BREAKING NEWS – ದೇವಸ್ಥಾನದಲ್ಲಿ ಬೋನಿಗೆ ಬಿದ್ದ ಕರಡಿ ನೋಡಲು ಜನವೋ ಜನ

Bear-caught-at-emmehatti-village-near-holehonnuru

HOLEHONNURU, 25 AUGUST 2024 : ಕಳೆದ ಕೆಲವು ದಿನದಿಂದ ಆತಂಕ ಸೃಷ್ಟಿಸಿದ್ದ ಕರಡಿ (Bear) ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ. ತಟ್ಟೆಹಳ್ಳಿಯ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಇರಿಸಿದ್ದ ಬೋನಿಗೆ ಕಳೆದ ರಾತ್ರಿ ಕರಡಿ ಸೆರೆ ಸಿಕ್ಕಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚೌಡಮ್ಮ ದೇವಸ್ಥಾನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನ್‌ ಇರಿಸಿದ್ದರು. ರಾತ್ರಿ 2.45ಕ್ಕೆ ದೇಗುಲದ ಬಳಿ ಬಂದ ಕರಡಿ ಬೋನಿಗೆ ಬಿದ್ದಿದೆ. ಈ ದೃಶ್ಯ ದೇಗುಲದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ವಿಷಯ ತಿಳಿದು … Read more

ಇವತ್ತು ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿಗೆ ಗೀತಾ ಶಿವರಾಜ್‌ ಕುಮಾರ್‌

geetha-shivaraj-kumar-in-Santekadur.

SHIVAMOGGA LIVE NEWS | 8 JULY 2024 HOLEHONNURU : ಈಚೆಗೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಮ್ಮೆಹಟ್ಟಿ ಗ್ರಾಮದವರು ಮೃತಪಟ್ಟಿದ್ದರು. ಮೃತರ ಮನೆಗೆ ಕಾಂಗ್ರೆಸ್‌ ನಾಯಕಿ ಗೀತಾ ಶಿವರಾಜ್‌ ಕುಮಾರ್‌ ಅವರು ಇವತ್ತು ಭೇಟಿ (VISIT) ನೀಡಲಿದ್ದಾರೆ. ಜು.8ರಂದು ಬೆಳಗ್ಗೆ 11.30ಕ್ಕೆ ಗೀತಾ ಶಿವರಾಜ್‌ ಕುಮಾರ್‌ ಅವರು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ ಎಂದು ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕ ಜಿ.ಡಿ.ಮಂಜುನಾಥ್‌ ತಿಳಿಸಿದ್ದಾರೆ. ಇದನ್ನೂ ಓದಿ – ತುಂಗಾ … Read more

ಭೀಕರ ಅಪಘಾತ ಪ್ರಕರಣ, ಎಮ್ಮೆಹಟ್ಟಿಯಲ್ಲಿ ಒಟ್ಟಿಗೆ ಅಂತ್ಯ ಸಂಸ್ಕಾರ, ಅಂತಿಮ ದರ್ಶನಕ್ಕೆ ಜನ ಸಾಗರ

Last-rites-at-emmehatti-villages

SHIVAMOGGA LIVE NEWS | 29 JUNE 2024 BHADRAVATHI : ಹಾವೇರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರಾದ 9 ಮಂದಿಯ ಅಂತ್ಯ ಸಂಸ್ಕಾರವು (Last Rites) ಭದ್ರಾವತಿ ತಾಲೂಕು ಎಮ್ಮಹೆಟ್ಟಿ ಗ್ರಾಮದಲ್ಲಿ ನಡೆಯಿತು. ಮರಾಠ ಸಂಪ್ರದಾಯದಂತೆ ಶುಕ್ರವಾರ ಸಂಜೆ ಹಿಂದೂ ರುದ್ರಭೂಮಿಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇದಕ್ಕೂ ಮೊದಲು ಎಮ್ಮೆಹಟ್ಟಿಯ ಸರ್ಕಾರಿ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸುತ್ತಮುತ್ತಲ ಗ್ರಾಮ ಸೇರಿದಂತೆ ವಿವಿಧೆಡೆಯಿಂದ ಸಂಬಂಧಿಕರು, ಪರಿಚಿತರು ಸೇರಿದಂತೆ ದೊಡ್ಡ ಸಂಖ್ಯೆಯ ಜನರು ಸೇರಿದ್ದರು. ಜನರ … Read more

ಟಿಟಿ ಭೀಕರ ಅಪಘಾತ ಪ್ರಕರಣ, ಮೃತರ ಪೈಕಿ ಶಿವಮೊಗ್ಗ, ಕಡೂರಿನವರು ಇದ್ದಾರೆ, ಅಂತಿಮ ದರ್ಶನಕ್ಕೆ ಸಿದ್ಧತೆ

haveri-mishap.

