ಶಿವಮೊಗ್ಗ ಬಸ್‌ ನಿಲ್ದಾಣದಿಂದ ಬೆಳಗಿನ ಜಾವ ಮನೆಗೆ ನಡೆದು ಹೋಗುವಾಗ ಅಡ್ಡಗಟ್ಟಿದ ಬೈಕ್‌ ಸವಾರ

020921 Navule Road Light Inauguration

ಶಿವಮೊಗ್ಗ: ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಹಿಂತಿರುಗಿದ್ದ ವ್ಯಕ್ತಿಯೊಬ್ಬರು, ಬೆಳಗಿನ ಜಾವ ಮನೆಗೆ ನಡೆದು ಹೋಗುತ್ತಿದ್ದಾಗ, ಅಪರಿಚಿತನೊಬ್ಬ ಅಡ್ಡಗಟ್ಟಿ ನಗದು, ಉಂಗುರ ಕಸಿದು (Robbery) ಪರಾರಿಯಾಗಿದ್ದಾನೆ. ನವುಲೆಯ ಸ್ವರ್ಣ ಮಿತ್ರ ಬಡಾವಣೆಯ ಕುಮಾರ್‌ ಎಂಬುವವರು ಬಳ್ಳಾರಿಯಲ್ಲಿ  ಕೆಲಸ ಮುಗಿಸಿ ಶಿವಮೊಗ್ಗಕ್ಕೆ ಹಿಂತಿರುಗಿದ್ದರು. ಬೆಳಗಿನ ಜಾವ 4.30ರ ಹೊತ್ತಿಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಇಳಿದು ಮನೆಗೆ ನಡೆದು ಹೋಗುತ್ತಿದ್ದರು. ಶಿವಬಸವ ನಗರದಲ್ಲಿ ತೆರಳುವಾಗ ಬೈಕ್‌ ನಿಲ್ಲಿಸಿಕೊಂಡಿದ್ದ ವ್ಯಕ್ತಿಯೊಬ್ಬ ಕುಮಾರ್‌ ಅವರನ್ನು ಅಡ್ಡಗಟ್ಟಿ ಬೆದರಿಕೆ ಒಡ್ಡಿದಾನೆ ಎಂದು ಆರೋಪಿಸಲಾಗಿದೆ. ಕುಮಾರ್‌ ಅವರ … Read more

ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ, ಏನೆಲ್ಲ ಕಲಿಸಲಾಗುತ್ತದೆ? ಅರ್ಜಿ ಸಲ್ಲಿಸೋದು ಹೇಗೆ?

Agriculture-University-Iruvakki-sagara-campus-board

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಸೆ.15 ರಿಂದ ಅ.14ರ ವರೆಗೆ ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಆವರಣದ ಬೇಕರಿ ಘಟಕದಲ್ಲಿ ವಿವಿಧ ಬೇಕರಿ (Bakery) ಉತ್ಪನ್ನಗಳ ತಯಾರಿಕೆಯ ಬಗ್ಗೆ ಕೌಶಲಾಭಿವೃದ್ಧಿ ತರಬೇತಿ ಆಯೋಜಿಸಿದೆ. ಏನೆಲ್ಲ ತರಬೇತಿ ನೀಡಲಾಗುತ್ತೆ? ಬೆಣ್ಣೆ ಬಿಸ್ಕತ್ತು, ಕೋಕೊನಟ್ ಕುಕಿಸ್, ಕೋಕೊನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಕೋಕೊನಟ್ ಕ್ಯಾಸಲ್ಸ, ಫ್ರೂಟ್‌ ಕೇಕ್, ಸ್ಪಾಂಜ್‌ ಕೇಕ್, ಜೆಲ್‌ ಕೇಕ್, ಬಟರ್ ಐಸಿಂಗ್, ಮಿಲ್ಕ ಬ್ರೆಡ್, ಪಪ್‌ ಪೇಸ್ಟ್ರಿ, ದಿಲ್ ಪಸಂದ್, ಬಾಂಬೆ … Read more

