ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದಲ್ಲಿ ಗಣಪತಿ ಮೆರವಣಿಗೆ ವೇಳೆ ಮಾತಿನ ಚಕಮಕಿ, ಕಾರಣವೇನು? ಮುಂದೇನಾಯ್ತು?
SHIVAMOGGA LIVE NEWS | 22 SEPTEMBER 2023 SHIMOGA : ಗಣಪತಿ ಮೆರವಣಿಗೆ (Ganapathi Procession) ವೇಳೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಶಿವಮೊಗ್ಗ ನಗರದ ಟ್ಯಾಂಕ್ ಮೊಹಲ್ಲಾದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯ (Ganapathi Procession) ವಿಸರ್ಜನೆಗೆ ಮೆರವಣಿಗೆ ನಡೆಸಲಾಗುತ್ತಿತ್ತು. ಮೆರವಣಿಗೆಯಲ್ಲಿ ಪೇಪರ್ ಬ್ಲಾಸ್ಟ್ ಬಳಸಲಾಗಿತ್ತು. ಇದರಿಂದ ಬಣ್ಣ ಬಣ್ಣದ ಪೇಪರ್ ಚೂರುಗಳು ಹಾರಲಿದ್ದು ಅಲಂಕಾರಿಕವಾಗಿ ಕಾಣುತ್ತದೆ. ಟ್ಯಾಂಕ್ ಮೊಹಲ್ಲಾದ ಮಸೀದಿ ಸಮೀಪ ಮೆರವಣಿಗೆ … Read more