SHIVAMOGGA LIVE NEWS | 28 JUNE 2024 BHADRAVATHI : ಹಾವೇರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಮೃತ ಪೈಕಿ ಎಮ್ಮೆ ಹಟ್ಟಿಯ ಒಂದೇ ಕುಟುಂಬದವರು (family), ವಿವಿಧೆಡೆಯ ಅವರ ಸಂಬಂಧಿಕರು ಸೇರಿದ್ದಾರೆ. ಭದ್ರಾವತಿ, ಕಡೂರು, ಶಿವಮೊಗ್ಗದವರು ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿದವರ ಪೈಕಿ ಎಮ್ಮೆಹಟ್ಟಿ ಗ್ರಾಮದ ಆದರ್ಶ, ವಿಶಲಾಕ್ಷಮ್ಮ, ನಾಗೇಶ್, ಭಾಗ್ಯಾ, ಮಾನಸ, ಸುಭದ್ರ ಇದ್ದಾರೆ. ಶಿವಮೊಗ್ಗ ನಗರದ ಆಲ್ಕೋಳ ನಿವಾಸಿಗಳಾದ ಪರಶುರಾಮ್ ಮತ್ತು ರೂಪ ದಂಪತಿ. ಭದ್ರಾವತಿ ತಾಲೂಕಿನ ಕಲ್ಲಿಹಾಳ್‌ ಸರ್ಕಲ್‌ನ … Read more

BREAKING NEWS – ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಡಿಕ್ಕಿ, ಶಿವಮೊಗ್ಗ ಮೂಲದ 13 ಮಂದಿ ಸಾವು

haveri-mishap.

SHIVAMOGGA LIVE NEWS | 28 JUNE 2024 HAVERI : ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ವಾಹನ ಡಿಕ್ಕಿಯಾಗಿ (MISHAP) ಶಿವಮೊಗ್ಗ ಜಿಲ್ಲೆಯ 13 ಮಂದಿ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್‌ ಬಳಿ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಬೆಳಗಾವಿ ಸವದತ್ತಿಯ ರೇಣುಕಾ ಯಲ್ಲಮ್ಮ  ದೇವಿ ದರ್ಶನ ಪಡೆದು ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂಬದಿಯಿಂದ ಡಿಕ್ಕಿ … Read more

ಎಮ್ಮೆಹಟ್ಟಿ ಬಳಿ ಆಯತಪ್ಪಿ ರಸ್ತೆ ಪಕ್ಕದ ಕಾಲುವೆಗೆ ಬಿದ್ದ ಸವಾರ, ಶಿವಮೊಗ್ಗದಲ್ಲಿ ಸಾವು

ACCIDENT-NEWS-GENERAL-IMAGE.

SHIVAMOGGA LIVE NEWS | 26 APRIL 2024 HOLEHONNURU : ಬೈಕಿನಿಂದ ಆಯತಪ್ಪಿ ರಸ್ತೆ ಪಕ್ಕದ ಕಾಲುವೆಗೆ ಬಿದ್ದು ಸವಾರ ಮೃತಪಟ್ಟಿದ್ದಾನೆ. ದಾಸರಕಲ್ಲಹಳ್ಳಿ ಗ್ರಾಮದ ಬಿ.ನೀಲೇಶ್ (25) ಮೃತರು. ಎಮ್ಮೆಹಟ್ಟಿ – ಹೊಳೆಹೊನ್ನೂರು ನಡುವೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾಂಕ್ರಿಟ್ ಕೆಲಸಕ್ಕೆ ದಾಸರಕಲ್ಲಹಳ್ಳಿಯ ಮನೆಯಿಂದ ಶಿವಮೊಗ್ಗಕ್ಕೆ ಬೈಕಿನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಎದುರು ಬಂದ ವಾಹನಕ್ಕೆ ದಾರಿ ಬಿಡಲು ರಸ್ತೆ ಅಂಚಿಗೆ ಬೈಕ್ ಚಲಾಯಿಸಿದ್ದಾರೆ. ಆಗ ಆಯತಪ್ಪಿ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾಲುವೆಗೆ … Read more

ಗ್ರಾಮಸ್ಥರನ್ನು ಕೇಳಲಿಲ್ಲ, ಸಭೆ ನಡೆಸಲಿಲ್ಲ, ಏಕಪಕ್ಷೀಯ ನಿರ್ಧಾರಕ್ಕೆ ಎಮ್ಮೆಹಟ್ಟಿಯಲ್ಲಿ ಆಕ್ರೋಶ

230321 Emmehatti Villagers Protest in Emmehatti 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 MARCH 2021 ಗ್ರಾಮಸ್ಥರೊಂದಿಗೆ ಚರ್ಚೆ ಮಾಡದೆ, ವಾರ್ಡ್‍ವಾರು ಸಭೆ ನಡೆಸದೆ ಗ್ರಾಮಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಆರೋಪಿಸಿ ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಿಮ್ಮೂರ ಸುದ್ದಿಗೆ ನೀವೇ ರಿಪೋರ್ಟರ್, ಶಿವಮೊಗ್ಗ ಜಿಲ್ಲೆಯ ಹಳ್ಳಿ ಹಳ್ಳಿ ಸುದ್ದಿನೂ ಇಲ್ಲಿ ಬರುತ್ತೆ, ಹೇಗದು? ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಯನ್ನು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಗೆ ಸೇರಿಸಲಾಗಿದೆ. ಗ್ರಾಮಸ್ಥರೊಂದಿಗೆ ಚರ್ಚೆ ನಡೆಸದೆ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ … Read more