ಶಿವಮೊಗ್ಗದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಂಠೀರವ ಸ್ಟುಡಿಯೊ, ಏನಂದ್ರು ಅಧ್ಯಕ್ಷರು?

Kanteerava-Studio-Chairman-press-meet-in-Shimoga.

ಶಿವಮೊಗ್ಗ: ಸಿನಿಮಾ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲೆ ಅಪಾರ ಕೊಡುಗೆ ನೀಡುತ್ತಿದೆ. ಹೀಗಾಗಿ ಇಲ್ಲಿ ಕಂಠೀರವ ಸ್ಟುಡಿಯೊ ನಿರ್ಮಾಣ ಮಾಡಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷ ಮೆಹಬೂಬ್ ಭಾಷಾ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಹಬೂಬ್‌ ಭಾಷಾ, ಕಂಠೀರವ ಸ್ಟುಡಿಯೊವನ್ನು ರಾಜ್ಯದ ವಿವಿಧೆಡೆಗೆ ವಿಸ್ತರಣೆ ಮಾಡುವ ಉದ್ದೇಶವನ್ನು ನಿಗಮ ಹೊಂದಿದೆ. ಇದಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಬಹಳಷ್ಟು ಬೇಡಿಕೆಯೂ ಇದೆ. ಹಾಗಾಗಿ ಶಿವಮೊಗ್ಗ ನಗರವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದಕ್ಕೆ ರಾಜ್ಯ ಹಾಗೂ ಜಿಲ್ಲಾ … Read more

ಶಿವಮೊಗ್ಗ ಜಿಲ್ಲಾ ಬಿಜೆಪಿಗೆ ಪದಾಧಿಕಾರಿಗಳ ನೇಮಕ, ಯಾರಿಗೆಲ್ಲ ಯಾವ ಜವಾಬ್ದಾರಿ ನೀಡಲಾಗಿದೆ?

BJP-Office-Shimoga

ಶಿವಮೊಗ್ಗ: ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದೆ. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗಳಿಗೆ ಮುಖಂಡರು, ಕಾರ್ಯಕರ್ತರನ್ನು ನೇಮಿಸಲಾಗಿದೆ. ಯಾವ್ಯಾವ ಹುದ್ದೆಗೆ ಯಾರೆಲ್ಲ ನೇಮಕ? ಜಿಲ್ಲಾ ಉಪಾಧ್ಯಕ್ಷರು: ಎಸ್. ಜ್ಞಾನೇಶ್ವರ್, ಕೊಳಗಿ ರೇವಣಪ್ಪ, ಗಜಾನನ ರಾವ್‌, ಎನ್. ಪದ್ಮನಿ, ಎ.ಟಿ ನಾಗರತ್ನ, ಎನ್.ಜಿ ನಾಗರಾಜ್, ಸೋಮಶೇಖರ್ ಚಂದುವಳ್ಳಿ, ಪ್ರಕಾಶ್ ತಲಕಾಲಕೊಪ್ಪ. ಪ್ರಧಾನ ಕಾರ್ಯದರ್ಶಿ: ಶಿವರಾಜು, ಎಂ.ಬಿ ಹರಿಕೃಷ್ಣ ಮತ್ತೂರು, ಸಿ.ಹೆಚ್ ಮಾಲತೇಶ್. ಕಾರ್ಯದರ್ಶಿ: ಸುವರ್ಣ ಟೀಕಪ್ಪ, ಶ್ರೀನಿವಾಸ್ ಕನಸಿನಕಟ್ಟೆ, ಶಿವಕುಮಾ‌ರ್ ಕಡಸೂರು, ಸುರೇಖಾ ಮುರುಳಿಧರ್, … Read more

ಸ್ವಂತ ಹಣದಲ್ಲಿ ಹೆದ್ದಾರಿಯ ಅಪಾಯಕಾರಿ ಗುಂಡಿ ಮುಚ್ಚಿದ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು

