ಬಸ್ಸಿಗೆ ಕಾಯುತ್ತಿದ್ದ ಅಪ್ರಾಪ್ತೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ, ವಿಡಿಯೋ ಚಿತ್ರೀಕರಣ, ಇಬ್ಬರು ಅರೆಸ್ಟ್

Rape Representative Image 1

ಶಿವಮೊಗ್ಗದ ಲೈವ್.ಕಾಂ | HOSANAGARA NEWS | 22 ಜನವರಿ 2022 ಮನೆಗೆ ತೆರಳಲು ಬಸ್ಸಿಗೆ ಕಾಯುತ್ತಿದ್ದ ಅಪ್ರಾಪ್ತೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿ, ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಸಂತೋಷ್ (24) ಮತ್ತು ಸುನಿಲ್ (26) ಎಂಬುವವರು ಬಂಧಿತರು. ಇವರು ಹೊಸನಗರ ತಾಲೂಕಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಹೇಗಾಯ್ತು ಘಟನೆ? ಜನವರಿ 15ರಂದು ಮಧ್ಯಾಹ್ನ ಗ್ರಾಮದಲ್ಲಿರುವ ಮನೆಗೆ ತೆರಳಲು ಅಪ್ರಾಪ್ತೆಯು ಬಸ್ಸಿಗಾಗಿ ಕಾಯುತ್ತಿದ್ದಳು. ಈ … Read more

10 ರೂ. ಕೋಳಿ ಮರಿಗೆ ಬಸ್ಸಲ್ಲಿ ಹಾಫ್ ಟಿಕೆಟ್, ಹೊಸನಗರದಲ್ಲಿ ಸ್ವಾರಸ್ಯಕರ ಪ್ರಕರಣ | ವಿಡಿಯೋ ನ್ಯೂಸ್

010121 Hosanagara Half Ticket for chicken

ಶಿವಮೊಗ್ಗದ ಲೈವ್.ಕಾಂ | HOSANAGARA NEWS |  1 ಜನವರಿ 2022 KSRTC ಬಸ್ಸಿನಲ್ಲಿ ಕೋಳಿ ಮರಿ ಒಂದಕ್ಕೆ ಹಾಫ್ ಟಿಕೆಟ್ ಚಾರ್ಜ್ ಮಾಡಲಾಗಿದೆ. ಈ ಸ್ವಾರಸ್ಯಕರ ಪ್ರಸಂಗ ಹೊಸಗರದಲ್ಲಿ ವರದಿಯಾಗಿದೆ. ಹೊಸನಗರದಿಂದ ಶಿರೂರಿಗೆ ಹೊರಟಿದ್ದ KSRTC ಬಸ್ಸಿನಲ್ಲಿ ಘಟನೆ ನಡೆದಿದೆ. ಈ ಬೆಳವಣಿಗೆ ಉಳಿದ ಪ್ರಯಾಣಿಕರನ್ನು ಅವಕ್ಕಾಗಿಸಿದೆ. ಏನಿದು ಹಾಫ್ ಟಿಕೆಟ್ ಕೇಸ್? ಅಲೆಮಾರಿ ಕುಟುಂಬವೊಂದು ಶಿರೂರಿಗೆ ತೆರಳುತ್ತಿತ್ತು. ಈ ಕುಟುಂಬ ಶಿರಸಿಯಲ್ಲಿ ಹತ್ತು ರುಪಾಯಿ ಕೊಟ್ಟು ಕೋಳಿ ಮರಿಯೊಂದನ್ನು ಖರೀದಿಸಿತ್ತು. ಖಾಸಗಿ ಬಸ್’ನಲ್ಲಿ ಹೊಸನಗರಕ್ಕೆ … Read more

ಉಪಾಧ್ಯಕ್ಷೆ ವಿರುದ್ಧ ಆಕ್ರೋಶ, ಗ್ರಾಮ ಸಭೆ ಬಹಿಷ್ಕಾರ, ಮತ್ತೊಮ್ಮೆ ಚುನಾವಣೆ ಎದುರಿಸುವಂತೆ ಸವಾಲು

