ಒಂದೇ ವಾರದಲ್ಲಿ ಎರಡು ಹಸುಗಳನ್ನು ಕೊಂದ ಚಿರತೆ, ಬೋನ್‌ ಇರಿಸಿದ ಅರಣ್ಯ ಇಲಾಖೆ, ಎಲ್ಲಿ?

forest-department-officers-visit-kaidotlu-village-leapord.

ಶಿವಮೊಗ್ಗ: ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಚಿರತೆಯೊಂದು (Leopard) ದಾಳಿ ನಡೆಸಿದೆ. ಶಿವಮೊಗ್ಗ ತಾಲೂಕು ಉಂಬ್ಳಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈದೊಟ್ಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬಿಷ್ಟೇಗೌಡ ಎಂಬುವವರ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಹಸು ಮೃತಪಟ್ಟಿದೆ. ಕಳೆದ ವಾರ ಸಂಪತ್‌ ಎಂಬುವವರಿಗೆ ಸೇರಿದ ಹಸುವಿನ ಮೇಲು ಚಿರತೆ ದಾಳಿ ಮಾಡಿ ಕೊಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ಸೆರೆಗೆ ಬೋನ್‌ ಇರಿಸಿದ್ದಾರೆ. ಇದನ್ನೂ ಓದಿ … Read more