ಮತ್ತೆ ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರಕ್ಕೆ ಸಚಿವ ಈಶ್ವರಪ್ಪ ತಿರುಗೇಟು, ಗಡಿ ಉಸ್ತುವಾರಿ ಸಚಿವರ ನೇಮಕದ ಕುರಿತು ಚರ್ಚೆ

Minister KS Eshwarappa

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ |SHIMOGA NEWS | 19 JANUARY 2021 ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಗಡಿ ಕ್ಯಾತೆ ತೆಗೆದಿರುವ ಬೆನ್ನಿಗೆ, ಅಲ್ಲಿನ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಅಲ್ಲದೆ ಗಡಿ ಉಸ್ತುವಾರಿ ಸಚಿವರ ನೇಮಕದ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆಸುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಪ್ರಾಂತ್ಯಗಳನ್ನು  ಮಹಾರಾಷ್ಟ್ರಕ್ಕೆ … Read more

ಕನ್ನಡಿಗರಿಗೆ ಉದ್ಯೋಗಕ್ಕಾಗಿ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಚಿಂತನೆ, 20 ಸಾವಿರ ಮಂದಿ ಸದಸ್ಯತ್ವ ಪೂರ್ಣ

130121 Karave Praveen Sheety In Shimoga 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 13 JANUARY 2021 ನಾಡು, ನುಡಿಯ ರಕ್ಷಣೆಗಾಗಿ ರಾಜ್ಯದಲ್ಲಿ ಪ್ರದೇಶಿಕ ಪಕ್ಷದ ಅವಶ್ಯಕತೆ ಇದೆ. ಪಕ್ಷವೊಂದರ ಸ್ಥಾಪನೆ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವೀಣ್ ಶೆಟ್ಟಿ, ರೈತರು, ದಲಿತರು, ಪ್ರಗತಿಪರ ಸಂಘಟನೆಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ. ನಾಡು, ನುಡಿಯ ರಕ್ಷಣೆಗಾಗಿ ಪ್ರದೇಶಿಕ … Read more

ಕರ್ನಾಟಕ ಬಂದ್ ಶಿವಮೊಗ್ಗದಲ್ಲಿ ನೀರಸ, ನಿಷೇಧಾಜ್ಞೆ ಹಿಂಪಡೆಯಲು ಕ್ಷಣಗಣನೆ, ಹೇಗಿದೆ ಪರಿಸ್ಥಿತಿ?

051220 No Karnataka Bandh In Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020 ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಶಿವಮೊಗ್ಗ ನಗರದಲ್ಲಿ ನೀರಿಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನದ ಹಿಂದೆ ನಡೆದ ಗಲಭೆ ಮತ್ತು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೆ ಸಂಘಟನೆಗಳು ಬಂದ್‍ ಮಾಡಲು ಮುಂದೆ ಬಂದಿಲ್ಲ. ಶಿವಮೊಗ್ಗದಲ್ಲಿ ಪರಿಸ್ಥಿತಿ ಹೇಗಿದೆ? 144 ಸೆಕ್ಷನ್ ‍ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಇವತ್ತು ಬೆಳಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ನಿಷೇಧಾಜ್ಞೆ ಹಿಂದಕ್ಕೆ ಪಡೆಯುತ್ತಿರುವ ಕಾರಣ ಜನರು ಆತಂಕ ಬದಿಗಿಟ್ಟು … Read more

ದುಡ್ಡಿದ್ದವನೆ ಹೊಲದೊಡೆಯ ಕಾನೂನು ತರಲು ಹೊರಟಿದ ಸರ್ಕಾರ, ರಾಜ್ಯ ಬಂದ್ ಮಾಡಿದರೆ ಸಂಪೂರ್ಣ ಬೆಂಬಲ

240920 KYS memorandum against BJP Govt 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಸೆಪ್ಟಂಬರ್ 2020 ದುಡ್ಡಿದ್ದವರು ಹೊಲದೊಡೆಯನಾಗಲು ಪ್ರಚೋದಿಸುವ ರೈತ ವಿರೋಧಿ ಕಾಯ್ದೆಗಳ ಜಾರಿಗೆ ಮುನ್ನ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿ ಕರುನಾಡ ಯುವಶಕ್ತಿ ಸಂಘಟನೆ (ಕೆವೈಎಸ್) ಮನವಿ ಸಲ್ಲಿಸಿತು. ರೈತ ವಿರೋಧಿ ಕಾಯ್ದೆಗಳ ವಿರುದ್ಧ ಬೆಂಗಳೂರಿನಲ್ಲಿ ರೈತರು ಮತ್ತು ಇತರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಯಾವುದೇ ಸಂದರ್ಭದಲ್ಲಿ ಬಂದ್‌ನಂತಹ ನಿರ್ಧಾರ ಕೈಗೊಂಡರೂ ಕೂಡ ನಮ್ಮ ಸಂಘಟನೆ ಬೆಂಬಲಿಸುತ್ತದೆ ಎಂದು ಸಂಘಟನೆ ತಿಳಿಸಿತು. … Read more

