ಆನಂದಪುರ ಬಳಿ ಕೆರೆಗೆ ಹಾರಿ ವೃದ್ಧ ಆತ್ಮಹತ್ಯೆ

281123-Anandapura-Police-Station-Board.webp

ಆನಂದಪುರಂ: ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಗಳವಾಡಿ ಗ್ರಾಮದ ನಾರಾಯಣಪ್ಪ (73) ಗಿಳಾಲ ಗುಂಡಿ ಗ್ರಾಮದ ಅಮ್ಮನ ಕೆರೆಗೆ (Lake) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 2 ವರ್ಷದ ಹಿಂದೆ ಪತ್ನಿ ನಿಧನರಾದ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರಿಗೆ ಪುತ್ರ, ಪುತ್ರಿ ಇದ್ದಾರೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಅಂಗನವಾಡಿಯಲ್ಲಿ ಎರಡು ಟ್ರೇ ಮೊಟ್ಟೆ ಬೆಯಿಸಿಕೊಂಡು ಪಾನಗೋಷ್ಠಿ ಮಾಡಿದ ಕುಡುಕರು

‘ವರಿಷ್ಠರ ಭೇಟಿಗೆ ದೆಹಲಿಗೆ ತೆರಳುವೆ’, ಸಚಿವ ಸ್ಥಾನದ ಬಗ್ಗೆ ಸಾಗರ ಎಂಎಲ್‌ಎ ಏನಂದ್ರು?

Sagara-Beluru-Gopalakrishna-press-meet

ಸಾಗರ: ನಾನು ಹಿರಿಯ ಶಾಸಕ. ನನಗೆ ಸಚಿವ (Minister) ಸ್ಥಾನ ಸಿಗುವ ವಿಶ್ವಾಸ ಇದೆ. ಅಗತ್ಯ ಬಿದ್ದರೆ ವರಿಷ್ಠರ ಭೇಟಿಗೆ ಹೊಸದಿಲ್ಲಿಗೂ ತೆರಳುವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ದೃಢವಾಗಿ ಹೇಳಿದರು. ಸಾಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಹಿಂದುಳಿದ ವರ್ಗಕ್ಕೆ ಸೇರಿದ ನನಗೆ ಸಚಿವ ಸ್ಥಾನ ಕೊಡಿ ಎಂದು ಹಿಂದೆ ಹೊಸದಿಲ್ಲಿಗೆ ಹೋಗಿದ್ದಾಗ ವರಿಷ್ಠರಿಗೆ ಮನವಿ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಳಿಯೂ ಕೇಳಿದ್ದೇನೆ. ನನ್ನ ಹಕ್ಕನ್ನು ಕೇಳಲು ಮುಜುಗರವಿಲ್ಲ ಎಂದರು. ಮುಖ್ಯಮಂತ್ರಿ ಬದಲಾವಣೆ, … Read more

ಸಾಗರದಲ್ಲಿ ಬಸ್‌ ಹತ್ತಿದ ದಾವಣಗೆರೆ ಮಹಿಳೆ, ಐಬಿ ಸರ್ಕಲ್‌ ಬಳಿ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

ಸಾಗರ: KSRTC ಬಸ್‌ನಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣವಿದ್ದ ಪರ್ಸ್‌ ಕಳ್ಳತನ ಮಾಡಲಾಗಿದೆ. ಸಾಗರ ಬಸ್‌ ನಿಲ್ದಾಣದಲ್ಲಿ ಕಳ್ಳತನ ನಡೆದಿರುವ ಕುರಿತು ಶಂಕೆ ಇದೆ. ನಯನಾ ಎಂಬುವವರು ಸಾಗರ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ದಾವಣಗೆರೆಗೆ ಬಸ್‌ ಹತ್ತಿದ್ದರು. ಐಬಿ ಸರ್ಕಲ್‌ ಬಳಿ ಬಸ್‌ ತೆರಳುತ್ತಿರುವಾಗ ಟಿಕೆಟ್‌ ಮಾಡಿಸಲು ಬ್ಯಾಗ್‌ನಲ್ಲಿದ್ದ ಪರ್ಸ್‌ ತೆಗೆಯಲು ಮುಂದಾದರು. ಆಗ ಪರ್ಸ್‌ ಇಲ್ಲದಿರುವುದು ಗೊತ್ತಾಗಿದೆ. ಪರ್ಸ್‌ನಲ್ಲಿ ₹1.73 ಲಕ್ಷದ ಚಿನ್ನಾಭರಣ ಇತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಸ್‌ ಹತ್ತುವುದಕ್ಕು ಮುನ್ನ ನಯನಾ ಅವರಿಗೆ ಕರೆ ಬಂದಿತ್ತು. … Read more

‘ನಾನೂ ಸಚಿವ ಸ್ಥಾನದ ಅಕಾಂಕ್ಷಿ’, ಮಿನಿಸ್ಟರ್‌ ಪದವಿ ಬಗ್ಗೆ ಬೇಳೂರು ಏನೆಲ್ಲ ಹೇಳಿದರು?

