BREAKING NEWS – ಶಿವಮೊಗ್ಗ – ಸವಳಂಗ ರಸ್ತೆಯಲ್ಲಿ ಮಿನಿ ಬಸ್‌ ಪಲ್ಟಿ

Mini-Bus-mishap-near-kunchenahalli-in-Shimoga.

ಶಿವಮೊಗ್ಗ: ರಸ್ತೆಗೆ ಅಡ್ಡ ಬಂದ ಹಸುವಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಮಿನಿ ಬಸ್‌ ಪಲ್ಟಿಯಾಗಿದೆ. ಶಿವಮೊಗ್ಗ ತಾಲೂಕು ಕೆಳಕಿನ ಕುಂಚೇನಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಮಿನಿ ಬಸ್ಸಿನಲ್ಲಿ ತರೀಕೆರೆ ಮೂಲದ ಸುಮಾರು 25 ಪ್ರವಾಸಿಗರು ಇದ್ದರು ಎಂದು ತಿಳಿದು ಬಂದಿದೆ. ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಪ್ರವಾಸಿಗರು ತರೀಕೆರೆ ಮರಳುತ್ತಿದ್ದರು. ಕೆಳಕಿನ ಕುಂಚೇನಹಳ್ಳಿ ಬಳಿ ರಸ್ತೆಗೆ ಅಡ್ಡ ಬಂದ ಹಸುವಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಪಲ್ಟಿಯಾಗಿದೆ. ನೆರವಿಗೆ ಧಾವಿಸಿದ ಸ್ಥಳೀಯರು ಇನ್ನು, ಘಟನೆಯ ಮಾಹಿತಿ … Read more

ರಾತ್ರಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಬೆಳಗಾಗುವುದರಲ್ಲಿ ಮಾಯ, ಕಂಗಾಲದ ರೈತ

crime name image

SHIVAMOGGA LIVE NEWS | SHIMOGA | 15 ಜೂನ್ 2022 ಮನೆ ಮುಂದಿನ ಕೊಟ್ಟಿಗೆಯಲ್ಲಿ ರಾತ್ರಿ ಕಟ್ಟಿ ಹಾಕಿದ್ದ ಎರಡು ಎತ್ತುಗಳು ಬೆಳಗಾಗುವುದರಲ್ಲಿ ನಾಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಎತ್ತುಗಳು ಕಳ್ಳತನವಾಗಿರುವ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. OX THEFT ಶಿವಮೊಗ್ಗ ತಾಲೂಕು ಕೆಳಗಿನ ಕುಂಚೇನಹಳ್ಳಿಯ ಚಿನ್ನ ನಾಯ್ಕ್ ಎಂಬುವವರ ಮನೆ ಮುಂದಿನ ಕೊಟ್ಟಿಗೆಯಲ್ಲಿ ಎತ್ತುಗಳು ಕಳ್ಳತನವಾಗಿದೆ. ಮೇ 17ರ ರಾತ್ರಿ ಚಿನ್ನ ನಾಯ್ಕ್ ಅವರು ವ್ಯವಸಾಯದ ಕೆಲಸ ಮುಗಿಸಿ ಎತ್ತುಗಳನ್ನು ತಂದು ಕೊಟ್ಟಿಗೆಯಲ್ಲಿ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಅದ್ಧೂರಿಯಾಗಿ ಮೇರಾ ಆಚರಣೆ, ಹೇಗಿತ್ತು ವೈಭವ?

061121 Mera Deepavali in Banjara Community

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ನವೆಂಬರ್ 2021 ದೀಪಾವಳಿ ಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ತಾಂಡಾಗಳಲ್ಲಿ ಮೇರಾ ಹಬ್ಬವನ್ನು ವೈಭವದಿಂದ ಆಚರಿಸಲಾಯಿತು. ಕರೋನ ಹಿನ್ನೆಲೆ ಕಳೆದ ವರ್ಷ ಆಚರಣೆಗೆ ಅಡ್ಡಿಯುಂಟಾಗಿತ್ತು. ಈ ಭಾರಿ ಸಾಂಪ್ರದಾಯಿಕವಾಗಿ ಮೇರಾ ಆಚರಿಣೆ ಮಾಡಲಾಯಿತು. ಆಯನೂರಿನಲ್ಲಿ ಲಂಬಾಣಿ ಸಮುದಾಯದವರ ಮೇರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಸಂಪ್ರದಾಯ, ಆಚರಣೆಗಳೆಂದರೆ ಮೂಗು ಮುರಿಯುವವರ ಮಧ್ಯೆ, ಲಂಬಾಣಿ ಸಮುದಾಯದವರು ಮೇರಾ ಅಚರಣೆಯನ್ನು ಮುಂದುವರೆಸುತ್ತಿದ್ದಾರೆ. ಇದು ಸಮುದಾಯವನ್ನು ಸಾಂಪ್ರದಾಯಿಕವಾಗಿ ಗಟ್ಟಿಗೊಳಿಸುತ್ತಿದೆ. ಮೇರಾ ಹಬ್ಬ ಅಂದರೇನು? … Read more

