ಮೆಗ್ಗಾನ್‌ ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು, ವಾರಸುದಾರರ ಪತ್ತೆಗೆ ಪೊಲೀಸ್‌ ಪ್ರಕಟಣೆ

160125 mc gann hospital general image

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದ ಹನುಮಂತಪ್ಪ (52) ಅ.10ರಂದು ಮೃತಪಟ್ಟಿದ್ದಾರೆ. ಇವರ ವಾರಸುದಾರರು ಹಾಗೂ ವಿಳಾಸದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹನುಮಂತಪ್ಪ 5.5 ಅಡಿ ಎತ್ತರ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಮೃತನ ಬಲ ಪಕ್ಕೆಯ ಮೇಲೆ ಸಾಸಿವೆ ಕಾಳು ಗಾತ್ರದ ಕಪ್ಪು ಮಚ್ಚೆ ಗುರುತಿದೆ. ಎಡಗೈ ಬುಜ ಹಾಗೂ ಮುಂಗೈ ಮಣಿಕಟ್ಟಿನ ಮೇಲೆ ಅರ್ಧ ವಾಸಿಯಾಗದ ಗಾಯದ ಗುರುತು ಇದೆ. ವಾರಸುದಾರರ ಬಗ್ಗೆ … Read more

ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರಿಶೀಲನೆ, ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ

Shimoga-Yeshwanthapura-Train-South-Western-Railway

ರೈಲ್ವೆ ಸುದ್ದಿ: ಶಿವಮೊಗ್ಗ – ಭದ್ರಾವತಿ ನಡುವಿನ ಎಲ್‌.ಸಿ (level crossing) 42,46 ಮತ್ತು 47 ಗಳನ್ನು ಮುಚ್ಚಲು ಮತ್ತು ಪರೀಕ್ಷೆಗಾಗಿ ಅ.28 ರಿಂದ ನ.3 ರವರೆಗೆ ವಿವಿಧ ದಿನಗಳಂದು ವಾಹನಗಳು ಮತ್ತು ಸಾರ್ವಜನಿಕರು ತಾತ್ಕಾಲಿಕವಾಗಿ ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಎಲ್‌ಸಿ 43- ಯಲವಟ್ಟಿ ರಸ್ತೆ: ಅ.28ರ ಬೆಳಗ್ಗೆ 8 ರಿಂದ ಅ.29 ರ ಸಂಜೆ 6ರವರೆಗೆ ಎಲ್.ಸಿ.46 ಮುಖಾಂತರ ಹೊಸೊಡಿ ರಸ್ತೆ, ಯಲವಟ್ಟಿ ರಸ್ತೆ ಸಂಪರ್ಕ ಬದಲಿ ಮಾರ್ಗ. ಎಲ್‌ಸಿ 46- … Read more

‘ನಾನೂ ಸಚಿವ ಸ್ಥಾನದ ಅಕಾಂಕ್ಷಿ’, ಮಿನಿಸ್ಟರ್‌ ಪದವಿ ಬಗ್ಗೆ ಬೇಳೂರು ಏನೆಲ್ಲ ಹೇಳಿದರು?

Beluru-Gopalakrishna-Speaks-to-media-in-sagara

ಸಾಗರ: ನಾನು ಸಚಿವ (Minister) ಸ್ಥಾನದ ಪ್ರಬಲ ಆಕಾಂಕ್ಷಿ. ಸಂಪುಟ ವಿಸ್ತರಣೆ ಸಂದರ್ಭ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಡಿ ಎಂದು ಎಐಸಿಸಿ ಅಧ್ಯಕ್ಷ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈಡಿಗ ಸಮುದಾಯದ ಪ್ರಮುಖರು ನನಗೆ ಸಚಿವ ಸ್ಥಾನ ಕೊಡಿ ಎಂದು … Read more

₹49 ಲಕ್ಷ ಹೂಡಿಕೆ ಮಾಡಿದ ಮಹಿಳೆಗೆ ₹3 ಕೋಟಿ ಲಾಭ, ಆಮೇಲೆ ಕಾದಿತ್ತು ದೊಡ್ಡ ಆಘಾತ

SMS-Fraud-Shimoga-CEN-Police-Station.

