SHIMOGA | ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರಿಡುವಂತೆ ಆಗ್ರಹ, ಸಿಎಂಗೆ ರಕ್ತದಲ್ಲಿ ಪತ್ರ

ಶಿವಮೊಗ್ಗ ಲೈವ್.ಕಾಂ | SHIMOGA | 23 ನವೆಂಬರ್ 2019 ಕಲಬುರಗಿ ವಿಮಾನ ನಿಲ್ದಾಣದಕ್ಕೆ ಸಂತ ಸೇವಾಲಾಲ್ ಅವರ ಹೆಸರಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಯುವಕರು ರಕ್ತದಲ್ಲಿ ಪತ್ರ ಬರೆದು, ಸಂತ ಸೇವಾಲಾಲ್ ಹೆಸರಿಡುವಂತೆ ಆಗ್ರಹಿಸಿದ್ದಾರೆ. ಶಿವಪ್ಪನಾಯಕ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು. ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಂಜಾರ ಜನಾಂಗದ 769 ಎಕರೆ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಅಲ್ಲದೆ ವಿಮಾನ ನಿಲ್ದಾಣಕ್ಕಾಗಿ … Read more

ಸ್ವಾಮೀಜಿಯನ್ನು ನಿಂದಿಸಿದ ಮಿನಿಸ್ಟರನ್ನು ಸಂಪುಟದ ಕೈಬಿಡುವಂತೆ ಒತ್ತಾಯ, ಶಿವಮೊಗ್ಗದಲ್ಲಿ ಕುರುಬ ಸಂಘದ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019 ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕುರುಬ ಸಂಘ ಒತ್ತಾಯಿಸಿದೆ. ಕುರುಬ ಸಮಾಜದ ಶ್ರೀ ಈಶ್ವರಾನಂದ ಸ್ವಾಮೀಜಿ ಅವರಿಗೆ ಸಚಿವ ಮಾಧುಸ್ವಾಮಿ ಅವರು ಅಗೌರವ ತೋರಿದ್ದಾರೆ. ಹಾಗಾಗಿ ಸಚಿವರು ಕೂಡಲೇ ಸ್ವಾಮೀಜಿ ಅವರ ಕ್ಷಮೆಯಾಚಿಸಬೇಕು ಮತ್ತು ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕುರುಬ ಸಂಘ ಒತ್ತಾಯಿಸಿದೆ. ಡಿಸಿ ಆಫಿಸ್ ಮುಂದೆ ಧಿಕ್ಕಾರದ ಘೋಷಣೆ ಸಚಿವ ಮಾಧುಸ್ವಾಮಿ ಅವರು ಸ್ವಾಮೀಜಿ ಅವರಿಗೆ … Read more

ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್, ಬೀದಿಗಿಳಿದ ಡಾಕ್ಟರ್ಸ್, ರಕ್ಷಣೆಗೆ ಒತ್ತಾಯಿಸಿ ಮಾನವ ಸರಪಳಿ

ಶಿವಮೊಗ್ಗ ಲೈವ್.ಕಾಂ | SHIMOGA | 8 ನವೆಂಬರ್ 2019 ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಶಿವಮೊಗ್ಗದಲ್ಲಿ ಇವತ್ತು ಭಾರಿ ಪ್ರತಿಭಟನೆ ನಡೆಸಲಾಯಿತು. ಗೋಪಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ವೈದ್ಯಕೀಯ ವಿದ್ಯಾರ್ಥಿಗಳು ಹೋರಾಟ ನಡೆಸಿದರು. ಐಎಂಎ ಸಭಾಂಗಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಶಿವಮೊಗ್ಗದ ವಿವಿಧ ಆಸ್ಪತ್ರೆಗಳ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಆಸ್ಪತ್ರೆಗಳ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ವೈದ್ಯರ ಪ್ರತಿಭಟನೆಗೆ ಕಾರಣವೇನು? ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯರ ಮೇಲೆ ಕನ್ನಡಪರ … Read more

‘ಪೋಷಕರೆ ಎಚ್ಚರ, ಜನವರಿ ಬಳಿಕ ಹುಷಾರ್, ಗಂಭೀರವಾಗುತ್ತೆ ನಮ್ಮ ಪ್ರೊಟೆಸ್ಟ್’