ಶಿವಮೊಗ್ಗಕ್ಕೆ ಬರ್ತಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ, ಜಿಲ್ಲೆಯ ಮುಖಂಡರ ಜೊತೆ ಮಹತ್ವದ ಸಭೆ

Sundaresh-Press-Meet-Congress-Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಆಗಸ್ಟ್ 2020 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 4 ರಂದು ಶಿವಮೊಗ್ಗ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಕೂಡ ಇರುತ್ತಾರೆ. ಇವರ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಇರಲಿದ್ದು, ಲಗಾನ್ ಕಲ್ಯಾಣ ಮಂದಿರದಲ್ಲಿ ಮುಖಂಡರ ಸಭೆ ನಡೆಯಲಿದ್ದು, ಯಾವುದೇ ಬಹಿರಂಗ ಸಭೆ ಇರುವುದಿಲ್ಲ ಎಂದರು. … Read more

ಶಿವಮೊಗ್ಗದ ಗಾಜನೂರಿನಲ್ಲಿ ಬಾರ್ ಗೋಡೆ ಕೊರೆದ ಕಳ್ಳರು

120420 Bar theft attempt in gajanur 1

ಶಿವಮೊಗ್ಗ ಲೈವ್.ಕಾಂ | SHIMOGA | 12 ಏಪ್ರಿಲ್ 2020 ಲಾಕ್‌ಡೌನ್‌ ಹಿನ್ನೆಲೆ ದೇಶಾದ್ಯಂತ ಮದ್ಯ ಮಾರಾಟ ಬಂದ್‌ ಆಗಿದೆ. ಇದರಿಂದ ಮದ್ಯ ಪ್ರಿಯರು ಪರಿತಪಿಸುತ್ತಿದ್ದಾರೆ. ಈ ನಡುವೆ ಬಾರ್‌, ವೈನ್‌ ಶಾಪ್‌ಗಳ ಗೋಡೆ ಕೊರೆದು, ಬಾಟಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಶಿವಮೊಗ್ಗ ತಾಲೂಕು ಗಾಜನೂರಿನಲ್ಲೂ ಇಂಥದ್ದೇ ಪ್ರಕರಣ ನಡೆದಿದೆ. ಗೋಡೆ ಕೊರೆದು ಎಣ್ಣೆ ಹಾರಿಸಲು ಪ್ಲಾನ್‌ ಗಾಜನೂರಿನ ಸ್ನೇಹ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಮದ್ಯ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಬಾರ್‌ನ ಗೋಡೆ ಕೊರೆದು ಕಳ್ಳರು … Read more

ಭದ್ರಾವತಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಘವೇಂದ್ರ ಪರ ಭರ್ಜರಿ ಕ್ಯಾಂಪೇನ್, ಹೇಗಿತ್ತು ಗೊತ್ತಾ ರೋಡ್ ಶೋ?

ಶಿವಮೊಗ್ಗ ಲೈವ್.ಕಾಂ | 20 ಏಪ್ರಿಲ್ 2019 ಬಿಜೆಪಿ ಅಭ್ಯರ್ಥಿ ಪರವಾಗಿ ಭದ್ರಾವತಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭರ್ಜರಿ ರೋಡ್ ಶೋ ನಡೆಸಿದರು. ರಂಗಪ್ಪ ಸರ್ಕಲ್’ನಿಂದ ಆರಂಭವಾದ ಮೆರವಣಿಗೆ ಅಂಬೇಡ್ಕರ್ ವೃತ್ತದವರೆಗೂ ಸಾಗಿತು. ರೋಡ್ ಶೋ ನಡೆದ ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತ, ಬಿ.ವೈ.ರಾಘವೇಂದ್ರ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಇನ್ನು, ರೋಡ್ ಶೋ ಉದ್ದಕ್ಕೂ ಅಮಿತ್ ಷಾ ಅವರಿಗೆ ಹೂವು ಹಾಕಿ ಸ್ವಾಗತಿಸಲಾಯಿತು. ಸೆಕ್ಯೂರಿಟಿ ಫುಲ್ ಟೈಟ್ ಅಮಿತ್ ಷಾ … Read more

