ಶಿವಮೊಗ್ಗದಲ್ಲಿ ರಣಜಿ ಕ್ರಿಕೆಟ್‌, ಮೊದಲ ದಿನದ ಆಟ ಮುಕ್ತಾಯ, ಕರ್ನಾಟಕದ ಸ್ಕೋರ್‌ ಎಷ್ಟು? ಇಲ್ಲಿದೆ ಡಿಟೇಲ್ಸ್‌

Karnataka-Goa-Ranji-cricket-match-in-Shimoga-Navule-KSCA-ground

ಶಿವಮೊಗ್ಗ: ನವುಲೆಯ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ವರ್ಸಸ್‌ ಗೋವಾ ರಣಜಿ ಕ್ರಿಕೆಟ್‌ (Cricket) ಟೆಸ್ಟ್‌ ಪಂದ್ಯಾವಳಿಯ ಮೊದಲ ದಿನದ ಆಟ ಮುಕ್ತಾಯವಾಗಿದೆ. ಕರ್ನಾಟಕ ತಂಡ 5 ವಿಕೆಟ್‌ ಕಳೆದುಕೊಂಡು 222 ರನ್‌ ಗಳಿಸಿದೆ. ಗೋವಾ ತಂಡದ ಪರ ಅರ್ಜುನ್‌ ತೆಂಡುಲ್ಕರ್‌ ಮೂರು ವಿಕೆಟ್‌ ಪಡೆದು ಬೌಲಿಂಗ್‌ ವಿಭಾಗದಲ್ಲಿ ಗಮನ ಸೆಳೆದರು. ಯಾರೆಲ್ಲ ಎಷ್ಟು ರನ್‌ ಗಳಿಸಿದರು? ಕರ್ನಾಟಕ ತಂಡದ ನಿಕಿನ್‌ ಜೋಸ್‌ 3, ಮಯಾಂಕ್‌ ಅಗರ್‌ವಾಲ್‌ 28, ಕೆ.ಎಲ್.ಶ್ರೀಜಿತ್‌ 0, ಸ್ಮರಣ್‌.ಆರ್‌ 3, ಅಭಿನವ್‌ ಮನೋಹರ್‌ … Read more

ಪೊಲೀಸ್‌ ಕಂಡು ಎಸ್ಕೇಪ್‌ ಆಗಲು ಯತ್ನ, ಹಿಡಿದು ವಿಚಾರಿಸಿದಾಗ ಹೊರಬಿತ್ತು ಸಾಲು ಸಾಲು ಕೇಸ್‌ಗಳ ವಿಷಯ

Soraba-Police-nab-temple-theif

ಸೊರಬ: ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 7 ಕಡೆ ದೇವಸ್ಥಾನಗಳಲ್ಲಿನ ಕಳ್ಳತನ (Temple) ಪ್ರಕರಣ ಬಯಲಿಗೆ ಬಂದಿದೆ. ಈತನಿಂದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸವಳಂಗದ ಅಯ್ಯಪ್ಪ ನಗರದ ಸಂದೀಪ.ಕೆ (24) ಬಂಧಿತ. ಸೊರಬದ ಪುರಸಭೆ ವೃತ್ತದಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರನ್ನು ಕಂಡು ಸಂದೀಪ ಪರಾರಿಯಾಗಲು ಯತ್ನಿಸಿದ. ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸೊರಬ ಪೊಲೀಸ್‌ ಠಾಣೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ವಿವಿಧೆಡೆ … Read more

