ಭದ್ರಾವತಿ ಕೂಡ್ಲಿಗೆರೆ ಬಳಿ ಬೈಕುಗಳು ಡಿಕ್ಕಿ, ಸವಾರನಿಗೆ ಗಾಯ

Bhadravathi-Rural-Police-Station

ಭದ್ರಾವತಿ: ತರಕಾರಿ ಖರೀದಿಸಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಮತ್ತೊಂದು ಬೈಕ್‌ ಡಿಕ್ಕಿ (Mishap) ಹೊಡೆದಿದೆ. ಭದ್ರಾವತಿ ತಾಲೂಕು ಕೂಡ್ಲಿಗೆರೆಯ ಬಸ್‌ ನಿಲ್ದಾಣದ ಬಳಿ ಅಪಘಾತವಾಗಿದೆ. ಕೂಡ್ಲಿಗೆರೆಯ ಮುರುಳಿ ಎಂಬುವವರಿಗೆ ಗಾಯವಾಗಿದೆ. ಅಂಗಡಿಯಲ್ಲಿ ತರಕಾರಿ ಖರೀದಿಸಿ ಬೈಕಿನಲ್ಲಿ ತೆರಳುತ್ತಿದ್ದರು. ತಮ್ಮ ಮನೆಗೆ ಹೋಗುವ ರಸ್ತೆಗೆ ಬೈಕ್‌ ತಿರುಗಿಸುತ್ತಿರುವಾಗ ವೇಗವಾಗಿ ಬಂದ ಸ್ಪ್ಲೆಂಡರ್‌ ಬೈಕ್‌ ಡಿಕ್ಕಿ ಹೊಡೆದಿದೆ. ಮುರುಳಿ ಅವರ ಕಾಲು, ಕಣ್ಣಿನ ಭಾಗ ಸೇರಿ ವಿವಿಧೆಡೆ ಗಾಯವಾಗಿದೆ. ಬೈಕಿಗು ಹಾನಿಯಾಗಿ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ … Read more

ಆಯನೂರಿನಲ್ಲಿ ಇಂದು ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಜನಸ್ಪಂದನಾ ಕಾರ್ಯಕ್ರಮ

Ayanur Graphics

ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರದ ಶಾಸಕಿ (MLA) ಶಾರದಾ ಪೂರ್ಯಾನಾಯ್ಕ ಅವರು ತಾಲ್ಲೂಕಿನ ಕುಂಸಿ, ಆಯನೂರು ಮತ್ತು ಹಾರನಹಳ್ಳಿ ಹೋಬಳಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಜುಲೈ 7ರಂದು ಆಯನೂರಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ಜನಸ್ಪಂದನ ಸಭೆ ನಡೆಸಲಿದ್ದಾರೆ. ಈ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಹಶೀಲ್ದಾರ್ ವಿ.ಎಸ್.ರಾಜೀವ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಭದ್ರಾ ಜಲಾಶಯದ ಒಳ ಹರಿವು ತುಸು ಏರಿಕೆ, ಇವತ್ತು ನೀರಿನ ಮಟ್ಟ ಎಷ್ಟಿದೆ?

ಶಾಸಕಿ ಶಾರದಾ ಪೂರ್ಯಾನಾಯ್ಕ್‌ಗೆ ವಿಧಾನಸಭೆಯಲ್ಲಿ ಮಹತ್ವದ ಜವಾಬ್ದಾರಿ ವಹಿಸಿದ ಜೆಡಿಎಸ್‌

Sharadha-Puryanaik-Shivamogga-Rural-MLA

SHIVAMOGGA LIVE | 3 JULY 2023 SHIMOGA : ಜೆಡಿಎಸ್‌ನ ಶಾಸಕಾಂಗ ಪಕ್ಷದ (Legislative Party) ನಾಯಕರಾಗಿ ಹೆಚ್‌.ಡಿ.ಕುಮಾರಸ್ವಾಮಿ, ಉಪ ನಾಯಕಿಯಾಗಿ ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಆಯ್ಕೆಯಾಗಿದ್ದಾರೆ. ಈ ಸಂಬಂಧ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ವಿಧಾನಸಭೆ ಅಧ್ಯಕ್ಷರಿಗೆ ಪತ್ರ ರವಾನಿಸಿದ್ದಾರೆ. ಒಲಿದ ಮಹತ್ವದ ಜವಾಬ್ದಾರಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಅವರಿಗೆ ಜೆಡಿಎಸ್‌ ಪಕ್ಷ ಮಹತ್ವದ ಜವಾಬ್ದಾರಿ ವಹಿಸಿದೆ. ವಿಧಾನಸಭೆಯಲ್ಲಿ ಶಾಸಕಾಂಗ ಪಕ್ಷದ (Legislative Party) ನಾಯಕ, ಉಪ ನಾಯಕ ಹುದ್ದೆ ಅತ್ಯಂತ … Read more

