ಮೆಗ್ಗಾನ್‌ ಆಸ್ಪತ್ರೆಯಿಂದ ಹೊರಬಂದ ಮೆಡಿಕಲ್‌ ವಿದ್ಯಾರ್ಥಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Mc-Gann-Hospital-Shimoga

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಕ್ಯಾಶುವಾಲಿಟಿ ಪಕ್ಕದ ಪಾರ್ಕಿಂಗ್ ಜಾಗದಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ (Bike Stolen). ಅರ್ಜುನ್ ಬೈಜು ಎಂಬುವವರಿಗೆ ಸೇರಿದ ಹಿಮಾಲಯನ್ ಸ್ಕ್ರ‍್ಯಾಮ್ ಬೈಕ್ ನಾಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಶಿವಮೊಗ್ಗದಲ್ಲಿ ಸಾವು ಡಿಸೆಂಬರ್ 4ರ ಬೆಳಗ್ಗೆ ಅರ್ಜುನ್‌ ಬೈಜು ಬೈಕ್‌ ತಂದು ನಿಲ್ಲಿಸಿದ್ದರು. ಮಧ್ಯಾಹ್ನ ಆಸ್ಪತ್ರೆಯಿಂದ ಹೊರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಅರ್ಜುನ್‌ ಬೈಜು, ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ … Read more

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ ವಿರುದ್ಧ ಜಿಲ್ಲಾಧಿಕಾರಿಗೆ ದೂರು, ಏನೇನಿದೆ ಕಂಪ್ಲೇಂಟ್‌ನಲ್ಲಿ?

SDPI-workers-memorandum-against-Mc-Gann-Hospital-staff

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಅವ್ಯವಸ್ಥೆ ಮಿತಿಮೀರಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಜೀಲಾನ್ ಖಾನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ನವೆಂಬರ್‌ 28ರಂದು ನೂರ್ ಅಫ್‌ಶಾ ಎಂಬ ಬಾಣಂತಿ ಸಾವಿಗೀಡಾಗಿದ್ದಾರೆ. ಆಕೆಯ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಎಸ್‌ಡಿಪಿಐ ಕಾರ್ಯಕರ್ತರು ಆಗ್ರಹಿಸಿದರು. ‘ಲಂಚ ಕೊಟ್ಟರಷ್ಟೆ ಮಗು ಕೊಡ್ತಾರೆʼ ಮೆಗ್ಗಾನ್‌ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಹೆಣ್ಣು … Read more

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಕುಸಿದು ಬಿದ್ದಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು, ಪತ್ತೆಯಾಗದ ವಾರಸುದಾರರು

160125 mc gann hospital general image

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ (Hospital) ಹಳೆ ಕಟ್ಟಡದ ಹತ್ತಿರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಇವರ ವಾರಸುದಾರರ ಪತ್ತೆಗೆ ದೊಡ್ಡಪೇಟೆ ಠಾಣೆ ಪೊಲೀಸ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಅ.26 ರಂದು ಲಕ್ಷ್ಮೀ (42) ಎಂಬುವವರು ಮೆಗ್ಗಾನ್‌ ಆಸ್ಪತ್ರೆಯ ಹಳೆಯ ಕಟ್ಟಡದ ಬಳಿ ಸುಸ್ತಾಗಿ ಬಿದ್ದಿದ್ದರು. ಸಾರ್ವಜನಿಕರ ನೆರವಿನಿಂದ ಅವರನ್ನು ಮೆಗ್ಗಾನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನ.3 ರಂದು ಮೃತಪಟ್ಟಿದ್ದಾರೆ. ಇವರ ವಿಳಾಸ, ವಾರಸುದಾರರ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್‌ … Read more

ಮೆಗ್ಗಾನ್‌ ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು, ವಾರಸುದಾರರ ಪತ್ತೆಗೆ ಪೊಲೀಸ್‌ ಪ್ರಕಟಣೆ

160125 mc gann hospital general image

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದ ಹನುಮಂತಪ್ಪ (52) ಅ.10ರಂದು ಮೃತಪಟ್ಟಿದ್ದಾರೆ. ಇವರ ವಾರಸುದಾರರು ಹಾಗೂ ವಿಳಾಸದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹನುಮಂತಪ್ಪ 5.5 ಅಡಿ ಎತ್ತರ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಮೃತನ ಬಲ ಪಕ್ಕೆಯ ಮೇಲೆ ಸಾಸಿವೆ ಕಾಳು ಗಾತ್ರದ ಕಪ್ಪು ಮಚ್ಚೆ ಗುರುತಿದೆ. ಎಡಗೈ ಬುಜ ಹಾಗೂ ಮುಂಗೈ ಮಣಿಕಟ್ಟಿನ ಮೇಲೆ ಅರ್ಧ ವಾಸಿಯಾಗದ ಗಾಯದ ಗುರುತು ಇದೆ. ವಾರಸುದಾರರ ಬಗ್ಗೆ … Read more

ಮೆಗ್ಗಾನ್‌ ಆಸ್ಪತ್ರೆ ಮುಂದೆ ಎರಡು ದಿನ ಧರಣಿ ಸತ್ಯಾಗ್ರಹ, ಕಾರಣವೇನು?

