ಶಿವಮೊಗ್ಗ, ಸಾಗರದಲ್ಲಿ ಉದ್ಯೋಗ ಅವಕಾಶ, 20 ಸಾವಿರದವರೆಗೆ ಗಳಿಕೆಗೆ ಅವಕಾಶ

JOBS-General-Imag

ಶಿವಮೊಗ್ಗ ಲೈವ್.ಕಾಂ | JOB NEWS | 26 JUNE 2021 ಶಿವಮೊಗ್ಗ ಮತ್ತು ಸಾಗರ ತಾಲೂಕಿನಲ್ಲಿ ಕೆಲಸ ಮಾಡಲು ಡೆಲಿವರಿ ಎಗ್ಸಿಕ್ಯೂಟಿವ್‍ಗಳು ಬೇಕಾಗಿದ್ದಾರೆ. ಸ್ಮಾರ್ಟ್‍ ಫೋನ್, ಬೈಕ್, ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಇದರ ಸಂಪೂರ್ಣ ಮಾಹಿತಿ ಈ ಫೋಟೊದಲ್ಲಿದೆ.

ತ್ಯಾಗರ್ತಿಯಲ್ಲಿ ಡೆಂಘೆ ಕಂಟ್ರೋಲ್ಗೆ ಕರಪತ್ರ ಜಾಗೃತಿ, ಸ್ಕೂಲ್ಗೆ ಸ್ಯಾನಿಟೈಸ್ ಮಾಡಲು ಕ್ರಮ

tyagarthi sagara graphics

ಶಿವಮೊಗ್ಗ ಲೈವ್.ಕಾಂ | TYAGARTHI NEWS | 25 JUNE 2021 ಸಾಗರ ತಾಲೂಕಿನಲ್ಲಿ ಡೆಂಘೆ ಜ್ವರದ ಭೀತಿ ಹೆಚ್ಚಾಗಿದೆ. ಗ್ರಾಮದಲ್ಲಿ ಡೆಂಘೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ತ್ಯಾಗರ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಇಸಾಕ್ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರೋನ ಕಾರ್ಯಪಡೆ ಮತ್ತು ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಇಸಾಕ್‍, ಡೆಂಘೆ ಮುನ್ನೆಚ್ಚರಿಕೆ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕರಪತ್ರಗಳನ್ನು ಹಂಚಲಾಗುತ್ತಿದೆ. ಊರಿನ ಸ್ವಚ್ಛತೆಗೆ ಎಲ್ಲರೂ … Read more

ಮರಕ್ಕೆ ನೇಣು ಬಿಗಿದುಕೊಂಡು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆತ್ಮಹತ್ಯೆ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 25 JUNE 2021 ಸಾಗರ ತಾಲೂಕು ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಕಾರಣದಿಂದ ಮನನೊಂದು ಈ ನಿರ್ಧಾರ ಕೈಗೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅದರಂತೆ ಗ್ರಾಮದ ಚಂದ್ರಶೇಖರ ಗೌಡ (55) ಅವರು ಬುಧವಾರ ರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಶೇಖರ ಗೌಡ ಅವರು 2005 ರಿಂದ 2010ರವರೆಗೆ ಕೆಳದಿ ಕ್ಷೇತ್ರದಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಶಾಸಕ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಶೇ.20ರಷ್ಟು ಮಳೆ ಹೆಚ್ಚಳ, 163 ಗ್ರಾಮ, 18 ಮುಖ್ಯ ರಸ್ತೆಯಲ್ಲಿ ಅತಿವೃಷ್ಟಿ ಸಂಭವ

rain in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 JUNE 2021 ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದ ಉಂಟಾಗಬಹುದಾದ ಅನಾಹುತಗಳನ್ನು ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಮುಂಗಾರು ಮಳೆ ಹಿನ್ನೆಲೆ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಕುರಿತು ಮುಖ್ಯಮಂತ್ರಿ ಅವರ ವಿಡಿಯೋ ಕಾನ್ಫರೆನ್ಸ್‍ನಲ್ಲಿ  ಭಾಗವಹಿಸಿದ ಜಿಲ್ಲಾಧಿಕಾರಿ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿ ಎದುರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಶೇ.20ರಷ್ಟು ಹೆಚ್ಚು ಮಳೆ ಜಿಲ್ಲೆಯಲ್ಲಿ ಕಳೆದ … Read more

