ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ವ್ಯಕ್ತಿ ಸಾವು

sagara graphics

SHIVAMOGGA LIVE NEWS | INSTAGRAM | 9 ಏಪ್ರಿಲ್ 2022 ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಕಣಿಕೆ ಗ್ರಾಮದ ಯಲ್ಲಪ್ಪ (55) ಎಂದು ಗುರುತಿಸಲಾಗಿದೆ. ಸಿಗಂದೂರು ಸಮೀಪದ ಹೊಳೆಬಾಗಿಲು ಸಮೀಪದ ಕಣಿಕೆ ಗ್ರಾಮದ ಬಳಿ ಶರಾವತಿ ಹಿನ್ನೀರಿನಲ್ಲಿ ಯಲ್ಲಪ್ಪ ಮೀನು ಹಿಡಿಯಲು ತೆರಳಿದ್ದರು. ಮೀನು ಹಿಡಿಯುತ್ತಿದ್ದಾಗ ತೆಪ್ಪ ಮಗುಚಿಕೊಂಡು, ಯಲ್ಲಪ್ಪ ಮುಳುಗಿ ಸಾವನ್ನಪ್ಪಿದ್ದಾರೆ. ಯಲ್ಲಪ್ಪ ಅವರಿಗಾಗಿ ಶೋಧ ಕಾರ್ಯ ನಡೆಸಲಾಯಿತು. ಶುಕ್ರವಾರ ಅವರ ಮೃತದೇಹ ತೇಲಿ ಬಂದಿದೆ. ಸಾಗರ ಗ್ರಾಮಾಂತರ … Read more