sahyadri-college-Students-Close-the-pot-hole-at-BH-Road

ಶಿವಮೊಗ್ಗ: ಸಾಲು ಸಾಲು ಅಪಘಾತಗಳು. ಬಿದ್ದು ಗಾಯಗೊಂಡವರ ನರಳಾಟ. ಜಸ್ಟ್‌ ಮಿಸ್‌ ಆದವರ ಆತಂಕದ ನುಡಿ. ಪ್ರತಿದಿನ ಇದನ್ನು ಗಮನಿಸುತ್ತಿದ್ದ ಸಹ್ಯಾದ್ರಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ತಮ್ಮದೇ ಖರ್ಚಿನಲ್ಲಿ ಸಿಮೆಂಟ್‌, ಜೆಲ್ಲಿ, ಮರಳು ತಂದು ಬೃಹತ್‌ ಗುಂಡಿ ಮುಚ್ಚಿದ್ದಾರೆ. ಬಿ.ಹೆಚ್‌.ರಸ್ತೆಯಲ್ಲಿ ಸಹ್ಯಾದ್ರಿ ಕಾಲೇಜು ಮುಂಭಾಗ ಬೃಹತ್‌ ಗುಂಡಿಯಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ಪ್ರತಿದಿನ ಅಪಘಾತ ಸಂಭವಿಸುತಿತ್ತು. ವಿದ್ಯಾರ್ಥಿಗಳ ಕಣ್ಮುಂದೆಯೇ ಇಂತಹ ಘಟನೆ ಸಂಭಿವಿಸಿದ್ದು ಅವರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿತು. ಸಿಮೆಂಟು, ಮರಳು, ಮೇಸ್ತ್ರಿಯ ನೆರವು ಸಹ್ಯಾದ್ರಿ … Read more

ಗೋಪಾಳದಲ್ಲಿ ಕಾರ್ಮಿಕನ ಮರ್ಮಾಂಗಕ್ಕೆ ಗಂಭೀರ ಪೆಟ್ಟು, ಆಗಿದ್ದೇನು?

Shimoga-News-update

ಶಿವಮೊಗ್ಗ: ಗೋಪಾಳದ ಪ್ರೆಸ್‌ ಕಾಲೋನಿಯಲ್ಲಿ ಮರ ಕತ್ತರಿಸುವ ಕಾಮಗಾರಿ ವೇಳೆ ಅವಘಡ ಉಂಟಾಗಿ ಕಾರ್ಮಿಕನ ಮರ್ಮಾಂಗಕ್ಕೆ ಗಂಭೀರ ಗಾಯವಾಗಿದೆ. ಘಟನೆ ಸಂಬಂಧ ಮೇಸ್ತ್ರಿ ಮತ್ತು ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಮಿಕ ಹನುಮನಂತಪ್ಪ ಎಂಬುವವರು ಗಾಯಗೊಂಡಿದ್ದಾರೆ. ಗೋಪಾಳದಲ್ಲಿರುವ ಸುರೇಶ್ ಎಂಬುವವರ ಮನೆ ಬಳಿ ಮರದ ಬುಡವನ್ನು ಗ್ರಾನೈಟ್ ಕಟ್ ಮಾಡುವ ಮಿಷನ್‌ನಿಂದ ಕತ್ತರಿಸುವ ಕೆಲಸ ಮಾಡಿಸಲಾಯಿತು. ಮಿಷನ್ ನಿಯಂತ್ರಣ ತಪ್ಪಿ ಹಿಂದಕ್ಕೆ ಬಂದು ಹನುಮಂತಪ್ಪ ಅವರ ಮರ್ಮಾಂಗಕ್ಕೆ ಬಡಿದಿದೆ ಎಂದು ಆರೋಪಿಸಲಾಗಿದೆ. ಕೂಡಲೆ ಅವರನ್ನು ಮೆಗ್ಗಾನ್‌ … Read more