ಮಾಜಿ MLAಯನ್ನು ಕೆಳಗೆ ಉರುಳಿಸಿದ ಹೋರಿ, ವಿಡಿಯೋ ವೈರಲ್

251025-Hori-Hits-former-MLA-at-Shikaripura.webp

ಶಿಕಾರಿಪುರ: ಹೋರಿ ಹಬ್ಬ ವೀಕ್ಷಿಸಲು ತೆರಳಿದ್ದ ಮಾಜಿ ಶಾಸಕ (Former MLA) ಮಹಲಿಂಗಪ್ಪ ಅವರಿಗೆ ಹೋರಿ ತಿವಿದಿದೆ. ಅದೃಷ್ಟವಶಾತ್‌ ಅವರು ಪಾರಾಗಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ. ಮಾಜಿ ಶಾಸಕ ಮಹಾಲಿಂಗಪ್ಪ ಶಿಕಾರಿಪುರದ ಬಳ್ಳಿಗಾವಿಯ ಹೋರಿ ಹಬ್ಬಕ್ಕೆ ತೆರಳಿದ್ದರು. ಹೋರಿಯೊಂದು ಜನರನ್ನು ಓಡಿಸಿಕೊಂಡು ಬಂದಿತ್ತು. ಕೂಡಲೆ ಮಹಾಲಿಂಗಪ್ಪ ಅವರು ಮನೆಯೊಂದರ ಬಾಗಿಲಿನ ಬಳಿ ತೆರಳಿ ನಿಂತಿದ್ದರು. ಅವರತ್ತ ನುಗ್ಗಿದ ಹೋರಿ ಕೊಂಬಿನಲ್ಲಿ ಮಹಾಲಿಂಗಪ್ಪ ಅವರ ಬಟ್ಟೆಗೆ ಚುಚ್ಚಿ ಮೇಲೆ ಎತ್ತಿ ಕೆಳಗೆ ಬೀಳಿಸಿತ್ತು. ಅದೃಷ್ಟವಶಾತ್‌ ಮಹಾಲಿಂಗಪ್ಪ ಪಾರಾಗಿದ್ದಾರೆ. … Read more

ಭದ್ರಾವತಿಯ ಕೆಲವೆಡೆ ಕುಡಿಯುವ ನೀರಿನ ಬಣ್ಣ ವ್ಯತ್ಯಾಸ, ಯಾಕೆ? ಪೌರಾಯುಕ್ತರು ಹೇಳಿದ್ದೇನು?

Bhadravathi-Nagarasabhe-File-Image-New

ಭದ್ರಾವತಿ: ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ನೀರಿನ (Drinking Water) ಬಣ್ಣದಲ್ಲಿ ವ್ಯತ್ಯಾಸವಾಗಿದೆ. ಈ ನೀರನ್ನು ಜನರು ಒಂದು ದಿನ ಬಿಟ್ಟು ಮರುದಿನ ಬಳಸಬಹುದು ಅಥವಾ ನೀರನ್ನು ಬಿಸಿ ಮಾಡಿ ಬಳಸಬಹುದು. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಪೌರಾಯುಕ್ತ ಎನ್.ಕೆ ಹೇಮಂತ್ ತಿಳಿಸಿದ್ದಾರೆ. ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ತುರ್ತು ಸಭೆಯಲ್ಲಿ ಪೌರಾಯುಕ್ತ ಹೇಮಂತ್‌ ಮಾಹಿತಿ ನೀಡಿದರು. ಮಳೆಯಿಂದಾಗಿ ಭದ್ರಾ ಜಲಾಶಯದಿಂದ ನದಿಗೆ ಹರಿಯುತ್ತಿರುವ ನೀರಿನ ಜೊತೆಗೆ ಚರಂಡಿ, … Read more

ವಾಹನ ಸವಾರರಿಗೆ ಗುಲಾಬಿ ಹೂವು ನೀಡಿದ ಪೊಲೀಸರು

Police-distributes-roses-to-bike-riders-wearing-helmets-in-Sagara

ಸಾಗರ: ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸಾಗರ ನಗರ ವ್ಯಾಪ್ತಿಯಲ್ಲಿ ಪೊಲೀಸರು ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ (Rose) ಹೂ ನೀಡುವ ಮೂಲಕ ಗೌರವಿಸಿದ್ದಾರೆ. ಇನ್ನು ಮುಂದೆ ಎಲ್ಲಾ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಈ ನಿಟ್ಟಿನಲ್ಲಿ ಇಲಾಖೆ ಜಾಗೃತಿ ಮೂಡಿಸಲು ಮುಂದಾಗಿದೆ. ಇನ್ನು ಮುಂದೆ ವಾಹನ ಸವಾರರು ಹೆಲ್ಮೆಟ್ ಧರಿಸದೆ ಇದ್ದಲ್ಲಿ ದಂಡ ವಿಧಿಸಲಾಗುವುದು ಎಂದು ನಗರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಪುಲ್ಲಯ್ಯ ರಾಥೋಡ್ ತಿಳಿಸಿದ್ದಾರೆ. ಹೆಲ್ಮೆಟ್ ಧರಿಸದ … Read more

ನಿರುಪಯುಕ್ತ ವಾಹನಗಳ ಹರಾಜು, ಪೊಲೀಸ್‌ ಇಲಾಖೆ ಪ್ರಕಟಣೆ, ಎಷ್ಟು ವಾಹನಗಳಿವೆ?