221221 Ripponpete GP Members Protest in GP

ಶಿವಮೊಗ್ಗದ ಲೈವ್.ಕಾಂ |  RIPPONPETE NEWS |  22 ಡಿಸೆಂಬರ್ 2021 ಉಪಾಧ್ಯಕ್ಷೆಯ ರಾಜೀನಾಮೆಗೆ ಆಗ್ರಹಿಸಿ ಗ್ರಾಮ ಸಭೆಯನ್ನು ಬಹಿಷ್ಕರಿಸಿದ ಸದಸ್ಯರು, ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಘಟನೆ ಸಂಭವಿಸಿದೆ. ಇವತ್ತು ನಿಗದಿಯಾಗಿದ್ದ ಗ್ರಾಮ ಸಭೆಯನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಹಿಷ್ಕಾರ ಮಾಡಿದರು. ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. … Read more

ಕೊಡಚಾದ್ರಿ ಬೆಟ್ಟಕ್ಕೆ ರಸ್ತೆ, ಸಚಿವರ ಮಹತ್ವದ ಸಭೆ, ಏನೆಲ್ಲ ನಿರ್ಣಯ ಕೈಗೊಳ್ಳಲಾಯ್ತು?

Kodachadri-Road-Problem

ಶಿವಮೊಗ್ಗದ ಲೈವ್.ಕಾಂ |  BELAGAVI NEWS |  22 ಡಿಸೆಂಬರ್ 2021 ಬೆಳಗಾವಿ ಅಧಿವೇಶನದ ಸಂದರ್ಭ ಕೊಡಚಾದ್ರಿ ಬೆಟ್ಟದ ರಸ್ತೆ ಅಭಿವೃದ್ಧಿ ಕುರಿತು ಮಹತ್ವದ ಸಭೆ ನಡೆಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಅರಣ್ಯ ಸಚಿವ ಉಮೇಶ್ ಕತ್ತಿ, ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಕೊಡಚಾದ್ರಿ ಬೆಟ್ಟ ರಸ್ತೆ ಕಾಮಗಾರಿ ಪ್ರಾರಂಭಿಸಲು ಇರುವ ತೊಡಕುಗಳನ್ನು ಆದಷ್ಟು ಬೇಗ ನಿವಾರಿಸಬೇಕು. ರಸ್ತೆ ನಿರ್ಮಿಸುವ ಯೋಜನೆ ಕಾರ್ಯಕ್ಕೆ ಮುಂದಾಗಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು. ಅರಣ್ಯ ಇಲಾಖೆಯ … Read more

ಶರಾವತಿ ನದಿಯಲ್ಲಿ ಮುಳುಗಿತು ಅಡಕೆ ಚೀಲ ತುಂಬಿದ್ದ ತೆಪ್ಪ, ಒಬ್ಬ ನೀರುಪಾಲು

131221 Nittur Teppa Drowned in Sharavathi River

ಶಿವಮೊಗ್ಗ ಲೈವ್.ಕಾಂ | HOSANGARA NEWS | 13 ಡಿಸೆಂಬರ್ 2021 ಅಡಕೆ ತುಂಬಿದ್ದ ಚೀಲ ಸಾಗಿಸುವಾಗ ಉಕ್ಕಡ ಮಗುಚಿ ಶರಾವತಿ ನದಿಯಲ್ಲಿ ಮುಳುಗಿ, ಇಬ್ಬರ ಪೈಕಿ ಒಬ್ಬ ನೀರು ಪಾಲಾಗಿದ್ದಾರೆ. ಹೊಸನಗರ ತಾಲೂಕು ನಿಟ್ಟೂರು ಸಮೀಪದ ಕೋಸ್ನಾಡಿ ಬಳಿ ಘಟನೆ ಸಂಭವಿಸಿದೆ. ನಿಟ್ಟೂರಿನ ಮಾವಿನಗುಡ್ಡೆಯ ಸ್ವಾಮಿ ಮತ್ತು ಚಂಗೊಳ್ಳಿ ನಾರಾಯಣ ಅವರು ಭಾನುವಾರ ಮಧ್ಯಾಹ್ನ ಅಡಕೆ ಚೀಲಗಳನ್ನು ಉಕ್ಕಡಕ್ಕೆ ತುಂಬಿಕೊಂಡು ಹೊಳೆ ದಾಟುತ್ತಿದ್ದರು. ಈ ಸಂದರ್ಭ ಉಕ್ಕಡ ಮುಳುಗಿದೆ. ಈಜಲಾಗದ ಮುಳುಗಿದರು ನಾರಾಯಣ ತಕ್ಷಣ ಈಜಿ … Read more