ಶಿವಮೊಗ್ಗದ ಕಾಲೇಜಿನಲ್ಲಿ ಅಡ್ಮಿಷನ್‌ಗೆ ತಂದೆ ಜೊತೆ ತೆರಳುತ್ತಿದ್ದ ಯುವತಿ ತಲೆ ಮೇಲೆ ಹರಿದ ಲಾರಿ

Bike-Tipper-Lorry-mishap-at-pillangere-in-Shimoga-taluk

SHIVAMOGGA LIVE | 30 MAY 2023 SHIMOGA : ಕಾಲೇಜು (College) ಸೇರುವ ಕನಸಿನೊಂದಿಗೆ ತೆರಳುತ್ತಿದ್ದ ಯುವತಿ ಪಾಲಿಗೆ ಅದೇ ಕೊನೆಯ ಸವಾರಿಯಾಯಿತು. ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಉನ್ನತ ಸ್ಥಾನದಲ್ಲಿ ನೋಡಬೇಕು ಎಂಬ ಹಂಬಲ ಹೊತ್ತಿದ್ದ ತಂದೆಯ ಕನಸಿಗೆ ಟಿಪ್ಪರ್‌ ಲಾರಿ ಮಣ್ಣೆರಚಿತು. ಪಿಳ್ಳಂಗೆರೆ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದು, ತಂದೆ ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ವೇಗವಾಗಿ … Read more

ರಸ್ತೆ ಬದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಬಂದು ಗುದ್ದಿದ ಬೈಕ್

crime name image

SHIVAMOGGA LIVE NEWS | 15 MAY 2023 SHIMOGA : ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಬೈಕ್‌ (Bike) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಾಯಾಳುವನ್ನು ಸುಬ್ಬಯ್ಯ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಲಾಗಿದೆ. ಇದನ್ನೂ ಓದಿ – ಶಿವಮೊಗ್ಗದ ಸ್ನೇಕ್‌ ಕಿರಣ್‌ ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ ಹೊಳೆಹನಸವಾಡಿ ನಿವಾಸಿ ಆರ್.ಸಿ.ಮಂಜುನಾಥ್‌ (34) ಗಾಯಾಳು. ರಾತ್ರಿ 10.30ರ ಹೊತ್ತಿಗೆ  ಹೊಳೆಬೆನವಳ್ಳಿ ಕ್ಯಾಂಪಿನಲ್ಲಿರುವ ಅಂಗಡಿಯೊಂದಕ್ಕೆ ಹೋಗಿದ್ದರು. ಮರಳಿ ಮನೆಗೆ ರಸ್ತೆ ಬದಿಯಲ್ಲಿ ನಡೆದು ಬರುವಾಗ … Read more

ಶಿವಮೊಗ್ಗ ಜೈಲಿನಿಂದ ಪೊಲೀಸ್‌ ಭದ್ರತೆಯಲ್ಲಿ ಭದ್ರಾವತಿ ಠಾಣೆಗೆ ತೆರಳಿ ದೂರು ನೀಡಿದ ಕೈದಿ, ಕಾರಣವೇನು?

Shimoga-Central-Jail-Prison

SHIVAMOGGA LIVE NEWS | 26 APRIL 2023 BHADRAVATHI : ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬ (Prisoner) ಪೊಲೀಸ್‌ ಭದ್ರತೆಯಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಶಿವಮೊಗ್ಗದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರ ಆದೇಶದ ಮೇರೆಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿತ್ತು. ಏನಿದು ಪ್ರಕರಣ? ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯುವಕನನ್ನು ಬಂಧಿಸಲಾಗಿದೆ (Prisoner). ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದಾನೆ. ನ್ಯಾಯಾಧೀಶರ ಆದೇಶದ ಮೇರೆಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿತ್ತು. ಡಿಎಆರ್‌ … Read more

ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಶಾಸಕರ ಪುತ್ರರಿಗೆ ಒಲಿದ ಅದೃಷ್ಟ, ಯಾರದು? ಮಾಜಿ ಎಂಎಲ್‌ಎಗಳ್ಯಾರು?

