ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ರಸ್ತೆ ಪಕ್ಕದಲ್ಲಿ ಪತ್ತೆ

Sagara-News-Update.

ಸಾಗರ: ಕಳೆದ ಕೆಲವು ದಿನದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು (Person) ಶವವಾಗಿ ಪತ್ತೆಯಾಗಿದ್ದಾರೆ. ಸಾಗರ ತಾಲೂಕು ಯಲಗಳಲೆ ಗ್ರಾಮದ ಸಮೀಪ, ರಸ್ತೆಯ ಪಕ್ಕದಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಜಂಬಗಾರು ಗ್ರಾಮದ ಹನುಮಂತಪ್ಪ (65) ಎಂದು ಗುರುತಿಸಲಾಗಿದೆ. ಖಿನ್ನತೆಯಿಂದ ಬಳಲುತ್ತಿದ್ದ ಹನುಮಂತಪ್ಪ ಅವರು ಕಾಣೆಯಾಗಿದ್ದಾರೆ ಎಂದು 15 ದಿನಗಳ ಹಿಂದೆ ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ನೀರಿನ ತೊಟ್ಟಿಯಲ್ಲಿ ಕಾಡು ಕೋಣದ ಮೃತದೇಹ ಪತ್ತೆ

ಇವತ್ತು ತೀರ್ಥಹಳ್ಳಿ ಹೊರತು ಉಳಿದೆಲ್ಲೆಡೆ ತಾಪಮಾನ ತುಸು ಇಳಿಕೆ? – ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಬಹುತೇಕ ಕಡಿಮೆಯಾಗಿದೆ. ಹವಾಮಾನ ಇಲಾಖೆ ಜಿಲ್ಲೆಗೆ ಇವತ್ತು ಯಾವುದೇ ಅಲರ್ಟ್‌ ಪ್ರಕಟಿಸಿಲ್ಲ. ಆದರೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. (Weather) ಇನ್ನು, ತೀರ್ಥಹಳ್ಳಿ ಹೊರತು ಉಳಿದೆಲ್ಲ ತಾಲೂಕುಗಳಲ್ಲಿ ತಾಪಮಾನ ತಸು ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಶಿವಮೊಗ್ಗದಲ್ಲಿ ಹೇಗಿದೆ ವಾತಾವರಣ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 31 ಡಿಗ್ರಿ … Read more

KGFಗೆ ತೆರಳಲು ಶಿವಮೊಗ್ಗದಲ್ಲಿ ಬೆಂಗಳೂರು ಬಸ್‌ ಹತ್ತಿದ ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?

161025-shimoga-ksrtc-bus-stand-general-image.webp

ಶಿವಮೊಗ್ಗ: KSRTC ಬಸ್‌ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಮತ್ತೆ ಹೆಚ್ಚಳವಾಗಿವೆ. ಮಹಿಳೆಯರ ಬ್ಯಾಗುಗಳೆ ಕಳ್ಳರ ಟಾರ್ಗೆಟ್‌ ಆಗಿವೆ. ದೀಪಾವಳಿ ಹಬ್ಬ ಮುಗಿಸಿಕೊಂಡು ಕೋಲಾರದ ಕೆಜಿಎಫ್‌ಗೆ ತೆರಳುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ, ಮೊಬೈಲ್‌ ಕಳ್ಳತನ ಮಾಡಲಾಗಿದೆ. ಭಾರ್ಗವಿ ಎಂಬುವವರು ಹೊಳೆಹೊನ್ನೂರಿನ ತಮ್ಮೂರಿನಲ್ಲಿ ದೀಪಾವಳಿ ಹಬ್ಬ ಆಚರಿಸಿ ಪತಿಯೊಂದಿಗೆ ಕೋಲಾರದ ಕೆಜಿಎಫ್‌ಗೆ ತೆರಳುತ್ತಿದ್ದರು. ಅ.23ರ ರಾತ್ರಿ ಶಿವಮೊಗ್ಗ ಕೆಎಸ್‌ಆರ್‌ಟಿಸ್‌ ಬಸ್‌ ನಿಲ್ದಾಣದಲ್ಲಿ ಬೆಂಗಳೂರು ಬಸ್‌ ಹತ್ತುವಾಗ ರಶ್‌ ಇತ್ತು. ಭಾರ್ಗವಿ ಅವರು ಬಸ್‌ ಹತ್ತಿದ ಬಳಿಕ ಅವರ ಬ್ಯಾಗ್‌ನ ಜಿಪ್‌ ತೆರದಿರುವುದು … Read more

