ಆನಂದಪುರ ಬಳಿ ಕೆರೆಗೆ ಹಾರಿ ವೃದ್ಧ ಆತ್ಮಹತ್ಯೆ

281123-Anandapura-Police-Station-Board.webp

ಆನಂದಪುರಂ: ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಗಳವಾಡಿ ಗ್ರಾಮದ ನಾರಾಯಣಪ್ಪ (73) ಗಿಳಾಲ ಗುಂಡಿ ಗ್ರಾಮದ ಅಮ್ಮನ ಕೆರೆಗೆ (Lake) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 2 ವರ್ಷದ ಹಿಂದೆ ಪತ್ನಿ ನಿಧನರಾದ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರಿಗೆ ಪುತ್ರ, ಪುತ್ರಿ ಇದ್ದಾರೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಅಂಗನವಾಡಿಯಲ್ಲಿ ಎರಡು ಟ್ರೇ ಮೊಟ್ಟೆ ಬೆಯಿಸಿಕೊಂಡು ಪಾನಗೋಷ್ಠಿ ಮಾಡಿದ ಕುಡುಕರು

ಕೆರೆಗೆ ಉರುಳಿದ ಕಾರು, ತ್ಯಾಗರ್ತಿಯ ಮಹಿಳೆ ಸಾವು, ಜೀವದ ಹಂಗು ತೊರೆದು ಇಬ್ಬರನ್ನು ರಕ್ಷಿಸಿದ ಸ್ಥಳೀಯರು

Car-drowned-in-a-lake-near-ripponpete

ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿದ ಕಾರು (CAR) ಕೆರೆಗೆ ಉರುಳಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ರಿಪ್ಪನ್‌ಪೇಟೆಯ ಚಿಪ್ಪಿಗರ ಕೆರೆಗೆ ಇವತ್ತು ಕಾರು ಉರುಳಿದೆ. ಕಾರಿನಲ್ಲಿದ್ದ ತ್ಯಾಗರ್ತಿಯ ಪಾರ್ವತಮ್ಮ (65) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಓರ್ವ ಯುವಕ ಮತ್ತು ಯುವತಿಯನ್ನು ರಕ್ಷಿಸಲಾಗಿದೆ. ಅಮ್ಮನಘಟ್ಟದಿಂದ ವಾಪಸ್‌ ಬರುತ್ತಿದ್ದರು ಕಾರಿನಲ್ಲಿದ್ದವರು ಅಮ್ಮನಘಟ್ಟದಿಂದ ತ್ಯಾಗರ್ತಿಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ. ಚಿಪ್ಪಗರ ಕೆರೆ ಬಳಿ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದೆ. ಸ್ಥಳೀಯರಾದ ಗಿರೀಶ್ , ಇಮ್ರಾನ್ ಹಾಗೂ … Read more

ಕಾಡಿಗೆ ಹೋಗಿದ್ದ ವ್ಯಕ್ತಿ ಹಿಂತಿರುಗಲಿಲ್ಲ, ಹುಡುಕಾಡಿದ ಕುಟುಂಬದವರಿಗೆ ಕಾದಿತ್ತು ಆಘಾತ

Crime-News-General-Image

ರಿಪ್ಪನ್‌ಪೇಟೆ: ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಕೆರೆಯಲ್ಲಿ (Lake) ಕಾಲು ಜಾರಿ ಬಿದ್ದು 45 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕರಡಿಗ ಗ್ರಾಮದ ಬೆಳಕೋಡು ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ. ಲೋಕೇಶ್ ಅವರು ತಮ್ಮ ಪತ್ನಿಯ ತವರುಮನೆಯಾದ ಹುಂಚದಕಟ್ಟೆಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ಸೊಪ್ಪು ತರಲು ಕಾಡಿಗೆ ಹೋಗಿದ್ದ ಅವರು, ಬಹಳ ಹೊತ್ತಾದರೂ ವಾಪಸ್ ಬರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ, ಹೊಸಕೆರೆ ಕೆರೆಯಲ್ಲಿ ಕಾಲುಜಾರಿ ಬಿದ್ದು ದುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. … Read more

