ಇಡ್ಲಿ ಗಾಡಿಯಲ್ಲಿ ಗ್ರಾಹಕ ಬಿಟ್ಟು ಹೋದ ಬ್ಯಾಗ್‌ನಲ್ಲಿತ್ತು ₹1,00,000 ಹಣ, ಮುಂದೇನಾಯ್ತು?

Idly-Stall-Owner-handed-over-the-money

ಶಿವಮೊಗ್ಗ: ಗ್ರಾಹಕರು ಬಿಟ್ಟು ಹೋಗಿದ್ದ ಇದ್ದ ಚೀಲವನ್ನು (Money) ಇಡ್ಲಿ ಗಾಡಿ ಮಾಲೀಕ ತಿರುಮೂರ್ತಿ ಅವರು ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ವಾಪಸ್ಸು ನೀಡಿದರು. ಆನವಟ್ಟಿಯ ಮಧುಕೇಶವ್ ಅವರು ನ.4ರಂದು ಸಂಜೆ ಶಿವಮೊಗ್ಗಕ್ಕೆ ಬಂದು ಆಲ್ಗೊಳ ವೃತ್ತದಲ್ಲಿ ಇಡ್ಲಿಗಾಡಿಯಲ್ಲಿ ಉಪಹಾರ ಸೇವನೆಗೆ ಹೋಗಿದ್ದರು. ಉಪಹಾರ ಸೇವನೆ ಸಂದರ್ಭ ಗಾಡಿ ಮೇಲಿಟ್ಟಿದ್ದ ಚೀಲವನ್ನು ಮರೆತು ವಾಪಸ್ಸು ಹೋಗಿದ್ದರು. ತಿರುಮೂರ್ತಿ ಅವರು ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ₹1,00,000 ಹಣ ಇತ್ತು. ಕೂಡಲೆ ಅವರು ತುಂಗಾನಗರ ಪೊಲೀಸ್ ಠಾಣೆಗೆ ತೆರಳಿ ಇನ್ಸ್‌ಪೆಕ್ಟ‌ರ್ ಕೆ.ಟಿ.ಗುರುರಾಜ … Read more

ಮಹಿಳೆಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ರೆಡಿಯಾಗ್ತಿದೆ ಅಕ್ಕ ಪಡೆ, ನೀವು ಸೇರಬಹುದು, ಹೇಗೆ?

SHIMOGA-NEWS-UPDATE

ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಕ್ಕ ಪಡೆ (Akka Pade) ರಚಿಸಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ತಂಡಕ್ಕೆ ಎನ್‌ಸಿಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವ 5 ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು 35 ರಿಂದ 45 ವರ್ಷದೊಳಗಿರಬೇಕು. ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ 2 ಪಾಳಿ ಆಧಾರದಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು. … Read more

ಭದ್ರಾವತಿಯ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಬಡಾವಣೆಗಳ ಲಿಸ್ಟ್‌

Bhadravathi-News-Update

ಭದ್ರಾವತಿ: ವಿದ್ಯುತ್ ಮಾರ್ಗ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.10ರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಕಡದಕಟ್ಟೆ, ಐಟಿಐ, ಹೆಬ್ಬಂಡಿ, ಹೆಬ್ಬಂಡಿ ತಾಂಡಾ, ಎ. ಕೆ.ಕಾಲೊನಿ, ಲಕ್ಷ್ಮಿಪುರ, ಬಿಳಕಿ, ಬಿಳಕಿ ತಿರುವು, ಬೈಪಾಸ್ ರಸ್ತೆ ನೀರು ಸರಬರಾಜು ಘಟಕ ಮುಂತಾದ ಬಡಾವಣೆಗಳಲ್ಲಿ ವಿದ್ಯುತ್‌ ವ್ಯತ್ಯಯವಾಗುವುದು (Power Cut). ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪ ವಿಭಾಗದ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿ ಶಿಕ್ಷಕನ ದರೋಡೆ, ರೀಲ್ಸ್‌ಗೆ ಲೈಕ್‌ ಕೊಟ್ಟವನಿಂದಲೇ ಕೃತ್ಯ

