ಸೂರ್ಯ ಗ್ರಹಣ | ಶಿವಮೊಗ್ಗ ಸಿಟಿಯಲ್ಲಿ ಬಂದ್ ವಾತಾವರಣ, ಬಸ್ಸಲ್ಲಿ ಜನರಿಲ್ಲ, ಸ್ಕೂಲಲ್ಲಿ ಮಕ್ಕಳಿಲ್ಲ, ಅಂಗಡಿ, ಹೊಟೇಲ್ ತೆಗೆದಿಲ್ಲ

ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019 ಕಂಕಣ ಸೂರ್ಯಗ್ರಹಣದ ಪರಿಣಾಮ ಇವತ್ತು ಬೆಳಗ್ಗೆ ಶಿವಮೊಗ್ಗ ನಗರ ಬಿಕೋ ಅನ್ನುತ್ತಿತ್ತು. ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ 11 ಗಂಟೆಯಾದರು ರಸ್ತೆಯಲ್ಲಿ ವಾಹನ ಸಂಚಾರವಿಲ್ಲ, ಅಂಗಡಿಗಳು ತೆಗೆದಿಲ್ಲ, ಸ್ಕೂಲು ಕಾಲೇಜುಗಳಲ್ಲಿ ಮಕ್ಕಳಿಲ್ಲ, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಎಲ್ಲೆಲ್ಲಿ ಹೇಗಿತ್ತು ಪರಿಸ್ಥಿತಿ? ಕಚೇರಿಗಳು, ಸ್ಕೂಲು, ಕಾಲೇಜಿನ ಟೈಮ್ ಆಗಿರುವುದರಿಂದ ಬೆಳಗ್ಗೆ 9 ಗಂಟೆ ಹೊತ್ತಿಗೆ ಶಿವಮೊಗ್ಗ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಆದರೆ … Read more

SHIMOGA | ಕೇಂದ್ರ ಸರ್ಕಾರದ ನಡೆ ವಿರುದ್ಧ ಶಿವಮೊಗ್ಗದಲ್ಲಿ ತೀವ್ರ ಆಕ್ರೋಶ, ಮಸೂದೆಗೆ ಅಂಗೀಕಾರ ನೀಡದಂತೆ ರಾಷ್ಟ್ರಪತಿಗೆ ಒತ್ತಾಯ

ಶಿವಮೊಗ್ಗ ಲೈವ್.ಕಾಂ | SHIMOGA | 13 ಡಿಸೆಂಬರ್ 2019 ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಶಿವಮೊಗ್ಗದಲ್ಲಿ ಇವತ್ತು ಮುಸ್ಲಿಂ ಸಮುದಾಯದವರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಾಜಕೀಯ ಲಾಭಕ್ಕಾಗಿ ಮಸೂದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ಮುಸ್ಲಿಂ ಮುತ್ತಹಿದ ಮಹಾಝ್ ಕಮಿಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಕೇಂದ್ರ ಸರ್ಕಾರದ ನಡೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡಿ ಮಸೂದೆಯು ಸಂವಿದಾನದ ಪರಿಚ್ಛೇದ 14 ಮತ್ತು ಅಂತಾರಾಷ್ಟ್ರೀಯ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, … Read more

‘ಮನೆಯಲ್ಲಿ ಪ್ರಾಣ ಬಿಡಬೇಕು ಅಂದುಕೊಂಡಿದ್ದೆ, ಶಿವಮೊಗ್ಗ ಡಿಸಿ ಆಫೀಸ್ ಮುಂದೆ ಸಾಯಬೇಕಾಗಬಹುದು’

ಶಿವಮೊಗ್ಗ ಲೈವ್.ಕಾಂ | SHIMOGA | 18 ನವೆಂಬರ್ 2019 ‘ನಮ್ಮ ಮನೆಯಲ್ಲಿ ಪ್ರಾಣ ಬಿಡಬೇಕು ಅಂದುಕೊಂಡಿದ್ದೆ. ಆದರೆ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಸಾಯುಲು ಸಿದ್ಧ..’ ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಟುಂಬವೊಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದೆ. ಡಿಸಿ ಆಫೀಸ್ ಮುಂದೆಯೇ ಪ್ರಾಣ ಬಿಡಲು ಸಿದ್ಧ ಎಂದು ಪಟ್ಟು ಹಿಡಿದು ಕುಳಿತಿದೆ. ಪ್ರತಿಭಟನೆಗೆ ಕಾರಣವೇನು? ಶರಾವತಿ ಮುಳುಗಡೆಯ ಕೆಲವು ಸಂತ್ರಸ್ಥರಿಗೆ ಭದ್ರಾವತಿ ತಾಲೂಕು ಕೆಂಚನಹಳ್ಳಿಯಲ್ಲಿ ಜಮೀನು ನೀಡಲಾಗಿತ್ತು. 1964ರಲ್ಲಿಯೇ ಮೂರು ಎಕರೆ ಜಮೀನಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಆದರೆ … Read more

