ಆಯನೂರು ಬಳಿ ಜಮೀನಿನಲ್ಲಿ ಕರೆಂಟ್‌ ಶಾಕ್‌, ತಾಯಿ ಚೇತರಿಕೆ, ಮಗನ ಸ್ಥಿತಿ ಗಂಭೀರ

Ayanur Graphics

ಶಿವಮೊಗ್ಗ: ಜಮೀನಿನಲ್ಲಿ ಹಾದು ಹೋಗಿರುವ ಹೈಟೆನ್ಷನ್‌ ವಯರ್‌ (Wire) ತಗುಲಿ ವಿದ್ಯುತ್‌ ಸ್ಪರ್ಶಿಸಿ ತಾಯಿ ಮತ್ತು ಮಗ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆಯನೂರು ಕೋಟೆ ವಾಸಿ ತಸ್ಮಿಯಾ ಮತ್ತು ಮಗ ಮೊಹಮ್ಮದ್‌ ಅನಿಸ್‌ ಉಲ್ಲಾ ಗಾಯಗೊಂಡಿದ್ದಾರೆ. ನಾಗರಬಾವಿ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ನಡೆದು ಹೋಗುವಾಗ ಘಟನೆ ಸಂಭವಿಸಿದೆ. ಜಮೀನಿನ ಮಧ್ಯದಲ್ಲಿ ಹಾದು ಹೋಗಿರುವ ಹೈಟೆನ್ಷನ್‌ ವಯರ್‌ ನೆಲಕ್ಕೆ ತಾಗುವಂತಿದ್ದು, ಮೊಹಮ್ಮದ್‌ ಅನಿಸ್‌ ಉಲ್ಲಾ ಅವರಿಗೆ ತಗುಲಿ ಶಾಕ್‌ ಹೊಡೆದಿದೆ. ಅವರನ್ನು … Read more

ಶಿವಮೊಗ್ಗದ ಹಲವು ಕಡೆ ಸೆ.16ರಂದು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

power cut mescom ELECTRICITY

ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಸೆ.16 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಪಿಯರ್‌ಲೈಟ್, ಪೇಪರ್ ಪ್ಯಾಕೇಜ್, ಕೆ.ಆರ್. ಕುಡಿಯುವ ನೀರಿನ ಸ್ಥಾವರ, ಮಂಡ್ಲಿ ಕೈಗಾರಿಕಾ ಪ್ರದೇಶ, ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಗಾಂಧಿಬಜಾರ್, ಬುದ್ಧನಗರ, ಆರ್.ಎಂ.ಎಲ್.ನಗರ, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ, ನ್ಯೂಮಂಡ್ಲಿ, … Read more

ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ಕುಡಿಯುವ ನೀರು ಪೂರೈಕೆ ವ್ಯತ್ಯಯ, ಯಾವಾಗ?

Drinking-Water-Tap

ಶಿವಮೊಗ್ಗ: ಮೆಸ್ಕಾಂ ಇಲಾಖೆಯಿಂದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ವ್ಯತ್ಯಯವಾಗುತ್ತಿದೆ. ಆದ್ದರಿಂದ ಸೆ.16 ಮತ್ತು 17 ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿನ (Drinking Water) ಸರಬರಾಜು ವ್ಯತ್ಯವಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಭದ್ರಾ ಜಲಾಶಯಕ್ಕೆ ಡಿ.ಕೆ.ಶಿವಕುಮಾರ್‌ ಬಾಗಿನ, ಪ್ರವಾಸಿ ಮಂದಿರ ಉದ್ಘಾಟನೆ, ಡಿಸಿಎಂ ಏನೆಲ್ಲ ಹೇಳಿದರು?

ಗೋಪಿ ಸರ್ಕಲ್‌ನಿಂದ ರಸ್ತೆ ಉದ್ದಕ್ಕೂ ವಾಹನಗಳಿಗೆ ಡಿಕ್ಕಿ ಹೊಡೆಯುತ್ತ ಸಾಗಿದ ಕಾರು, ಏನಿದು ಕೇಸ್?

Car Mishap at Mahaveera Circle in Shimoga

ಶಿವಮೊಗ್ಗ: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಕಾರನ್ನು (CAR) ಯದ್ವತದ್ವ ಚಲಾಯಿಸಿ ಸರಣಿ ಅಪಘಾತ ಮಾಡಿದ್ದಾನೆ. ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರಿನ ಮುಂಭಾಗ ಜಖಂ ಆಗಿದೆ. ಘಟನೆ ಸಂಬಂಧ ಹೊನ್ನಾಳಿಯ ಕುಮಾರ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ಪರೀಕ್ಷೆಗೆ ಒಳಪಡಿಸಿದ್ದಾರೆ. ರಸ್ತೆ ಉದ್ದಕ್ಕೂ ವಾಹನಗಳಿಗೆ ಡಿಕ್ಕಿ ಗೋಪಿ ವೃತ್ತದ ಅಂಬಿಕಾ ಬುಕ್‌ ಸ್ಟೋರ್‌ ಸಮೀಪ ಮೊದಲು ವಾಹನವೊಂದಕ್ಕೆ ಡಿಕ್ಕಿ ಹೊಡೆದ ಕಾರು ಬಾಲರಾಜ ಅರಸ್‌ ರಸ್ತೆಯಲ್ಲಿ ಒಟ್ಟು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಮಹಾವೀರ ವೃತ್ತದಲ್ಲಿ … Read more

