ಶಿವಮೊಗ್ಗದಲ್ಲಿ ಕಾಂತಾರಾ ಶೂಟಿಂಗ್ ವೇಳೆ ಅವಘಡ, ನಾಳೆ ನೊಟೀಸ್ ಜಾರಿ, ಈತನಕ ಏನೇನಾಯ್ತು?
ಶಿವಮೊಗ್ಗ: ಹೊಸನಗರ ಭಾಗದಲ್ಲಿ ಕಾಂತಾರಾ 1 ಸಿನಿಮಾ (Movie) ಚಿತ್ರೀಕರಣದ ವೇಳೆ ಅವಘಡ ಸಂಭವಿಸಿ ಚಿತ್ರತಂಡದವರು ಗಾಯಗೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಮಧ್ಯೆ ಜಿಲ್ಲಾಡಳಿತ ಚಿತ್ರತಂಡಕ್ಕೆ ನೊಟೀಸ್ ನೀಡುವುದಾಗಿ ತಿಳಿಸಿತ್ತು. ಇದರ ಬೆನ್ನಿಗೆ ಚಿತ್ರತಂಡ ಘಟನೆ ಕುರಿತು ಸ್ಪಷ್ಟನೆ ನೀಡಿದೆ. ಹೊಸನಗರ ತಾಲೂಕು ನಗರ ಹೋಬಳಿಯ ಮಾನಿ ಜಲಾಶಯ ಭಾಗದಲ್ಲಿ ವರಾಹಿ ದಂಡೆ ಮೇಲೆ ಕಾಂತಾರಾ 1 ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ನಟ ರಿಷಬ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ದೋಣಿ ಮಗುಚಿಕೊಂಡ … Read more