SHIMOGA-NEWS-UPDATE

ಶಿವಮೊಗ್ಗ: ಎಸ್‌ಪಿ ಕಚೇರಿಯಲ್ಲಿ ವಾರಸುದಾರರಿಲ್ಲದ 21 ನಿರುಪಯುಕ್ತ ವಾಹನಗಳನ್ನು (Vehicles) ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. ಅ.27ರಂದು ಬೆಳಿಗ್ಗೆ 11 ಗಂಟೆಗೆ ಎಂ.ಎಸ್.ಟಿ.ಸಿ. ತಂತ್ರಾಂಶದ ಮೂಲಕ ಆನ್‌ಲೈನ್ ಮೂಲಕ ಹರಾಜು ಹಾಕಲಾಗುವುದು. ಹೆಚ್ಚಿನ ಮಾಹಿತಿಗಾಗಿ ಡಿ.ಎಸ್.ಪಿ. ಡಿ.ಎ.ಆರ್. ಶಿವಮೊಗ್ಗ ದೂರವಾಣಿ ಸಂಖ್ಯೆ: 08182-261412 ಸಂಪರ್ಕಿಸುವಂತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ವಿದ್ಯಾನಗರ ಫ್ಲೈ ಓವರ್‌ ಕೆಳಗೆ ‘ಚಿನ್ನದ ನಾಣ್ಯʼಗಳಿರುವ ಚೀಲ ಕೊಟ್ಟು ಗಡಿಬಿಡಿಯಲ್ಲಿ ಹೋದ ಉಡುಪಿಯ ವ್ಯಕ್ತಿ Vehicles

ಮಾಚೇನಹಳ್ಳಿಯಲ್ಲಿ ಜಾಗೃತಿ ಕಾರ್ಯಾಗಾರ, ಯಾರೆಲ್ಲ ಭಾಗವಹಿಸ್ತಾರೆ?

Shimoga-News-update

ಶಿವಮೊಗ್ಗ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆ.ಸಿ.ಟಿ.ಯು ಹಾಗೂ ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಅ.28 ರಂದು ಒಂದು ದಿನದ ಜಾಗೃತಿ ಕಾರ್ಯಾಗಾರ (WorkShop) ಹಮ್ಮಿಕೊಳ್ಳಲಾಗಿದೆ. ಎಂ.ಎಸ್.ಎಂ.ಇಗಳ ಕಾರ್ಯಕ್ಷಮತೆ ಹೆಚ್ಚಳ, ರಫ್ತು ಉತ್ತೇಜನ ಮತ್ತು ಸುಗಮಗೊಳಿಸುವಿಕೆ ಬಗ್ಗೆ ಮಾಚೇನಹಳ್ಳಿಯ ಶಾಂತಲಾ ಸ್ಪೆರೋಕ್ಯಾಸ್ಟ್ ಲರ್ನಿಂಗ್ ಸೆಂಟರ್‌ನಲ್ಲಿ ಕಾರ್ಯಾಗಾರ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಉದ್ಘಾಟಿಸಲಿದ್ದಾರೆ. ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕೈಗಾರಿಕಾ … Read more

ವಿದ್ಯಾನಗರ ಫ್ಲೈ ಓವರ್‌ ಕೆಳಗೆ ‘ಚಿನ್ನದ ನಾಣ್ಯʼಗಳಿರುವ ಚೀಲ ಕೊಟ್ಟು ಗಡಿಬಿಡಿಯಲ್ಲಿ ಹೋದ ಉಡುಪಿಯ ವ್ಯಕ್ತಿ

Police-Jeep-in-Shimoga-city

ಶಿವಮೊಗ್ಗ: ವಿದ್ಯಾನಗರ ಫ್ಲೈಓವರ್‌ನ ಕೆಳಗೆ ನಕಲಿ ಚಿನ್ನದ ನಾಣ್ಯಗಳನ್ನು (Gold Coins) ನೀಡಿ ತೆಲಂಗಾಣ ರಾಜ್ಯದ ವ್ಯಕ್ತಿಯೊಬ್ಬರಿಗೆ ₹4 ಲಕ್ಷ ವಂಚಿಸಲಾಗಿದೆ. ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಪಸ್ಪುಲಾ ವಂಶಿ ಎಂಬುವವರು ವಂಚನೆಗೊಳಗಾಗಿದ್ದಾರೆ. ಪಸ್ಪುಲಾ ವಂಶಿಗೆ ಉಡುಪಿಯ ಸುರೇಶ್‌ ಎಂಬಾತನ ಪರಿಚಯವಾಗಿತ್ತು. ಕೆಲವು ತಿಂಗಳ ಹಿಂದೆ ಸುರೇಶ ಕರೆ ಮಾಡಿ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ತಿಳಿಸಿದ್ದ. ಚಿತ್ರದುರ್ಗಕ್ಕೆ ಕರೆಯಿಸಿಕೊಂಡು ಎರಡು ನಾಣ್ಯಗಳನ್ನು ಕೊಟ್ಟು ಕಳುಹಿಸಿದ್ದ. ತಮ್ಮೂರಿಗೆ ಕೊಂಡೊಯ್ದು ಪರೀಕ್ಷಿಸಿದಾಗ ಆ ಎರಡು ನಾಣ್ಯಗಳು ಚಿನ್ನದ್ದು ಎಂದು … Read more