ಎಗ್‌ ರೈಸ್‌ ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್‌ ನಾಪತ್ತೆ, ಎಲ್ಲಿ?

crime name image

ಶಿವಮೊಗ್ಗ: ಎಗ್‌ ರೈಸ್‌ ಅಂಗಡಿ ಮುಂದೆ ನಿಲ್ಲಿಸಿದ್ದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike) ಕಳ್ಳತನವಾಗಿದೆ. ನಗರದ ಕರ್ನಾಟಕ ಸಂಘ ಸಮೀಪ ಬೈಕ್‌ ನಿಲ್ಲಿಸಿದ್ದು ಸ್ವಲ್ಪ ಸಮಯದ ಬಳಿಕ ಹಿಂತಿರುಗಿ ಬಂದ ಬೈಕ್‌ ಇರಲಿಲ್ಲ ಎಂದು ಬೈಕ್‌ ಮಾಲೀಕ ಗುರುಮೂರ್ತಿ ಆರೋಪಿಸಿದ್ದಾರೆ. ಗುರುಮೂರ್ತಿ ಮಧ್ಯಾಹ್ನ 1 ಗಂಟೆಗೆ ಬೈಕ್‌ ನಿಲ್ಲಿಸಿ ಹೋಗಿದ್ದರು. ಸಂಜೆ 4 ಗಂಟೆಗೆ ವಾಪಸ್‌ ಬಂದಾಗ ಬೈಕ್‌ ಇರಲಿಲ್ಲ ಎಂದು ಆಪಾದಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ … Read more

ಶಿವಮೊಗ್ಗದಲ್ಲಿ ಮುಗಿಬಿದ್ದು ಫೈನ್‌ ಕಟ್ಟಿದ ಜನ, ಕೊನೆ ದಿನ ಸಂಗ್ರಹವಾಯ್ತು ₹50 ಲಕ್ಷ ದಂಡ, ಒಟ್ಟು ಎಷ್ಟಾಗಿದೆ?

130925 traffic fine in Shimoga city

ಶಿವಮೊಗ್ಗ: ರಿಯಾಯತಿ ದರದಲ್ಲಿ ಟ್ರಾಫಿಕ್‌ ಫೈನ್‌ (Traffic Fine) ಕಟ್ಟಲು ಕೊನೆಯ ದಿನವಾದ್ದರಿಂದ ಶಿವಮೊಗ್ಗದಲ್ಲಿ ಶುಕ್ರವಾರ ಜನರು ಕ್ಯೂನಲ್ಲಿ ನಿಂತು ತಡರಾತ್ರಿವರೆಗೆ ದಂಡ ಕಟ್ಟಿದ್ದಾರೆ. ಶಿವಮೊಗ್ಗ ಸಿಟಿಯ ವಿವಿಧೆಡೆ ಬೆಳಗ್ಗೆಯಿಂದಲೇ ಸಂಚಾರ ಠಾಣೆ ಪೊಲೀಸರ ಬಳಿ ಹೋಗಿ ಜನರು ದಂಡ ಪಾವತಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದಂಡ ಕಟ್ಟಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಹಾಗಾಗಿ ಬಹುತೇಕ ಕಡೆಗಳಲ್ಲಿ ಪೊಲೀಸರು ಜನರನ್ನು ಕ್ಯೂನಲ್ಲಿ ನಿಲ್ಲಿಸಿದ್ದರು. ರಸ್ತೆಗಳು, ಸರ್ಕಲ್‌ಗಳಲ್ಲಿ ಜನರು ಕ್ಯೂನಲ್ಲಿ ನಿಂತು ಶೇ.50ರ ರಿಯಾಯಿತಿ ದರದಲ್ಲಿ … Read more

ಶಿವಮೊಗ್ಗ ಜಿಲ್ಲೆಗೆ ಮತ್ತೆ ಮಳೆ ಮುನ್ಸೂಚನೆ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಧಗೆ ಹೆಚ್ಚಾಗಿದೆ. ಇದರಿಂದ ಉಷ್ಣಾಂಶವು ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇವತ್ತೂ ತಾಪಮಾನ ಹೆಚ್ಚಿರುವ ಸಧ್ಯತೆ ಇದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯು ಇದೆ ಎಂದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. (Weather) ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. … Read more

