ಶಿವಮೊಗ್ಗ – ಭದ್ರಾವತಿ ಮಧ್ಯೆ ಕೆಟ್ಟು ನಿಂತ ರೈಲು, ಜನಶತಾಬ್ದಿ ಸಂಚಾರಕ್ಕು ತೊಡಕು, ಪ್ರಯಾಣಿಕರ ಪರದಾಟ

Night-Train-at-Shimoga-railway-station.

ಭದ್ರಾವತಿ: ಇಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಕುವೆಂಪು ಎಕ್ಸ್‌ಪ್ರೆಸ್‌ ರೈಲು (Train) ಮಾರ್ಗ ಮಧ್ಯದಲ್ಲೇ ನಿಂತಿದ್ದರಿಂದ ಭಾನುವಾರ ಶಿವಮೊಗ್ಗಕ್ಕೆ ಬರಬೇಕಿದ್ದ ಮತ್ತು ಶಿವಮೊಗ್ಗದಿಂದ ಹೊರಡಬೇಕಿದ್ದ ರೈಲುಗಳ ಸಂಚಾರಕ್ಕೆ ಅಡಚಣೆ  ಉಂಟಾಯಿತು. ಇದರಿಂದ ನೂರಾರು ಪ್ರಯಾಣಿಕರಿಗೆ ಅನಾನುಕೂಲವಾಯಿತು. ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್‌ ರೈಲಿನಲ್ಲಿ (ಸಂಖ್ಯೆ 16222) ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದೇ ಕಾರಣಕ್ಕೆ ಮೈಸೂರು ಮಾರ್ಗದಿಂದಲೇ ತಡವಾಗಿ ಸಂಚರಿಸಿತ್ತು. ರಾತ್ರಿ 8 ಗಂಟೆಗೆ ಭದ್ರಾವತಿ ನಿಲ್ದಾಣಕ್ಕೆ ತಲುಪಬೇಕಿದ್ದ ರೈಲು ರಾತ್ರಿ 8.55ಕ್ಕೆ ತಲುಪಿತ್ತು. ನಿಲ್ದಾಣದಿಂದ ಹೊರಟ … Read more

ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಣ, ಕಾರಣವೇನು?

Train-Jan-Shatabdi-General-Image

RAILWAY NEWS, 18 OCTOBER 2024 : ಬಾಗೇಶಪುರ ಮತ್ತು ಕೋರವಂಗಲ ಸೆಕ್ಷನ್‌ ಮಧ್ಯೆ ಹಳಿ ನಿರ್ವಹಣಾ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಮೈಸೂರು – ತಾಳಗುಪ್ಪ ನಡುವಿನ ಕುವೆಂಪು ಎಕ್ಸ್‌ಪ್ರೆಸ್‌ ರೈಲನ್ನು (Train) ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ಟೋಬರ್ 19, 21, 23, 26, 28, 30, ನವೆಂಬರ್ 2, 4, 6, 9, 11, 13, 16, 18, 20, 23, 25, 27, 30,  … Read more

ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್ ಪ್ರೆಸ್ ರೈಲು ಕಾಡು ಕೋಣಕ್ಕೆ ಡಿಕ್ಕಿ

Train-Collides-with-bison-near-Sagara

SAGARA | ಕುವೆಂಪು ಎಕ್ಸ್ ಪ್ರೆಸ್ (KUVEMPU EXPRESS) ರೈಲು ಡಿಕ್ಕಿ ಹೊಡೆದು ಕಾಡು ಕೋಣವೊಂದು ಸಾವನ್ನಪ್ಪಿದೆ. ಸಾಗರ ತಾಲೂಕು ಬಾಳೆಗುಂಡಿ ಬಳಿ ಘಟನೆ ಸಂಭವಿಸಿದೆ. ಮೈಸೂರಿನಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ಕುವೆಂಪು ಎಕ್ಸ್ ಪ್ರೆಸ್ (KUVEMPU EXPRESS) ರೈಲು ಬಾಳೆಗುಂಡಿ ಬಳಿ ಕಾಡು ಕೋಣಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಾಯಗೊಂಡಿದ್ದ ಕಾಡು ಕೋಣ ಹಳಿ ಪಕ್ಕದ ಚರಂಡಿ ದಾಟಲಾಗದೆ ಉರುಳಿದೆ. ಅಲ್ಲಿಯೆ ಕೊನೆ ಉಸಿರೆಳೆದಿದೆ. ಮಂಗಳವಾರ ರಾತ್ರಿ ಕುವೆಂಪು ಎಕ್ಸ್ ಪ್ರೆಸ್ ರೈಲು ಮೈಸೂರಿನಿಂದ ತಾಳಗುಪ್ಪಗೆ … Read more