ಮೂರು ಬಾರಿ ಶಾಸಕರಾದ ಹರತಾಳು ಹಾಲಪ್ಪ ಸಚಿವರಾಗಬೇಕು, ಆಗ್ರಹ

Haratalu-Halappa

ಶಿವಮೊಗ್ಗ ಲೈವ್.ಕಾಂ | ಸಾಗರ | 1 ಆಗಸ್ಟ್ 2019 ಶಾಸಕ ಹರತಾಳು ಹಾಲಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಾಗರದ ಆರ್ಯ ಈಡಿಗರ ಸಂಘ ಒತ್ತಾಯಿಸಿದೆ. ಹಾಲಪ್ಪ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಈಡಿಗ ಸಮುದಾಯಕ್ಕೆ ನ್ಯಾಯ ಒದಗಿಸಿದಂತೆ ಆಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪರಶುರಾಮಪ್ಪ ತಿಳಿಸಿದ್ದಾರೆ. ಈಡಿಗ ಸಮುದಾಯ, ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದೆ. ಈ ಸಮುದಾಯದಿಂದ ಆಯ್ಕೆಯಾಗಿರುವ ಹರತಾಳು ಹಾಲಪ್ಪ, ಮುರು ಬಾರಿ … Read more

ಹೊಸನಗರದ ಅಂಗಡಿಗಳು, ಗ್ಯಾರೇಜ್, ಹೊಟೇಲ್, ಬೇಕರಿಗಳಲ್ಲಿ ಪೊಲೀಸ್, ವಿವಿಧ ಇಲಾಖೆ ಅಧಿಕಾರಿಗಳಿಂದ ತಲಾಷ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 30 ಜುಲೈ 2019 ಹೊಸನಗರದಲ್ಲಿ ಇವತ್ತು ಆಪರೇಷನ್ ಮುಸ್ಕಾನ್ ನಡೆಸಲಾಗಿದೆ. ಅಂಗಡಿ, ಗ್ಯಾರೇಜ್, ಹೊಟೇಲ್, ಬೇಕರಿ ಸೇರಿದಂತೆ ವಿವಿಧೆಡೆ ಕಾರ್ಮಿಕ ಇಲಾಖೆ, ಪೊಲೀಸರು, ಮಕ್ಕಳ ಸಹಾಯವಾಣಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ನೇತೃತ್ವದಲ್ಲಿ ಭರ್ಜರಿ ತಪಾಸಣೆ ನಡೆಸಲಾಗಿದೆ. 14 ವರ್ಷದೊಳಗಿನ ಬಾಲ ಕಾರ್ಮಿಕರು, 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗಿದೆಯೆ ಎಂಬುದನ್ನು ಪರಿಶೀಲಿಸಲಾಯಿತು. ಹೊಸನಗರದ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು ತಪಾಸಣೆ ನಡೆಸಿ, ಬಾಲ ಕಾರ್ಮಿಕ ಪದ್ಧತಿ … Read more

ಭದ್ರಾವತಿಯ ವಿಐಎಸ್ಎಲ್’ಗೆ ಮರುಜೀವ, ಕೊನೆಗೂ ಮಂಜೂರಾಯ್ತು 150 ಎಕರೆಯ ಗಣಿ

VISL Bhadravathi 1

ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019 ಮುಚ್ಚುವ ಹಂತ ತಲುಪಿದ್ದ ವಿಐಎಸ್ಎಲ್ ಕಾರ್ಖಾನೆಗೆ ಮರುಜೀವ ಸಿಕ್ಕಂತಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 150 ಎಕರೆ ಗಣಿ ಮಂಜೂರಾಗಿದೆ. ಈ ಸಂಬಂಧ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಸಂಡೂರಿನ ರಮಣದುರ್ಗದ ಬ್ಲಾಕ್ ನಂಬರ್ 13/1ರಲ್ಲಿ 150 ಎಕರೆ ಭೂಮಿಯನ್ನು ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ 10 ವರ್ಷಗಳವರೆಗೆ  ಮಂಜೂರು ಮಾಡಲಾಗಿದೆ. ಹತ್ತು ವರ್ಷದ ಬಳಿಕ ನವೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿಐಎಸ್ಎಲ್ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ. ಸಿದ್ದರಾಮಯ್ಯ ಅವರು ಸಿಎಂ … Read more