ಸಾಗರ ನಗರಸಭೆಯಿಂದ ದಿನಸಿ ಕಿಟ್, ಫೋಟೊಗಳು ಮಿಸ್ಸಿಂಗ್, ತೀವ್ರ ವಿರೋಧ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 19 JUNE 2021 ಸಾಗರ ನಗರಸಭೆ ವಿತರಣೆ ಮಾಡಿರುವ ದಿನಸಿ ಕಿಟ್ ಮೇಲೆ ವಿಧಾನ ಪರಿಷತ್‍ ಸದಸ್ಯರು ಮತ್ತು ಅಧ್ಯಕ್ಷೆಯ ಫೋಟೊ ಕೈಬಿಟ್ಟಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ನಗರಸಭೆ ವತಿಯಿಂದ ದಿನಸಿ ಕಿಟ್‍ಗಳ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಾಗರ ಶಾಸಕ ಹರತಾಳು ಹಾಲಪ್ಪ ಅವರ ಫೋಟೊಗಳನ್ನು ಪ್ರಕಟಿಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಐ.ಎನ್‍.ಸುರೇಶ್‍ ಬಾಬು, ವಿಧಾನ … Read more

ಬೆಳಗ್ಗೆ 6 ಗಂಟೆಗೆ ಮದ್ಯದಂಗಡಿ ಓಪನ್, ದೇವಸ್ಥಾನಗಳಿಗೆ ಯಾಕಿಲ್ಲ ಪರ್ಮಿಷನ್, ದೇವರ ದರ್ಶನದ ಅವಕಾಶಕ್ಕೆ ಆಗ್ರಹ

190621 Brahman Parishad Memorandum at Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 19 JUNE 2021 ಸಾಗರ ತಾಲೂಕಿನ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ವಿಪ್ರ ವೈದಿಕ ಪರಿಷತ್ ಮತ್ತು ತ್ರಿಮತಸ್ಥ ಬ್ರಾಹ್ಮಣ ಅರ್ಚಕರು, ಪುರೋಹಿತರ ಪರಿಷತ್ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಪರಿಷತ್ ಸದಸ್ಯರು, 45 ದಿನದಿಂದ ದೇವಸ್ಥಾನಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈಗ ರಾಜ್ಯದಲ್ಲಿ ಕರೋನ ಸೋಂಕು ಇಳಿಮುಖವಾಗಿದೆ. ದೇವಸ್ಥಾನ ಬಾಗಿಲು ತೆಗೆಯಲು ಅವಕಾಶ ನೀಡಬೇಕು … Read more

ಮೈದುಂಬಿದ ಜೋಗ ಜಲಪಾತ, ಪ್ರವಾಸಿಗರ ಎಂಟ್ರಿ ನಿಷೇಧ, ವೈರಲ್ ವಿಡಿಯೋದ ಅಸಲಿಯತ್ತೇನು?

180621 Jog Falls Sagara 2021 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 JUNE 2021 ಶರಾವತಿ ಹಿನ್ನೀರು ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಆದರೆ ಕೋವಿಡ್ ಲಾಕ್‍ ಡೌನ್ ಕಾರಣ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ. ಜಲಪಾತದ ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ರಾಜ, ರಾಣಿ, ರೋರರ್, ರಾಕೆಟ್‍ ಜಲಪಾತಗಳು ಕಳೆಗಟ್ಟಿವೆ. ಜೋರು ಮಳೆ, ದಟ್ಟ ಇಬ್ಬನಿಯ ನಡುವೆ ಜೋಗದ ವೈಭವ ಕಣ್ತುಂಬಿಕೊಳ್ಳುವುದು ಕಣ್ಣಿಗೆ ಸಡಗರವಾಗಿದೆ. ಸಾರ್ವಜನಿಕರಿಗೆ ಎಂಟ್ರಿ ಇಲ್ಲ ಜೋಗ ಜಲಪಾತ ಕಣ್ತುಂಬಿಕೊಳ್ಳಲು … Read more

ಕಾಡು ಪ್ರಾಣಿಗಳ ಭಯ, ಮಳೆ, ಗಾಳಿಯ ರಭಸ, ಆನ್ ಲೈನ್ ಕ್ಲಾಸ್​​​ಗಾಗಿ ದಿನ ಪ್ರಾಣ ಪಣಕ್ಕಿಡಬೇಕು ಮಕ್ಕಳು

