ಆನಂದಪುರ: ಗೊಬ್ಬರ ಹಾಕುವಾಗ ಕಚ್ಚಿದ ಹಾವು, ಮಹಿಳೆ ಸಾವು
ಸಾಗರ: ಆನಂದಪುರ ಹೋಬಳಿಯ ಬಳ್ಳಿಬೈಲು ಗ್ರಾಮದಲ್ಲಿ ಹಾವು ಕಚ್ಚಿ (Snake Bite) ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪುಟ್ಟಪ್ಪ ಅವರ ಪತ್ನಿ ಲಕ್ಷ್ಮಮ್ಮ (65) ಮೃತರು. ತಮ್ಮ ಜಮೀನಿಗೆ ಗೊಬ್ಬರ ಹಾಕುತ್ತಿರುವಾಗ ಹಾವು ಕಚ್ಚಿದೆ. ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲಕ್ಷ್ಮಮ್ಮ ಕೊನೆಯುಸಿರೆಳೆದಿದ್ದಾರೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ವಿಚಾರ, ಸಂಸದರಿಗೆ ಮನವಿ, ಏನಿದೆ ಮನವಿ ಕಾಪಿಯಲ್ಲಿ?