ಇಂದು ಷಷ್ಠಿ, ಮೂಲ ನಕ್ಷತ್ರದ ದಿನ, ವಿಜಯ ಮುಹೂರ್ತ ಎಷ್ಟೊತ್ತಿಗಿದೆ? – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಸೋಮವಾರ, 27 ಅಕ್ಟೋಬರ್‌ 2025 – ಷಷ್ಠಿ ಸೂರ್ಯೋದಯ : 6.21 am ಸೂರ್ಯಾಸ್ತ : 6.02 pm ನಕ್ಷತ್ರ : ಮೂಲ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.42 ರಿಂದ 5.32ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.07 ರಿಂದ 6.21ರವರೆಗೆ ಅಭಿಜಿತ್‌ ಬೆಳಗ್ಗೆ 11.48 ರಿಂದ 12.35ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.08 ರಿಂದ 2.55ರವರಗೆ ಗೋಧೂಳಿ ಮುಹೂರ್ತ ಸಂಜೆ 6.02 ರಿಂದ 6.27ರವರೆಗೆ ರಾಹು, … Read more

ಶಿವಮೊಗ್ಗದಲ್ಲಿ ಮತ್ತೊಮ್ಮೆ ಶತಕ ಸಿಡಿಸಿದ ಕರುಣ್‌ ನಾಯರ್‌, ಈಗ ಕರ್ನಾಟಕದ ಸ್ಕೋರ್‌ ಎಷ್ಟು?

261025-Karun-Nair-Scores-century-in-Shimoga-Ranji-cricket.webp

ಶಿವಮೊಗ್ಗ: ನಗರದ ನವುಲೆ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಗೋವಾ ತಂಡಗಳ ನಡುವಿನ ರಣಜಿ ಪಂದ್ಯದಲ್ಲಿ (Ranji Cricket) ಕರುಣ್‌ ನಾಯರ್‌ ಶತಕ ಸಿಡಿಸಿದ್ದಾರೆ. ಎರಡನೇ ದಿನದ ಭೋಜನ ಅವಧಿಗು ಮುನ್ನ 101 ಓವರ್‌ಗಳಿಗೆ ಕರ್ನಾಟಕ ತಂಡ 8 ವಿಕೆಟ್‌ ಕಳೆದುಕೊಂಡು 336 ರನ್‌ ಗಳಿಸಿದೆ. ಕರ್ನಾಟಕಕ್ಕೆ ಆರಂಭಿಕ ಆಘಾತ ಶನಿವಾರ 69 ಓವರ್‌ಗೆ ಕರ್ನಾಟಕ ತಂಡ 5 ವಿಕೆಟ್‌ ಕಳೆದುಕೊಂಡು 222 ರನ್‌ ಗಳಿಸಿತ್ತು. ಇವತ್ತು ಕರುಣ್‌ ನಾಯರ್‌ ಮತ್ತು ಶ್ರೇಯಸ್‌ ಗೋಪಾಲ್‌ ಉತ್ತಮ … Read more

ಶಿವಮೊಗ್ಗದಲ್ಲಿಯು ಅ.31ರಿಂದ ಏಕತಾಯಾತ್ರೆ, ಹೇಗಿರುತ್ತೆ ಕಾರ್ಯಕ್ರಮ?

DS-Arun-Press-meet-in-Shimoga-city-about-kuvempu-university.

ಶಿವಮೊಗ್ಗ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ ಅ. 31ರಿಂದ ನವೆಂಬರ್ 26ರವರೆಗೆ ಬಿಜೆಪಿಯಿಂದ ಏಕತಾಯಾತ್ರೆ (Ekata Yathre) ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರುಣ್‌, ಏಕತಾಯಾತ್ರೆ ನಿಮಿತ್ತ ಬಿಜೆಪಿ ಜಿಲ್ಲಾ ಘಟಕದಿಂದ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ತ್ರಿವರ್ಣಧ್ವಜ ಹಿಡಿದು ಪ್ರತಿ ದಿನ 8 ರಿಂದ 10 ಕಿ.ಮೀ ನಡೆಯಲಿದ್ದಾರೆ. ಗಿಡ ನೆಟ್ಟು ಗೋಪೂಜೆ ಮಾಡಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದರು. ಏಕತಾಯಾತ್ರೆಯ ಸಮಾರೋಪದಲ್ಲಿ … Read more

ರಾತ್ರೋರಾತ್ರಿ ಲಾರಿ ಕದ್ದು ಎಸ್ಕೇಪ್‌ ಆಗಿದ್ದ ಆರೋಪಿ ಅರೆಸ್ಟ್‌

soraba-News-Update

ಸೊರಬ: ಪೆಟ್ರೋಲ್ ಬಂಕ್‌ವೊಂದರ ಮುಂಭಾಗ ನಿಲ್ಲಿಸಿದ್ದ ಲಾರಿ (Truck) ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನುಕೇರಿ ಬಡಾವಣೆ ನಿವಾಸಿ ಇಬ್ರಾಹಿಂ ಅಹಮ್ಮದ್ (26) ಬಂಧಿತ. ಸೊರಬ ಪಟ್ಟಣದ ಪೆಟ್ರೋಲ್‌ ಬಂಕ್‌ ಮುಂಭಾಗ ಸಾಗರ ಪಟ್ಟಣದ ಗಾಂಧಿನಗರ ನಿವಾಸಿ ಆರೀಫ್ ಆಹ್ಮದ್ ಎಂಬುವರಿಗೆ ಸೇರಿದ ಲಾರಿ ಕಳ್ಳತನವಾಗಿತ್ತು. ಇದರ ಸಿಸಿಟಿವಿ ವಿಡಿಯೋಗಳು ವೈರಲ್‌ ಆಗಿದ್ದವು. ಕಳ್ಳತನದ ಬಗ್ಗೆ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಪಟ್ಟಣದ ಇಬ್ರಾಹಿಂ ಅಹಮ್ಮದ್‌ನನ್ನು ಬಂಧಿಸಿ, ಸುಮಾರು ₹4.90 ಲಕ್ಷದ ಲಾರಿಯನ್ನು ವಶಕ್ಕೆ … Read more

