BREAKING NEWS : ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆ ದಿನಾಂಕ ಪ್ರಕಟ

Kote-Marikamba-Jathre.

ಶಿವಮೊಗ್ಗ: ನಗರದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಜಾತ್ರೆಯ (Marikamba Jathre) ದಿನಾಂಕ ನಿಗದಿಯಾಗಿದೆ. ಐದು ದಿನ ಜಾತ್ರೆ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ತಿಳಿಸಿದೆ. 2026ರ ಫೆಬ್ರವರಿ 24 ರಿಂದ 28ರವರೆಗೆ ಜಾತ್ರೆ ನಡೆಯಲಿದೆ. ಈ ಸಂಬಂಧ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ » ಶಿವಮೊಗ್ಗಕ್ಕೆ ಬಿಳಿ ಹುಲಿ ಆಗಮನ, ತ್ಯಾವರೆಕೊಪ್ಪದಲ್ಲಿ 6 ನೂತನ ಸದಸ್ಯರ ದರ್ಶನ, ಇನ್ನು ಯಾವೆಲ್ಲ ಪ್ರಾಣಿ ಬಂದಿವೆ?

ಶಿವಮೊಗ್ಗಕ್ಕೆ ಬಿಳಿ ಹುಲಿ ಆಗಮನ, ತ್ಯಾವರೆಕೊಪ್ಪದಲ್ಲಿ 6 ನೂತನ ಸದಸ್ಯರ ದರ್ಶನ, ಇನ್ನು ಯಾವೆಲ್ಲ ಪ್ರಾಣಿ ಬಂದಿವೆ?

031025-White-Tiger-in-Shimoga-Tyavarekoppa-Lion-and-Tiger-Safari.webp

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ (Zoo) ನೂತನ ಸದಸ್ಯರ ಆಗಮನವಾಗಿದೆ. ಶಿವಮೊಗ್ಗಕ್ಕೆ ಆಗಮಿಸಿದಾಗಿನಿಂದ ಕ್ವಾರಂಟೈನ್‌ನಲ್ಲಿದ್ದ ಪ್ರಾಣಿಗಳು ಈಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೃಗಾಲಯದ ಅಧಿಕಾರಿಗಳು ಫೋಟೊ ರಿಲೀಸ್‌ ಮಾಡಿದ್ದಾರೆ. ಇದೇ ಮೊದಲ ಬಾರಿ ಶಿವಮೊಗ್ಗದ ಮೃಗಾಲಯಕ್ಕೆ ಬಿಳಿ ಹುಲಿ ಆಗಮನವಾಗಿದೆ. ಇನ್ನು, ಇದೇ ಮೊದಲ ಬಾರಿ ಹೊರ ರಾಜ್ಯದಿಂದ ಹುಲಿ, ಸಿಂಹಗಳನ್ನು ತರಿಸಲಾಗಿದೆ. ಯಾವೆಲ್ಲ ಪ್ರಾಣಿಗಳು ಬಂದಿವೆ? ಇಲ್ಲಿದೆ ಫೋಟೊ ಮಾಹಿತಿ » ಬಿಳಿ ಹುಲಿ ಶಿವಮೊಗ್ಗ ಮೃಗಾಲಯಕ್ಕೆ ಇದೆ ಮೊದಲ ಬಾರಿ ಬಿಳಿ … Read more

ಶಿವಮೊಗ್ಗದಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ಅಂಬುಛೇದನ, ರಾವಣ ದಹನ, ಹೇಗಿತ್ತು ಕಾರ್ಯಕ್ರಮ?

021025-Banni-event-at-Shimoga-Freedom-park.webp

ದಸರಾ ಸುದ್ದಿ: ವಿಜಯ ದಶಮಿಯಂದು (Vijayadashami) ಶಿವಮೊಗ್ಗದಲ್ಲಿ ಅಂಬುಛೇದನ ಮಾಡಲಾಯಿತು. ಫ್ರೀಡಂ ಪಾರ್ಕ್‌ನಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ತಹಶೀಲ್ದಾರ್‌ ವಿ.ಎಸ್.ರಾಜೀವ್‌ ಅಂಬುಛೇದನ ಮಾಡಿದರು. ಇದೆ ವೇಳೆ ರಾವಣ ದಹನ, ಸಿಡಿಮದ್ದು ಪ್ರದರ್ಶನ ನಡೆಯಿತು. ಇಲ್ಲಿವೆ ಅಂಬುಛೇದನ ಕಾರ್ಯಕ್ರಮದ ಫೋಟೊಗಳು ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ವೈಭವದ ಮೆರವಣಿಗೆ, ಇಲ್ಲಿದೆ 15 ಫೋಟೊಗಳು Vijayadashami