ಶಿವಮೊಗ್ಗ ಜಿಲ್ಲೆಯ ಇವತ್ತಿನ ಎಲ್ಲಾ ಪ್ರಮುಖ ಸುದ್ದಿಗಳು | 18 ನವೆಂಬರ್ 2021

Shivamogga-Live-News-Update-Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ನವೆಂಬರ್ 2021

ಶಿವಮೊಗ್ಗ ಜಿಲ್ಲೆಯ ಇವತ್ತಿನ ಎಲ್ಲಾ ಪ್ರಮುಖ ಸುದ್ದಿಗಳು ಇಲ್ಲಿವೆ. ನೀವು ಓದಲು ಇಚ್ಛಿಸುವ ಸುದ್ದಿಯ ಹೆಡ್ ಲೈನ್ ಮೇಲೆ ಕ್ಲಿಕ್ ಮಾಡಿ, ಪೂರ್ತಿ ನ್ಯೂಸ್ ಓದಿ. ಬ್ಯಾಕ್ ಬಟನ್ ಪ್ರೆಸ್ ಮಾಡಿ ಮತ್ತೊಂದು ಸುದ್ದಿ ಓದಿ. ನಿಮ್ಮೂರ ಸುದ್ದಿಗಳನ್ನು ಶಿವಮೊಗ್ಗ ಲೈವ್.ಕಾಂಗೆ ಕಳುಹಿಸಲು 7411700200 ನಂಬರ್’ಗೆ ವಾಟ್ಸಪ್ ಮಾಡಿ. shivamoggalive@gmail.com ಗೆ ಈ ಮೇಲ್ ಮಾಡಿ.

NEWS UPDATE CHANGE OVER

181121 Accident Near Lakkinakoppa Circle

ಶಿವಮೊಗ್ಗ ಕ್ರೈಮ್ ನ್ಯೂಸ್

ಲಕ್ಕಿನಕೊಪ್ಪ ಸರ್ಕಲ್ ಬಳಿ ಖಾಸಗಿ ಬಸ್, ಕಾರು ಮುಖಾಮುಖಿ ಡಿಕ್ಕಿ – ಕ್ಲಿಕ್ ಮಾಡಿ, ಪೂರ್ತಿ ನ್ಯೂಸ್ ಓದಿ

Read more

ಕಾರು, ಲಾರಿ ಮುಖಾಮುಖಿ ಡಿಕ್ಕಿ, ಪಲ್ಟಿಯಾದ ಲಾರಿ, ಚಲ್ಲಾಪಿಲ್ಲಿಯಾದ ಮೂಟೆಗಳು, ಒಬ್ಬ ಸಾವು

121121 Truck Car Accident At Hosanagara

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ನವೆಂಬರ್ 2021 ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಕಾರು ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿನಯ ಗೌಡ (24) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ವಿನಯ್ ಗೌಡ ಅವರು ಬಾಣಿಗ ಗ್ರಾಮದಿಂದ ರಾತ್ರಿ ಸಾಗರದ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಹೊಸಕೆರೆ – ಕೇಶವಪುರ ಮಧ್ಯೆ ಎದುರಿನಿಂದ ಬಂದ ಲಾರಿಯು ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ … Read more