160125 mc gann hospital general image

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ಅ.15 ಮತ್ತು 16ರಂದು ಮೆಗ್ಗಾನ್ ಬೋಧನಾ ವೈದ್ಯಕೀಯ ಕಾಲೇಜು ಮುಂದೆ ಧರಣಿ ಸತ್ಯಾಗ್ರಹ (Sathyagraha) ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್‌, ಶಿವಮೊಗ್ಗ ಸೇರಿ ನೆರೆಹೊರೆಯ ಜಿಲ್ಲೆಯ ಬಡವರಿಗೆ ಮೆಗ್ಗಾನ್ ಆಸ್ಪತ್ರೆ ಸಂಜಿವೀನಿಯಾಗಿದೆ. ಆದರೆ ಆಸ್ಪತ್ರೆ ಆಡಳಿತ ವ್ಯವಸ್ಥೆಯಿಂದ ಈಗ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಬಡ ರೋಗಿಗಳಿಗೆ ಸರಿಯಾದ … Read more

ಶಿವಮೊಗ್ಗದಲ್ಲಿ ಜಾತಿ ಸಮೀಕ್ಷೆಗೆ ತೆರಳಿದ್ದ ಸಿಬ್ಬಂದಿ ಮೇಲೆ ಬೀದಿ ನಾಯಿ ದಾಳಿ

dog-bite-on-caste-survey-officer

ಶಿವಮೊಗ್ಗ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಸಿಬ್ಬಂದಿ ಮೇಲೆ ಶಿವಮೊಗ್ಗದಲ್ಲಿ ಬೀದಿನಾಯಿ (Dog) ದಾಳಿ ನಡೆಸಿದೆ. ಗಾಯಗೊಂಡಿರುವ ಸಿಬ್ಬಂದಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶಿವಮೊಗ್ಗದ ರವಿವರ್ಮ ಬೀದಿ, ಆಜಾದ್‌ ನಗರ ಭಾಗದಲ್ಲಿ ಸರ್ವೆ ಕಾರ್ಯಕ್ಕೆ ತೆರಳಿದ್ದ ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕಿ ಉಮಾರಾಣಿ ಅವರ ಮೇಲೆ ನಾಯಿ ದಾಳಿ ಮಾಡಿದೆ. ಎಡಗಾಲಿಗೆ ನಾಯಿ ಕಚ್ಚಿದ್ದು ರಕ್ತ ಸುರಿಯುತ್ತಿದ್ದರು ಗಣತಿ ಕಾರ್ಯ ಮುಗಿಸಿ ಉಮಾರಾಣಿ ಅವರು ಮೆಗ್ಗಾನ್‌ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. … Read more

ಶಿವಮೊಗ್ಗ ಜೈಲು ಸೇರಿದ ಮೂರೇ ದಿನಕ್ಕೆ ವಿಚಾರಣಾಧೀನ ಕೈದಿ ಸಾವು, ಏನಿದು ಕೇಸ್‌?

Shimoga-Central-Jail-Prison

ಶಿವಮೊಗ್ಗ: ವಿಚಾರಣಾಧೀನ ಕೈದಿಯಾಗಿ (Prisoner) ಶಿವಮೊಗ್ಗ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಮೂರೇ ದಿನಕ್ಕೆ ಮೃತಪಟ್ಟಿದ್ದಾನೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಇಂದು ಬಳಗ್ಗೆ ಆತ ಸಾವನ್ನಪ್ಪಿದ್ದಾನೆ ಎಂದು ಕಾರಾಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ ಟಿಪ್ಪುನಗರದ ನಿವಾಸಿ ಮನ್ಸೂರ್‌ (43) ಮೃತ ವಿಚಾರಣಾಧೀನ ಕೈದಿ. ಸೆ.15ರಂದು ಮನ್ಸೂರ್‌ ಶಿವಮೊಗ್ಗ ಜೈಲು ಸೇರಿದ್ದ. ಅನಾರೋಗ್ಯದ ಹಿನ್ನೆಲೆ ಸೆ.17ರ ಮಧ್ಯರಾತ್ರಿ ಈತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ತಂದೆ ಎದೆಗೆ ಕತ್ತರಿ ಚುಚ್ಚಿದ್ದ ಸೆ.14ರಂದು ಮನ್ಸೂರ್‌ ತನ್ನ … Read more