Woman Brutally Murdered in Shivamogga

BREAKING-NEWS-ENGLISH

Shivamogga: A woman was brutally murdered with a sharp weapon. The incident took place last night in Siddeshwara Nagar of Dummalli, Shivamogga Taluk. The deceased woman has been identified as Gangamma (45). It is suspected that Gangamma was murdered due to an old rivalry. The police have taken two individuals, Nagesh Naik and Harish, into … Read more

BREAKING NEWS – ಶಿವಮೊಗ್ಗದಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಮಹಿಳೆಯ ಕೊಲೆ

SHIMOGA-BREAKING-NEWS.jpg

ಶಿವಮೊಗ್ಗ: ಮಾರಕಾಸ್ತ್ರದಿಂದ ಕೊಚ್ಚಿ ಮಹಿಳೆಯ (woman) ಭೀಕರ ಹತ್ಯೆ ಮಾಡಲಾಗಿದೆ. ಶಿವಮೊಗ್ಗ ತಾಲೂಕು ದುಮ್ಮಳ್ಳಿಯ ಸಿದ್ದೇಶ್ವರ ನಗರದಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಗಂಗಮ್ಮ (45) ಕೊಲೆಯಾದ ಮಹಿಳೆ. ಹಳೆ ದ್ವೇಷದ ಹಿನ್ನೆಲೆ ಗಂಗಮ್ಮ ಅವರ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ನಾಗೇಶ ನಾಯ್ಕ್‌ ಮತ್ತು ಹರೀಶ್‌ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಂಗಮ್ಮ ಅವರ ಮೃತದೇಹವನ್ನು ಮೆಗ್ಗಾನ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ … Read more

ಶಿವಮೊಗ್ಗದಲ್ಲಿ ಇವತ್ತು ಹೇಗಿರುತ್ತೆ ಬಿಸಿಲು? – ಇಂದಿನ ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ಕೇರಳ, ತಮಿಳನಾಡು ರಾಜ್ಯದ ವಿವಿಧೆಡೆ ಮತ್ತೆ ಮಳೆಯಾಗುತ್ತಿದೆ. ಇವತ್ತು ದಕ್ಷಿಣ ಭಾರತದ ಹಲವು ಕಡೆಗೆ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಇದರ ಪರಿಣಾಮಕ ಕರ್ನಾಟಕದ ವಿವಿಧೆಡೆಯು ಮಳೆಯಾಗುವ ಸಾಧ್ಯತೆ ಇದೆ. (Weather Report) ಇತ್ತ ಶಿವಮೊಗ್ಗ ಜಿಲ್ಲೆಯಲ್ಲಿ ಒಣ ಹವೆ ಮುಂದುವರೆದಿದೆ. ಜಿಲ್ಲೆಯಲ್ಲಿ ಬಿಸಿಲಿ ಅಬ್ಬರ ಜೋರಾಗಿದೆ. ತಾಪಮಾನವು ಏರಿಕೆಯಾಗಿದೆ. ಇವತ್ತೂ ಜೋರು ಬಿಸಿಲು, ಒಣ ಹವೆ ಮುಂದುವರೆಯಲಿದೆ. ಸಂಜೆ ಬಳಿಕ ಥಂಡಿ ವಾತಾವರಣ ಜೋರಿರಲಿದೆ ಎಂದು ಅಂದಾಜಿಸಲಾಗಿದೆ. ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇದನ್ನೂ … Read more

ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿ ಶಿಕ್ಷಕನ ದರೋಡೆ, ರೀಲ್ಸ್‌ಗೆ ಲೈಕ್‌ ಕೊಟ್ಟವನಿಂದಲೇ ಕೃತ್ಯ

SHIMOGA-NEWS-UPDATE

ಶಿವಮೊಗ್ಗ: ‘ನಿಮ್ಮ ರೀಲ್ಸ್‌ನ ಅಭಿಮಾನಿಗಳು’ ಎಂದು ತಿಳಿಸಿ ಟೀಚರ್‌ (Teacher) ಒಬ್ಬರನ್ನು ದರೋಡೆ ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ಕೃತ್ಯ ನಡೆದಿದೆ. ಖಾಸಗಿ ಶಾಲೆಯೊಂದರ ಶಿಕ್ಷಕ (ಹೆಸರು ಗೌಪ್ಯ) ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡುತ್ತಿದ್ದರು. ಅವರ ಇನ್‌ಸ್ಟಾಗ್ರಾಂಗೆ ವ್ಯಕ್ತಿಯೊಬ್ಬ ಮೆಸೇಜ್‌ ಮಾಡಿದ್ದ. ಶಿಕ್ಷಕನ ರೀಲ್ಸ್‌ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದ. ಕೊನೆಗೆ ಶಿಕ್ಷಕನನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ.7ರ ರಾತ್ರಿ 9.30ಕ್ಕೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ … Read more