Beluru-Gopalakrishna-Speaks-to-media-in-sagara

ಸಾಗರ: ನಾನು ಸಚಿವ (Minister) ಸ್ಥಾನದ ಪ್ರಬಲ ಆಕಾಂಕ್ಷಿ. ಸಂಪುಟ ವಿಸ್ತರಣೆ ಸಂದರ್ಭ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಡಿ ಎಂದು ಎಐಸಿಸಿ ಅಧ್ಯಕ್ಷ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈಡಿಗ ಸಮುದಾಯದ ಪ್ರಮುಖರು ನನಗೆ ಸಚಿವ ಸ್ಥಾನ ಕೊಡಿ ಎಂದು … Read more

ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ರಸ್ತೆ ಪಕ್ಕದಲ್ಲಿ ಪತ್ತೆ

Sagara-News-Update.

ಸಾಗರ: ಕಳೆದ ಕೆಲವು ದಿನದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು (Person) ಶವವಾಗಿ ಪತ್ತೆಯಾಗಿದ್ದಾರೆ. ಸಾಗರ ತಾಲೂಕು ಯಲಗಳಲೆ ಗ್ರಾಮದ ಸಮೀಪ, ರಸ್ತೆಯ ಪಕ್ಕದಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಜಂಬಗಾರು ಗ್ರಾಮದ ಹನುಮಂತಪ್ಪ (65) ಎಂದು ಗುರುತಿಸಲಾಗಿದೆ. ಖಿನ್ನತೆಯಿಂದ ಬಳಲುತ್ತಿದ್ದ ಹನುಮಂತಪ್ಪ ಅವರು ಕಾಣೆಯಾಗಿದ್ದಾರೆ ಎಂದು 15 ದಿನಗಳ ಹಿಂದೆ ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ನೀರಿನ ತೊಟ್ಟಿಯಲ್ಲಿ ಕಾಡು ಕೋಣದ ಮೃತದೇಹ ಪತ್ತೆ

ವಾಹನ ಸವಾರರಿಗೆ ಗುಲಾಬಿ ಹೂವು ನೀಡಿದ ಪೊಲೀಸರು

Police-distributes-roses-to-bike-riders-wearing-helmets-in-Sagara

ಸಾಗರ: ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸಾಗರ ನಗರ ವ್ಯಾಪ್ತಿಯಲ್ಲಿ ಪೊಲೀಸರು ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ (Rose) ಹೂ ನೀಡುವ ಮೂಲಕ ಗೌರವಿಸಿದ್ದಾರೆ. ಇನ್ನು ಮುಂದೆ ಎಲ್ಲಾ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಈ ನಿಟ್ಟಿನಲ್ಲಿ ಇಲಾಖೆ ಜಾಗೃತಿ ಮೂಡಿಸಲು ಮುಂದಾಗಿದೆ. ಇನ್ನು ಮುಂದೆ ವಾಹನ ಸವಾರರು ಹೆಲ್ಮೆಟ್ ಧರಿಸದೆ ಇದ್ದಲ್ಲಿ ದಂಡ ವಿಧಿಸಲಾಗುವುದು ಎಂದು ನಗರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಪುಲ್ಲಯ್ಯ ರಾಥೋಡ್ ತಿಳಿಸಿದ್ದಾರೆ. ಹೆಲ್ಮೆಟ್ ಧರಿಸದ … Read more

ಏಪ್ರಿಲ್‌ನಲ್ಲಿ ಮದುವೆ, ಅಕ್ಟೋಬರ್‌ನಲ್ಲಿ ವಿಷ ಸೇವಿಸಿ ಗೃಹಿಣಿ ಸಾವು, ಆರು ತಿಂಗಳಲ್ಲಿ ಆಗಿದ್ದೇನು?

Married-lady-malashree-succumbed-at-suduru-in-Shimoga-taluk

ಶಿವಮೊಗ್ಗ: ಮದುವೆಯಾಗಿ (Marriage) ಆರು ತಿಂಗಳಿಗೆ ಪತಿ ಮತ್ತು ಅತ್ತೆಯ ಕಿರುಕುಳಕ್ಕೆ ಮನನೊಂದು ವಿಷ ಸೇವಿಸಿದ್ದ ಗೃಹಿಣಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಕುರಂಬಳ್ಳಿ ಬಳಿಯ ಗುಜಾನುಮಕ್ಕಿಯಲ್ಲಿ ಘಟನೆ ನಡೆದಿದೆ. ಮಾಲಾಶ್ರೀ(23) ಮೃತಪಟ್ಟ ಗೃಹಿಣಿ. ಅ.19 ರಂದು ವಿಷ ಸೇವಿಸಿದ್ದ ಮಾಲಾಶ್ರೀಯನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮೂರು ದಿನದ ಬಳಿಕ ಆಕೆ ಮೃತಪಟ್ಟಿದ್ದಾರೆ. ಪತಿ, ಅತ್ತೆಯ ಕಿರುಕುಳದ ಆರೋಪ ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ಯಡಮನೆಯ ವಾಸಿ ಮಾಲಾಶ್ರೀ 2025ರ ಏಪ್ರಿಲ್ 23 … Read more