ಶಿವಮೊಗ್ಗದಲ್ಲಿ ಹಣ್ಣು, ಆಹಾರ ಮೇಳ, ಯಾವಾಗ? ಏನೆಲ್ಲ ಇರುತ್ತೆ? ಇಲ್ಲಿದೆ ಡಿಟೇಲ್ಸ್‌

Agriculture-University-Iruvakki-sagara-campus-board

ಶಿವಮೊಗ್ಗ : ನವುಲೆಯ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಏ.26 ರಿಂದ 28ರವರೆಗೆ ವೈವಿಧ್ಯಮಯ ಹಣ್ಣುಗಳು (Fruits) ಮತ್ತು ಆಹಾರ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ್ ತಿಳಿಸಿದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿಸಿಲಿನ ಅಬ್ಬರ ಜೋರು, ಇವತ್ತು ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ನವುಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರದ ಆವರಣದಲ್ಲಿ ಮೂರು ದಿನವೂ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ … Read more

ಕೃಷಿ ಮೇಳ, ಈ ಬಾರಿ ಮೇಳದಲ್ಲಿ ಏನೆಲ್ಲ ಇದೆ? ಇಲ್ಲಿದೆ ಡಿಟೇಲ್ಸ್‌

181024 Krushi Mela at Navule Agriculture University

SHIMOGA NEWS, 18 OCTOBER 2024 : ನವುಲೆಯ ಕೆಳದ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ (Krushi Mela) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗ ಸೇರಿದಂತೆ ನೆರೆ ಜಿಲ್ಲೆಗಳಿಂದಲು ರೈತರು, ಕೃಷಿ ಆಸಕ್ತರು ಕೃಷಿ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಕೃಷಿ ಕಾಲೇಜು ಆವರಣದಲ್ಲಿ ಸ್ಟಾಲ್‌ಗಳನ್ನು ನಿರ್ಮಿಸಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಮಳಿಗೆಗಳನ್ನು ಸ್ಥಾಪಿಸಲಾಗಿದೆ. 300ಕ್ಕೂ ಹೆಚ್ಚು ಸ್ಟಾಲ್‌ಗಳು ಈ ಬಾರಿ ಕೃಷಿ ಮೇಳದಲ್ಲಿ 300ಕ್ಕೂ ಹೆಚ್ಚು ಸ್ಟಾಲ್‌ಗಳನ್ನು … Read more

ಪೂಜೆ ಮುಗಿಸಿ ನವುಲೆಯ ಮನೆಗೆ ವಾಪಸಾದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

Police-Van-Jeep-at-Shimoga-Nehru-Road

SHIVAMOGGA LIVE NEWS | 23 APRIL 2024 SHIMOGA : ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಾಗಿಲಿನ ಬೀಗ ಮುರಿದು, ಬೀರುವಿನದ್ದ ಚಿನ್ನ, ಬೆಳ್ಳಿ ಆಭರಣ, ನಗದು ಕಳವು ಮಾಡಲಾಗಿದೆ. ಶಿವಮೊಗ್ಗ ನಗರದ ನವುಲೆಯ ಕುರುಬರ ಬೀದಿಯ ರವಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ರವಿ, ಅಲಸೆಯಲ್ಲಿ ದೇಗುಲಕ್ಕೆ ತೆರಳಿ, ಆಯನೂರಿನಲ್ಲಿರುವ ಸಹೋದರಿಯ ಮನೆಯಲ್ಲಿ ಉಳಿದು ಮರುದಿನ ಬೆಳಗ್ಗೆ ಮನೆಗೆ ಮರಳಿದಾ ಬಾಗಿಲು ತೆರೆದಂತಿತ್ತು. ಒಳ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. 25 ಸಾವಿರ  … Read more

