ರಾತ್ರಿ ಗಲಾಟೆ ವೇಳೆ ಪಿಸ್ತೂಲು ಪ್ರದರ್ಶನ, ಜನರಲ್ಲಿ ಆತಂಕ, ಪೊಲೀಸರ ಮುಂದೆ ಪಿಸ್ತೂಲ್‌ನ ಅಸಲಿ ಕಥೆ ಬಹಿರಂಗ
SHIVAMOGGA LIVE NEWS | 12 FEBRUARY 2024 SAGARA : ಜಗಳದ ವೇಳೆ ಆಟಿಕೆ ಪಿಸ್ತೂಲು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಆಂತಕ ಮೂಡಿಸಿದ್ದ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದರು. ಸಾಗರದ ಜೆ.ಪಿ.ನಗರದಲ್ಲಿ ಕಳೆದ ರಾತ್ರಿ ಗಲಾಟೆ ವೇಳೆ ಪಿಸ್ತೂಲು ಪ್ರದರ್ಶಿಸಲಾಗಿತ್ತು. ಆಯನೂರಿನ ದರ್ಶನ್ (19) ಮತ್ತು ಸಾಗರದ ನವೀನ್ (25) ಎಂಬಾತನ ವಿಚಾರಣೆ ನಡೆಸಲಾಯಿತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಫೆ.11ರ ರಾತ್ರಿ ಯುವಕರ ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ದರ್ಶನ್, ಪಿಸ್ತೂಲು ತೋರಿಸಿದ್ದ. … Read more