ಹೇಳದೆ, ಕೇಳದೆ ಕೆರೆಯಿಂದ ಮಣ್ಣು ತೆಗೆದು ಸಾಗಣೆ, ಪಿಡಿಓ ದೂರು

Crime-News-General-Image

SHIVAMOGGA LIVE NEWS | 13 MARCH 2024 SHIMOGA : ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಣೆ ಮಾಡಲಾಗಿದೆ ಎಂದು ಆರೋಪಿಸಿ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ದೂರು ನೀಡಿದ್ದಾರೆ. ವಿರುಪಿನಕೊಪ್ಪ ಗ್ರಾಮದ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗಿದೆ. ಶಿವಮೊಗ್ಗ ತಾಲೂಕಿನ ವಿರುಪಿನಕೊಪ್ಪದಲ್ಲಿ ಗ್ರಾಮ ಪಂಚಾಯಿತಿ ನಿರ್ವಹಣೆಯಲ್ಲಿರುವ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಣೆ ಮಾಡಲಾಗಿದೆ. ಈ ಸಂಬಂಧ ಗ್ರಾಮಸ್ಥರ ಮಾಹಿತಿ ಮೇರೆಗೆ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಣ್ಣು ತೆಗೆದಿರುವುದು … Read more

ರಾಜಾರೋಷವಾಗಿ ಹಿಟಾಚಿ, ಜೆಸಿಬಿ, ಟ್ರಾಕ್ಟರ್‌ ಬಳಸಿ ಕೆರೆ ಒತ್ತುವರಿ

lake-occupy-at-holehonnur-farmers-protest

SHIVAMOGGA LIVE NEWS | 29 JANUARY 2024 HOLEHONNURU : ಕೊಪ್ಪ ದೊಡ್ಡಕೆರೆ ಜಾಗವನ್ನು ಕೆರೆಬೀರನಹಳ್ಳಿ ಗ್ರಾಮ ಸಮೀಪ ಅಕ್ರಮವಾಗಿ ಒತ್ತುವರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಚ್ಚುಕಟ್ಟು ಪ್ರದೇಶದ ರೈತರು ತಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ಕೆರೆ ಒತ್ತುವರಿ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಅಚ್ಚುಕಟ್ಟು ಭಾಗದ ರೈತರು ಸ್ಥಳಕ್ಕೆ ತೆರಳಿ ಒತ್ತುವರಿ ಕಾರ್ಯವನ್ನು ತಡೆದಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಹಿಟಾಚಿ, ಜೆಸಿಬಿ, … Read more

ಕೆರೆಯಲ್ಲಿ ರಾಶಿ ರಾಶಿ ಮೀನು ಮರಿಗಳು ಸಾವು

Malavagoppa-Lake-Fishes

SHIVAMOGGA LIVE NEWS | 29 JANUARY 2024 SHIMOGA : ಮಲವಗೊಪ್ಪ ಕೆರೆಯಲ್ಲಿ ಮೀನು ಮರಿಗಳು ಸಾವನ್ನಪ್ಪಿವೆ. ಮೀನು ಸಾಕಣೆದಾರರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಭಾನುವಾರ ಮೀನುಗಳು ಸಾವನ್ನಪ್ಪಿ ಕೆರೆ ದಂಡೆಗೆ ತೇಲಿ ಬರುತ್ತಿರುವುದನ್ನು ಸಾಕಣೆದಾರರು ಗಮನಿಸಿದ್ದಾರೆ. ರಾಶಿ ರಾಶಿ ಮೀನುಗಳು ಸಾವನ್ನಪ್ಪಿರುವುದು ಸಾಕಣೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ‘8 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿ ಮೀನು ಸಾಕಣೆ ಮಾಡಿದ್ದೇವೆ. ಇದಕ್ಕಾಗಿ ಕೆರೆಯನ್ನು ಸ್ವಚ್ಛಗೊಳಿಸಿದ್ದೆವು. ಈಗ ಮೀನುಗಳು ಸಾವನ್ನಪ್ಪಿರುವುದರಿಂದ ಭಾರಿ ನಷ್ಟವಾಗಿದೆ’ ಎಂದು ಆಕ್ರೋಶ … Read more

ಕೆರೆಯಲ್ಲಿ ತೇಲುತ್ತಿವೆ ಕೊಳೆತ ಮೀನುಗಳು, ಸ್ಥಳಕ್ಕೆ ಗ್ರಾಮ ಆಡಳಿತ ದೌಡು, ಕಠಿಣ ಕ್ರಮದ ವಾರ್ನಿಂಗ್

201023-Anandapura-Ganigana-kere-rotten-fish.webp

‌SHIVAMOGGA LIVE NEWS | 20 OCTOBER 2023 ANANDAPURA : ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗಾಣಿಗನ ಕೆರೆಯಲ್ಲಿ ಕೊಳೆತ ಮೀನುಗಳು ಪತ್ತಯಾಗಿವೆ. ಇದನ್ನು ಗಮನಿಸಿದ ಸಾರ್ವಜನಿಕರು ಆತಂಕಗೊಂಡಿದ್ದರು. ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿದ್ದು, ತೇಲುತ್ತಿವೆ ಎಂದು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋನಹ್‌ ಕುಮಾರ್‌ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದರು. ವಿವಿಧ ಗಾತ್ರದ ಮೀನುಗಳು ತೇಲುತ್ತಿರುವುದನ್ನು ಗಮನಿಸಿದರು. ಸತ್ತ ಮೀನುಗಳನ್ನು ಕೆರೆಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದ … Read more

ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬೆರಳಚ್ಚುಗಾರ

Crime-News-General-Image

SHIVAMOGGA LIVE NEWS | 20 MARCH 2023 SAGARA : ಅನಾರೋಗ್ಯದಿಂದ (ill health) ಬೆಸತ್ತು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆರೆ ಪಕ್ಕದಲ್ಲಿ ಡೆತ್ ನೋಟ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ನಿತ್ಯಾನಂದ (58) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಭಾನುವಾರ ರಾತ್ರಿ ಸಾಗರದ ಕೆಳದಿ ಕೆರೆಗೆ ಹಾರಿದ್ದಾರೆ. ಸೋಮವಾರ ಅವರ ಮೃತದೇಹ ಪತ್ತೆಯಾಗಿದೆ. ನಿತ್ಯಾನಂದ ಅವರು ಬೆರಳಚ್ಚುಗಾರರಾಗಿದ್ದರು. ಸಾಗರದ ನ್ಯಾಯಾಲಯದ ಮುಂದೆ ಸುಮಾರು 40 ವರ್ಷದಿಂದ ಬೆರಳಚ್ಚುಗಾರರಾಗಿ ಕೆಲಸ ಮಾಡುತ್ತಿದ್ದರು. ಸಾಗರ ಗ್ರಾಮಾಂತರ … Read more

ಮೀನು ಸಾಕಾಣಿಕೆ ಮಾಡಬೇಕಿದ್ದ ಗುತ್ತಿಗೆದಾರ ಕೆರೆಯ ನೀರು ಖಾಲಿ ಮಾಡಿ, ಮಣ್ಣು ತೆಗೆದು ಮಾರಿದ

Bhadravathi News Graphics

SHIVAMOGGA LIVE NEWS | 5 DECEMBER 2022 ಭದ್ರಾವತಿ : ಕೆರೆಯ ನೀರನ್ನು ಖಾಲಿ ಮಾಡಿ, ಮಣ್ಣು ತೆಗೆದು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಾಗಿದೆ. (lake scam) ನಜೀರ್ ಅಹಮದ್ ಎಂಬುವವರು ಭದ್ರಾವತಿ ತಾಲೂಕು ಸಿದ್ದಾಪುರ ಕೆರೆಯಲ್ಲಿ (lake scam) ನೀರು ಖಾಲಿ ಮಾಡಿ, ಮಣ್ಣು ತೆಗೆಸುತ್ತಿದ್ದರು. ಹಿಟಾಚಿ ಬಳಸಿ 15 ರಿಂದ 20 ಅಡಿಯಷ್ಟು ಮಣ್ಣು ತೆಗೆದಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದರು. ಈ ಹಿನ್ನಲೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು … Read more

ಕೋಡಿ ಬಿತ್ತು ಭದ್ರಾವತಿ ಜನ್ನಾಪುರ ಕೆರೆ, ರಸ್ತೆಗೆ ಬಂದ ಮೀನುಗಳು ಜನರ ಪಾಲು

Jannapura-Lake-Kodi-in-Bhadravathi

ಭದ್ರಾವತಿ | ಕಳೆದ ರಾತ್ರಿ ಸುರಿದ ಭಾರಿ ಮಳೆಗೆ (HEAVY RAIN) ಜನ್ನಾಪುರ ಕೆರೆ (JANNAPURA LAKE) ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ. ರಸ್ತೆಯ ಮೇಲೆ ನೀರು ಹರಿದು ಪಕ್ಕದ ಜಮೀನಿಗೆ ನುಗ್ಗಿದೆ. ರಾತ್ರಿ ಜನ್ನಾಪುರ ಕೆರೆ ಕೋಡಿ ಬಿದ್ದಿದೆ. ಪಕ್ಕದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಜನ್ನಾಪುರ ಮತ್ತು ಭದ್ರಾವತಿ (BHADRAVATHI) ನಡುವಿನ ರಸ್ತೆ ಮೇಲೆ ನೀರು ಹರಿಯುತ್ತಿದೆ. ಗದ್ದೆ ನೀರು, ಮೀನು ಹಿಡಿದ ಜನ ಇನ್ನು, ಜನ್ನಾಪುರ ಕೆರೆ ನೀರು ಪಕ್ಕ ಜಮೀನುಗಳಿಗೆ ಹರಿದು … Read more