BREAKING NEWS – ಸಾಗರ ತಾಲೂಕಿನ ಮೂವರು ಸೇರಿ 10 ಮಂದಿಗೆ ಮಂಗನ ಕಾಯಿಲೆ

MONKEY-FEVER-KFD-IN-SHIMOGA

SHIVAMOGGA LIVE NEWS | 27 FEBRUARY 2024 SHIMOGA : ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಆತಂಕ ಮುಂದುವರೆದಿದೆ. ಮಂಗಳವಾರ 10 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಆರು ಮಂದಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಒಬ್ಬರು, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮೂವರಿಗೆ ಕೆಎಫ್‌ಡಿ ಪಾಸಿಟಿವ್‌ ಬಂದಿದೆ. ಸಾಗರ ತಾಲೂಕಿನ ತ್ಯಾಗರ್ತಿಯ ಇಬ್ಬರು ಮತ್ತು ಗೌತಮಪುರದ ಒಬ್ಬರಲ್ಲಿ ಕೆಎಫ್‌ಡಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಕೆಎಫ್‌ಡಿ … Read more

ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಸಿದ್ದಾಪುರದ ಮಹಿಳೆ ಸಾವು, ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೇನು?

MONKEY-FEVER-KFD-IN-SHIMOGA

SHIVAMOGGA LIVE NEWS | 26 FEBRUARY 2024 SHIMOGA : ಮಂಗನ ಕಾಯಿಲೆಗೆ (ಕೆಎಫ್‌ಡಿ) ತುತ್ತಾಗಿದ್ದ ಮಹಿಳೆಯೊಬ್ಬರು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿದ್ದಾಪುರ ತಾಲೂಕಿನ ಕೊರ್ಲಕೈ ಉಪಕೇಂದ್ರ ವ್ಯಾಪ್ತಿಯ ನಾಗಮ್ಮ (57) ಮೃತ ಮಹಿಳೆ. ಐಸಿಯುನಲ್ಲಿ ದಾಖಲಾಗಿದ್ದ ನಾಗಮ್ಮ ಅವರು ಫೆ.25ರಂದು ರಾತ್ರಿ 8.30ರ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್‌ ಸುರಗಿಹಳ್ಳಿ ತಿಳಿಸಿದ್ದಾರೆ. ಒತ್ತಾಯವಾಗಿ ಆಸ್ಪತ್ರೆಗೆ ದಾಖಲು ಜ.28ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ವೇಳೆ ನಾಗಮ್ಮ ಅವರಿಗೆ ಕೆಮ್ಮು, … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಬ್ಬರಿಗೆ ಕೆಎಫ್‌ಡಿ ಪಾಸಿಟಿವ್‌, ಸಕ್ರಿಯ ಪ್ರಕರಣಗಳೆಷ್ಟು? ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದವರೆಷ್ಟು?

MONKEY-FEVER-KFD-IN-SHIMOGA

SHIVAMOGGA LIVE NEWS | 16 FEBRUARY 2024 SHIMOGA : ಜಿಲ್ಲೆಯಲ್ಲಿ ಕೆಎಫ್‌ಡಿ (ಮಂಗನಕಾಯಿಲೆ) ಪ್ರಕರಣಗಳು ಹೆಚ್ಚಾಗುತ್ತಿವೆ. ಇವತ್ತು ಒಬ್ಬರಿಗೆ ಕೆಎಫ್‌ಡಿ ಪಾಸಿಟಿವ್‌ ಬಂದಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಈ ವರ್ಷ ಕೆಎಫ್‌ಡಿ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಪ್ರಸ್ತುತ 13 ಸಕ್ರಿಯೆ ಕೆಎಫ್‌ಡಿ ಪ್ರಕರಣಗಳಿವೆ. ಈಗಾಗಲೆ 21 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಇವತ್ತು … Read more

ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ 11 ಮಂದಿಗೆ ಕೆಎಫ್‌ಡಿ ಸೋಂಕು ಪಾಸಿಟಿವ್‌

MONKEY-FEVER-KFD-IN-SHIMOGA

SHIVAMOGGA LIVE NEWS | 5 FEBRUARY 2024 SHIMOGA : ಜಿಲ್ಲೆಯಲ್ಲಿ ಒಂದೇ ದಿನ 11 ಮಂದಿಗೆ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಪಾಸಿಟಿವ್‌ ಬಂದಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕೆಎಫ್‌ಡಿ ಸಕ್ರಿಯ ಪ್ರಕರಣಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 11 ಸೋಂಕಿತರ ಪೈಕಿ 3 ಮಂದಿ ತೀರ್ಥಹಳ್ಳಿ, 8 ಮಂದಿ ಹೊಸನಗರ ತಾಲೂಕಿನವರು ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಸದ್ಯ 13 ಸಕ್ರಿಯ ಪ್ರಕರಣಗಳಿವೆ. ಈವರೆಗೂ … Read more

‘ಯುವತಿ ಸಾವು ಮಂಗನ ಕಾಯಿಲೆಯಿಂದಲ್ಲ, ಅದು ಮರ್ಡರ್‌,ʼ ಇಲ್ಲಿದೆ ಹಿರಿಯ ವಕೀಲ ತಿಳಿಸಿದ 3 ಪ್ರಮುಖ ಸಂಗತಿ

Advocate-KP-Sripal-Press-Meet-in-Shimoga.