ಶಿವಮೊಗ್ಗದಲ್ಲಿ ದಸರಾ, ದೀಪಾವಳಿಗೆ ಶೇ.20ರಷ್ಟು ರಿಯಾಯಿತಿ, ಏನೆಲ್ಲ ವಸ್ತುಗಳಿಗೆ ಡಿಸ್ಕೌಂಟ್‌?

Shimoga-News-update

ಶಿವಮೊಗ್ಗ: ನಗರದ ನೆಹರು ರಸ್ತೆಯ ಬಸವಸದನ ಕಾಂಪ್ಲೆಕ್ಸ್‌ನಲ್ಲಿರುವ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ (ಲಿಡ್ಕರ್) ಅಪ್ಪಟ ಚರ್ಮ ವಸ್ತುಗಳ ಮೇಲೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಸೆ.29 ರಿಂದ ಅ.18ರವರೆಗೆ ಶೇ. 20% ರಷ್ಟು ರಿಯಾಯಿತಿ (discount) ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಈ ಅವಕಾಶವನ್ನು ಉಪಯೋಗ ಪಡೆದುಕೊಳ್ಳುವಂತೆ ಲಿಡ್ಕರ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ: 8904510699 ನ್ನು ಸಂಪರ್ಕಿಸುವುದು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಕಾಂತಾರ … Read more

ಶಿವಮೊಗ್ಗದಲ್ಲಿ ಕಾಂತಾರ 1ಗೆ ಅದ್ಧೂರಿ ರೆಸ್ಪಾನ್ಸ್‌, ಪ್ರೀಮಿಯರ್‌ ಶೋಗಳು ಹೌಸ್‌ಫುಲ್‌, ಏನಂದ್ರು ಜನ?

021025-Kantara-1-premier-show-in-shimoga-mallikarjuna-theater.webp Movie Show

ಶಿವಮೊಗ್ಗ: ರಿಷಬ್‌ ಶೆಟ್ಟಿ ನಟನೆ, ನಿರ್ದೇಶನ ಮಾಡಿರುವ ಕಾಂತಾರ 1 ಸಿನಿಮಾಗೆ (Movie) ಶಿವಮೊಗ್ಗದಲ್ಲಿ ಪ್ರೇಕ್ಷಕರಿಂದ ಅದ್ಧೂರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೇಡ್‌ ಪ್ರೀಮಿಯರ್‌ ಶೋಗಳು ಹೌಸ್‌ಫುಲ್‌ ಅಗಿದ್ದು, ಇಂದು ಬೆಳಗ್ಗೆಯಿಂದಲೆ ಚಿತ್ರಮಂದಿರಕ್ಕೆ ಕುಟುಂಬ ಸಹಿತ ಜನರು ಆಗಮಿಸುತ್ತಿದ್ದಾರೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರ ಮತ್ತು ಭಾರತ್‌ ಸೀನಿಮಾಸ್‌ನಲ್ಲಿ ಕಾಂತಾರ 1 ಸಿನಿಮಾ ಪ್ರದರ್ಶನವಾಗುತ್ತಿದೆ. ಅರಂಭಿಕ ಪ್ರದರ್ಶನಗಳೆ ಸಂಪೂರ್ಣ ಭರ್ತಿಯಾಗಿವೆ. ಪೇಡ್‌ ಪ್ರೀಮಿಯರ್‌ ಹೌಸ್‌ಫುಲ್‌ ಶಿವಮೊಗ್ಗದಲ್ಲಿಯು ಕಾಂತಾರ 1 ಪೇಡ್‌ ಪ್ರೀಮಿಯರ್‌ ಶೋ ಆಯೋಜಿಸಲಾಗಿತ್ತು. ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಅ.1ರಂದು ರಾತ್ರಿ … Read more

