ಕುವೆಂಪು ವಿವಿ ಸ್ನಾತಕ ಪದವಿ ಪ್ರವೇಶಕ್ಕೆ ಕೊನೆ ದಿನಾಂಕ ನಿಗದಿ, ಸಮಾನರೂಪ ವೇಳಾಪಟ್ಟಿ ಬಿಡುಗಡೆ

Kuvempu-University-File-Image

NEWS HIGHLIGHTS ⇒ ಸಮಾನರೂಪ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೊಳಿಸಿದ ಉನ್ನತ ಶಿಕ್ಷಣ ಇಲಾಖೆ ⇒ ಜುಲೈ 01ರಿಂದಲೇ ಪ್ರಾರಂಭವಾಗಿರುವ ಯುಜಿ ಪ್ರವೇಶ ಪ್ರಕ್ರಿಯೆ ⇒ ಕುವೆಂಪು ವಿವಿ: 2022-23ನೇ ಸಾಲಿನ ಸ್ನಾತಕ ಪದವಿ ಪ್ರವೇಶಕ್ಕೆ ಜು. 30ರವರೆಗೆ ಅವಕಾಶ SHIVAMOGGA LIVE | KUVEMPU UNIVERSITY | 10 JULY 2022 ಹೊಸ ಶಿಕ್ಷಣ ನೀತಿ ಅನ್ವಯ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ 2022-23ನೇ ಸಾಲಿನ ಸ್ನಾತಕ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಜುಲೈ 01ರಿಂದಲೇ … Read more

ತೀರ್ಥಹಳ್ಳಿ ಹಣಗೆರೆಯ ರೈತನ ಮಗಳಿಗೆ 11 ಚಿನ್ನದ ಪದಕ

Hanagere-Divya-Gets-11-gold-medal

SHIVAMOGGA LIVE | UNIVERSITY | 17 ಜೂನ್ 2022 ಕುವೆಂಪು ವಿಶ್ವ ವಿದ್ಯಾನಿಲಯದ 31 ಮತ್ತು 32ನೇ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ವಿದ್ಯಾರ್ಥಿನಿಯರು ಅತಿ ಹೆಚ್ಚು ಅಂಕ ಪಡೆದು ಚಿನ್ನದ ಬೇಟೆಯಾಡಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಅತ್ಯಧಿಕ ಸ್ವರ್ಣ ಪದಕ ಬಹುಮಾನಗಳಿಗೆ ಪಾತ್ರವಾಗಿರುವುದು ವಿಶೇಷವಾಗಿದೆ. 2019-20 ಸಾಲಿನ ಶೈಕ್ಷಣಿಕ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ಪ್ರಣೀತಾ ಎಂ. ಟಿ. ಅವರು ಒಟ್ಟು 8 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿದ್ದಾರೆ. ಇನ್ನು 2020-21 … Read more

ಕೊನೆಗೂ ಕುವೆಂಪು ವಿವಿ ಘಟಿಕೋತ್ಸವಕ್ಕೆ ದಿನಾಂಕ ನಿಗದಿ, ಇತಿಹಾಸದಲ್ಲೇ ಮೊದಲು ಈ ರೀತಿಯ ಘಟಿಕೋತ್ಸವ

Kuvempu-University

SHIVAMOGGA LIVE NEWS | SHIMOGA | 10 ಜೂನ್ 2022 ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಎರಡು ಶೈಕ್ಷಣಿಕ ವರ್ಷದ ಘಟಿಕೋತ್ಸವವನ್ನು ಒಂದೆ ದಿನ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯ ಅತಿಥಿಯಾಗಿ ಕರೆಯಿಸಬೇಕು ಎಂದು ಬಿಗಿಪಟ್ಟು ಹಿಡಿದಿದ್ದ ವಿವಿ ಆಡಳಿತಕ್ಕೆ ನಿರಾಸೆ ಉಂಟಾಗಿದೆ. ಶಂಕರ ಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್’ನಲ್ಲಿ ಎರಡು ವರ್ಷದ ಘಟಿಕೋತ್ಸವ ನಡೆಸಲಾಗುತ್ತಿದೆ. ಜೂನ್ 16ರಂದು ಘಟಿಕೋತ್ಸವ ನಿಗದಿಯಾಗಿದೆ. ಇದರ ಅಧಿಕೃತ ಪ್ರಕಟಣೆ … Read more

