ಭಾರಿ ಮಳೆಗೆ ಶಿವಮೊಗ್ಗದಲ್ಲಿ ರಸ್ತೆಗಳು ಜಲಾವೃತ, ಯಮನಂತೆ ಕಾಡಿದ ಸ್ಮಾರ್ಟ್ ಸಿಟಿ ಗುಂಡಿಗಳು

211021 Smart city pot holes in Shimoga during rain

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಅಕ್ಟೋಬರ್ 2021 ಒಂದೆಡೆ ಅಕಾಲಿಕ ಮಳೆಯಿಂದಾಗಿ ಸಂಕಷ್ಟ. ಮತ್ತೊಂದೆಡೆ ಸ್ಮಾರ್ಟ್ ಸಿಟಿ ಗುಂಡಿಗಳಿಂದ ಪ್ರಾಣ ಸಂಕಟ. ಈ ರಾತ್ರಿ ಶಿವಮೊಗ್ಗ ನಗರದ ಜನರು ಎದುರಿಸಿದ ಪ್ರಮುಖ ಸವಾಲುಗಳಿವು. ಇದನ್ನು ಓದಿ | ಶಿವಮೊಗ್ಗದಲ್ಲಿ ಭಾರಿ ಮಳೆ, ಮನೆ ಸೇರಲು ಜನರ ಸರ್ಕಸ್, ವ್ಯಾಪಾರಿಗಳಿಗೆ ಸಂಕಷ್ಟ, ಹಲವೆಡೆ ಕರೆಂಟ್ ಕಟ್ ಭಾರಿ ಮಿಂಚು, ಗುಡುಗು ಸಹಿತ ದಿಢೀರ್ ಮಳೆಯಿಂದಾಗಿ ಜನರು ತತ್ತರಿಸಿ ಹೋದರು. ಬಿಡುವು ಕೊಡದೆ ಮಳೆ ಸುರಿಯಿತು. ಮಳೆ … Read more

ಶಿವಮೊಗ್ಗಕ್ಕೆ ಇವತ್ತು ಸಚಿವ ಈಶ್ವರಪ್ಪ ಭೇಟಿ, ನಾಳೆಯಿಂದ ಮೂರು ತಾಲೂಕಿನ ನೆರೆಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ

KS-Eshwarappa-DC-Office-Meeting

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಆಗಸ್ಟ್ 2021 ನೆರೆ ಪರಿಹಾರ ಕಾರ್ಯಗಳು ತ್ವರಿತಗೊಳಿಸಬೇಕಿರುವ ಹಿನ್ನೆಲೆ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜವಾಬ್ದಾರಿ ಹೊತ್ತಿರುವ ಸಚಿವ ಈಶ್ವರಪ್ಪ ಅವರು ಎರಡು ದಿನ ಮೂರು ತಾಲೂಕುಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಶಿವಮೊಗ್ಗಕ್ಕೆ ಸಚಿವ ಈಶ್ವರಪ್ಪ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರ್ಪಡೆಯಾದ ಬಳಿಕ ಇವತ್ತು ಮಧ್ಯಾಹ್ನ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಸಂಜೆ ಶಿವಮೊಗ್ಗದ … Read more

ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ ಹಂಚಿಕೆ, ಶಿವಮೊಗ್ಗದ ಹೊಣೆ ಯಾರಿಗೆ?

SHIVAMOGGA-CITY-TALUK-NEWS-

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಆಗಸ್ಟ್ 2021 ಸಂಪುಟ ರಚನೆಯಾಗುತ್ತಿದ್ದಂತೆ ನೂತನ ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್ ಮತ್ತು ನೆರೆ ಪರಿಸ್ಥಿತಿ ನಿರ್ವಹಣೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಇದನ್ನೂ ಓದಿ | ಸಾಲು ಸಾಲು ಸೋಲು, ಆರು ತಿಂಗಳು ಜೈಲು, ತಾಳ್ಮೆಗೆ ಸಿಕ್ತು ಫಲ, ಸಚಿವ ಆರಗ ಜ್ಞಾನೇಂದ್ರ ಬಗ್ಗೆ ತಿಳಿಬೇಕಾದ ಸಂಗತಿಗಳು ಇಲ್ಲಿವೆ ಕರೋನ ಮೂರನೆ ಅಲೆ ಭೀತಿ ಎದುರಾಗಿದೆ. ಮತ್ತೊಂದೆಡೆ ನೆರೆ ಪರಿಹಾರ ಕಾರ್ಯಗಳು ತ್ವರಿತವಾಗಿ ಆಗಬೇಕಿದೆ. ಈ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರತ್ಯಕ್ಷನಾದ ಸೂರ್ಯ, ದೂರಾಯ್ತು ಪ್ರವಾಹ ಭಯ, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

