ್ರಾಂಶುಪಾಲರು ಸಾವು

ಶಿವಮೊಗ್ಗ ಲೈವ್.ಕಾಂ |THIRTHAHALLI NEWS | 14 NOVEMBER 2020 ಬೈಕ್ ಮತ್ತು ಬೊಲೆರೊ ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾಗಿ ತೀರ್ಥಹಳ್ಳಿಯ ತುಂಗಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ.ಟಿ.ರಾಮಪ್ಪ (60) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೇಗಾಯ್ತು ಘಟನೆ? ಡಾ. ಬಿ.ಟಿ.ರಾಮಪ್ಪ ಅವರು ಬೈಕ್‍ನಲ್ಲಿ ಬಿದರಗೋಡಿನಲ್ಲಿರುವ ತಮ್ಮ ಜಮೀನಿಗೆ ತೆರಳುತ್ತಿದ್ದರು. ನಾಲೂರು ಸಮೀಪ ಕೊಳಿಗೆ ತಿರುವಿನ ಬಳಿ ಎದುರಿನಿಂದ ಬಂದ ಬೊಲೆರೊ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪಿಕಪ್ ವಾಹನ ಉಡುಪಿ ಕಡೆಗೆ ತೆರಳುತ್ತಿತ್ತು. ತೀವ್ರ ಪೆಟ್ಟು, ರಕ್ತಸ್ರಾವ, … Read more

ಸಕ್ರೆಬೈಲು ಬಿಡಾರದ ರಂಗನ ಮೇಲೆ ಕಾಡಾನೆಗಳ ದಾಳಿ, ಸ್ಥಳದಲ್ಲೇ ಸಾವು

241020 Ranga Elephant Dies in Sakrebyle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಅಕ್ಟೋಬರ್ 2020 ಕಾಡಾನೆ ದಾಳಿಗೆ ತುತ್ತಾಗಿ ಸಕ್ರೆಬೈಲಿನ ಸಾಕಾನೆ ರಂಗ (35) ಮೃತಪಟ್ಟಿದೆ. ಕಾಡಿನಲ್ಲಿದ್ದ ವೇಳೆ ರಂಗನ ಮೇಲೆ ದಾಳಿಯಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದೆ. ಉಳಿದ ಆನೆಗಳಂತೆ ರಾತ್ರಿ ರಂಗನನ್ನು ಕಾಡಿಗೆ ಬಿಡಲಾಗಿತ್ತು. ಈ ವೇಳೆ ಕಾಡಾನೆಗಳು ದಾಳಿಯಾಗಿದೆ. ರಂಗನಿಗೆ ಸರಪಳಿಯಿಂದ ಕಟ್ಟಲಾಗಿತ್ತು. ಹಾಗಾಗಿ ದಾಳಿಯಿಂದ ತಪ್ಪಿಸಿಕೊಳ್ಳಲು ಸಾದ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಬೆಳಗ್ಗೆ ಮಾವುತರು ಆನೆಗಳನ್ನು ಬಿಡಾರಕ್ಕೆ ಕರೆದುಕೊಂಡು ಬರಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು, ವೈದ್ಯರು … Read more

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗೆ ಹೃದಯಾಘಾತ, ಸಾವು

shimoga central jail building

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಅಕ್ಟೋಬರ್ 2020 ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಯೊಬ್ಬ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರದ ಲೋಕೇಶ್ ಬಂಗೇರ (53) ಮೃತ ಕೈದಿ. ಗುರುವಾರ ಕೈದಿ ಲೋಕೇಶ್‍ಗೆ  ಎದೆನೋವು ಕಾಣಿಸಿಕೊಂಡಿದೆ. ಕೂಡಲೆ ಅವರು ಜೈಲು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ, ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ  ಎಂದು ಜೈಲು ಆರೋಗ್ಯಾಧಿಕಾರಿ ತಿಳಿಸಿದರು. ಕೊಠಡಿಯಲ್ಲಿದ್ದ ಮಾಸ್ಕ್ ತೆಗೆದುಕೊಂಡು ಬರುವುದಾಗಿ … Read more

ಸಕ್ರೆಬೈಲು ಆನೆ ಬಿಡಾರದ ಏಕದಂತ ಇನ್ನಿಲ್ಲ, ಸಾವಿಗೆ ಕಾರಣವೇನು?