ಶಿವಮೊಗ್ಗಕ್ಕೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿಗೆ ಭೇಟಿ ನೀಡಲಿದ್ದಾರೆ?

dk shivakumar in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜುಲೈ 2021 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಿವಮೊಗ್ಗ ಪ್ರವಾಸ ಕೈಗೊಂಡಿದ್ದಾರೆ. ಜುಲೈ 15ರಂದು ವಿವಿಧೆಡೆ ಲಂಬಾಣಿ ತಾಂಡಾಗಳಿಗೆ ಅವರು ಭೇಟಿ ನೀಡಲಿದ್ದಾರೆ. ಕರೋನ ಸಂಕಷ್ಟ ಕಾಲದಲ್ಲಿ ಲಾಂಬಾಣಿ ತಾಂಡಾದಲ್ಲಿ ಉಂಟಾದ ಸಮಸ್ಯೆಗಳ ಕುರಿತು ಅವರು ಅಧ್ಯಯನ ನಡೆಸಲಿದ್ದಾರೆ. ಜನರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಎಲ್ಲೆಲ್ಲಿಗೆ ಭೇಟಿ ನೀಡಲಿದ್ದಾರೆ? ಜುಲೈ 15ರಂದು ಬೆಳಗ್ಗೆ 11 ಗಂಟೆಗೆ ಹೊನ್ನಾಳಿ ತಾಲೂಕು ಸುರಗೊಂಡನಕೊಪ್ಪದ ತಾಂಡಾಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ … Read more

ಕುಂಚೇನಹಳ್ಳಿಯಲ್ಲಿ ಶಿವಮೊಗ್ಗ ಸಂಸದರಿಂದ ಕರೋನ ಜಾಗೃತಿ

210521 Kunchenahalli MP Raghavendra Corona Jagruthi 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 MAY 2021 ಜಿಲ್ಲೆಯಲ್ಲಿ ಕೊರೋನ ಸೋಂಕು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಹಾಗೆಂದು ಮೈಮರೆಯದೆ ಸದಾ ಎಚ್ಚರವಾಗಿದ್ದು, ಕೊರೋನ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗ  ತಾಲೂಕಿನ ಕುಂಚೇನಹಳ್ಳಿಯ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕರೋನ ಜನಜಾಗೃತಿ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಮಾತನಾಡಿದರು. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ, ಅಧಿಕಾರಿಗಳು, ಜನಪ್ರತಿನಿಧಿಗಳು ಶ್ರಮಿಸುತ್ತಿದ್ದಾರೆ. ಈ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕಾರ … Read more

ಶಿವಮೊಗ್ಗ ತಾಲೂಕು ಕುಂಚೇನಹಳ್ಳಿಯಲ್ಲಿ ನಾಡಬಾಂಬ್ ಸ್ಫೋಟ, ಎಂಟು ಮಂದಿಗೆ ಗಾಯ

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 NOVEMBER 2020 ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಎಂಟು ಮಂದಿಗೆ ಗಾಯವಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು ಘಟನೆ? ಜಮೀನು ಒಂದರಲ್ಲಿ ಇಸ್ಪೀಟ್ ಆಡಲು ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ದಿಢೀರ್ ಸ್ಫೋಟ ಸಂಭವಿಸಿದ್ದು, ಎಂಟು ಮಂದಿಗೆ ಗಾಯವಾಗಿದೆ. ಜಮೀನಿನ ಮಾಲೀಕನಿಗೆ ಗಂಭೀರ ಗಾಯವಾಗಿದೆ. ಅಲ್ಲಿ ನಾಡ ಬಾಂಬ್ ಏಕಿತ್ತು? ಹಂದಿ ಬೇಟೆಗಾಗಿ ನಾಡಬಾಂಬ್ … Read more