ಶಿವಮೊಗ್ಗ ಸಿಟಿ ಜಗಮಗ, ಎಲ್ಲ ರಸ್ತೆಗಳಲ್ಲು ದೀಪಾಲಂಕಾರ, ಎಲ್ಲೆಲ್ಲಿ ಹೇಗಿದೆ? ಇಲ್ಲಿವೆ ಫೋಟೊಗಳು

021025-Light-decoration-in-shimoga-city.webp

ದಸರಾ ಸುದ್ದಿ: ನವರಾತ್ರಿ ಅಂಗವಾಗಿ ಶಿವಮೊಗ್ಗ ನಗರದಲ್ಲಿ ವಿದ್ಯುತ್‌ ದೀಪಾಲಂಕಾರ (Light Decoration) ಮಾಡಲಾಗಿದೆ. ಎಲ್ಲ ಪ್ರಮುಖ ರಸ್ತೆಗಳು ಜಗಮಗಿಸುತ್ತಿವೆ. ಶಿವಮೊಗ್ಗ ನಗರದಲ್ಲಿ ಅಂಬಾರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕು ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಇದರ ಹೊರತಾಗಿ ಬಿ.ಹೆಚ್‌.ರಸ್ತೆ, ಬಾಲರಾಜ ಅರಸ್‌ ರಸ್ತೆ, ಸವಳಂಗ ರೋಡ್‌, ತುಂಗಾ ನದಿ ಸೇತುವೆಗಳು ಸೇರಿದಂತೆ ಹಲವೆಡೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಇಲ್ಲಿವೆ ಫೋಟೊಗಳು. ಇದನ್ನೂ ಓದಿ » ಇವತ್ತಿನ ಪಂಚಾಂಗ | 2 ಅಕ್ಟೋಬರ್‌ 2025 | ಇವತ್ತಿನ ಶುಭ ಮುಹೂರ್ತ ಎಷ್ಟೊತ್ತಿಗೆ? … Read more

ಶಿವಮೊಗ್ಗದಲ್ಲಿ ಆಯುಧ ಪೂಜೆ ಮುಗಿದ್ಮೇಲೆ ಟ್ಯಾಂಕರ್‌ ಸಿಂಗಾರ ಆರಂಭಿಸಿದ ಪಾಲಿಕೆ

011025-flower-decoration-for-tanker-in-Shimoga-freedom-park.webp

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸೈನಿಕರ ಅಸಮಾಧಾನದ ಬಳಿಕ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಯುದ್ದ ಟ್ಯಾಂಕರ್‌ಗೆ (Tanker) ರಾತ್ರೋರಾತ್ರಿ ಹೂವಿನ ಅಲಂಕಾರ ಮಾಡಿ ಆಯುಧ ಪೂಜೆ ನಡೆಸಲಾಗಿದೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಶಿವಮೊಗ್ಗದ ಫ್ರೀಡಂ ಪಾರ್ಕ್‌ ಆವರಣದಲ್ಲಿ ಟಿ-55 ಯುದ್ದ ಟ್ಯಾಂಕರ್‌ ಸ್ಥಾಪಿಸಲಾಗಿದೆ. ಇಂದು ಆಯುಧ ಪೂಜೆ ಸಂದರ್ಭ ಈ ಟ್ಯಾಂಕರ್‌ಗೆ ಮಹಾನಗರ ಪಾಲಿಕೆ ವತಿಯಿಂದ ಪೂಜೆ ನೆರವೇರಿಸದೆ ದಸರಾ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಇದು ಮಾಜಿ ಸೈನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ವಾಟ್ಸಪ್‌ ಸೇರಿದಂತೆ … Read more

ಇವತ್ತಿನ ಪಂಚಾಂಗ | 1 ಅಕ್ಟೋಬರ್‌ 2025 | ಆಯುಧ ಪೂಜೆಯಂದು ಯಾವ್ಯಾವ ಮುಹೂರ್ತ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಬುಧವಾರ, 1 ಅಕ್ಟೋಬರ್‌ 2025 – ನವಮಿ – ಆಯುಧ ಪೂಜೆ ಸೂರ್ಯೋದಯ : 6.17 am ಸೂರ್ಯಾಸ್ತ : 6.17 pm ನಕ್ಷತ್ರ : ಉತ್ತರಾಷಾಢ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.17ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.17 ರಿಂದ 3.05ರವರಗೆ ಗೋಧೂಳಿ ಮುಹೂರ್ತ ಸಂಜೆ 6.17 ರಿಂದ 6.41ರವರೆಗೆ ರಾಹು ಕಾಲ … Read more

