ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿ, ಬೈಕ್‌ಗೆ ಡಿಕ್ಕಿ ಹೊಡೆದು ಗೂಡ್ಸ್‌ ವಾಹನ ಎಸ್ಕೇಪ್‌, ಚೇಸ್‌ ಮಾಡಿ ವಶಕ್ಕೆ ಪಡೆದ ಪೊಲೀಸ್‌

Bike-and-Goods-Vehicle-incident-at-Shimoga-Thirthahalli-Road

ತೀರ್ಥಹಳ್ಳಿ: ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ (Hit and Run) ಗೂಡ್ಸ್‌ ವಾಹನವನ್ನು ಪೊಲೀಸರು ಚೇಸ್‌ ಮಾಡಿ ಹಿಡಿದಿದ್ದಾರೆ. ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯ 15ನೇ ಮೈಲಿಗಲ್ಲಿನ ಬಳಿ ಅಪಘಾತ ಸಂಭವಿಸಿದೆ. ಬೇಗುವಳ್ಳಿ ಸಮೀಪ ಗೂಡ್ಸ್‌ ವಾಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೇಗಾಯ್ತು ಘಟನೆ? ವಾಹನವೊಂದನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಗೂಡ್ಸ್‌ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ ಸವಾರನಿಗೆ ಗಾಯವಾಗಿದ್ದು, ಸ್ಥಳೀಯರು ಕೂಡಲೆ ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಿದ್ದರು. ಅಪಘಾತದ ಬಳಿಕ ಗೂಡ್ಸ್‌ … Read more

ಒಂದೇ ವಾರದಲ್ಲಿ ಎರಡು ಹಸುಗಳನ್ನು ಕೊಂದ ಚಿರತೆ, ಬೋನ್‌ ಇರಿಸಿದ ಅರಣ್ಯ ಇಲಾಖೆ, ಎಲ್ಲಿ?

forest-department-officers-visit-kaidotlu-village-leapord.

ಶಿವಮೊಗ್ಗ: ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಚಿರತೆಯೊಂದು (Leopard) ದಾಳಿ ನಡೆಸಿದೆ. ಶಿವಮೊಗ್ಗ ತಾಲೂಕು ಉಂಬ್ಳಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈದೊಟ್ಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬಿಷ್ಟೇಗೌಡ ಎಂಬುವವರ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಹಸು ಮೃತಪಟ್ಟಿದೆ. ಕಳೆದ ವಾರ ಸಂಪತ್‌ ಎಂಬುವವರಿಗೆ ಸೇರಿದ ಹಸುವಿನ ಮೇಲು ಚಿರತೆ ದಾಳಿ ಮಾಡಿ ಕೊಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ಸೆರೆಗೆ ಬೋನ್‌ ಇರಿಸಿದ್ದಾರೆ. ಇದನ್ನೂ ಓದಿ … Read more

ಶಿವಮೊಗ್ಗ ಸಿಟಿ, ವಿವಿಧ ಗ್ರಾಮಗಳಲ್ಲಿ ಸೆ.22ರಂದು ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

power cut mescom ELECTRICITY

ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಸೆ.22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಪಿಯರ್‌ಲೈಟ್, ಪೇಪರ್ ಪ್ಯಾಕೇಜ್, ಕೆ.ಆರ್. ಕುಡಿಯುವ ನೀರಿನ ಸ್ಥಾವರ, ಮಂಡ್ಲಿ ಕೈಗಾರಿಕಾ ಪ್ರದೇಶ, ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಗಾಂಧಿಬಜಾರ್, ಬುದ್ಧನಗರ, ಆರ್.ಎಂ.ಎಲ್.ನಗರ, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ, ನ್ಯೂಮಂಡ್ಲಿ, ಮಂಜುನಾಥ … Read more

ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್‌ ಅಂತಿದ್ದಾರೆ ಜನ, ಏನಿದು ಅಭಿಯಾನ?

Rangoli-by-Shimoga-mahanagara-palike

ಶಿವಮೊಗ್ಗ: ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ವಾಹನ ಬಂದರೂ ಕಸ ತಂದು ರಸ್ತೆ ಸುರಿಯುವವರಿಗೇನು ಕಡಿಮೆ ಇಲ್ಲ. ಇಂತಹವರಿಗೆ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ರಂಗೋಲಿ (Rangoli) ಮೊರೆ ಹೋಗಿದ್ದಾರೆ. ಶಿವಮೊಗ್ಗ ನಗರದ ವಿವಿಧೆಡೆ ಖಾಲಿ ನಿವೇಶನಗಳು, ರಸ್ತೆ ಬದಿ, ಕನ್ಸರ್‌ವೆನ್ಸಿಗಳಲ್ಲಿ ಜನ ಕಸ ತಂದು ಸುರಿಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ರಂಗೋಲಿ ಅಭಿಯಾನ ಆರಂಭಿಸಿದ್ದಾರೆ. ಕಸ ಸುರಿಯುವ ಜಾಗದಲ್ಲಿ ಚಂದದ ರಂಗೋಲಿ ಬಿಡಿಸಿ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿಗಳು

Speed News - Shivamogga District

ಶಿವಮೊಗ್ಗ: ಜಿಲ್ಲೆಯಲ್ಲಿ ಈವರೆಗು ಏನೇನಾಯ್ತು? ಇಲ್ಲಿದೆ ಸ್ಪೀಡ್‌ ನ್ಯೂಸ್‌. (Speed News) ಇದನ್ನೂ ಓದಿ » ಶಿವಮೊಗ್ಗದಲ್ಲಿ ಸರ್ಕಾರಿ ಆಂಬುಲೆನ್ಸ್‌ ಚಾಲಕನಿಗೆ ₹10,000 ದಂಡ, ಕಾರಣವೇನು? Shivamogga Speed News