ಶಿವಮೊಗ್ಗ: ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡಿದ ಹಣ ಮೂರು ಕೋಟಿ ರುಪಾಯಿ ಲಾಭಾಂಶ ಗಳಿಸಿದೆ ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ಮಹಿಳೆಯೊಬ್ಬರಿಗೆ ₹49.15 ಲಕ್ಷ ವಂಚಿಸಲಾಗಿದೆ. ವಂಚನೆ ಆಗಿದ್ದು ಹೇಗೆ? ಷೇರು ವ್ಯವಹಾರ ಕುರಿತು ಯುಟ್ಯೂಬ್‌ ವಿಡಿಯೋದ ಕೆಳಗಿದ್ದ ಲಿಂಕ್‌ ಕ್ಲಿಕ್‌ ಮಾಡಿ ವಾಟ್ಸಪ್‌ ಗ್ರೂಪ್‌ ಒಂದಕ್ಕೆ ಮಹಿಳೆ ಸೇರ್ಪಡೆಯಾಗಿದ್ದರು. ಅಲ್ಲಿ ಅವರು ಸೂಚಿಸಿದಂತೆ ಲಿಂಕ್‌ ಕ್ಲಿಕ್‌ ಮಾಡಿ ತಮ್ಮ ಹೆಸರು ಮತ್ತು ಮಾಹಿತಿ ಹಂಚಿಕೊಂಡಿದ್ದರು. ಸ್ಟಾಕ್‌ ಟ್ರೇಡಿಂಗ್‌ ಕಂಪನಿಯ ಮ್ಯಾನೇಜರ್‌ ಅಲೋಕ್‌ ಕುಮಾರ್‌ … Read more

ಹೊಂಬುಜದಲ್ಲಿ ದೇವಿಗೆ ಭತ್ತದ ಫಸಲು ಸಮರ್ಪಣೆ, ವಿಶೇಷ ಪೂಜೆ

271025-Special-Pooja-at-Hombuja-temple.webp

ರಿಪ್ಪನ್‌ಪೇಟೆ: ಹೊಂಬುಜ (Hombuja) ಜೈನಮಠದಲ್ಲಿ ಶ್ರೀ ಮಹಾವೀರ ಶಕವರ್ಷ 2552 ವಿಶ್ವಾವಸು ಸಂವತ್ಸರ ಪ್ರಯುಕ್ತ ಕ್ಷೇತ್ರದ ಕೃಷಿ ಭೂಮಿಯಲ್ಲಿ ಶಾಸ್ತೋಕ್ತವಾಗಿ ಪೂರ್ವಪರಂಪರೆಯಂತೆ ಹೊಸ ಭತ್ತದ ಪೈರು ಕಟಾವು ನೆರವೇರಿಸಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ಸಮರ್ಪಿಸಲಾಯಿತು. ಇದೆ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ‍‍ಹೊಲದಲ್ಲಿ ಬೆಳೆದ ಸಮೃದ್ಧ ಭತ್ತದ ಬೆಳೆ ಭೂತಾಯಿಯ ವರಪ್ರಸಾದ. ಭತ್ತ ಆಹಾರದ್ರವ್ಯವಾಗಿ ಬಳಸುವುದರಿಂದ ಅನ್ನಪ್ರಸಾದ ರೂಪವಾಗಿ ಶರೀರ ಪೋಷಣೆ ಆಗುತ್ತದೆ. ಭಕ್ತರಿಗೆ ನಿರಂತರ ಅನ್ನಪ್ರಸಾದ ಲಭಿಸುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಮಹಾಮಾತೆ … Read more

ಭದ್ರಾವತಿ VISLನಿಂದ 1100 ಸಸಿ ವಿತರಣೆ, ಏನಿದು ಕಾರ್ಯಕ್ರಮ?