ನವುಲೆ ಬಳಿ ಭೀಕರ ಅಪಘಾತ, ಇಂಜಿನಿಯರಿಂಗ್‌ ವಿದ್ಯಾರ್ಥಿ ಸ್ಥಳದಲ್ಲೇ ಸಾವು | ನಿದಿಗೆ ಬಳಿ ಹಳ್ಳಕ್ಕೆ ಉರುಳಿದ ಲಾರಿ

Truck-at-nidige-from-mangalore-to-machenahalli

SHIVAMOGGA LIVE NEWS | 22 MARCH 2024 ನಿದಿಗೆ ಬಳಿ ಹಳ್ಳಕ್ಕೆ ಲಾರಿ ಪಲ್ಟಿ SHIMOGA : ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಕ್ಕೆ ಕಲ್ಲಿದ್ದಲು ತುಂಬಿಕೊಂಡು ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದೆ. ಶಿವಮೊಗ್ಗದ ನಿದಿಗೆ ಕೆರೆ ಏರಿ ಮೇಲೆ ಘಟನೆ ಸಂಭವಿಸಿದೆ. ಲಾರಿಯು ಮಂಗಳೂರಿನಿಂದ ಬರುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ನವುಲೆಯಲ್ಲಿ ಅಪಘಾತ, ಕಾಲೇಜು ವಿದ್ಯಾರ್ಥಿ ಸಾವು SHIMOGA : ಬೈಕ್‌ ಅಪಘಾತದಲ್ಲಿ ಇಂಜಿನಿಯರಿಂಗ್‌ ಕಾಲೇಜು … Read more

ಹುಡುಗಿ ವಿಚಾರಕ್ಕೆ ಮಾರಕಾಸ್ತ್ರ ಸಹಿತ ಯುವಕನ ಮನೆಗೆ ನುಗ್ಗಿ ದಾಂಧಲೆ, ಕಿಟಕಿ ಗಾಜು, ತೊಟ್ಟಿಲು ಪೀಸ್‌ ಪೀಸ್

CRIME-NEWS-SHIVAMOGGA-LIVE-NEWS

SHIVAMOGGA LIVE | 1 JUNE 2023 SHIMOGA : ಯುವತಿಯೊಬ್ಬಳ ವಿಚಾರವಾಗಿ ಯುವಕನ ಮನೆಗೆ ಮಾರಕಾಸ್ತ್ರ (Lethal Weapon) ಸಹಿತ ನುಗ್ಗಿದ ಗುಂಪೊಂದು ದಾಂಧಲೆ ನಡೆಸಿದೆ. ಮನೆಯಲ್ಲಿರುವ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನವುಲೆಯ ತ್ರಿಮೂರ್ತಿನಗರದ ನಿವಾಸಿ ಧೀಮಂತ್‌ ಎಂಬಾತನ ಮನೆಗೆ ಯುವಕರ ಗುಂಪು ನುಗ್ಗಿ ದಾಂಧಲೆ ಮಾಡಿದೆ. ಏನಿದು ಪ್ರಕರಣ? ಧೀಮಂತ್‌ ಎಂಬಾತನ ಸ್ನೇಹಿತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ನವುಲೆಯ ಕೆಲವು ಯುವಕರು ಈ ವಿಚಾರವಾಗಿ ಧೀಮಂತನ ಸ್ನೇಹಿತನೊಂದಿಗೆ ಪದೇ ಪದೇ ಜಗಳವಾಡುತ್ತಿದ್ದರು. ಬೊಮ್ಮನಕಟ್ಟೆಯಲ್ಲಿ … Read more