170621 Online Class Sagara Tumari 1

ಶಿವಮೊಗ್ಗ ಲೈವ್.ಕಾಂ | SAGARA / THIRTHAHALLI / HOSNAGARA NEWS | 17 JUNE 2021 ಆನ್‍ಲೈನ್‍ ಕ್ಲಾಸ್‍ನಲ್ಲಿ ಪಾಲ್ಗೊಳ್ಳಲು ಇಲ್ಲಿಯ ಮಕ್ಕಳು ಪ್ರತಿದಿನ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಕ್ಲಾಸ್‍ಗಾಗಿ ಈ ವಿದ್ಯಾರ್ಥಿಗಳು ನಿತ್ಯ ಟ್ರೆಕಿಂಗ್‍ ಮಾಡಬೇಕಿದೆ. ಕಾಡು ಪ್ರಾಣಿಗಳ ಭಯ, ಮಳೆ, ಗಾಳಿ ಜೊತೆಯು ಸೆಣೆಸಬೇಕಿದೆ. ಇದು ಶರಾವತಿ ಹಿನ್ನೀರಿನ ತುಮರಿ, ಬ್ಯಾಕೋಡು ಸೇರಿದಂತೆ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳ ನಿತ್ಯದ ಕಷ್ಟ.  ಆನ್‍ಲೈನ್ ಕ್ಲಾಸ್‍ಗಾಗಿ ದಿನ ಹರಸಾಹಸ ಮಾಡಬೇಕಿದೆ. ಇಷ್ಟೆಲ್ಲ ಕಷ್ಟಪಟ್ಟರು ಸಿಗುವುದು 2ಜಿ … Read more

ಸಾಗರದಲ್ಲಿ ಶ್ರೀಗಂಧ ಮರ ಕಟಾವು ಮಾಡಲು ಯತ್ನಿಸಿದ ಕಳ್ಳರು, ವಿಡಿಯೋ ವೈರಲ್

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 17 JUNE 2021 ಶ್ರೀಗಂಧ ಮರವನ್ನು ಕಡಿದು ಸಾಗಿಸಲು ಕಳ್ಳರು ಯತ್ನಿಸಿದ್ದಾರೆ. ಆದರೆ ಮನೆಯವರು ಮತ್ತು ಸ್ಥಳೀಯರು ಕೂಗಿ ಬೆದರಿಸಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಗರದ ವಿಜಯನಗರ ಬಡಾವಣೆಯ ಸಮೀಪ ಜಂಬಗಾರು ಹಿರಿಯಣ್ಣಯ್ಯ ಅವರ ಭೂಮಿಯಲ್ಲಿ ಶ್ರೀಗಂಧದ ಮರವಿದೆ. ಇದನ್ನು ಕಟಾವು ಮಾಡಿ ಕದ್ದೊಯ್ಯಲು ಕಳ್ಳರು ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಕಳ್ಳರ ಕೃತ್ಯ ಗಮನಿಸಿದ ಸ್ಥಳೀಯರು ಜೋರಾಗಿ ಕೂಗಿದ್ದಾರೆ. ಅಲ್ಲದೆ ಕಳ್ಳರನ್ನು ಬೆದರಿಸಿದ್ದಾರೆ. ಹಾಗಾಗಿ ಕೃತ್ಯವನ್ನು … Read more

ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ದ ಸಾಗರದ ಯುವಕನ ವಿರುದ್ಧ ಕೇಸ್

sagara graphics

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜೂನ್ 2021 ಮಕ್ಕಳ ಅಶ್ಲೀಲ ವಿಡಿಯೋ ಅಪ್‍ಲೋಡ್ ಮಾಡಿದ ಆರೋಪದ ಮೇಲೆ ಸಾಗರದ ಯುವಕನೊಬ್ಬನ ವಿರುದ್ಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಸಾಗರ ಎಸ್‍ಪಿಎಂ ರಸ್ತೆಯ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಐಡಿ ಘಟಕದ ಸೈಬರ್‍ ಟಿಪ್‍ ಲೈನ್‍ ಮಾಹಿತಿ ಆಧಾರದ ಮೇಲೆ ಯುವಕನ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ಯುವಕ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಕ್ಕಳ ಅಶ್ಲೀಲ … Read more