ಶುಭೋದಯ ಶಿವಮೊಗ್ಗ | 13 ಸೆಪ್ಟೆಂಬರ್ 2025 | ಶ್ರವಣಕುಮಾರನ ಕುರಿತು ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಅಂಧ ದಂಪತಿಗೆ ತೀರ್ಥಯಾತ್ರೆ ಮಾಡಬೇಕು ಎಂಬ ಹಂಬಲ. ಇದನ್ನು ಅರಿತ ಅವರ ಪುತ್ರ ಕಾವಡಿಯೊಂದನ್ನು ಸಿದ್ದಪಡಿಸಿ ಒಂದು ಕಡೆ ತಂದೆ, ಮತ್ತೊಂದು ಕಡೆ ತಾಯಿಯನ್ನು ಕೂರಿಸಿಕೊಂಡು ತೀರ್ಥಯಾತ್ರೆ ಕೈಗೊಂಡ. ಪೋಷಕರಿಗಾಗಿ ಆತ ಅನೇಕ ಕಷ್ಟಗಳನ್ನು ಅನುಭವಿಸಿದ. ದೂರದೂರದವರೆಗೆ ನಡೆದ. ಸತ್ಯವನ್ನು ಹೇಳಿ, ಧರ್ಮವನ್ನು ಅನುಸರಿಸಿ, ತಂದೆ, ತಾಯಿಯನ್ನೇ ದೇವರೆಂದು ಭಾವಿಸಿದ್ದ. ಆ ಪುತ್ರನ ಹೆಸರು ಅಜರಾಮರವಾಯಿತು. ಆತನ ಹೆಸರು ಶ್ರವಣ ಕುಮಾರ. ಇದನ್ನೂ ಓದಿ » ಗಂಟಲಲ್ಲಿ … Read more

ದಿನ ಪಂಚಾಂಗ | 13 ಸೆಪ್ಟೆಂಬರ್ 2025 | ಇವತ್ತು ಷಷ್ಠಿ, ಕೃತ್ತಿಕ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಶನಿವಾರ, 13 ಸೆಪ್ಟೆಂಬರ್ 2025‌ – ಷಷ್ಠಿ ಸೂರ್ಯೋದಯ : 6.16 am ಸೂರ್ಯಾಸ್ತ : 6.31 pm ನಕ್ಷತ್ರ : ಕೃತ್ತಿಕ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.43 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.16ರವರೆಗೆ ಅಭಿಜಿತ್‌ ಮಧ್ಯಾಹ್ನ 11.59 ರಿಂದ 12.48ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.26 ರಿಂದ 3.15ರವರಗೆ ಗೋಧೂಳಿ ಮುಹೂರ್ತ ಸಂಜೆ 6.31 ರಿಂದ 6.55ರವರೆಗೆ … Read more

ಗಂಟಲಲ್ಲಿ ಸಿಲುಕಿದ ಚಿಕನ್‌ ಮೂಳೆ, ಆಪರೇಷನ್‌ ಮಾಡದೆ ಪಾರು ಮಾಡಿದ ಶಿವಮೊಗ್ಗದ ಡಾಕ್ಟರ್‌ಗಳು, ಹೇಗದು?

Shimoga-NH-Hospital-Doctors-and-staff

ಶಿವಮೊಗ್ಗ: ಚಿಕನ್‌ ಮೂಳೆ (Chicken Bone) ಗಂಟಲಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಗೆ ತಲುಪಿದ್ದ 70 ವರ್ಷದ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಶಿವಮೊಗ್ಗದ ವೈದ್ಯರು ಅಪಾಯದಿಂದ ಪಾರು ಮಾಡಿದ್ದಾರೆ. ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಈಗ ಸಂಪೂರ್ಣ ಗುಣವಾಗಿದ್ದಾರೆ. ಗಂಟಲಲ್ಲಿ ಸಿಲುಕಿದ್ದ ಚಿಕನ್‌ ಮೂಳೆ ಶಿವಮೊಗ್ಗದ ವ್ಯಕ್ತಿಯೊಬ್ಬರು (ವೈದ್ಯಕೀಯ ಕಾರಣಕ್ಕೆ ಹೆಸರು ಗೌಪ್ಯ) ಊಟ ಮಾಡುವಾಗ ಚಿಕನ್‌ ಮೂಳೆ ಗಂಟಲಿನಲ್ಲಿ ಸಿಲುಕಿತ್ತು. ಇದರಿಂದ ತೀವ್ರ ಉಸಿರಾಟದ ಸಮಸ್ಯೆಯಾಗಿತ್ತು. ಕೂಡಲೆ ಅವರನ್ನು ಸಹ್ಯಾದ್ರಿ ನಾರಾಯಣ ಮಲ್ಟಿ … Read more