‘ನಾನು ಪ್ರತಿದಿನ ಕಣ್ಣೀರು ಹಾಕುತ್ತೇನೆ, ಆದರೆ ಸುಮ್ ಸುಮ್ನೆ ಕಣ್ಣೀರು ಹಾಕೋದಿಲ್ಲ’

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ನಾನು ಭಾವುಕ ಜೀವಿ. ಪ್ರತಿದಿನ ಕಣ್ಣೀರು ಹಾಕುತ್ತೇನೆ. ಆದರೆ ಸುಮ್ ಸುಮ್ನೆ ಕಣ್ಣೀರು ಹಾಕುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಅಂತಾ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾವು ಕಣ್ಣೀರು ಹಾಕಲು ಕಾರಣವೇನು ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಅವರ ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತದೆ … Read more

ಕಾಲು ಸಂಕ, ಕೊಳೆರೋಗಕ್ಕೆ ಪರಿಹಾರ, ತೀರ್ಥಹಳ್ಳಿಗೆ ಸರ್ಕಾರದಿಂದ ಬಂತು ಕೋಟಿ ಕೋಟಿ ಅನುದಾನ

ಶಿವಮೊಗ್ಗ ಲೈವ್.ಕಾಂ | 4 ಜನವರಿ 2019    ಕಾಲು ಸಂಕ ನಿರ್ಮಾಣ, ಕೊಳೆರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ, ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾಗಿದೆ. ಈ ಕುರಿತು ಶಾಸಕ ಆರಗ ಜ್ಞಾನೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 34 ಕಲುಸಂಕ ಕಾಮಗಾರಿಗೆ ಅನುದಾನ ತೀರ್ಥಹಳ್ಳಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ 4.5 ಕೋಟಿ ರೂ. ಬಿಡುಗಡೆ ಮಾಡಿದೆ. 8 ರಿಂದ 25 ಲಕ್ಷ ರೂ.ವರೆಗಿನ 34 ಕಾಮಗಾರಿಗೆ ಇದನ್ನು ಬಳಸಲಾಗುತ್ತದೆ … Read more

ಮೊದಲು ಈ ಬಸ್ ಸ್ಟಾಪ್’ನಲ್ಲಿ ನಿಲ್ಲೋಕೆ ಹೆದರುತ್ತಿದ್ದ ಭದ್ರಾವತಿ ಜನ, ಈಗ ಬಹು ಹೊತ್ತು ಇಲ್ಲಿ ಬಸ್ಸಿಗೆ ಕಾಯುತ್ತಾರೆ

261218 Yuva Brigade VISL Bus Stop Cleaning 1

ಶಿವಮೊಗ್ಗ ಲೈವ್.ಕಾಂ | 26 ಡಿಸೆಂಬರ್ 2018 ಎಲ್ಲೆಂದರಲ್ಲಿ ಬಿದ್ದಿದ್ದ ಕಸ. ಇಲ್ಲಿಗೆ ಬಂದವರಿಗೆ ಕಾಡುತ್ತಿತ್ತು ಸಾಂಕ್ರಾಮಿಕ ರೋಗದ ಆತಂಕ. ಆಸ್ಪತ್ರೆ ಎದುರಲ್ಲೇ ಇತ್ತು ಕಾಯಿಲೆಗಳ ಕಾರ್ಖಾನೆ..! ಇದು ಭದ್ರಾವತಿಯ ವಿಐಎಸ್ಎಲ್ ಆಸ್ಪತ್ರೆ ಮುಂಭಾಗದ ಬಸ್ ತಂಗುದಾಣದ ದುಸ್ಥಿತಿ. ಎಲ್ಲೆಂದರಲ್ಲಿ ಕಸದ ರಾಶಿ, ಸುತ್ತಲು ಬೆಳೆದಿದ್ದ ಗಿಡಗಂಟಿಯಿಂದಾಗಿ, ಹಂದಿಗಳ ವಾಸ ಸ್ಥಾನವಾಗಿತ್ತು. ಅಕ್ರಮ ಚಟುವಟಿಕೆಗೆ ಈ ತಂಗುದಾಣ ಆಶ್ರಯ ತಾಣದಂತಾಗಿತ್ತು. ಇದೇ ಕಾರಣಕ್ಕೆ, ಈ ಬಸ್ ತಂಗುದಾಣದ ಬಳಿಗೆ ಬರಲು ಜನರು ಹೆದರುತ್ತಿದ್ದರು. ಆದರೆ ಕಳೆದೆರಡು ದಿನದಿಂದ, … Read more