ಸ್ಪರ್ಧೆ ವೇಳೆ ಬಸ್‌ಗೆ ಡಿಕ್ಕಿಯಾಗಿ ಹೋರಿ ಸಾವು, ಹೇಗಾಯ್ತು ಘಟನೆ?

Bus-collides-with-Hori-at-Shikaripura.

ಶಿಕಾರಿಪುರ: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಓಡಿಬಂದ ಹೋರಿಯೊಂದು ಚಲಿಸುತ್ತಿದ್ದ ಬಸ್‌ಗೆ (Bus) ಗುದ್ದಿ ಸ್ಥಳದಲ್ಲೇ ಸಾವನ್ನಪ್ಪಿದೆ. ಪಟ್ಟಣದ ದೊಡ್ಡಕೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬದ ವೇಳೆ ಓಡಿಬಂದ ಹೋರಿಯೊಂದು ಚಲಿಸುತ್ತಿದ್ದ ಬಸ್‌ಗೆ ಗುದ್ದಿ ಸ್ಥಳದಲ್ಲೇ ಮೃತಪಟ್ಟಿದೆ. ಪಟ್ಟಣದ ವಿನಾಯಕ ನಗರದ ಹೋರಿಯೊಂದು ಅಖಾಡದಿಂದ ತಪ್ಪಿಸಿಕೊಂಡು ಬರುವಾಗ ಶಿವಮೊಗ್ಗ ರಸ್ತೆಯ ಕಾಮಧೇನು ಪೆಟ್ರೋಲ್ ಬಂಕ್ ಬಳಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆಯಿತು. ಹೋರಿಯನ್ನು ಕ್ರೇನ್ ಮೂಲಕ ಸಾಗಿಸಲಾಯಿತು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ಶಿವಮೊಗ್ಗ ರಣಜಿ, ಮಯಾಂಕ್‌ ಅಗರ್‌ವಾಲ್‌ ಔಟ್‌, ಗೋವಾ ತಂಡಕ್ಕೆ ಅರ್ಜುನ್‌ ತೆಂಡುಲ್ಕರ್‌ ಬಲ

Karnataka-Goa-Ranji-match-in-Shimoga-Navule-Cricket-stadium

ಶಿವಮೊಗ್ಗ: ನವುಲೆಯ ಕೆಎಸ್‌ಸಿಎ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ (Ranji) ಪಂದ್ಯಾವಳಿಯ ಮೊದಲ ಸೆಷನ್‌ ಮುಕ್ತಾಯಗೊಂಡಿದೆ. ಮಧ್ಯಾಹ್ನದ ವೇಳೆಗೆ ಕರ್ನಾಟಕ ತಂಡ ಎರಡು ವಿಕೆಟ್‌ ನಷ್ಟಕ್ಕೆ 60 ರನ್‌ ಗಳಿಸಿದೆ. ಅರ್ಜುನ್‌ ತೆಂಡುಲ್ಕರ್‌ ಎರಡು ವಿಕೆಟ್‌ ಪಡೆದು ಗೋವಾ ತಂಡಕ್ಕೆ ಬಲ ತುಂಬಿದ್ದಾರೆ. ಕರ್ನಾಟಕ ತಂಡದ ಕ್ಯಾಪ್ಟರ್‌ ಮಯಾಂಕ್‌ ಅಗರ್‌ವಾಲ್‌ ಮತ್ತು ನಿಕಿನ್‌ ಜೋಸ್‌ ಅರಂಭಿಕ ಜೋಡಿ ಬ್ಯಾಟಿಂಗ್‌ ಆರಂಭಿಸಿತು. ಅರ್ಜುನ್‌ ತೆಂಡುಲ್ಕರ್‌ ಬೌಲಿಂಗ್‌ನಲ್ಲಿ ಮಂಥನ್‌ಗೆ ಕ್ಯಾಚ್‌ ಕೊಟ್ಟು ನಿಕಿನ್‌ (3 ರನ್‌) ಜೋಸ್‌ ಅಂಗಣದಿಂದ ಹೊರ … Read more