ಗುಂಡೇಟಿಗೆ ಬಲಿಯಾದ ಬಿಜೆಪಿ ಮುಖಂಡನ ಅಂತ್ಯ ಸಂಸ್ಕಾರ, ಮನೆಗೆ ಗೃಹ ಸಚಿವರ ಭೇಟಿ

Firing-at-Thirthahalli-BJP-Leader-Dies

SHIVAMOGGA LIVE NEWS | 28 ಮಾರ್ಚ್ 2022 ಗುಂಡೇಟಿಗೆ ಬಲಿಯಾದ ನೊಣಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂತರಾಜು ಅಂತ್ಯಕ್ರಿಯೆ ಭಾನುವಾರ ನೆರವೇರಿತು. ಮೃತನ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂತರಾಜು ಅವರ ಮನೆಗೆ ಭೇಟಿ ನೀಡಿ, ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಕಾಂತರಾಜು ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಘಟನೆಗೆ ನ್ಯಾಯ ದೊರಕಿಸುವ … Read more

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನಿಗೆ ಗುಂಡೇಟು, ಎಫ್ಐಆರ್ ದಾಖಲು, ಶಿವಮೊಗ್ಗಕ್ಕೆ ಮೃತದೇಹ ರವಾನೆ

Bullet-fired-Kantaraju-dies-thirthahalli.

SHIVAMOGGA LIVE NEWS | 26 ಮಾರ್ಚ್ 2022 ಗುಂಡು ತಗುಲಿ ನೊಣಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂತರಾಜು ಸಾವನ್ನಪ್ಪಿದೆ ಪ್ರಕರಣ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಸಹೋದರ ನೀಡಿದ ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ನಡುವೆ ಮೃತದೇಹವನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಕಾಂತರಾಜು (40) ಅವರಿಗೆ ಶಿರಿಗಾರುವಿನಿಂದ ಹೊಸ್ಕೇರಿ ಮತ್ತು ಅತ್ತಿಗಾರುಗೆ ಹೋಗುವ ರಸ್ತೆಯ ಪಕ್ಕದಲ್ಲಿ ಗುಂಡೇಟು ಬಿದ್ದಿದೆ. ಇದರ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ … Read more

ತೀರ್ಥಹಳ್ಳಿಯಲ್ಲಿ ಗುಂಡು ತಗುಲಿ ಬಿಜೆಪಿ ಮುಖಂಡ ಸಾವು, ಆಸ್ಪತ್ರೆಗೆ ಗೃಹ ಸಚಿವರ ದೌಡು

Firing-at-Thirthahalli-BJP-Leader-Dies

SHIVAMOGGA LIVE NEWS | 26 ಮಾರ್ಚ್ 2022 ಗುಂಡು ತಗುಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಕಾಂತರಾಜು ಸಾವನ್ನಪ್ಪಿದ್ದಾರೆ. ಶಿಕಾರಿಗೆ ತೆರಳಿದ್ದಾಗ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಮೇಲಿನಕೊಪ್ಪ ಕಾಂತರಾಜು (44) ಅವರಿಗೆ ಇವತ್ತು ಮಧ್ಯಾಹ್ನ ಗುಂಡು ತಗುಲಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೇಗಾಯ್ತು ಘಟನೆ? ಬಂದೂಕಿನಿಂದ ಹಾರಿದ ಗುಂಡು ತಗುಲಿ ಕಾಂತರಾಜು ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅಂಬುತೀರ್ಥ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ನೋವಿನಿಂದ … Read more

ಅಡುಗೆ ಮನೆಯಲ್ಲಿ ಕಾಲಿಗೆ ಕುಟುಕಿದ ವಿಷ ಜಂತು, ಗೃಹಿಣಿ ಸಾವು

Woman-dies-of-Snake-Bite-in-Hosanagara-Ramachandra-pura

SHIVAMOGGA LIVE NEWS | 25 ಮಾರ್ಚ್ 2022 ಅಡುಗೆ ಮಾಡುವಾಗ ವಿಷ ಜಂತು ಕಡಿದು ಗೃಹಿಣಿಯೊಬ್ಬರು ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮುಂಡೇಶ್ವರಿ ಬೆಟ್ಟದ ಬಳಿ ಘಟನೆ ಸಂಭವಿಸಿದೆ. ಸೌಮ್ಯ (24) ಮೃತ ಮಹಿಳೆ. ಮಧ್ಯಾಹ್ನ ಅಡುಗೆ ಮಾಡುವಾಗ ವಿಷ ಜಂತುವೊಂದು ಕಾಲಿಗೆ ಕುಟುಕಿದೆ. ಕೆಲ ಹೊತ್ತಿನ ಬಳಿಕ ನೋವು ಕಾಣಿಸಿಕೊಂಡು, ಕಾಲು ಊದಿಕೊಂಡಿದೆ. ಕೂಡಲೆ ಸೌಮ್ಯ  ಅವರನ್ನು ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ … Read more

