SHIVAMOGGA LIVE NEWS | 7 NOVEMBER 2022
SHIMOGA | ನಗರಕ್ಕೆ ರೈಲುಗಳು ಬರುವ ಮತ್ತು ಹೊರಡುವ ಸಮಯಕ್ಕೆ ಹೊಂದಿಕೆ ಆಗುವಂತೆ ಜೆನರ್ಮ್ ಯೋಜನೆಯ ನಗರ ಸಾರಿಗೆ (city bus) ಬಸ್ಸುಗಳ ವ್ಯವಸ್ಥೆ ಮಾಡಬೇಕು ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿ ಮನವಿ ಮಾಡಿದೆ.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರನ್ನು ಭೇಟಿಯಾದ ಅಣ್ಣಾ ಹಜಾರೆ ಹೋರಾಟ ಸಮಿತಿ ಸದಸ್ಯರು, ಮನವಿ ಸಲ್ಲಿಸಿದರು.
ಮನವಿಯಲ್ಲಿದೆ 3 ಪ್ರಮುಖಾಂಶ
ಜೆನರ್ಮ್ ಯೋಜನೆ ಅಡಿ ಶಿವಮೊಗ್ಗ – ಭದ್ರಾವತಿ ನಗರಗಳಿಗೆ 100 ಸಾರಿಗೆ ಬಸ್ ಮಂಜೂರಾಗಿದೆ. 65 ಜೆನರ್ಮ್ ಬಸ್ಸುಗಳು ಮಾತ್ರ ಬಂದಿವೆ. ಈ ಪೈಕಿ 36 ಬಸ್ಸುಗಳು ಶಿವಮೊಗ್ಗ ನಗರದೊಳಗೆ (city bus) ಸಂಚರಿಸಬೇಕಿತ್ತು. ಆದರೆ ಈ ಬಸ್ಸುಗಳು ಪಾಲಿಕೆ ವ್ಯಾಪ್ತಿಯೊಳಗೆ ಸಂಚರಿಸುವ ಬದಲು ಹೊರಭಾಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದು ಕಾನೂನು ಬಾಹಿರವಾಗಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದ ಆಟೋ ಚಾಲಕರಿಗೆ ಪೊಲೀಸರಿಂದ 8 ಖಡಕ್ ಸೂಚನೆ