ಗೋಪಿ ಸರ್ಕಲ್‌ನಿಂದ ಕಾವಡಿಗಳ ಮೆರವಣಿಗೆ, ಮಹಿಳೆಯರಿಂದ ದೀಪಗಳ ಉತ್ಸವ, ಯಾವಾಗ?
ಶಿವಮೊಗ್ಗ: ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಗುಡ್ಡೇಕಲ್ ದೇವಸ್ಥಾನ ಆವರಣದಲ್ಲಿ ಡಿಸೆಂಬರ್ 3 ರಂದು ಸಂಜೆ 6 ಗಂಟೆಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ, ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗದ ಗೋಪಿ ಸರ್ಕಲ್ ನಿಂದ ಕಾವಡಿಗಳು, ಪಂಬೈ ವಾದ್ಯ ಮತ್ತು ಮಂಗಳವಾದ್ಯದೊಂದಿಗೆ ಹೊರಟು ಮೈಲಾರೇಶ್ವರ ದೇವಾಲಯಕ್ಕೆ ತಲುಪಿ ಸಂಜೆ 4 ಗಂಟೆಗೆ ಮಹಿಳೆಯರಿಂದ ದೀಪಗಳ ಉತ್ಸವದೊಂದಿಗೆ ಮೆರವಣಿಗೆ ಹೊರಟು ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿಯ ದೇವಾಲಯಕ್ಕೆ ಆಗಮಿಸಿ ನಂತರ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿಗೆ ಮಹಾ ದೀಪಾರಾಧನೆ ನಡೆಯುವುದು. ಇದನ್ನೂ … Read more