ಗ್ರಾಮ ಪಂಚಾಯಿತಿ ಕಚೇರಿ ಬೀಗ ಒಡೆದು ಕಳ್ಳತನ, ದಾಖಲೆಗಾಗಿ ನಡೆಯಿತಾ ಕೃತ್ಯ?

Talaguppa Graphics

SHIVAMOGGA LIVE NEWS | 19 ಮಾರ್ಚ್ 2022 ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲಿನ ಬೀಗಿ ಒಡೆದು ಕಳ್ಳತನ ಮಾಡಲಾಗಿದೆ. ಕಚೇರಿಯೊಳಗಿನ ಬೀರುವಿನ ಬೀಗ ಮುರಿದು ದಾಖಲೆಗಳನ್ನು ಚಲ್ಲಾಪಿಲ್ಲಿ ಮಾಡಲಾಗಿದೆ. ಸಾಗರ ತಾಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಬೀರುವಿನ ಬೀಗ ಒಡೆದು ದಾಖಲೆಗಳನ್ನು ಚಲ್ಲಾಪಿಲ್ಲಿ ಮಾಡಲಾಗಿದೆ. ಕಳ್ಳರು ಯಾವುದೋ ದಾಖಲೆಗಾಗಿ ಬಾಗಿಲಿನ ಬೀಗ ಒಡೆದಿರುವ ಶಂಕೆ ವ್ಯಕ್ತಿವಾಗಿದೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. … Read more

ಮಳೆ, ಗಾಳಿಗೆ ಉರುಳಿದ ಮೊಬೈಲ್ ಟವರ್, ಕ್ಯಾರೆ ಅನ್ನದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಗರಂ

030222 Villagers Protest againt BSNL officers Hodala Aralapura

ಶಿವಮೊಗ್ಗದ ಲೈವ್.ಕಾಂ | THIRTHAHALLI NEWS | 3 ಫೆಬ್ರವರಿ 2022 ಮೊಬೈಲ್ ಟವರ್ ಉರುಳಿ ಬಿದ್ದು ಆರು ತಿಂಗಳು ಕಳೆದರೂ ಸರಿಪಡಿಸದ ಬಿಎಸ್ಎನ್ಎಲ್ ಅಧಿಕಾರಿಗಳ ಅಸಡ್ಡೆ ವಿರುದ್ದ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ತಾಲೂಕು ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಆರು ತಿಂಗಳಿಂದ ರಿಪೇರಿ ಇಲ್ಲ ಭಾರಿ ಮಳೆ, ಗಾಳಿಗೆ ಮೊಬೈಲ್ ಟವರ್ ನೆಲಕ್ಕುರುಳಿತ್ತು. ಈತನಕ ಟವರ್ ರಿಪೇರಿ … Read more

ಗ್ರಾಮ ಪಂಚಾಯಿತಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಕಾಂಗ್ರೆಸ್, ಬಿಜೆಪಿ ಸದಸ್ಯರು

KONANDUR-THIRTHAHALLI-NEWS

ಶಿವಮೊಗ್ಗ ಲೈವ್.ಕಾಂ | THIRTHAHALLI CRIME NEWS | 14 ಜನವರಿ 2022 ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಸದಸ್ಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಮಾನ್ಯ ಸಭೆಯಲ್ಲಿ ಕೆರೆ ಅಭಿವೃದ್ಧಿ ವಿಚಾರವಾಗಿ ನಡೆದ ಚೆರ್ಚೆ ವೇಳೆ, ಕಾಂಗ್ರೆಸ್ ಬೆಂಬಲಿತ ಸದಸ್ಯ ಸುರೇಶ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯ ಪೂರ್ಣೇಶ್ ಮಧ್ಯೆ ಗಲಾಟೆಯಾಗಿದೆ. ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಗಾಯಗೊಂಡಿದ್ದ ಸುರೇಶ್ … Read more