SHIVAMOGGA LIVE NEWS | 12 JANUARY 2024 SHIMOGA : ಮಂಗನಕಾಯಿಲೆಗೆ (ಕೆಎಫ್‌ಡಿ) ಬಲಿಯಾದ ಹೊಸನಗರದ ಯುವತಿಯ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಜಿಲ್ಲಾ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಬೇಕು. ಕೆಎಫ್‌ಡಿಯನ್ನು ರಾಷ್ಟ್ರಿಯ ಕಾಯಿಲೆಯಾಗಿ ಘೋಷಿಸಬೇಕು ಎಂದು ಕೆಎಫ್‌ಡಿ ಜನಜಾಗೃತಿ ಒಕ್ಕೂಟದ ಕೆ.ಪಿ.ಶ್ರೀಪಲ್‌ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ಶ್ರೀಪಾಲ್‌, ಮೂರು ಪ್ರಮುಖ ಸಂಗತಿಗಳನ್ನು ಪ್ರಸ್ತಾಪಿಸಿದರು. ಏನೆಲ್ಲ ಪ್ರಸ್ತಾಪ ಮಾಡಿದರು? ಹೊಸನಗರ ತಾಲೂಕು ಅರಮನೆಕೊಪ್ಪದ ಯುವತಿ ಅನನ್ಯಾ ರಕ್ತದ ಮಾದರಿ ಪರೀಕ್ಷಿಸಿದಾಗ ಕೆಎಫ್‌ಡಿ ದೃಢಪಟ್ಟಿತ್ತು. ಆದರು ನೆಗೆಟಿವ್‌ ಎಂದು ವರದಿ … Read more

ಎರಡು ದಿನದಲ್ಲಿ ಎರಡು ಮಂಗಗಳು ಸಾವು, ಸ್ಥಳಕ್ಕೆ ಅಧಿಕಾರಿಗಳು ದೌಡು, ಮರಣೋತ್ತರ ಪರೀಕ್ಷೆ

KARGAL-SAGARA-NEWS-1.jpg

SHIVAMOGGA LIVE NEWS | 18 DECEMBER 2023 SAGARA : ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನದಲ್ಲಿ ಎರಡು ಮಂಗಗಳು ಸಾವನ್ನಪ್ಪಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಜೋಗದ ವರ್ಕ್‌ಮನ್ ಬ್ಲಾಕ್ ಪ್ರದೇಶದಲ್ಲಿ ಒಂದು ಮಂಗ ಸಾವನ್ನಪ್ಪಿದೆ. ಜೋಗದ ರೆಡ್ಡಿ ಬ್ಲಾಕ್ ಪ್ರದೇಶದಲ್ಲಿ ಮತ್ತೊಂದು ಮಂಗ ಮೃತಪಟ್ಟಿದೆ. ವಿಷಯ ತಿಳಿದು ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ … Read more

ತೀರ್ಥಹಳ್ಳಿಯಲ್ಲಿ ವ್ಯಕ್ತಿಗೆ ಕೆ.ಎಫ್.ಡಿ ಸೋಂಕು ಪಾಸಿಟಿವ್

Thirthahalli-JC-Hospital.

SHIVAMOGGA LIVE NEWS | 15 MARCH 2023 THIRTHAHALLI : ಬೇಸಿಗೆ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ತೀರ್ಥಹಳ್ಳಿ ತಾಲೂಕಿನ ವ್ಯಾಕ್ತಿಯೊಬ್ಬರಿಗೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆ.ಎಫ್.ಡಿ) ಪಾಸಿಟಿವ್ (Positive) ಬಂದಿದೆ. ತಾಲೂಕಿನ ಗುತ್ತಿಯಡೆಹಳ್ಳಿ ಸಮೀಪದ ಹಳ್ಳಿಬೈಲು ಗ್ರಾಮದ ವ್ಯಕ್ತಿಯೊಬ್ಬರಿಗೆ ಕೆ.ಎಫ್.ಡಿ ದೃಢಪಟ್ಟಿದೆ. ನಾಲ್ಕೈದು ದಿನದಿಂದ ಅವರು ಜ್ವರದಿಂದ ಬಳಲುತ್ತಿದ್ದರು. ಪರೀಕ್ಷೆ ಮಾಡಿದಾಗ ಕೆ.ಎಫ್.ಡಿ ಪಾಸಿಟಿವ್ (Positive) ಬಂದಿದೆ. ಇದನ್ನೂ ಓದಿ – ಅಟ್ಟಾಡಿಸಿ ಹತ್ಯೆ ಮಾಡಿದ್ದ ಕೇಸಿಗೆ ಪ್ರತೀಕಾರದ ಶಂಕೆ, ಚೀಲೂರು ಬಳಿ ಇಬ್ಬರ … Read more

