ಶಿವಮೊಗ್ಗದ ಪಿಇಎಸ್‌ ಸಂಸ್ಥೆಗೆ ನೂತನ ಕುಲಸಚಿವರ ನೇಮಕ

New-Registrar-for-PES-Institutions.

ಶಿವಮೊಗ್ಗ: ಪಿಇಎಸ್‌ ಸಂಸ್ಥೆಯಲ್ಲಿ ಈವರೆಗೆ ಆಡಳಿತ ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಡಾ. ನಾಗರಾಜ. ಆರ್ ಅವರನ್ನು ಪಿಇಎಸ್ ಸಂಸ್ಥೆಯ ಕುಲಸಚಿವರಾಗಿ (ರಿಜಿಸ್ಟ್ರಾರ್) ಪದೋನ್ನತಿ ನೀಡಲಾಗಿದೆ. 2008 ರಲ್ಲಿ ಪಿಇಎಸ್ ಸಂಸ್ಥೆಯ ಎಂಬಿಎ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ನೇಮಕ ಗೊಂಡು 2011ರಲ್ಲಿ ಅದನ್ನು ಸಂಶೋಧನಾ ಕೇಂದ್ರವಾಗಿ ಮಾರ್ಪಡಿಸಿದರು. ಅವರ ಬೋಧನಾ ಕ್ಷೇತ್ರದಲ್ಲಿ ಮಾರ್ಕೆಟಿಂಗ್, ಮ್ಯಾ ನೇಜ್‌ಮೆಂಟ್ ಮತ್ತು ಸಂಯೋಜಿತ ಕೋರ್ಸ್‌ಗಳು ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ » ‘ಶಿವಮೊಗ್ಗಕ್ಕೆ ಇನ್ನೂ ₹100 ಕೋಟಿ ಬರಬೇಕಿತ್ತು’, ಸಂಸದ … Read more

ಕುವೆಂಪು ವಿವಿ ಅಕಾಡೆಮಿಕ್‌ ಕ್ಯಾಲೆಂಡರ್‌ ಅವಧಿ ಮುಂದೂಡಲು ವಿದ್ಯಾರ್ಥಿ ಸಂಘಟನೆ ಆಗ್ರಹ, ಕಾರಣವೇನು?

nsui-memorandum-to-kuvempu-univesity-registrar-snehal-sudhakar-lokande.

SHIVAMOGGA LIVE NEWS | 25 JANUARY 2024 SHIMOGA : ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಪದವಿ ಕಾಲೇಜುಗಳಲ್ಲಿ ತರಗತಿಗಳು ನಡೆದಿಲ್ಲ. ಅದ್ದರಿಂದ ಶೈಕ್ಷಣಿಕ ಅವಧಿಯನ್ನು ಮುಂದೂಡುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಸಂಘಟನೆ ವತಿಯಿಂದ ಶಿವಮೊಗ್ಗದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ ಸ್ನೇಹಲ್‌ ಸುಧಾಕರ್‌ ಲೋಖಂಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಕುವೆಂಪು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಕಾಲೇಜುಗಳಲ್ಲಿ ತರಗತಿಗಳು ಸರಿಯಾಗಿ ನಡೆದಿಲ್ಲ. ಪಾಠಗಳನ್ನು ಮುಗಿಸಲು ಇನ್ನಷ್ಟು ಕಾಲವಕಾಶ ಬೇಕಿದೆ. ಆದ್ದರಿಂದ ಅಕಾಡೆಮಿಕ್ ಕ್ಯಾಲೆಂಡರ್‌ ಅವಧಿಯನ್ನ ಫೆಬ್ರವರಿ … Read more

ಕುವೆಂಪು ವಿವಿ ಕುಲಸಚಿವರ ದಿಢೀರ್‌ ಬದಲಾವಣೆ, ಹೊಸ ರಿಜಿಸ್ಟ್ರಾರ್‌ ಅಧಿಕಾರ ಸ್ವೀಕಾರ

Lokhande-Snehal-Sudhakar-takes-charge-as-Registrar-of-Kuvempu-University.