ನವುಲೆಯಲ್ಲಿ ಡಿವೈಡರ್ ಬಳಿ ನಿಂತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಬೈಕ್

crime name image

SHIMOGA | ರಸ್ತೆಯ ಒಂದು ಬದಿಯಿಂದ (DIVIDER) ಮತ್ತೊಂದು ಬದಿಗೆ ಸ್ಕೂಟಿಯಲ್ಲಿ ತೆರಳಲು ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸ್ಕೂಟಿ ಸವಾರನಿಗೆ ಗಾಯವಾಗಿದ್ದು, ವಾಹನಕ್ಕೂ ಹಾನಿಯಾಗಿದೆ. ನವುಲೆಯ ಸರ್ಜಿ ಕನ್ವೆಷನ್ ಹಾಲ್ ಮುಂಭಾಗ ಘಟನೆ ಸಂಭವಿಸಿದೆ. ಮುರುಗ್ಯಪ್ಪ ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಬ್ಬಲಗೆರೆ ಕಡೆಯಿಂದ ಸ್ಕೂಟಿಯಲ್ಲಿ ಬಂದಿದ್ದ ಮುರುಗ್ಯಪ್ಪ ಅವರು ಸರ್ಜಿ ಕನ್ವೆಷನ್ ಹಾಲ್ ಬಳಿ ವೆಲ್ಡಿಂಗ್ ಶಾಪ್ ಗೆ ತೆರಳಬೇಕಿತ್ತು. ಸ್ಕೂಟಿಯ ಇಂಡಿಕೇಟರ್ ಹಾಕಿಕೊಂಡು ಡಿವೈಡರ್ (DIVIDER) … Read more

ನವುಲೆ ಬಳಿ ರಸ್ತೆ ಡಿವೈಡರ್ ಮೇಲಿನ ಅಲಂಕಾರಿಕ ವಿದ್ಯುತ್ ಬೀದಿ ದೀಪಗಳಿಗೆ ಚಾಲನೆ

020921 Navule Road Light Inauguration

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಸೆಪ್ಟೆಂಬರ್ 2021 ಶಿವಮೊಗ್ಗದ ನವುಲೆ ಬಳಿ ರಸ್ತೆ ಮಧ್ಯೆ ಅಳವಡಿಸಲಾಗಿರುವ ಅಲಂಕಾರಿಕ ವಿದ್ಯುತ್ ದೀಪಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ರಸ್ತೆಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಶಿವಮೊಗ್ಗದ ಎಲ್.ಬಿ.ಎಸ್ ನಗರದಿಂದ ಒಂದು ಕಿ.ಮೀ.ವರೆಗೆ ರಸ್ತೆಯ ಡಿವೈಡರ್ ಮೇಲೆ ಅಲಂಕಾರಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆಕರ್ಷಕ ವಿದ್ಯುತ್ ದೀಪಗಳಿಗೆ ಇವತ್ತು ಸಂಜೆಯಿಂದ ಚಾಲನೆ ಸಿಕ್ಕಿದೆ. 59 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ದೀಪ ಅಳವಡಿಸಲಾಗಿದೆ. … Read more

ತೀರ್ಥಹಳ್ಳಿಯಲ್ಲಿ ಅತಿ ಹೆಚ್ಚು, ಶಿವಮೊಗ್ಗದಲ್ಲಿ ಕಡಿಮೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

170621 Rain At Shimoga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021 ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತು ಮಳೆ ಕಡಿಮೆಯಾಗಿದೆ. ಶುಕ್ರವಾರ ಜಿಲ್ಲೆಯಾದ್ಯಂತ ಸರಾಸರಿ 120.77 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಅತ್ಯಧಿಕ ಮಳೆಯಾಗಿದೆ. ಇದರಿಂದ ತುಂಗಾ ನದಿ ಉಕ್ಕಿ ಹರಿದು, ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಇದನ್ನೂ ಓದಿ | ಎರಡು ದಿನದ ಮಳೆಗೆ ನವುಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊಣಕಾಲುದ್ದ ನೀರು ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 27.60 ಮಿ.ಮೀ, ಭದ್ರಾವತಿಯಲ್ಲಿ 36.20 ಮಿ.ಮೀ, ತೀರ್ಥಹಳ್ಳಿಯಲ್ಲಿ 380.80 … Read more