ಮೆಗ್ಗಾನ್ ಆಸ್ಪತ್ರೆ ಮುಂದೆ ನೇಣು ಬಿಗದುಕೊಂಡ ನ್ಯಾಮತಿ ಯುವಕ

170925-Nyamathi-Youth-At-Mc-gann-hospital-cctv.webp

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ (Hospital) ಆವರಣದಲ್ಲಿ ನಾಮಫಲಕಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣಿಗೆ ಶರಣಾದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನ್ಯಾಮತಿ ತಾಲೂಕು ಸುರಹೊನ್ನೆಯ ನಿವಾಸಿ ಆಕಾಶ್ (28) ನೇಣಿಗೆ ಕೊರಳೊಡ್ಡಿದಾತ. ಆಕಾಶ್ ತಾಯಿಗೆ ಹುಷಾರಿಲ್ಲದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಾಯಿಯ ಅರೈಕೆಗಾಗಿ ಆಸ್ಪತ್ರೆಗೆ ಬಂದಿದ್ದ ಆಕಾಶ್ ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ಬೋರ್ಡ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಆಸ್ಪತ್ರೆ ಮುಂಭಾಗ ಈತ ನೇಣು ಬಿಗಿದುಕೊಳ್ಳುತ್ತಿದ್ದ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ … Read more

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಸೌಲಭ್ಯ, ಏನೆಲ್ಲ ಸೌಲಭ್ಯ ಯಾವ್ಯಾವ ದಿನ ಲಭ್ಯ?

160125 mc gann hospital general image

ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (Hospital) ಮೂತ್ರರೋಗ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ಮೂತ್ರಪಿಂಡ ಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರ ಸೇವೆಗಳು ಸೋಮವಾರ ಮತ್ತು ಗುರುವಾರ ದೊರೆಯಲಿದೆ. ಒಪಿಡಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನರರೋಗ ವಿಭಾಗದ ಒಪಿಡಿಯು ಸೋಮವಾರ, ಬುಧವಾರ, ಶುಕ್ರವಾರದಂದು ತೆರೆಯಲಿದ್ದು, ನರರೋಗ ಶಸ್ತ್ರಚಿಕಿತ್ಸಾ ಸೇವೆಗೆ ಮಂಗಳವಾರ, ಗುರುವಾರ, ಶನಿವಾರ ಸೇವೆ ಹೊರ ರೋಗಿಗಳಿಗೆ ಲಭ್ಯವಿದೆ. ಚಿಕಿತ್ಸೆಯ ನಂತರ ಶಸ್ತ್ರಚಿಕಿತ್ಸೆ ಅವಶ್ಯವಿದ್ದಲ್ಲಿ ರೋಗಿಗಳನ್ನು ದಾಖಲಿಸಿಕೊಂಡು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ … Read more

ಮೆಗ್ಗಾನ್‌ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಬಳಿಕ ಮಹಿಳೆಗೆ ಬಂತು ಸಾಲು ಸಾಲು ಮೆಸೇಜ್‌, ಆಮೇಲೆ ಕಾದಿತ್ತು ಶಾಕ್

Mc-Gann-Hospital-Shimoga

SHIMOGA, 22 AUGUST 2024 | ಮೆಗ್ಗಾನ್‌ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ತೆರಳಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಎಟಿಎಂ ಕಾರ್ಡ್‌ ಕಳ್ಳತನ ಮಾಡಿ, ಹಣ ಡ್ರಾ ಮಾಡಿಕೊಳ್ಳಲಾಗಿದೆ. ಈ ಸಂಬಂಧ ತಡವಾಗಿ ಪ್ರಕರಣ ದಾಖಲಾಗಿದೆ. ಸೊರಬ ತಾಲೂಕು ಬಿಲವಾನಿಯ ಗೌರಮ್ಮ ಎಂಬುವವರ ಎಟಿಎಂ ಕಳ್ಳತನ ಮಾಡಿ 50 ಸಾವಿರ ರೂ. ಹಣ ಡ್ರಾ ಮಾಡಿಕೊಳ್ಳಲಾಗಿದೆ. ಮೊಬೈಲ್‌ಗೆ ಬಂತು ಮೆಸೇಜ್‌ ಅನಾರೋಗ್ಯದ ಹಿನ್ನೆಲೆ ಗೌರಮ್ಮ ತಮ್ಮ ಪತಿಯೊಂದಿಗೆ ಜುಲೈ 25ರಂದು ಮೆಗ್ಗಾನ್‌ ಆಸ್ಪತ್ರೆ ಚಿಕಿತ್ಸೆಗೆ ಬಂದಿದ್ದರು. ಬೆಳಗ್ಗೆ 11 … Read more