ಲಕ್ಷ ಲಕ್ಷ ಕರೆಂಟ್ ಬಿಲ್ ಬಾಕಿ, ಎರಡು ಗ್ರಾಮ ಪಂಚಾಯಿತಿ ಕಚೇರಿಯ ವಿದ್ಯುತ್ ಕಟ್

Thirthahalli Name Graphics

ಶಿವಮೊಗ್ಗದ ಲೈವ್.ಕಾಂ | THIRTHAHALLI NEWS |  29 ಡಿಸೆಂಬರ್ 2021 ವಿದ್ಯುತ್ ಬಿಲ್ ಪಾವತಿ ಮಾಡದ ಗ್ರಾಮ ಪಂಚಾಯಿತಿಗಳಿಗೆ ಮೆಸ್ಕಾಂ ಅಧಿಕಾರಿಗಳು ಶಾಕ್ ನೀಡಿದ್ದಾರೆ. ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಮೀಟರ್’ಗಳಿಗೆ ಅಳವಡಿಸಿದ್ದ ಫ್ಯೂಸ್ ಕಿತ್ತೊಯ್ದಿದ್ದಾರೆ. ತೀರ್ಥಹಳ್ಳಿ ತಾಲೂಕು ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಮತ್ತು ಮುಳಬಾಗಿಲು ಗ್ರಾಮ ಪಂಚಾಯಿತಿ ಕಚೇರಿಗಳ ವಿದ್ಯುತ್ ಕಡಿತಗೊಳಿಸಲಾಗಿದೆ. ಎಷ್ಟೆಷ್ಟು ಬಾಕಿ ಇದೆ? ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯು ತಾಲೂಕಿನ ಅತಿದೊಡ್ಡ ಮತ್ತು ತೆರಿಗೆ, ರಾಯಲ್ಟಿ ರೂಪದಲ್ಲಿ ಅತಿ ಹೆಚ್ಚು ಆದಾಯ ಹೊಂದಿದೆ. … Read more

ಶಿವಮೊಗ್ಗದಲ್ಲಿ ಬೆಳಗ್ಗೆಯಿಂದಲೆ ಬಿರುಸುಗೊಂಡ ಮತದಾನ

271221 Election in Puradal Village

ಶಿವಮೊಗ್ಗದ ಲೈವ್.ಕಾಂ | SHIMOGA NEWS |  27 ಡಿಸೆಂಬರ್ 2021 ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಇವತ್ತು ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದ ಮತದಾನ ಬಿರುಸು ಪಡೆದುಕೊಂಡಿದೆ. ಶಿವಮೊಗ್ಗದ ಪುರದಾಳು, ಕುಂಸಿ, ಶಿಕಾರಿಪುರದ ಹಾರೋಗೊಪ್ಪ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ನಡೆಯುತ್ತಿದೆ. ಮತಗಟ್ಟೆ ಸುತ್ತಲು ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ. ಮೂರು ಪಂಚಾಯಿತಿ 39 ಸ್ಥಾನ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 39 ಸ್ಥಾನಗಳಿಗೆ ಇವತ್ತು ಚುನಾವಣೆ ನಡೆಯುತ್ತಿದೆ. ಕುಂಸಿ ಗ್ರಾಮ ಪಂಚಾಯಿತಿಯ 16, … Read more

ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ, ಡಿ.27ರಂದು ಕೆಲವು ಶಾಲೆ, ಕಾಲೇಜುಗಳಿಗೆ ರಜೆ

DC Office 1

ಶಿವಮೊಗ್ಗದ ಲೈವ್.ಕಾಂ |  SHIMOGA NEWS |  23 ಡಿಸೆಂಬರ್ 2021 ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಶಾಲೆ, ಕಾಲೇಜುಗಳಲ್ಲಿ ಮತದಾನ ಕೇಂದ್ರ ಇರಲಿದೆ. ಮತಗಟ್ಟೆಗಳು ಇರುವ ಶಾಲೆ, ಕಾಲೇಜುಗಳಿಗೆ ಆ ದಿನ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವಧಿ ಮುಗಿದ ಗ್ರಾಮ ಪಂಚಾಯಿತಿಗಳು ಮತ್ತು ವಿವಿಧ ಕಾರಣಕ್ಕೆ ತೆರವಾಗಿರುವ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಡಿ.27ರಂದು ಉಪ ಚುನಾವಣೆ ನಡೆಯಲಿದೆ. ಶಾಲೆ, ಕಾಲೇಜುಗಳಲ್ಲಿ ಮತಗಟ್ಟೆ … Read more