ಶಿವಮೊಗ್ಗ ಸೇರಿ ಎಂಟು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ, ಇನ್ನೆಷ್ಟು ದಿನ ಮಳೆ ಸುರಿಯಲಿದೆ?

rain in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ನವೆಂಬರ್ 2021 ಶಿವಮೊಗ್ಗ ಸೇರಿದಂತೆ ರಾಜ್ಯ ಎಂಟು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ. ನವೆಂಬರ್ 9ರವರೆಗೆ ಮಳೆ ಮುಂದುವರೆಯಲಿದೆ. ಆ ಬಳಿಕ ಮಳೆ ಪ್ರಮಾಣದ ತಗ್ಗಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವವಿದೆ. ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ … Read more

ಶಿವಮೊಗ್ಗ ಲೈವ್ – ಪೆಟ್ರೋಲ್ ಮತ್ತಷ್ಟು ದುಬಾರಿ | ಸಾಗರ ರಸ್ತೆಯಲ್ಲಿ ಅಪಘಾತ | ರಸ್ತೆ, ಸರ್ಕಲ್‌ಗೆ ಪುನೀತ್ ಹೆಸರು

Shivamogga-Live-News-Update-Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ನವೆಂಬರ್ 2021 ಒಂದೇ ಕ್ಲಿಕ್’ನಲ್ಲಿ ಶಿವಮೊಗ್ಗ ಜಿಲ್ಲೆಯ ಸಮಗ್ರ ಸುದ್ದಿ ನೀಡುವ ಪ್ರಯತ್ನವಿದು. ಪ್ರತಿ ಸುದ್ದಿಯ ಹೆಡ್ ಲೈನ್ ಮೇಲೆ ಕ್ಲಿಕ್ ಮಾಡಿ, ಪೂರ್ತಿ ನ್ಯೂಸ್ ಓದಿ. ಬ್ಯಾಕ್ ಬಟನ್ ಒತ್ತಿದರೆ ಮತ್ತೆ ಇದೆ ಪೇಜ್’ಗೆ ಬರಬಹುದು. ಬಳಿಕ ಮತ್ತೊಂದು ಸುದ್ದಿಯನ್ನು ಓದಬಹುದು. ಸಮಗ್ರ ಶಿವಮೊಗ್ಗ ನಿಮ್ಮ ಬೆರಳ ತುದಿಯಲ್ಲೇ ಲಭ್ಯ. NEWS 1 ದೀಪಾವಳಿ ಹಬ್ಬದ ಸಂದರ್ಭದಲ್ಲೂ ಪೆಟ್ರೋಲ್, ಡಿಸೇಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇವತ್ತು … Read more

BREAKING | ಶಿವಮೊಗ್ಗ ಸೇರಿದಂತೆ ದಕ್ಷಿಣ ಭಾರತದ 20 ಕಡೆ ಎನ್ಐಎ ಅಧಿಕಾರಿಗಳಿಂದ ಏಕಕಾಲಕ್ಕೆ ಪರಿಶೀಲನೆ, ಕಾರಣವೇನು?

131021 NIA officials Visit Shimoga regarding Naxal Issue

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2021 ಶಿವಮೊಗ್ಗ ಸೇರಿದಂತೆ ದಕ್ಷಿಣ ಭಾರತದ ಮೂರು ರಾಜ್ಯಗಳ 20ಕ್ಕೂ ಹೆಚ್ಚು ಕಡೆ ಇವತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಶೃಂಗೇರಿ, ಕಾರ್ಕಳಕ್ಕೆ ಹೊಂದಿಕೊಂಡಂತೆ ಇರುವ ಶಿವಮೊಗ್ಗದ ಕೆಲವು ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ನಕ್ಸಲ್ ಚಳವಳಿ ಸಂಬಂಧ ತನಿಖೆ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದ ಮೂರು … Read more