201020 Elephant Ekadantha Dies at Sakrebyle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಅಕ್ಟೋಬರ್ 2020 ಎರಡು ದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಶಿವಮೊಗ್ಗ ಸಕ್ರೆಬೈಲಿನ ಬಿಡಾರದ ಆನೆ ಏಕದಂತ ಇವತ್ತು ಮೃತಪಟ್ಟಿದೆ. ಆನೆಗೆ 35 ವರ್ಷ ವಯಸ್ಸಾಗಿತ್ತು. ಎರಡು ದಿನದಿಂದ ಏಕದಂತ ಆನೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಇವತ್ತು ಶೆಟ್ಟಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಏಕದಂತ ಆನೆ ಮೃತಪಟ್ಟಿದೆ. ಎರಡು ವರ್ಷದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಸಕ್ರೆಬೈಲು ಆನೆ ಬಿಡಾರದಲ್ಲಿ ಇದನ್ನು ಪಳಗಿಸಲಾಗಿತ್ತು. ಅನಾರೋಗ್ಯದ ಹಿನ್ನೆಲೆ ಸಕ್ರೆಬೈಲು … Read more

ತುಂಗಾ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಶಿವಮೊಗ್ಗ ಪಾಲಿಕೆ ಕಾರ್ಪೊರೇಟರ್ ಪುತ್ರ, ಮೃತದೇಹ ಪತ್ತೆ

150820 Corporator Son Dies in Tunga Channel 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಆಗಸ್ಟ್ 2020 ಹಾಯ್‍ಹೊಳೆ ಸಮೀಪ ತುಂಗಾ ನದಿ ಚಾನಲ್‍ನಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಚಾನೆಲ್‍ನಲ್ಲಿ ಇವತ್ತು ಶೋಧ ಕಾರ್ಯ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಗಿದೆ. ಹೇಗಾಯ್ತು ಘಟನೆ? ಪ್ರತೀಶ್ (24) ಮೃತ ಯುವಕ. ಸ್ನೇಹಿತರೊಂದಿಗೆ ಶುಕ್ರವಾರ ಹುಟ್ಟುಹಬ್ಬದ ಆಚರಿಸಲು ತುಂಗಾ ನದಿ ಚಾನಲ್ ಬಳಿ ತೆರಳಿದ್ದರು. ಚಾನೆಲ್‍ಗೆ ನೀರಿನ ಬಾಟಲ್ ಬಿದ್ದಿದ್ದು, ಅದನ್ನು ಮೇಲೆತ್ತಲು ಹೋದಾಗ ಆಯಾತಪ್ಪಿ ಚಾನಲ್‍ಗೆ ಬಿದ್ದು, ಕೊಚ್ಚಿ ಹೋಗಿದ್ದರು. ನಿನ್ನೆಯಿಂದಲೇ ಶೋಧ … Read more

ಕರೆಂಟ್ ಶಾಕ್, ಅಡಕೆ ತೋಟಕ್ಕೆ ಅಲುಮಿನಿಯಮ್ ಏಣಿ ಕೊಂಡೊಯ್ಯುತ್ತಿದ್ದ ರೈತ ಸಾವು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 16 ಜುಲೈ 2019 ಅಡಕೆ ತೋಟದಲ್ಲಿ ಕೃಷಿ ಕೆಲಸಕ್ಕೆ ಅಲುಮಿನಿಯಮ್ ಏಣಿ ತರುವಾಗ ವಿದ್ಯುತ್ ತಂತಿಗೆ ತಗುಲಿ, ರೈತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಲೂಕಿನ ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರಳಿಯಲ್ಲಿ ನಡೆದಿದೆ. ನಾಗಪ್ಪಗೌಡ (64) ಮೃತ ರೈತ. ತೋಟದಲ್ಲಿ ಕೆಲಸಕ್ಕಾಗಿ ಅಲುಮಿನಿಯಮ್ ಏಣಿ ತರುವಾಗ ಘಟನೆ ನಡೆದಿದೆ. ಮೆಸ್ಕಾಂ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ … Read more