ಪಾದಯಾತ್ರೆಗೆ ಹೊಳೆಹೊನ್ನೂರು ಭಾಗದಲ್ಲಿ ಅದ್ಧೂರಿ ಸ್ವಾಗತ, ಇವತ್ತು ಶಿವಮೊಗ್ಗ ಪ್ರವೇಶ

Padayathre-at-Holehonnuru-en-route-to-Rambhapuri-Mutt

  ಹೊಳೆಹೊನ್ನೂರು: ಸಮಾಜದ ಉದ್ದಾರ ಹಾಗೂ ಲೋಕ ಕಲ್ಯಾಣಾರ್ಥವಾಗಿ ಚನ್ನಗಿರಿಯಿಂದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ವರೆಗೆ ಪಾದಯಾತ್ರೆ ಸಾಗುತ್ತಿದೆ ಎಂದು ಚನ್ನಗಿರಿಯ ಕೇದಾರ ಶಾಖ ಮಠದ ಡಾ.ಕೇದಾರಲಿಂಗಾ ಶಿವ ಶಾಂತವೀರ ಶ್ರೀಗಳು ಹೇಳಿದರು. ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನ.27 ರಂದು ಹಮ್ಮಿಕೊಂಡಿರುವ ಲಿಂಗೈಕ್ಯ ಶಿವಾನಂದ ರಾಜೇಂದ್ರ ಶಿವಾಚಾರ್ಯರ ಪೀಠಾರೋಹಣದ ಶತಮಾನೋತ್ಸವದ ನಿಮಿತ್ತ ಭಾನುವಾರ ಹೋರಾಟ ಪಾದಯಾತ್ರೆಯ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಇಷ್ಠಲಿಂಗ ಪೂಜೆ ಸೇರಿದಂತೆ ಪೂಜಾ ಕೈಂಕರ್ಯಗಳ ಮಹತ್ವವನ್ನು ಕಿರಿಯರಿಗೆ ಮನವರಿಕೆ ಮಾಡಬೇಕಿದೆ. ಸಮಾಜದ … Read more

ಶಿವಮೊಗ್ಗದಲ್ಲಿ ಹೆಚ್ಚಿದ ತಾಪಮಾನ, ಇವತ್ತು ಹೇಗಿರುತ್ತೆ ಜಿಲ್ಲೆಯ ಹವಾಮಾನ? ಇಲ್ಲಿದೆ ತಾಲೂಕುವಾರು ರಿಪೋರ್ಟ್

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಸಿಲಿನ ಅಬ್ಬರ ಜೋರಾಗಿದೆ. ಇವತ್ತೂ ವಿಪರೀತ ಬಿಸಿಲು, ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕಳೆದ ವಾರ ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಜೋರಿತ್ತು. ಆದರೆ ಕೇರಳ ಸೇರಿದಂತೆ ವಿವಿಧೆಡೆ ದಿಢೀರ್‌ ಮಳೆಯಾಗಿದ್ದು, ಆ ಬಳಿಕ ವಾತಾವಣ ಬದಲಾಗಿದೆ. ಉಷ್ಣಾಂಶವು ಏರಿಕೆಯಾಗಿದೆ. ಈ ವಾರ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌. ತೀರ್ಥಹಳ್ಳಿಯಲ್ಲಿ ಗರಿಷ್ಠ 33 … Read more

ದೀಪೋತ್ಸವ ಮುಗಿದ ಮರುದಿನ ಬೆಳಗ್ಗೆ ದೇವಸ್ಥಾನಕ್ಕೆ ಬಂದ ಅರ್ಚಕರಿಗೆ ಕಾದಿತ್ತು ಶಾಕ್

Crime-News-General-Image

ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್‌ನಲ್ಲಿರುವ ಶ್ರೀ ಸಿದ್ದಿ ಬುದ್ದಿ ಮಹಾಗಣಪತಿ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ದೇವರ ಬೆಳ್ಳಿಯ ಮುಖವಾಡ ಮತ್ತು ಹುಂಡಿಯಲ್ಲಿದ್ದ ಕಾಣಿಕೆ ಹಣ ಕಳುವಾಗಿದೆ ಎಂದು ಆರೋಪಿಸಲಾಗಿದೆ. ದೀಪೋತ್ಸವ ಮುಗಿದ ರಾತ್ರಿಯೆ ಕಳ್ಳತನ ಕಾರ್ತಿಕ ದೀಪೋತ್ಸವದ ಪೂಜೆ ಮುಗಿಸಿ ದೇವಸ್ಥಾನದ ಬಾಗಿಲುಗಳನ್ನು ಹಾಕಿಕೊಂಡು ಹೋದ ನಂತರ ಕೃತ್ಯ ನಡೆದಿದೆ. ಮರುದಿನ ಬೆಳಗ್ಗೆ 6 ಗಂಟೆಗೆ ಅರ್ಚಕರು ಬಂದು ನೋಡಿದಾಗ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಖ್ಯ ಬಾಗಿಲು ಒಡೆದಿದ್ದು ಕಂಡುಬಂದಿದೆ. ಗರ್ಭಗುಡಿಯಲ್ಲಿ ವಿಗ್ರಹದ … Read more