ಶಿವಮೊಗ್ಗದ ಮಹಿಳಾ ಪಾಲಿಟೆಕ್ನಿಕ್’ನಲ್ಲಿ ಡಿಪ್ಲೋಮಾ ಕೋರ್ಸ್’ಗಳಿಗೆ ಪ್ರವೇಶ ಆರಂಭ

Government-Residential-polytechnic-college

SHIVAMOGGA LIVE NEWS | EDUCATION | 21 ಮೇ 2022 ಶಿವಮೊಗ್ಗದ ಮಹಿಳಾ ಸರ್ಕಾರಿ ವಸತಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೊದಲನೇ ವರ್ಷದ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶ ಪ್ರಾರಂಭವಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಉತ್ತೀರ್ಣರಾದವರು ನೇರವಾಗಿ ಪ್ರವೇಶ ಪಡೆಯಬಹುದಾಗಿದೆ ಎಂದು ಕಾಲೇಜು ಪ್ರಾಂಶುಪಾಲರಾದ ರವಿ ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾವೆಲ್ಲ ಕೋರ್ಸುಗಳಿವೆ? ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ ಕನ್ನಡ / ಇಂಗ್ಲೀಷ್, ಅಪ್ಯಾರಲ್ ಡಿಸೈನಿಂಗ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ ಕೋರ್ಸುಗಳಿವೆ. … Read more

BREAKING NEWS | ಶಿವಮೊಗ್ಗ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಿಗೆ ರಜೆ

Rain-in-Shimoga-Students

SHIVAMOGGA LIVE NEWS | HOLIDAY | 19 ಮೇ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತು ಎಲ್ಲಾ ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಗಳಿಗು ಒಂದು ದಿನ ಬಿಡವು ನೀಡಲಾಗಿದೆ. ಮೇ 19ರಂದು ಗುರುವಾರ ಒಂದು … Read more

BREAKING NEWS | ಶಿವಮೊಗ್ಗ ತಾಲೂಕಿನ ಶಾಲೆಗಳಿಗೆ ಇವತ್ತು ರಜೆ

Shimoga-City-Rain-Woman-with-Umbrella.

SHIVAMOGGA LIVE NEWS | SCHOOL | 19 ಮೇ 2022 ಭಾರಿ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನಾದ್ಯಂತ ಇವತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ರಾತ್ರಿಯಿಂದ ಶಿವಮೊಗ್ಗ ತಾಲೂಕಿನಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಇವತ್ತು ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು … Read more

ಮಲವಗೊಪ್ಪದಲ್ಲಿ ಬೆನ್ನು ತಟ್ಟಿ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದ ಶಿಕ್ಷಣ ಸಚಿವರು, ಹೇಗಿತ್ತು ಮೊದಲ ದಿನದ ತರಗತಿ?

251021 Minister BC Nagesh Visit Shimoga Malavagoppa School

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಅಕ್ಟೋಬರ್ 2021 ಒಂದೂವರೆ ವರ್ಷದ ಬಳಿಕ ಒಂದರಿಂದ ಐದನೇ ತರಗತಿಗಳು ಪುನಾರಂಭವಾಗಿದೆ. ಶಿವಮೊಗ್ಗದ ಶಾಲೆಯೊಂದರಲ್ಲಿ ಶಿಕ್ಷಣ ಸಚಿವರೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಇದನ್ ಓದಿ | 20 ತಿಂಗಳ ಬಳಿಕ ಶಿವಮೊಗ್ಗದಲ್ಲೂ ಒಂದರಿಂದ ಐದನೇ ತರಗತಿ ಪುನಾರಂಭ ಮಲವಗೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿದರು. ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳನ್ನು ಶಿಕ್ಷಣ ಸಚಿವರು ಸ್ವಾಗತ ಕೋರಿದರು. ಮಕ್ಕಳಿಗೆ ಪುಸ್ತಕ, ಚಾಕ್ಲೇಟ್ ಶಾಲೆಗೆ ಬಂದ ಮಕ್ಕಳನ್ನು … Read more