SHIVAMOGGA LIVE NEWS | 8 AUGUST 2023 SHANKARAGHATTA : ಐಎಎಸ್‌ ಅಧಿಕಾರಿಯೊಬ್ಬರಿಗೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ (Registrar) ಹೆಚ್ಚುವರಿ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆ ಕುತೂಹಲ ಮೂಡಿಸಿದೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಲೋಖಂಡೆ ಸ್ನೇಹಲ್‌ ಸುಧಾಕರ್‌ ಅವರಿಗೆ ಕುವೆಂಪು ವಿವಿಯ ಕುಲಸಚಿವ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇವತ್ತು ಮಧ್ಯಾಹ್ನ ಲೋಖಂಡೆ ಸ್ನೇಹಲ್‌ ಸುಧಾಕರ್‌ ಅವರು ಕುವೆಂಪು ವಿವಿಯಲ್ಲಿ ಅಧಿಕಾರ ವಹಿಸಿಕೊಂಡರು. ಈಚೆಗಷ್ಟೆ ಪ್ರೊ. ಕಣ್ಣನ್‌ ನೇಮಕವಾಗಿತ್ತು … Read more

ಕುವೆಂಪು ವಿಶ್ವವಿದ್ಯಾಲಯಕ್ಕೆ ನೂತನ ಕುಲಸಚಿವ, ಇವತ್ತು ಅಧಿಕಾರ ಸ್ವೀಕಾರ

Professor-P-Kannan-takes-charge-as-ne-Registrar-of-Kuvempu-University

SHIVAMOGGA LIVE | 28 JULY 2023 SHIMOGA : ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ (Registrar) ಪ್ರೊ. ಪಿ.ಕಣ್ಣನ್‌ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಅವರು ಕುವೆಂಪು ವಿವಿಯಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಪ್ರೊ. ಪಿ.ಕಣ್ಣನ್‌ ಅವರು ವಿಜಯಪುರ ಜಿಲ್ಲೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲೀಷ್‌ ಪ್ರಾಧ್ಯಾಪಕರಾಗಿ, ಆ ವಿಭಾಗದ ಮುಖ್ಯಸ್ಥರಾಗಿದ್ದರು. ಕುಲಸಚಿವರಾಗಿ (Registrar) ಅಧಿಕಾರ ವಹಿಸಕೊಂಡ ಪ್ರೊ. ಕಣ್ಣನ್‌ ಅವರಿಗೆ ಕುವೆಂಪು ವಿವಿ ಉಪನ್ಯಾಸಕರು, ಅಧಿಕಾರಿಗಳು, ಸಿಬ್ಬಂದಿ ಶುಭಾಶಯ ತಿಳಿಸಿದರು. ಇದನ್ನೂ ಓದಿ – ಸದ್ಯದಲ್ಲೇ ಶಿವಮೊಗ್ಗದಿಂದ … Read more

ಕುವೆಂಪು ವಿವಿಗೆ ನೂತನ ಪ್ರಭಾರ ಕುಲಸಚಿವೆ, ಹಣಕಾಸು ಅಧಿಕಾರಿ

Prof-Geetha-new-incharge-Registrar-of-Kuvempu-University

SHIVAMOGGA LIVE NEWS | 8 FEBRURARY 2023 SHANKARAGHATTA : ಕುವೆಂಪು ವಿಶ್ವವಿದ್ಯಾಲಯದ (Kuvempu University) ಪ್ರಭಾರ ಕುಲಸಚಿವರಾಗಿ (ಆಡಳಿತ) ಸ್ನಾತಕೋತ್ತರ ವಿಭಾಗದ ಡೀನ್ ಪ್ರೊ. ಸಿ.ಗೀತಾ ಮತ್ತು ಪ್ರಭಾರ ಹಣಕಾಸು ಅಧಿಕಾರಿಯಾಗಿ ಸ್ನಾತಕೋತ್ತರ ಜೈವಿಕ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವೈ.ಎಲ್.ರಾಮಚಂದ್ರ ಅವರನ್ನು ನೇಮಕ ಮಾಡಲಾಗಿದೆ. ಕುಲಸಚಿವೆಯಾಗಿದ್ದ ಜಿ.ಅನುರಾಧ ಅವರನ್ನು ಜ.9ರಂದು ವಿಜಯನಗರ ಅಪರ ಜಿಲ್ಲಾಧಿಕಾರಿಯಾಗಿ ಸರ್ಕಾರ ವರ್ಗಾಯಿಸಿತ್ತು. ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ.ನವೀನ್ ಕುಮಾರ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಹಣಕಾಸು ಅಧಿಕಾರಿಯಾಗಿದ್ದ … Read more