ತೀರ್ಥಹಳ್ಳಿಯಲ್ಲಿ ಮತ್ತೊಂದು KFD ಪ್ರಕರಣ, ಕನ್ನಂಗಿ ಭಾಗದಲ್ಲಿ ಆತಂಕ

Kannangi Graphics

SHIVAMOGGA LIVE NEWS | 11 ಮಾರ್ಚ್ 2022 ತೀರ್ಥಹಳ್ಳಿ ತಾಲೂಕಿನಲ್ಲಿ ಮಂಗನ ಕಾಯಿಲೆ ಭೀತಿ ಮತ್ತಷ್ಟು ಹೆಚ್ಚಾಗಿದೆ. ಕನ್ನಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಯುವಕನಿಗೆ ಕೆಎಫ್’ಡಿ ಪಾಸಿಟಿವ್ ಬಂದಿದೆ. ಕುಡುವಳ್ಳಿಯ 24 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಜ್ವರದಿಂದ ನರಳುತ್ತಿದ್ದ ಯುವಕನ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. KFD ಸೋಂಕು ಇರುವುದು ದೃಢವಾಗಿದೆ. ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ | ತೀರ್ಥಹಳ್ಳಿಯಲ್ಲಿ ಇಬ್ಬರು ಮಹಿಳೆಯರಿಗೆ KFD ಪಾಸಿಟಿವ್, ಕನ್ನಂಗಿ ಭಾಗದಲ್ಲಿ ಆತಂಕ ಈ … Read more

ತೀರ್ಥಹಳ್ಳಿಯಲ್ಲಿ ಇಬ್ಬರು ಮಹಿಳೆಯರಿಗೆ KFD ಪಾಸಿಟಿವ್, ಕನ್ನಂಗಿ ಭಾಗದಲ್ಲಿ ಆತಂಕ

Kannangi Graphics

SHIVAMOGGA LIVE NEWS | 9 ಮಾರ್ಚ್ 2022 ತೀರ್ಥಹಳ್ಳಿ ತಾಲೂಕಿನಲ್ಲಿ KFD ಆತಂಕ ಮುಂದುವರೆದಿದೆ. ಇಬ್ಬರು ಮಹಿಳೆಯರು KFD ಸೋಂಕಿಗೆ ತುತ್ತಾಗಿದ್ದಾರೆ. ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ ಗ್ರಾಮದಲ್ಲಿ ಕಲ್ಪನಾ (40) ಮತ್ತು ದೇವಕಿ (45) ಎಂಬುವವರಿಗೆ KFD ಪಾಸಿಟಿವ್ ಬಂದಿದೆ. ಕಲ್ಪನಾ ಅವರು ದಾವಣಗೆರೆ ಜಿಲ್ಲೆಯಿಂದ ಯಡವತ್ತಿ ಗ್ರಾಮಕ್ಕೆ ಕೆಲಸಕ್ಕೆಂದು ಬಂದಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಜೆ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಇನ್ನು, ದೇವಕಿ ಅವರಿಗೆ ಜೆ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯ ಸ್ಥಿರವಾಗಿದೆ. … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು KFD ಪ್ರಕರಣ, ಶಿಕ್ಷಕರೊಬ್ಬರಿಗೆ ಸೋಂಕು ದೃಢ

Shimoga Map Graphics

ಶಿವಮೊಗ್ಗದ ಲೈವ್.ಕಾಂ | SHIMOGA NEWS | 28 ಜನವರಿ 2022 ಶಿವಮೊಗ್ಗದಲ್ಲಿ ಒಂದೇ ತಿಂಗಳಲ್ಲಿ ಎರಡನೇ KFD ಪ್ರಕರಣ ಪತ್ತೆಯಾಗಿದೆ. ಶಿಕ್ಷಕರೊಬ್ಬರಿಗೆ KFD ಸೋಂಕು (ಮಂಗನ ಕಾಯಿಲೆ) ದೃಢವಾಗಿದೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಯನೂರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿದ್ದ ಶಿಕ್ಷಕ, ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ರಕ್ತದ ಮಾದರಿಯನ್ನು KFD ಲ್ಯಾಬ್’ಗೆ ಕಳುಹಿಸಲಾಗಿತ್ತು. KFD ಪಾಸಿಟಿವ್ ಬಂದ ಹಿನ್ನೆಲೆ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. … Read more