240721 Bypass Road No Rain 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021 ಮೂರು ದಿನದಿಂದ ಅಬ್ಬರಿಸಿದ್ದ ಪುಷ್ಯಾ ಮಳೆ ಬಿಡುವು ನೀಡಿದೆ. ಜಿಲ್ಲೆಯಾದ್ಯಂತ ಮಳೆ ಮರೆಯಾಗಿ ಸೂರ್ಯ ಪ್ರತ್ಯಕ್ಷವಾಗಿದ್ದು, ಪ್ರವಾಹದ ಆತಂಕದಲ್ಲಿದ್ದ ಜನರು ಈಗ ನಿರಾಳರಾಗಿದ್ದಾರೆ. ಬಿಸಿಲಿನಿಂದ ಬೆಚ್ಚನೆ ವಾತಾವರಣ ಬೆಳಗ್ಗೆಯಿಂದ ಬಿಸಿಲು ಕಾಣಿಸಿಕೊಂಡಿದ್ದು ಬೆಚ್ಚನೆ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ತಾಲೂಕಿನಾದ್ಯಂತ ಬಿಸಿಲು ಕಾಣಿಸಿಕೊಂಡಿದೆ. ಇದನ್ನೂ ಓದಿ | ಚಕ್ರಾ ವ್ಯಾಪ್ತಿಯಲ್ಲಿ ದಾಖಲೆ ಮಳೆ, ಮಾಸ್ತಿಕಟ್ಟೆಯಲ್ಲೂ ಜೋರು, 24 ಗಂಟೆಯಲ್ಲಿ ಹೊಸನಗರ ತಾಲೂಕಿನಲ್ಲಿ ಎಷ್ಟಾಯ್ತು … Read more

ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ಮೂರೂವರೆ ಅಡಿ ಹೆಚ್ಚಳ, ತುಂಗಾ ಜಲಾಶಯದ ಹೊರಹರಿವು ಎಷ್ಟಿದೆ ಗೊತ್ತಾ?

230721 Tunga Dam Outflow Increases 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021 ಜೋರು ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈಗಾಗಲೇ ಭರ್ತಿಯಾಗಿರುವುದರಿಂದ ತುಂಗಾ ಜಲಾಶಯದ ಒಳ ಹರಿವಿನ ಪ್ರಮಾಣದಷ್ಟೆ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಯಾವ್ಯಾವ ಡ್ಯಾಂಗೆ ಎಷ್ಟಿದೆ ಒಳಹರಿವು? ಲಿಂಗನಮಕ್ಕಿ ಡ್ಯಾಂಗೆ 1,03,117 ಕ್ಯೂಸೆಕ್‍ ಒಳ ಹರಿವು ಇದೆ. ಶುಕ್ರವಾರ ಭಾರಿ ಪ್ರಮಾಣದ ನೀರು ಹರಿದು ಬಂದಿರುವುದರಿಂದ ಜಲಾಶಯದ ನೀರಿನ ಮಟ್ಟ 1802.60 ಕ್ಯೂಸೆಕ್‍ಗೆ ಏರಿಕೆಯಾಗಿದೆ. ಒಂದೇ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಬಿಡುವು ಕೊಟ್ಟ ವರುಣ, ಜನರು ಸ್ವಲ್ಪ ನಿರಾಳ

230721 Hosanagara Rain Level Increases 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ಕಳೆದ ಎರಡು ದಿನದಿಂದ ಅಬ್ಬರಿಸಿದ್ದ ಪುಷ್ಯಾ ಮಳೆ ಬಿಡುವು ನೀಡಿದೆ. ಇದರಿಂದ ತಗ್ಗು ಪ್ರದೇಶದ ಜನರು ನಿರಾಳರಾಗಿದ್ದಾರೆ. ಗದ್ದೆ, ತೋಟದಲ್ಲಿ ನೀರು ನಿಂತು ಬೆಳೆ ಹಾನಿಯಾಗುವ ಆತಂಕದಲ್ಲಿದ್ದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಮಧ್ಯಾಹ್ನದಿಂದ ಜಿಲ್ಲೆಯಾದ್ಯಂತ ಮಳೆ ಅಬ್ಬರ ತುಸು ಕಡಿಮೆಯಾಗಿದೆ. ಹಾಗಾಗಿ ಪ್ರವಾಹ ಭೀತಿ ದೂರಾಗಿದೆ. ಸೀಗೆಹಟ್ಟಿ ಭಾಗದಲ್ಲಿ ಢವಢವ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾದಂತೆ ಶಿವಮೊಗ್ಗ ನಗರದ ಹಳೆ ಶಿವಮೊಗ್ಗ ಭಾಗ … Read more

ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಗ್ರಾಮ ಪಂಚಾಯಿತಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

rain in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ಪುಷ್ಯಾ ಮಳೆ ಅಬ್ಬರಕ್ಕೆ ಜಿಲ್ಲೆಯ ಹಳ್ಳಕೊಳ್ಳಗಳು ತುಂಬಿ ಹೋಗಿವೆ. ಹಲವು ಗ್ರಾಮಗಳು, ಬಡಾವಣೆಯಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಗ್ರಾಮದಲ್ಲಿ ಎಷ್ಟೆಷ್ಟು ಮಿ.ಮೀ ಮಳೆಯಾಗಿದೆ. ಇದನ್ನೂ ಓದಿ | ರೈಲ್ವೆ ಹಳಿ ಜಲಾವೃತ, ತಾಳಗುಪ್ಪದಿಂದ ಹೊರಡುವ ರೈಲುಗಳ ಸಂಚಾರಕ್ಕೆ ಅಡ್ಡಿ ಸೊರಬದ ಮುಟಗುಪ್ಪೆ 224 ಮಿ.ಮೀ, ತಾಳಗುಂದ 220.50 ಮಿ.ಮೀ, ಹೊಸಬಾಳೆ 225 ಮಿ.ಮೀ, ದೂಗೂರು 221.50 … Read more

BREAKING NEWS | ತುಂಗಾ ಜಲಾಶಯದ ಹೊರ ಹರಿವು ಮತ್ತಷ್ಟು ಹೆಚ್ಚಳ, ನದಿ ಪಾತ್ರದ ಜನರಿಗೆ ಮುಳುಗಡೆ ಭಯ

230721 Tunga Dam Outflow Increases 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ತುಂಗಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಗೆ ಬಿಡಲು ತೀರ್ಮಾನಿಸಲಾಗಿದೆ. ಜಲಾಶಯದ ಕ್ರಸ್ಟ್ ಗೇಟ್‍ಗಳ ಮೂಲಕ 70 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ಹೊತ್ತಿನಿಂದಲೇ ಜಲಾಶಯದಿಂದ ಈ ಪ್ರಮಾಣದ ನೀರನ್ನು ಹೊಳೆಗೆ ಬಿಡಲಾಗುತ್ತದೆ ಎಂದು ತುಂಗಾ ಮೇಲ್ದಂಡೆ ಯೋಜನೆ ಎಇಇ ತಿಳಿಸಿದ್ದಾರೆ. ಹೆಚ್ಚಿನ ಪ್ರಮಾಣದ ನೀರನ್ನು ಡ್ಯಾಂನಿಂದ ಹೊರಗೆ ಬಿಡುತ್ತಿರುವುದರಿಂದ ತುಂಗಾ … Read more

24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 146 ಮಿ.ಮೀ ಮಳೆ, ಸಾಗರದಲ್ಲಿ ಹೆಚ್ಚು, ಭದ್ರಾವತಿ ಕಡಿಮೆ, ಎಲ್ಲೆಲ್ಲಿ ಎಷ್ಟಾಗಿದೆ?

180721 Rain At Shimoga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ಪುಷ್ಯಾ ಮಳೆ ಜೋರಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಸರಾಸರಿ 146.91 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 57 ಮಿ.ಮೀ, ಭದ್ರಾವತಿ 50.20 ಮಿಮೀ, ತೀರ್ಥಹಳ್ಳಿ 171.80 ಮಿ.ಮೀ, ಸಾಗರ 228.60 ಮಿ.ಮೀ, ಶಿಕಾರಿಪುರ 120.20 ಮಿ.ಮೀ, ಸೊರಬ 190 ಮಿ.ಮೀ, ಹೊಸನಗರ 210.60 ಮಿ.ಮೀ ಮಳೆಯಾಗಿದೆ. ಈ ತಿಂಗಳಲ್ಲಿ ಇದೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ … Read more

ಸಾಗರ ಪಟ್ಟಣದ ವಿವಿಧೆಡೆ ಜಲಾವೃತ, ರಸ್ತೆ ಮೇಲೆ ಹರಿಯುತ್ತಿದೆ ನೀರು, ಶಾಸಕರಿಂದ ಸಿಟಿ ರೌಂಡ್ಸ್

230721 Keladi road in heavy rain 1

ಶಿವಮೊಗ್ಗ ಲೈವ್.ಕಾಂ | SAGARA NEWS | 23 ಜುಲೈ 2021 ಕೆಳೆದ ಎರಡು ದಿನದಿಂದ ಸಾಗರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಪಟ್ಟಣದ ವಿವಿಧ ಬಡಾವಣೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳ ಮೇಲೂ ಮಳೆ ನೀರು ಹರಿಯುತ್ತಿದೆ. ಕೆಳದಿ ರಸ್ತೆಯ ಮೇಲೆ ನೀರು ಚರಂಡಿಗಳು ಭರ್ತಿಯಾಗಿ ಕೆಳದಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಅಕ್ಕಪಕ್ಕದ ಬಡಾವಣೆಗಳಿಗೆ  ನೀರು ನುಗ್ಗಿದ್ದು, ಮನೆಗಳು ಜಲಾವೃತವಾಗಿವೆ. ವಿಚಾರ ತಿಳಿಯುತ್ತಿದ್ದಂತೆ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸ್ಥಳಕ್ಕೆ ಭೇಟಿ … Read more