ತಾಯಿ ಜೊತೆ ಬೈಕ್‌ನಲ್ಲಿ ತೆರಳುವಾಗ ಜೋರಾಗಿ ಕೂಗಿದ ಬಾಲಕಿ, ನಿಲ್ಲಿಸಿ ನೋಡಿದಾಗ ಕಾದಿತ್ತು ಆಘಾತ

Police-Jeep-in-Shimoga-city

ಶಿವಮೊಗ್ಗ: ಟ್ಯೂಷನ್‌ ಮುಗಿಸಿ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬಾಲಕಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ವ್ಯಕ್ತಿಯೊಬ್ಬ ಕಸಿದುಕೊಂಡು ಪರಾರಿಯಾಗಿದ್ದಾನೆ. ಶಿವಮೊಗ್ಗದ ಗೋಪಾಳದ ರಾಮಕೃಷ್ಣ ಶಾಲೆ ಬಳಿ ಘಟನೆ ಸಂಭವಿಸಿದೆ. ರೂಪಾ ಎಂಬುವವರು ತಮ್ಮ ಮಗಳು ಐಶ್ವರ್ಯಾಳನ್ನು ಟ್ಯೂಷನ್‌ನಿಂದ ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರ. ಸಂಜೆ ಸುಮಾರು 6:50ರ ಹೊತ್ತಿಗೆ ಈ ಘಟನೆ ನಡೆದಿದೆ. ದ್ವಿಚಕ್ರ ವಾಹನದ ಹಿಂಬದಿಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಮಗಳ ಕುತ್ತಿಗೆಗೆ ಕೈ ಹಾಕಿ ಸರ ಕಸಿದಿದ್ದಾನೆ. ಈ ಸಂದರ್ಭ … Read more

ಈ ದಿನ ಯಾವ್ಯಾವ ರಾಶಿಗೆ ಹೇಗಿದೆ? ಇಲ್ಲಿದೆ ಇಂದಿನ ಪಂಚಾಂಗ

Dina-Bhavishya-and-Panchanga-Thumbnail.webp

ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಇಲ್ಲಿದೆ. ಶಿವಮೊಗ್ಗದಲ್ಲಿ ಇವತ್ತು 6.32ಕ್ಕೆ ಸೂರ್ಯೋದಯ. 5.57ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ಚತುರ್ಥಿ ಮತ್ತು ಪೂರ್ವಾಷಾಢ ನಕ್ಷತ್ರದ ದಿನ. ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.51 ರಿಂದ 5.42ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.17 ರಿಂದ 6.32ರವರೆಗೆ ಅಭಿಜಿತ್‌ ಬೆಳಗ್ಗೆ 11.52 ರಿಂದ 12.37ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.09 ರಿಂದ 2.54ರವರಗೆ ಗೋಧೂಳಿ ಮುಹೂರ್ತ ಸಂಜೆ 5.54 ರಿಂದ 6.20ರವರೆಗೆ ರಾಹು, ಯಮಗಂಡ, ಗುಳಿಕ ಕಾಲ … Read more

ದ್ವಿಚಕ್ರ ವಾಹನಕ್ಕೆ KSRTC ಬಸ್‌ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

Mishap-at-Jambaraghatta-near-Holehonnuru.

ಹೊಳೆಹೊನ್ನೂರು: ರಾಷ್ಟ್ರೀಯ ಹೆದ್ದಾರಿಯ 13ರಲ್ಲಿ ಜಂಬರಘಟ್ಟೆ ಬಳಿ ಭಾನುವಾರ ಸಂಜೆ ಸರ್ಕಾರಿ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮೃತರನ್ನು ಜಂಬರಘಟ್ಟೆ ನಿವಾಸಿ ಸೈಯದ್ ಆಹಮದ್ (65) ಗುರುತಿಸಲಾಗಿದೆ. ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಮತ್ತು ಬೈಕ್‌ ಅಪಘಾತಕ್ಕೀಡಾಗಿವೆ. ಸೈಯದ್ ಆಹಮದ್ ಹಾಗೂ ಆಯಾನ್ ಜಮೀನಿನಿಂದ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದರು.   ಘಟನೆ ಸ್ಥಳದಲ್ಲೇ ಸೈಯದ್ ಆಹಮದ್ ಅಸುನೀಗಿದ್ದಾರೆ. ಹಿಂಬದಿ ಸವಾರ ಆಯಾನ್ ಗಾಯಗೊಂಡಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಳೆಹೊನ್ನೂರು … Read more