SHIVAMOGGA LIVE NEWS | 5 NOVEMBER 2022
SHIMOGA | ಬೆಳ್ಳಂಬೆಳಗ್ಗೆ ಶಿವಮೊಗ್ಗ ಪೊಲೀಸರು ಆರೋಪಿ ಆಸ್ಲಂ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸ್ ಸಿಬ್ಬಂದಿ ರಮೇಶ್ ಅವರ ಮೇಲೆ ಹಲ್ಲೆ ಮಾಡಿದ ಅಸ್ಲಂ ಕಾಲಿಗೆ ಪಿಎಸ್ಐ ವಸಂತ್ ಅವರು ಗುಂಡು ಹೊಡೆದಿದ್ದಾರೆ. (firing on aslam)
ಘಟನೆ ಮಾಹಿತಿ ಲಭಿಸುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಪೊಲೀಸ್ ಸಿಬ್ಬಂದಿ ರಮೇಶ್ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ಮೂರು ಪ್ರಮುಖಾಂಶ ತಿಳಿಸಿದರು.
(firing on aslam)
ರಕ್ಷಣಾಧಿಕಾರಿ ಹೇಳಿದ್ದೇನು?
ಆರೋಪಿ ಅಸ್ಲಂಗೆ ಕ್ರಮಿನಲ್ ಹಿನ್ನಲೆ ಇದೆ. ಆತನ ವಿರುದ್ಧ ಈ ಹಿಂದೆ 9 ಪ್ರಕರಣ ದಾಖಲಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಕೊಲೆ ಯತ್ನ ಪ್ರಕರಣಗಳಿವೆ. ಈಗಿನದ್ದು ಸೇರಿ 10 ಪ್ರಕರಣಗಳು ಅಸ್ಲಂ ವಿರುದ್ಧ ದಾಖಲಾಗಿದೆ. (firing on aslam)