ಬೆಂಗಳೂರು, ಮಂಗಳೂರು ಸೇರಿ ಅರ್ಧ ಕರ್ನಾಟಕದಲ್ಲಿ ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಆಗುಂಬೆಯಲ್ಲಿ ಅರೆಸ್ಟ್
ಶಿವಮೊಗ್ಗ ಲೈವ್.ಕಾಂ | AGUMBE NEWS | 26 ಸೆಪ್ಟೆಂಬರ್ 2021 ಕದ್ದ ಬೈಕ್’ನಲ್ಲಿ ತೆರಳುತ್ತಿದ್ದ ಇಬ್ಬರು ಅಂತರ್ಜಿಲ್ಲಾ ಬೈಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಖದೀಮರು ಬೈಕ್ ಕಳವು ಮಾಡಿದ್ದರು. ಆಗುಂಬೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಕಳ್ಳರನ್ನು ಬಂಧಿಸಿದ್ದಾರೆ. ಇವರ ವಿಚಾರಣೆ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಬೈಕ್ ಕದ್ದಿದ್ದರು ಬಂಧಿತರನ್ನು ಧಾರವಾಡ ಜಿಲ್ಲೆಯ ನವಲಗುಂದದ ಆದರ್ಶ ಮತ್ತು ಅನ್ವರ್ ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಬೈಕ್ ಕಳವು ಮಾಡಿಕೊಂಡು, … Read more