VISL-Distributes-free-saplings-to-forest-department

ಭದ್ರಾವತಿ: ಸೈಲ್ – ವಿಐಎಸ್‌ಎಲ್ ಆಡಳಿತವು ಅರಣ್ಯ ಇಲಾಖೆ ಸಹಯೋಗದಲ್ಲಿ ‘ಹಸರೀಕರಣದೆಡೆಗೆ ವಿಐಎಎಲ್ ನಡಿಗೆ’ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿಗಳ (Saplings) ವಿತರಣೆ ಮೂಲಕ ಸಾಮಾಜಿಕ ಅರಣೀಕರಣಕ್ಕೆ ಮುಂದಾಗಿದೆ. ‘ಹಸರೀಕರಣದೆಡೆಗೆ’ ಮತ್ತು ‘ಸ್ವಚ್ಛತಾ ಹಿ ಸೇವಾ’ ಕಾರ್ಯದ ಅಂಗವಾಗಿ ಸಾಮಾಜಿಕ ಅರಣೀಕರಣದಡಿ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ಅವರಿಗೆ 1100 ಸಸಿಗಳನ್ನು ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಹಸ್ತಾಂತರಿಸಿದರು. ಕಾರ್ಖಾನೆ ಆವರಣ ಮತ್ತು ನಗರ ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ಕೊಡುಗೆ ನೀಡುವುದಲ್ಲದೆ, ಗಣರಾಜ್ಯೋತ್ಸವ, ಸೈಲ್ ದಿನಾಚರಣೆ, … Read more

ಮಾಜಿ ಸಿಎಂ ಬಂಗಾರಪ್ಪ ಜನ್ಮದಿನ, ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮ, ಎಲ್ಲೆಲ್ಲಿ ಏನೇನು ನಡೆಯಿತು?

271025-NSUI-distributes-books-to-hostel-students-Bangarappa-Birthday.webp

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಹಾಗೂ ಎನ್‌ಎಸ್‌ಯುಐ ಜಿಲ್ಲಾ ಘಟಕದಿಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಜನ್ಮದಿನ (Birthday) ಆಚರಿಸಲಾಯಿತು. ಎಲ್ಲೆಲ್ಲಿ ಏನೇನು ಕಾರ್ಯಕ್ರಮ ನಡೆಯಿತು? ನಗರದ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆ‌ರ್.ಎಂ.ಮಂಜುನಾಥ್ ಗೌಡ ಚಾಲನೆ ನೀಡಿದರು. ಮಾಜಿ ಸಂಸದ ಆಯನೂರು ಮಂಜುನಾಥ್, ಶಿಮುಲ್ ಅಧ್ಯಕ್ಷ ವಿದ್ಯಾಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮರಿಯಪ್ಪ, ನಿರ್ದೇಶಕ ಎಂ.ಶ್ರೀಕಾಂತ್‌, ಪ್ರಮುಖರಾದ ರಮೇಶ್ ಇಕ್ಕೇರಿ, ಚೈತ್ರಾ ಮೋಹನ್, … Read more

ದನಗಳಿಗೆ ಹುಲ್ಲು ತರಲು ತೋಟಕ್ಕೆ ಹೋದ ರೈತ ಮೃತದೇಹವಾಗಿ ಮನೆಗೆ, ಆಗಿದ್ದೇನು?

