ಶಿವಮೊಗ್ಗದ ಕೃಷಿ ಮೇಳಕ್ಕೆ ಒಂದೇ ದಿನದಲ್ಲಿ 50,000ಕ್ಕೂ ಹೆಚ್ಚು ಜನರು, ಏನೇನಿದೆ ಮೇಳದಲ್ಲಿ?

Krushi Mela

ಶಿವಮೊಗ್ಗ: ನವುಲೆಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ (Krushi Mela) ರೈತರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ. ಮೊದಲ ದಿವನೇ ಸುಮಾರು 50 ಸಾವಿರದಷ್ಟು ಜನರು ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು ಎಂದು ಅಂದಾಜಿಸಲಾಗಿದೆ. ಕೃಷಿಯಲ್ಲಿನ ಆವಿಷ್ಕಾರಗಳು, ಸಂಶೋಧನೆ ಹಾಗೂ ತಾಂತ್ರಿಕತೆಗಳ ಬಗ್ಗೆ ರೈತರು ಮಾಹಿತಿ ಪಡೆದರು. ಮೇಳದಲ್ಲಿ ಆಹಾರ, ತಿಂಡಿ ಮಳಿಗೆಗಳು ಇದ್ದು, ಧಾರವಾಡ ಪೇಡೆ, ಬೆಳಗಾವಿಯ ಕುಂದಾ, ಮೇಲುಕೋಟೆಯ ಪುಳಿಯೊಗರೆ, … Read more

ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದ ತೋಟಗಾರಿಕೆ ಇಲಾಖೆ

Agriculture-News-Farmer

ಶಿವಮೊಗ್ಗ: ತೋಟಗಾರಿಕೆ ಇಲಾಖೆಯು ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. (Applications) ಕಂದು ಬಾಳೆ, ಅಂಗಾಂಶ ಬಾಳೆ, ತರಕಾರಿ, ಕಾಳುಮೆಣಸು, ಗೋಡಂಬಿ, ಹೂವಿನ ಬೆಳೆ ಪ್ರದೇಶ ವಿಸ್ತರಣೆ, ಕೃಷಿಹೊಂಡ, ಕಳೆ ಚಾಪೆ, ಮಿನಿ ಟ್ರ್ಯಾಕ್ಟರ್‌, ಫಾರ್ಮ್ ಗೇಟ್, ಪ್ರಾಥಮಿಕ ಸಂಸ್ಕರಣಾ ಘಟಕ, ಪ್ಯಾಕ್‌ಹೌಸ್, ಸಮಗ್ರ ಪೀಡೆ ನಿರ್ವಹಣೆ, ರಾಜ್ಯದೊಳಗೆ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆಯಡಿ ಪ್ರದೇಶ ವಿಸ್ತರಣೆ (ಸ್ವದೇಶಿ ಮತ್ತು ವಿದೇಶಿ ತಳಿಗಳು), ಅಂತರ ಬೆಳೆ, ತಾಳೆ … Read more

24 ಗಂಟೆಯಲ್ಲಿ ಬದಲಾಯಿತು ವಿಶ್ವವಿದ್ಯಾಲಯದ ನಾಮಫಲಕ

Agriculture-University-Iruvakki-sagara-campus-board

SHIVAMOGGA LIVE NEWS | 11 ಮಾರ್ಚ್ 2022 ಸ್ಥಳೀಯರ ಆಕ್ರೋಶ, ಪ್ರತಿಭಟನೆ ಬೆನ್ನಿಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವಾವಿದ್ಯಾಲಯದ ನಾಮಫಲಕ ಬದಲಾವಣೆ ಮಾಡಲಾಗಿದೆ. ಸಾಗರ ತಾಲೂಕು ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪನಾಯಕ ಅವರ ಹೆಸರಿನ ನಾಮಫಲಕ ಅಳವಡಿಸಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಅವರ ಹೆಸರನ್ನು ಘೋಷಿಸಿದ್ದರು. ಇದನ್ನೂ ಓದಿ | ವರ್ಷ ಕಳೆದರೂ ಬದಲಾಗದ ನಾಮಫಲಕ, ಇರುವಕ್ಕಿಯಲ್ಲಿ ಸ್ಥಳೀಯರಿಂದ ರಸ್ತೆ ತಡೆ ಒಂದು ವರ್ಷ ಕಳೆದರೂ … Read more

ಬೆಳಗ್ಗೆ ತೋಟಕ್ಕೆ ಬಂದ ಮಾಲೀಕನಿಗೆ ಶಾಕ್, 68 ಮರಗಳಲ್ಲಿದ್ದ ಅಡಕೆ ಕೊನೆಗಳು ನಾಪತ್ತೆ

ARECA-TREE-GENERAL-IMAGE

ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 4 ಸೆಪ್ಟೆಂಬರ್ 2021 ಒಂದೆಡೆ ಅಡಕೆ ಬೆಲೆ ಗಗನಮುಖಿಯಾಗುತ್ತಿದೆ. ಬೆಳಗಾರರಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದೆಡೆ ಅಡಕೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ರಾತ್ರೋರಾತ್ರಿ ತೋಟವೊಂದರಿಂದ ಅಡಕೆ ಕೊನೆಗಳನ್ನು ಕದ್ದೊಯ್ದಿರುವ ಪ್ರಕರಣ ವರದಿಯಾಗಿದೆ. ಶಿಕಾರಿಪುರ ತಾಲೂಕು ಉಡುಗಣಿ ಹೋಬಳಿಯ ಕೊಡಿಕೊಪ್ಪ ಗ್ರಾಮದ ತೋಟವೊಂದರಲ್ಲಿ ಅಡಕೆ ಕೊನೆಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಜಯಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ರಾತ್ರಿ ಕಳ್ಳರು ಅಡಕೆ ಕೊನೆಗಳನ್ನು ಕೊಯ್ದುಕೊಂಡು ಹೋಗಿದ್ದಾರೆ. 68 ಮರಗಳಿಂದ ಕೊನೆ ಕಳವು ಮಾಡಲಾಗಿದೆ. … Read more

ಸಾಗರದ ಇರುವಕ್ಕಿ ಕೃಷಿ, ತೋಟಗಾರಿಕೆ ವಿವಿಗೆ ಹೊಸ ಹೆಸರು, ಸಿಎಂ ಯಡಿಯೂರಪ್ಪ ಘೋಷಣೆ

240721 IruvakkI Agriculture University Campus 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021 ಸಾಗರ  ತಾಲೂಕಿನ ಇರುವಕ್ಕಿಯಲ್ಲಿ ಲೋಕಾರ್ಪಣೆ ಮಾಡಲಾದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಬೆಂಗಳೂರಿನಲ್ಲಿರುವ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಲೆನಾಡು, ಕರಾವಳಿ, ಬಯಲುಸೀಮೆಯ ಏಳು ಜಿಲ್ಲೆಗಳ ವ್ಯಾಪ್ತಿಗೆ … Read more