ಬ್ರೇಕ್‌ ಫೇಲ್‌ ಆಗಿ ಖಾಸಗಿ ಬಸ್‌ ಪಲ್ಟಿ, ಹಲವು ಪ್ರವಾಸಿಗರಿಗೆ ಗಾಯ, ಎಲ್ಲಿ? ಹೇಗಾಯ್ತು ಘಟನೆ?

191025-Bus-incident-on-the-way-to-vadnbailu-from-siganduru.webp

ಸಾಗರ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ ಮುಗಿಸಿ ವಡನಬೈಲು ಬಳೆ ಪದ್ಮಾವತಿ ದೇವಸ್ಥಾನಕ್ಕೆ ತೆರಳುವಾಗ ಬಸ್‌ ಬ್ರೇಕ್‌ ಫೇಲ್‌ (Break Fail) ಆಗಿ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಾಗರ ತಾಲೂಕು ಆಡುಕಟ್ಟೆ ಸಮೀಪದ ಜೋಗಿನ ಮಠ ಬಳಿ ಬಸ್‌ ಬ್ರೇಕ್‌ ಫೇಲ್‌ ಆಗಿ ತಿರುವಿನಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ 18 ಪ್ರವಾಸಿಗರು ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಪ್ರವಾಸಿಗರು ಚಿಕ್ಕಬಳ್ಳಾಪುರ ಸುಮಾರು 50 ಪ್ರವಾಸಿಗರು ಖಾಸಗಿ ಬಸ್ಸಿನಲ್ಲಿ ಸಿಗಂದೂರು, ವಡನಬೈಲು ದೇವಸ್ಥಾನಗಳಿಗೆ ಪ್ರವಾಸಕ್ಕೆ ಆಗಮಿಸಿದ್ದರು. ಇವತ್ತು ಸಿಗಂದೂರು … Read more

ಸಾಗರ ತಾಲೂಕಿಗೆ ಮತ್ತೆರಡು ಪೊಲೀಸ್‌ ಠಾಣೆ ಬೇಕು, ಗೃಹ ಸಚಿವರಿಗೆ ಎಂಎಲ್‌ಎ ಮನವಿ

MLA-Beluru-Gopalakrishna-Meets-Home-Minister-G-Parameshwara - Requests for police station

ಸಾಗರ: ಪಟ್ಟಣಕ್ಕೆ ನೂತನ ಟ್ರಾಫಿಕ್‌ ಪೊಲೀಸ್‌ ಠಾಣೆ (Police Station) ಮತ್ತು ತುಮರಿ – ಬ್ಯಾಕೋಡು ಭಾಗಕ್ಕೆ ನೂತನ ಪೊಲೀಸ್‌ ಠಾಣೆ ಮಂಜೂರು ಮಾಡುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಾಗರ ಪಟ್ಟಣ ಬೆಳೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನು, ಅನೇಕ ಪ್ರವಾಸಿ ತಾಣಗಳಿದ್ದು ಪ್ರವಾಸಿ ವಾಹನಗಳ ದಟ್ಟಣೆಯು ಹೆಚ್ಚಿರುತ್ತದೆ. ಸಿಗಂದೂರಿಗೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣ ಮತ್ತು … Read more

ಸಾಗರದ ಇಬ್ಬರು ಯುವಕರಿಗೆ ಮೂರು ವರ್ಷ ಜೈಲು ಶಿಕ್ಷೆ, ₹25,000 ದಂಡ, ಯಾಕೆ?

crime name image

ಶಿವಮೊಗ್ಗ: ಗಾಂಜಾ ಸಹಿತ ಪೊಲೀಸರಿಗೆ ಸಿಕ್ಕಿಬಿದಿದ್ದವರಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ನಾಯಕ ಮೂರು ವರ್ಷ ಕಠಿಣ ಕಾರಾವಾಸ ಶಿಕ್ಷೆ (Jail) ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಾಗರ ನಿವಾಸಿಗಳಾದ ಇಮ್ರಾನ್ ಖಾನ್ (25), ಇಮ್ಮಿಯಾಜ್ (28) ಎಂಬುವವರಿಗೆ ತಲಾ ಮೂರು ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸಾಗರದ ಬಿ.ಹೆಚ್‌.ರಸ್ತೆಯ ಸದ್ಗುರು ಲೇಔಟ್ ಸಮೀಪ ಗಾಂಜಾ … Read more