ಆನವಟ್ಟಿ ಪೊಲೀಸರ ಕಾರ್ಯಾಚರಣೆ ಪಿಕಪ್‌ ವಾಹನ ವಶಕ್ಕೆ, ಡ್ರೈವರ್‌ ಅರೆಸ್ಟ್‌, ಕಾರಣವೇನು?

soraba anavatti graphics

ಸೊರಬ: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಆನವಟ್ಟಿ ಪಟ್ಟಣದಲ್ಲಿ ಪೊಲೀಸರು ಕಾರ್ಯಾಚರಣೆ (Police Raid) ನಡೆಸಿ ವಾಹವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ » ರಸ್ತೆಯಲ್ಲಿ ದಿಢೀರ್‌ ಎದುರಿಗೆ ಬಂದ ಮುಸುಕುಧಾರಿ, ಖಾರದ ಪುಡಿ ಎರಚಿ, ಗೃಹಿಣಿ ತಲೆಗೆ ರಾಡ್‌ನಿಂದ ಹೊಡೆತ ಮಹೀಂದ್ರಾ ಮ್ಯಾಕ್ಸ್ ಗೂಡ್ಸ್ ವಾಹನದಲ್ಲಿ ಆರು ಹಸುಗಳನ್ನು ಕುತ್ತಿಗೆ ಹಾಗೂ ಕಾಲುಗಳನ್ನು ಕಟ್ಟಿ ತುಂಬಲಾಗಿತ್ತು. ಈ ಸಂಬಂಧ ವಾಹನದ ಚಾಲಕ ಜಟ್ಟೆಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. … Read more

ಶಿವಮೊಗ್ಗ ಕೋರ್ಟ್‌ನಿಂದ ಹೊರ ಬಂದ ಆಟೋ ಡ್ರೈವರ್‌ಗೆ ಕಾದಿತ್ತು ಆಘಾತ

Shivamogga-Court-Balaraja-Urs-Road

ಶಿವಮೊಗ್ಗ: ಕೋರ್ಟ್‌ನಲ್ಲಿ ಕೆಲಸ ಮುಗಿಸಿ ಹೊರ ಬರುವಷ್ಟರಲ್ಲಿ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike) ಕಳ್ಳತನವಾಗಿದೆ ಎಂದು ಆರೋಪಿಸಿ ಆಟೋ ಡ್ರೈವರ್‌ ಮಹೊಮದ್‌ ಖಾಸಿಮ್‌ ದೂರು ನೀಡಿದ್ದಾರೆ. ಮೊಹಮದ್‌ ಖಾಸಿಮ್‌ ಅವರು ತಮ್ಮ ಮಾವನ ಸ್ಪ್ಲೆಂಡರ್‌ ಪ್ಲಸ್‌ ಬೈಕಿನಲ್ಲಿ ಕೋರ್ಟ್‌ಗೆ ಬಂದಿದ್ದರು. ಗೇಟ್‌ ಪಕ್ಕದಲ್ಲಿ ಬೈಕ್‌ ನಿಲ್ಲಿಸಿ ಕೋರ್ಟ್‌ ಒಳಗೆ ಹೋಗಿದ್ದರು. ಮಧ್ಯಾಹ್ನ ಕೆಲಸ ಮುಗಿಸಿ ಹರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more