ಬ್ಯಾಂಕಿನ ಮಹಿಳಾ ಸಿಬ್ಬಂದಿಯನ್ನು ಹೊಟೇಲ್‌ಗೆ ಕರೆಯಿಸಿ ಮೈ, ಕೈ ಮುಟ್ಟಿದ ಹಿರಿಯ ಅಧಿಕಾರಿ

Doddapete-Police-Station-General-Image.

ಶಿವಮೊಗ್ಗ: ಬ್ಯಾಂಕಿನ ಮಹಿಳಾ ಸಿಬ್ಬಂದಿಯೊಬ್ಬರು (Bank Employee) ಅದೇ ಬ್ಯಾಂಕಿನ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆ ವರ್ಗಾಯಿಸಲಾಗಿದೆ. ಏನಿದು ಪ್ರಕರಣ? ಬ್ಯಾಂಕ್‌ ಒಂದರ ಶಿವಮೊಗ್ಗ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಚೇರಿ ಕೆಲಸಕ್ಕೆ ಒಬ್ಬರನ್ನೇ ಕರೆಯುವುದು, ಮೈ ಸವರುವುದನ್ನು ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ … Read more

ಒಂದೊಂದೇ ಸಾಲಿನಲ್ಲಿ ದಿನ ಭವಿಷ್ಯ, ಇಂದಿನ ಪಂಚಾಂಗ – ಓದಲು ಇಲ್ಲಿ ಕ್ಲಿಕ್‌ ಮಾಡಿ

Dina-Bhavishya-and-Panchanga-Thumbnail.webp

ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಮತ್ತು ಸುಭಾಷಿತ ಇಲ್ಲಿದೆ. ಇಂದಿನ ಪಂಚಾಂಗ ಇವತ್ತು ಸೋಮವಾರ, 10 ನವೆಂಬರ್‌ 2025. ಶಿವಮೊಗ್ಗದಲ್ಲಿ ಬೆಳಗ್ಗೆ 6.26ಕ್ಕೆ ಸೂರ್ಯೋದಯ. ಸಂಜೆ 5.58ಕ್ಕೆ ಸೂರ್ಯಾಸ್ತ. ಇಂದು ಮೃಗಶಿರ ನಕ್ಷತ್ರದ ದಿನ. ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.46 ರಿಂದ 5.36ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.11 ರಿಂದ 6.26ರವರೆಗೆ ಅಭಿಜಿತ್‌ ಬೆಳಗ್ಗೆ 11.48 ರಿಂದ 12.35ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.07 ರಿಂದ … Read more

ಶಿವಮೊಗ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ

Shimoga-News-update

ಶಿವಮೊಗ್ಗ: ರಾಜ್ಯದಲ್ಲಿ ಅವಧಿ ಪೂರ್ಣಗೊಂಡ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು (Administrators) ನೇಮಕ ಮಾಡಲಾಗಿದೆ. ಒಟ್ಟು 42 ನಗರಸಭೆ, 53 ಪುರಸಭೆ ಮತ್ತು 23 ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಕೆಲವು ಸ್ಥಳೀಯ ಸಂಸ್ಥೆಗಳಿವೆ. ಸಾಗರ ನಗರಸಭೆಗೆ ಅ.30ರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸೊರಬ ಪುರಸಭೆಗೆ ಅ.24ರಿಂದ ಸಾಗರ ಉಪವಿಭಾಗಾಧಿಕಾರಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಹೊಸನಗರ ಪಟ್ಟಣ ಪಂಚಾಯಿತಿಗೆ ನ.4ರಿಂದ ಹೊಸನಗರ … Read more