ಮಂಡಿಯಿಂದ 2 ಕ್ವಿಂಟಾಲ್ ಅಡಿಕೆ ಕದ್ದಿದ್ದ ಮೂವರು ಅರೆಸ್ಟ್
SHIVAMOGGA LIVE NEWS | 1 NOVEMBER 2023 HOSANAGARA : ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳವು (ADIKE THEFT) ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾವಿನಕೊಪ್ಪ ನಿವಾಸಿಗಳಾದ ಎನ್. ರವಿರಾಜ್, ಪಿ. ನಾಗರಾಜ್, ರಾಜೇಶ್ ಬಂಧಿತರು. ಹೊಸನಗರ ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಡಲಾಗಿದ್ದ 2 ಕ್ವಿಂಟಲ್ 78 ಕೆ.ಜಿ ಅಡಿಕೆಯನ್ನು ಕಳೆದ ತಿಂಗಳು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ- ಶಿವಮೊಗ್ಗದ ಎಲೆಕ್ಟ್ರಿಕ್ ಅಂಗಡಿಗೆ ದಂಡ ವಿಧಿಸಿದ ಕೋರ್ಟ್, ಕಾರಣವೇನು? … Read more