ಶಿವಮೊಗ್ಗ ಲೈವ್.ಕಾಂ | SHIMOGA | 4 ನವೆಂಬರ್ 2019 ಸರ್ಕಾರ ನಮ್ಮ ಹೋರಾಟವನ್ನು ಹಗುರವಾಗಿ ಪರಿಗಣಿಸಿದರೆ ಜನವರಿ ಬಳಿಕ ಗಂಭೀರ ಹೋರಾಟ ನಡೆಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 1247 ಉಪನ್ಯಾಸಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಯುಜಿಸಿ ತಿಳಿಸಿದೆ. ಸೇವಾವಧಿ, ಅರ್ಹತೆ ಆಧಾರದ ಮೇಲೆ 1247 ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನೆ ನೇಮಕ ಮಾಡಬೇಕು. ಅಲ್ಲದೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ವೇತನ ಹೆಚ್ಚಳ ಮಾಡಬೇಕು ಎಂದು … Read more

ಶಿವಮೊಗ್ಗದಲ್ಲಿ ಮಿನಿಸ್ಟರ್ ಪತ್ರಿಕಾಗೋಷ್ಠಿಗೆ ದಿಢೀರ್ ನುಗ್ಗಿ, ಘೋಷಣೆ ಕೂಗಿದ ಕನ್ನಡಪರ ಸಂಘಟನೆ ಕಾರ್ಯಕರ್ತರು

ಶಿವಮೊಗ್ಗ ಲೈವ್.ಕಾಂ | SHIMOGA | 1 ನವೆಂಬರ್ 2019 ರಾಜ್ಯೋತ್ಸವದ ಸಂದರ್ಭ ನಾಡಧ್ವಜ ಹಾರಿಸದೆ ಅಗೌರವ ತೋರಿಸಲಾಗಿದೆ ಎಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ಸಚಿವ ಈಶ್ವರಪ್ಪ ಅವರ ಸುದ್ದಿಗೋಷ್ಠಿಗೆ ನುಗ್ಗಿ, ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲಕಾಲ ಗೊಂದಲ ನಿರ್ಮಾಣವಾಯಿತು. ಡಿಎಆರ್ ಮೈದಾನದಲ್ಲಿ ಧ್ವಜಾರೋಹಣದ ಬಳಿಕ ಡಿಎಆರ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಮಾತು ಮುಗಿಸಿ ಇನ್ನೇನು ಉಪಾಹಾರ ಸೇವಿಸಬೇಕಿತ್ತು. ಈ ವೇಳೆ ದಿಢೀರ್ ನುಗ್ಗಿದ ಕನ್ನಡಪರ ಸಂಘಟನೆ ಕಾರ್ಯಕರ್ತರು, ಈಶ್ವರಪ್ಪ … Read more

ಬ್ಯಾಂಕ್ ಗ್ರಾಹಕರಿಗೆ ಭಾರಿ ದಂಡ, ಸರ್ವಿಸ್ ಚಾರ್ಜ್ ಹೆಚ್ಚಳ, ಬ್ಯಾಂಕುಗಳ ವಿಲೀನ, ಸಿಬ್ಬಂದಿಯಿಂದ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | SHIMOGA | 22 ಅಕ್ಟೋಬರ್ 2019 ಬ್ಯಾಂಕುಗಳ ವಿಲೀನ ಸೇರಿದಂತೆ ವಿವಿಧ ಬೇಡಿಕೆಗಳನ್ನು ವಿರೋಧಿಸಿ ಬ್ಯಾಂಕ್ ನೌಕರರು ಇವತ್ತು ಮುಷ್ಕರ ನಡೆಸಿದರು. ಜಿಲ್ಲಾ ಪಂಚಾಯಿತಿ ಬಳಿ ಇರುವ ಲೀಡ್ ಬ್ಯಾಂಕ್ ಮುಂದೆ ನೌಕರರು ಪ್ರತಿಭಟನೆ ನಡೆಸಿದರು. ಬ್ಯಾಂಕುಗಳ ವಿಲೀನ ಮಾಡಬಾರದು. ಸಾಲ ಹಿಂತಿರುಗಿಸದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದಂಡ, ಸರ್ವಿಸ್ ಚಾರ್ಜ್ ಹೆಚ್ಚಳ ಮಾಡಿ ಗ್ರಾಹಕರಿಗೆ ತೊಂದರೆ ಉಂಟು ಮಾಡಬಾರದು. ಬ್ಯಾಂಕ್ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು. ಎಲ್ಲ ಬ್ಯಾಂಕುಗಳಲ್ಲಿ ಅಗತ್ಯ ಸಿಬ್ಬಂದಿ … Read more