ಸಹ್ಯಾದ್ರಿ ಕಾಲೇಜು ಮುಂದೆ ಸಚಿವರ ಕಾರಿಗೆ ಮುತ್ತಿಗೆ ಯತ್ನ, ಕಪ್ಪು ಬಾವುಟ ಪ್ರದರ್ಶನ

071021 Black Flag for Higher Education Minister near sahyadri college

ಶಿವಮೊಗ್ಗ ಲೈವ್.ಕಾಂ | SHIMOGA NEWS | 07 ಅಕ್ಟೋಬರ್ 2021 ಯಾವುದೇ ಚರ್ಚೆಯಿಲ್ಲದೆ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಕೂಡಲೆ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ NSUI  ಕಾರ್ಯಕರ್ತರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್.ಅಶ್ವತ್ಥ ನಾರಾಯಣ ಅವರಿಗೆ ಕಪ್ಪು ಬಾವುಟ ತೋರಿಸಿದರು. ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಚಿವ ಡಾ.ಸಿ.ಎಸ್.ಅಶ್ವತ್ಥ ನಾರಾಯಣ ಅವರು ಆಗಮಿಸಿದ್ದರು. ಈ ವೇಳೆ NSUI ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ … Read more

ಶಿವಮೊಗ್ಗಕ್ಕೆ ಶಿಕ್ಷಣ ಸಚಿವರ ಭೇಟಿ, 1-5ನೇ ತರಗತಿ ಆರಂಭಕ್ಕೆ ಚಿಂತನೆ, ಪಠ್ಯ ಕಡಿತದ ಬಗ್ಗೆ ಹೇಳಿಕೆ, ಏನಂದ್ರು ಮಿನಿಸ್ಟರ್?

110921 Education Minister Nagesh Visits Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಸೆಪ್ಟೆಂಬರ್ 2021 ಒಂದರಿಂದ ಐದನೇ ತರಗತಿವರೆಗಿನ ಶಾಲೆ ಆರಂಭಿಸುವ ಕುರಿತು ತಾಂತ್ರಿಕ ಸಮಿತಿ ಸಭೆಯ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಕರೋನ ಹೆಚ್ಚಳವಾದರೆ ಈಗ ಆರಂಭಿಸಲಾಗಿರುವ ತರಗತಿಗಳನ್ನು ಸ್ಥಗಿತಗೊಳಿಸುವ ಅಧಿಕಾರ ಸರ್ಕಾರದ ಬಳಿ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ನಾಗೇಶ್, ಈಗಾಗಲೆ ಆರರಿಂದ ಎಂಟನೆ ತರಗತಿಗಳು ಆರಂಭವಾಗಿವೆ. ಶಿಕ್ಷಕರು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅದೇ ರೀತಿ … Read more

ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕರ ಪಟ್ಟಿ ಪ್ರಕಟ, ಯಾವ್ಯಾವ ತಾಲೂಕಿನ ಯಾವೆಲ್ಲ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ?

SHIVAMOGGA-CITY-TALUK-NEWS-

ಶಿವಮೊಗ್ಗ ಲೈವ್.ಕಾಂ |SHIMOGA NEWS | 4 ಸೆಪ್ಟೆಂಬರ್ 2021 ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕರ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ. ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ? ಪ್ರಾಥಮಿಕ ಶಾಲಾ ವಿಭಾಗ ಶಿವಮೊಗ್ಗ ಅನುಪಿನಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ಮಾಲತಿ ಹೆಚ್.ಇ., ಭದ್ರಾವತಿ ಕಲ್ಲಿಹಾಳ್ ಕಿ.ಪ್ರಾ. ಮಾರ್ಗರೇಟ್ ಸುಶೀಲ, ಶಿಕಾರಿಪುರದ ಚಿಕ್ಕಮಾಗಡಿತಾಂಡ ಕಿ.ಪ್ರಾ. ಕುಮಾರನಾಯ್ಕ, ಸೊರಬದ ತುಡಿನೀರು ಕಿ.ಪ್ರಾ. ಶಂಕರಪ್ಪ, ತೀರ್ಥಹಳ್ಳಿಯ ಕಲ್ಗುಡ್ಡ ಕಿ.ಪ್ರಾ. ಪೌಜಿಯಾ ಸರಾವತ್, ಹೊಸನಗರದ … Read more