HC-Yogesh-and-Srinivas-Kariyanna-to-congress-candidates

SHIVAMOGGA LIVE NEWS | 12 APRIL 2023 ELECTION NEWS : ಕಾಂಗ್ರೆಸ್‌ ಮೂರನೆ ಪಟ್ಟಿಯಲ್ಲಿ ಇಬ್ಬರು ಮಾಜಿ ಶಾಸಕರ (Former MLA) ಮಕ್ಕಳಿಬ್ಬರಿಗೆ ಅದೃಷ್ಟ ಒಲಿದಿದೆ. ತೀವ್ರ ಕುತೂಹಲ ಕೆರಳಿಸಿರುವ ಎರಡು ಕ್ಷೇತ್ರಗಳಲ್ಲಿ ಇವರನ್ನು ಕಣಕ್ಕಿಳಿಸಲಾಗಿದೆ. ಇನ್ನು, ಶಿಕಾರಿಪುರದಲ್ಲಿ ಗೋಣಿ ಮಾಲ್ತೇಶ್‌ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಮಾಜಿ ಶಾಸಕರ ಪುತ್ರರು ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಕುರಿತು ತೀವ್ರ ಕುತೂಹಲ ಮೂಡಿತ್ತು. ಹಲವು ಲೆಕ್ಕಾಚಾರ, ಊಹಾಪೋಹ, ಲಾಬಿಗಳು ಕೂಡ ನಡೆದಿದ್ದವು. … Read more

ಲಾರಿಯಲ್ಲಿ ಸಾಗಿಸಲಾಗುತ್ತಿತ್ತು 46 ಬೈಕ್, ಯಾವುದಕ್ಕೂ ಇರಲಿಲ್ಲ ಡಾಕ್ಯೂಮೆಂಟ್

46-bikes-seized-for-not-having-valid-documents

SHIVAMOGGA LIVE NEWS | 14 APRIL 2023 SAGARA : ಸೂಕ್ತ ದಾಖಲೆ ಇಲ್ಲದೆ ಕಂಟೇನರ್ ಲಾರಿಯಲ್ಲಿ ಸಾಗಿಸುತ್ತಿದ್ದ 46 ಹೊಸ ಬೈಕುಗಳನ್ನು (Bikes) ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್‍ ಪೋಸ್ಟ್‍ನಲ್ಲಿ ತಪಾಸಣೆ ವೇಳೆ ಬೈಕುಗಳ ಸಾಗಣೆ ಬೆಳಕಿಗೆ ಬಂದಿದೆ. 33,78,336 ರೂ. ಮೌಲ್ಯದ ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಗಲ್ ಪಿಎಸ್‍ಐ ತಿರುಮಲೇಶ್ ನೇತೃತ್ವದಲ್ಲಿ ಪರಿಶೀಲನೆ ವೇಳೆ ಬೈಕುಗಳು ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ … Read more

ಶಿವಮೊಗ್ಗದ ಇಂಡಸ್ಟ್ರಿಯಲ್ ಏರಿಯಾದ ಸಂಸ್ಥೆಯೊಂದರ ವಿರುದ್ಧ ಜಿಂದಾಲ್ ಕಂಪನಿ ದೂರು, ಕಾರಣವೇನು?

Crime-News-General-Image

SHIVAMOGGA LIVE NEWS | 1 APRIL 2023 SHIMOGA : ಪ್ರತಿಷ್ಠಿತ ಕಂಪನಿಯೊಂದರ ರೂಫಿಂಗ್ ಶೀಟ್ ಗಳನ್ನು (sheet) ನಕಲು ಮಾಡಿ ಉತ್ಪಾದನೆ ಮಾಡುತ್ತಿದ್ದ ಶಿವಮೊಗ್ಗದ ಕಂಪನಿಯೊಂದರ ವಿರುದ್ಧ ಪ್ರಕರಣ ದಾಖಲಾಗಿದೆ. ದೇವಕಾತಿಕೊಪ್ಪದಲ್ಲಿರುವ ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಂದಾಲ್ ಸ್ಟೀಲ್ ವರ್ಕ್ಸ್ ಕಂಪನಿಯ ರೂಫಿಂಗ್ ಶೀಟ್ ಗಳನ್ನು (sheet) ಹೊಲುವ ರೂಫಿಂಗ್ ಶೀಟ್ ಗಳನ್ನು ದೇವಕಾತಿಕೊಪ್ಪದ ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಯೊಂದರಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು. ಅದರ ಮೇಲೆ ಜಿಂದಾಲ್ ಸ್ಟೀಲ್ ವರ್ಕ್ಸ್ ಸಂಸ್ಥೆಯ … Read more

ತೋಟದ ಮನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಪುತ್ರ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ

crime name image

SHIVAMOGGA LIVE NEWS | 16 FEBRURARY 2023 ANANDAPURA : ಜಿಲ್ಲಾ ಪಂಚಾಯಿತಿ (zilla panchayat) ಮಾಜಿ ಸದಸ್ಯ ಗೋಪಾಲ್ ಅವರ ಪುತ್ರ ಶರತ್ ತೋಟದ ಮನೆಯಲ್ಲಿ (farm house) ನೇಣು ಬಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಆನಂದಪುರದ ತಾವರೆಹಳ್ಳಿಯ ತೋಟದ ಮನೆಯಲ್ಲಿ ಘಟನೆ ಸಂಭವಿಸಿದೆ. ಶರತ್ (28) ತೋಟದ ಮನೆಯಲ್ಲಿ (farm house) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ … Read more