ಹುಳುಬಿದ್ದ ಅಕ್ಕಿ, ಕೊಳೆತ ತರಕಾರಿಯಿಂದ ಅಡುಗೆ, ನವುಲೆ ಹಾಸ್ಟೆಲ್ ವಿದ್ಯಾರ್ಥಿಗಳ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 1 ಅಕ್ಟೋಬರ್ 2019 ನವುಲೆಯಲ್ಲಿರುವ ಹಿಂದುಳಿದ ವರ್ಗಗಳ ವೃತ್ತಿಪರ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್’ನಲ್ಲಿನ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಇಂದು ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಅವ್ಯವಸ್ಥೆ ಪ್ರಶ್ನಿಸುವ ವಿದ್ಯಾರ್ಥಿಗಳ ವಿರುದ್ಧ ದರ್ಪ ತೋರಿಸುತ್ತಿರುವ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. NSUI ವಿದ್ಯಾರ್ಥಿಗ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಗುಣಮಟ್ಟದ ಆಹಾರ ನೀಡಬೇಕು ಎಂದು ಸರ್ಕಾರ ಹೆಚ್ಚು ಅನುದಾನ ಬಿಡುಗಡೆ ಮಾಡುತ್ತಿದೆ. … Read more

ಪದವೀಧರರಿಗೆ ಸಿಗುತ್ತಿಲ್ಲ ಉದ್ಯೋಗ, ಶಿವಮೊಗ್ಗ ಬಸ್ ಸ್ಟಾಂಡ್ ಮುಂದೆ ಕೋಟ್ ತೊಟ್ಟು ಶೂ ಪಾಲಿಶ್, ಹಣ್ಣು, ಟೀ ಮಾರಾಟ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019 ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ NSUI ಕಾರ್ಯಕರ್ತರು ಶಿವಮೊಗ್ಗ ಬಸ್ ಸ್ಟ್ಯಾಂಡ್ ವೃತ್ತದಲ್ಲಿ ಶೂ, ಚಪ್ಪಲಿ ಪಾಲಿಷ ಮಾಡಿ, ಹಣ್ಣು, ಟೀ ಮಾರಾಟ ಮಾಡಿ ವಿಭಿನ್ನ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಆಶೋಕ ವೃತ್ತದಲ್ಲಿ NSUI ಕಾರ್ಯಕರ್ತರು, ಮೋದಿ ನೇತೃತ್ವದ  ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಚ್ಚೇ ದಿನ್ ಕಬ್ ಆಯೇಗಾ ಎಂದು ಘೋಷಣೆ ಕೂಗುತ್ತ ಶೂ … Read more

ತಾಲೂಕು ಕಚೇರಿ ಮುಂದೆ ಕೊಳೆರೋಗಕ್ಕೆ ತುತ್ತಾದ ಅಡಕೆ ಸುರಿದು ಬೆಳೆಗಾರರ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | ಸೊರಬ | 17 ಸೆಪ್ಟೆಂಬರ್ 2019 ಅಡಕೆ ಕೊಳೆರೋಗದಿಂದ ಸಂಕಷ್ಟಕ್ಕೀಡಾದ ಬೆಳೆಗಾರರಿಗೆ ತುರ್ತಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸೊರಬದಲ್ಲಿ ಇವತ್ತು ಪ್ರತಿಭಟನೆ ನಡೆಸಲಾಯಿತು. ತಾಲೂಕು ಕಚೇರಿ ಮುಂದೆ ಕೊಳೆರೋಗಕ್ಕೆ ತುತ್ತಾದ ಅಡಕೆ ಸುರಿದು ಆಕ್ರೋಶ ವ್ಯಕ್ತಪಡಿಸಲಾಯಿತು. ಸಾರ್ವಜನಿಕರ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಚಿದಾನಂದಗೌಡ, ಭಾರಿ ಬಿಸಿಲಿಗೆ ಅಡಕೆ ಉದುರಿದ್ದರು. ಆ ಬಳಿಕ ಸುರಿ ಜೋರು ಮಳೆಗೆ ಕೊಳೆ ರೋಗ ಬಂದಿದೆ. … Read more

ಶಿಕಾರಿಪುರ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ, ಸ್ಟೇಷನ್ ಎದುರಿಗೆ ಧರಣಿ

ಶಿವಮೊಗ್ಗ ಲೈವ್.ಕಾಂ | 11 ಮೇ 2019 ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿರುವುದನ್ನು ಖಂಡಿಸಿ, ಶಿಕಾರಿಪುರ ಪೊಲೀಸ್ ಠಾಣೆ ಮುಂಭಾಗ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಬಿಜೆಪಿ ಮುಖಂಡ ಗುರುಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು, ಹಲ್ಲೆಕೋರರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ರಾಜು ಎಂಬುವವರ ಮೇಲೆ, ಇವತ್ತು ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಅರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು … Read more