ಶಿವಮೊಗ್ಗ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ, ಇವತ್ತು ಮಳೆಯಾಗುತ್ತಾ? – ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಇವತ್ತು ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಕ್ಕೆ ಯಾವುದೆ ಅಲರ್ಟ್ ಇಲ್ಲ. ಶಿವಮೊಗ್ಗ ಜಿಲ್ಲೆಯು ಈ ವ್ಯಾಪ್ತಿಗೆ ಒಳಪಡಲಿದೆ. (Weather) ಶಿವಮೊಗ್ಗ ಜಿಲ್ಲೆಯಲ್ಲಿಯು ಮಳೆ ತಗ್ಗಿದೆ. ಮತ್ತೆ ಬಿಸಿಲಿನ ಅಬ್ಬರ ಹೆಚ್ಚಳ ಆಗುವ ಸಾಧ್ಯತೆ ಇದೆ. ಕಳೆದ ಎರಡು ದಿನಕ್ಕೆ ಹೋಲಿಕೆ ಮಾಡಿದರೆ ವಿವಿಧೆಡೆ ತಾಪಮಾನ ಎರಡು ಡಿಗ್ರಿವರೆಗೆ ಹೆಚ್ಚಳವಾಗಿದೆ. ಇನ್ನು, ಇವತ್ತು ಜಿಲ್ಲೆಯ ವಿವಿಧೆಡೆ ಕೆಲ ಸಮಯ ಸಾಧಾರಣ ಮಳೆಯಾಗುವ ಅಂದಾಜಿದೆ. ಶಿವಮೊಗ್ಗದಲ್ಲಿ ಹೇಗಿದೆ ವಾತಾವರಣ? ಶಿವಮೊಗ್ಗ, … Read more

ನೀರಿನ ತೊಟ್ಟಿಯಲ್ಲಿ ಕಾಡು ಕೋಣದ ಮೃತದೇಹ ಪತ್ತೆ

THIRTHAHALLI-NEWS-UPDATE.

ತೀರ್ಥಹಳ್ಳಿ: ತೋಟದ ಮನೆಯೊಂದರ ಸಮೀಪ ನೀರಿನ ತೊಟ್ಟಿಗೆ ಬಿದ್ದು ಕಾಡುಕೋಣ (Bison) ಮೃತಪಟ್ಟಿದೆ. ಶನಿವಾರ ಪ್ರಕರಣ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿ ತಾಲೂಕು ಉಂಟೂರುಕಟ್ಟೆ ಕೈಮರ ಸಮೀಪದ ದಂಡಿನಕುಡಿಗೆಯಲ್ಲಿ ಎರಡು ದಿನದ ಹಿಂದೆ ಕಾಡುಕೋಣ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ. ರವಿರಾಜ ಹೆಬ್ಬಾರ್ ಎಂಬ ರೈತರ ದಂಡಿನಕುಡಿಗೆ ತೋಟದ ಮನೆ ಸಮೀಪದಲ್ಲಿರುವ ನೀರಿನ ತೊಟ್ಟಿಯಲ್ಲಿ ಘಟನೆ ಸಂಭವಿಸಿದೆ. ಶನಿವಾರ ವಿಷಯ ಗೊತ್ತಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ … Read more

ಇವತ್ತು ಜ್ಯೇಷ್ಠ ನಕ್ಷತ್ರ, ಪಂಚಮಿ ದಿನ, ಭಾನುವಾರದ ರಾಹು ಕಾಲ ಎಷ್ಟೊತ್ತಿಗೆ? – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಭಾನುವಾರ, 26 ಅಕ್ಟೋಬರ್‌ 2025 – ಪಂಚಮಿ ಸೂರ್ಯೋದಯ : 6.21 am ಸೂರ್ಯಾಸ್ತ : 6.02 pm ನಕ್ಷತ್ರ : ಜ್ಯೇಷ್ಠ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.42 ರಿಂದ 5.32ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.07 ರಿಂದ 6.21ರವರೆಗೆ ಅಭಿಜಿತ್‌ ಬೆಳಗ್ಗೆ 11.48 ರಿಂದ 12.35ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.08 ರಿಂದ 2.55ರವರಗೆ ಗೋಧೂಳಿ ಮುಹೂರ್ತ ಸಂಜೆ 6.02 ರಿಂದ 6.27ರವರೆಗೆ ರಾಹು, … Read more