ಗಂಡ ಹೆಂಡತಿ ಮಲಗಿದ್ದಾಗ ರಾತ್ರಿ ಮಂಚದ ಕೆಳಗಿಂದ ಎದ್ದು ಬಂದ ‘ಫ್ರಾಕ್‌ ಧರಿಸಿದ್ದ ಪುರುಷ’

Crime-News-General-Image

ತೀರ್ಥಹಳ್ಳಿ: ಕೊಠಡಿಯಲ್ಲಿ ಪತಿಯೊಂದಿಗೆ ತಂಗಿದ್ದ ಮಹಿಳೆಗೆ ಮಂಚದ ಕೆಳಗೆ ಮಲಗಿದ್ದ ಪುರುಷನೊಬ್ಬ ನಡುರಾತ್ರಿ ಮೈಕೈ ಮುಟ್ಟಿ ಆತಂಕ ಮೂಡಿಸಿದ್ದಾನೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (Frock) ಬೆಂಗಳೂರಿನ ದಂಪತಿ ಈಚೆಗೆ ತೀರ್ಥಹಳ್ಳಿಯಲ್ಲಿ ತಂಗಿದ್ದರು. ಕೊಠಡಿಯಲ್ಲಿ ಮಲಗಿದ್ದಾಗ ರಾತ್ರಿ 12.30ರ ಹೊತ್ತಿಗೆ ಮಂಚದ ಕೆಳಗಿನಿಂದ ವ್ಯಕ್ತಿಯೊಬ್ಬ ಮಹಿಳೆಯ ಮೈಕೈ ಮುಟ್ಟಿದ ಅನುಭವವಾಗಿದೆ. ಮಹಿಳೆ ತನ್ನ ಪತಿಗೆ ವಿಷಯ ತಿಳಿಸಿದ್ದು, ಅವರು ಪರಿಶೀಲಿಸಿದರು. ಆಗ ಮಂಚದ ಅಡಿಯಿಂದ ಎದ್ದು ಬಂದ ವ್ಯಕ್ತಿಯೊಬ್ಬ ಕಿಟಕಿಯಿಂದ ಹೊರಗೆ ಹೋಗಿದ್ದಾನೆ … Read more

ದಸರಾ ದೀಪಾಲಂಕಾರಕ್ಕೆ ಬಾಲಕ ಸಾವು, ಏನಿದು ಕೇಸ್‌? ಹೇಗಾಯ್ತು ಘಟನೆ?

270925-hadonahalli-village-Samarth.webp

ಶಿವಮೊಗ್ಗ: ನವರಾತ್ರಿ ಹಬ್ಬಕ್ಕೆ ದೇವಸ್ಥಾನಕ್ಕೆ ಹಾಕಿದ್ದ ವಿದ್ಯುತ್‌ ದೀಪಾಲಂಕಾರದಲ್ಲಿ (Electric Lighting) ವಿದ್ಯುತ್‌ ಪ್ರವಹಿಸಿ ಬಾಲಕನೋರ್ವ ಮೃತಪಟ್ಟಿದ್ದಾನೆ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಘಟನೆ ಸಂಭವಿಸಿದೆ. ಹಾಡೋನಹಳ್ಳಿ ಗ್ರಾಮದ ಮಹೇಶ್‌ ರಾವ್‌, ಆಶಾ ದಂಪತಿ ಪುತ್ರ ಸಮರ್ಥ (14) ಮೃತ ದುರ್ದೈವಿ. ಇಲ್ಲಿನ ಅಂಬಾ ಭವಾನಿ ದೇವಸ್ಥಾನಕ್ಕೆ ದಸರಾ ಅಂಗವಾಗಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ದೇವಸ್ಥಾನದ ಬಳಿ ತೆರಳಿದ್ದ ಸಮರ್ಥ ಗೇಟ್‌ ಮುಟ್ಟಿದ್ದಾಗ ವಿದ್ಯುತ್‌ ತಗುಲಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ಸೀರಿಯಲ್‌ ಸೆಟ್‌ನ … Read more