ಗಾಡಿಕೊಪ್ಪದಲ್ಲಿ ತಡರಾತ್ರಿ ಕಾರ್ಯಾಚರಣೆ, 28 ಕೆ.ಜಿ ತೂಕದ ಹೆಬ್ಬಾವು ರಕ್ಷಣೆ
SHIMOGA, 13 AUGUST 2024 : ಗಾಡಿಕೊಪ್ಪ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವನ್ನು (Python) ಸ್ನೇಕ್ ಕಿರಣ್ ರಕ್ಷಿಸಿದ್ದಾರೆ. ಇಲ್ಲಿನ ಸರ್ಕರಿ ಶಾಲೆ ಹಿಂಭಾಗದ ರೋಟರಿ ಭವನದ ಸಮೀಪ ರಸ್ತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ತಡರಾತ್ರಿ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ರಕ್ಷಿಸಿದ್ದಾರೆ. 10 ಅಡಿ ಉದ್ದ, ಸುಮಾರು 28 ಕೆ.ಜಿ ತೂಗುತ್ತಿತ್ತು ಎಂದು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಹೆಬ್ಬಾವನ್ನು ಕಾಡಿಗೆ ಬಿಡಲಾಯಿತು. ಇದನ್ನೂ ಓದಿ ⇒ ಶಿವಮೊಗ್ಗ … Read more