ಮೂರು ದಿನದಿಂದ ಒಂದೂ ಇಲ್ಲ ಪಾಸಿಟಿವ್ ಕೇಸ್, ಜಿಲ್ಲಾಡಳಿತಕ್ಕೂ ನೆಮ್ಮದಿ, ಜನರಿಗೂ ಖುಷಿ, ಹೇಗಾಯ್ತು ಗೊತ್ತಾ ಇದೆಲ್ಲ?

Shivamogga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಮೇ 2020 ಕಳೆದ ಮೂರು ದಿನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೂ ಕರೋನ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿಲ್ಲದೆ ಇರುವುದು ಜಿಲ್ಲಾಡಳಿತ ಮತ್ತು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ನಡುವೆ ಸೋಂಕಿತ ನಾಲ್ಕು ಮಂದಿ ಗುಣವಾಗಿ ಮನೆ ಸೇರಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಒಂದೇ ಒಂದು ಪಾಸಿಟಿವ್ ಇಲ್ಲ ಜಿಲ್ಲೆಯಾದ್ಯಂತ ಕಳೆದ ಮೂರು ದಿನದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಕಂಟೈನ್ಮೆಂಟ್ ಜೋನ್‍ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ … Read more

ಪಿ1305ಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನೋದೇ ನಿಗೂಢ, ಊಹಾಪೋಹದಿಂದ ಕುಂಸಿ, ಚೋರಡಿ ಸುತ್ತಲು ಆತಂಕ

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020 ಪೇಷೆಂಟ್ ನಂಬರ್ 1305 ಕೇಸ್ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಇವರಿಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನುವುದು ಈತನಕ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹಾಗಾಗಿ ಸೋಂಕು ಮತ್ತಷ್ಟು ಜನಕ್ಕೆ ಹರಡಬಹುದೆ ಎಂಬ ಅನುಮಾನ ಮೂಡಿದೆ. ಶಿವಮೊಗ್ಗ ತಾಲೂಕು ಬಾಳೆಕೊಪ್ಪ ಗ್ರಾಮದ ಪಿ1305 ಅವರಿಗೆ ಸೋಂಕು ತಗುಲಿರುವ ಕುರಿತು ನಿನ್ನೆ ಸ್ಟೇಟ್ ಬುಲೆಟಿನ್‍ನಲ್ಲಿ ಪ್ರಕಟಿಸಲಾಗಿದೆ. ಇವರಿಗೆ 63 ವರ್ಷ ವಯಸ್ಸು. ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು … Read more

BREAKING NEWS | ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಕರೋನ ಪಾಸಿಟಿವ್ ಕೇಸ್

150520 Seal Down In Thirthahalli Ranjadakatte 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಮೇ 2020 ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಒಂಭತ್ತಕ್ಕೆ ಏರಿಕೆ ಆಗಿದೆ. ತೀರ್ಥಹಳ್ಳಿ ತಾಲೂಕಿನ ವ್ಯಕ್ತಿಯೊಬ್ಬರಲ್ಲಿ ಕರೋನ ಪಾಸಿಟಿವ್ ಬಂದಿದೆ. ‘ನಿನ್ನೆ ಒಂದು ಪಾಸಿಟಿವ್ ಪ್ರಕರಣ ಬಂದಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆ ವ್ಯಕ್ತಿಯ ಪ್ರೈಮರಿ ಕಾಂಟ್ಯಾಕ್ಟ್‌ಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಸೆಕೆಂಡರಿ ಕಾಂಟ್ಯಾಕ್ಟ್ ಪತ್ತೆ ಹಚ್ಚಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.