Police-Jeep-at-Shimoga-General-Image

ಶಿವಮೊಗ್ಗ: ಗೂಡ್ಸ್‌ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ರೈತರೊಬ್ಬರನ್ನು (Farmer) ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಶಿವಮೊಗ್ಗ – ಚಿತ್ರದುರ್ಗ ರಸ್ತೆಯ ಹೊಳೆಬೆನವಳ್ಳಿ ತಾಂಡಾ ಕ್ರಾಸ್‌ ರಸ್ತೆಯಲ್ಲಿ ಅಪಘಾತವಾಗಿದೆ. ಹೇಗಾಯ್ತು ಘಟನೆ? ಹೊಳೆಬೆನವಳ್ಳಿಯ ಯಶವಂತಪ್ಪ ದನಗಳಿಗೆ ಹುಲ್ಲು ತರಲು ಟಿವಿಎಸ್‌ ವಾಹನದಲ್ಲಿ ತೆರಳಿದ್ದರು. ಈ ಸಂದರ್ಭ ಗೂಡ್ಸ್‌ ವಾಹನ ಡಿಕ್ಕಿ ಹೊಡೆದು ತಲೆ ಭಾಗ, ಕಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ … Read more

ಶಿವಮೊಗ್ಗದಲ್ಲಿ ಕಾರು ಡಿಕ್ಕಿ, ಎರಡು ವರ್ಷದ ಮಗು ಸಾವು, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಶಿವಮೊಗ್ಗ: ಕಾರು ಡಿಕ್ಕಿ ಹೊಡೆದು ಆಟವಾಡುತ್ತಿದ್ದ ಎರಡು ವರ್ಷದ ಮಗು (Baby) ಗಂಭೀರ ಗಾಯಗೊಂಡು ಸಾವನ್ನಪ್ಪಿದೆ. ಕೋಟೆ ಗಂಗೂರು – ಸಾಗರ ರಸ್ತೆಯ ವಿರುಪಿನಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಷಣ್ಮುಖ ಎಂಬುವವರ ಮಗು ವಿನಯ್‌ (2) ಮೃತ ದುರ್ದೈವಿ. ರಸ್ತೆಯಲ್ಲಿ ಆಟವಾಡುವಾಗ ಕೋಟೆ ಗಂಗೂರು ಕಡೆಯಿಂದ ಸಾಗರ ರಸ್ತೆ ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವಿನಯ್‌ನ ಕಾಲು, ಮೈ, ಕೈಗೆ ತೀವ್ರ ಪೆಟ್ಟಾಗಿತ್ತು. ಕೂಡಲೆ ಮಗುವನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಗು … Read more

ಶಿವಮೊಗ್ಗದಲ್ಲಿ ರಂಗೋಲೆ ಹಾಕುತ್ತಿದ್ದ ಮಹಿಳೆ ಚಿನ್ನದ ಸರ ಅಪಹರಣ, ಆಗಿದ್ದೇನು?

Crime-News-General-Image

ಶಿವಮೊಗ್ಗ: ಮನೆ ಮುಂದೆ ರಂಗೋಲೆ ಹಾಕುವಾಗ ಕಳ್ಳನೊಬ್ಬ ಮಹಿಳೆಯೊಬ್ಬರ ಚಿನ್ನದ ಸರ (Gold Chain) ಕಸಿದು ಪರಾರಿಯಾಗಿದ್ದಾನೆ. ಆಲ್ಕೊಳದ ಮಂಗಳ ಮಂದಿರ ಸಮೀಪದ ಮನೆಯೊಂದರ ಮುಂದೆ ಘಟನೆ ಸಂಭವಿಸಿದೆ. ಅನಸೂಯಮ್ಮ ಎಂಬುವವರು ಮನೆ ಮುಂದೆ ರಂಗೋಲೆ ಹಾಕುತ್ತಿದ್ದಾಗ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಮನೆ ಖಾಲಿ ಇದೆಯಾ ಎಂದು ವಿಚಾರಿಸಿದ್ದ. ನಂತರ ನೀರು ತರಿಸಿಕೊಂಡು ಕುಡಿದ ಆತ ಲೋಟ ಹಿಂತಿರುಗಿಸುವಂತೆ ಮಾಡಿ, ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಸಿದಿದ್ದಾನೆ. ತಾಗು ತಂದಿದ್ದ ಬೈಕ್‌ ಹತ್ತಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. … Read more