ಬ್ಯೂಟಿ ಪಾರ್ಲರ್‌ ಬಾಗಿಲು ತೆಗೆದಾಗ ಮಾಲೀಕರಿಗೆ ಶಾಕ್‌, ಸಿಸಿಟಿವಿ ಚೆಕ್‌ ಮಾಡಿದಾಗ ಕಾದಿತ್ತು ಆಘಾತ

Police-Jeep-in-Shimoga-city

ಶಿವಮೊಗ್ಗ : ಬ್ಯೂಟಿ ಪಾರ್ಲರ್‌ನ ಇಂಟೀರಿಯರ್‌ (Interior Design) ಕೆಲಸಕ್ಕೆ ಬಂದವರು ರಾತ್ರೋರಾತ್ರಿ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಮರುದಿನ ಬೆಳಗ್ಗೆ ಬ್ಯೂಟಿ ಪಾರ್ಲರ್‌ ಮಾಲೀಕರು ಅಲ್ಲಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿನೋಬನಗರ 60 ಅಡಿ ರಸ್ತೆಯ ಶುಭಮಂಗಳ ಕಲ್ಯಾಣ ಮಂಟಪದ ಬಳಿ ನೇತ್ರಾವತಿ ಎಂಬುವವರು ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದು, ಅದರ ಇಂಟೀರಿಯರ್‌ ಡಿಸೈನಿಂಗ್‌ ಕೆಲಸ ಮಾಡಿಸುತ್ತಿದ್ದರು. ತಮಿಳುನಾಡಿನಿಂದ ಬಂದಿದ್ದ ಐವರು ಇಲ್ಲಿ ಕೆಲಸ ಮಾಡಿಕೊಂಡು, ರಾತ್ರಿ ವೇಳೆ ಬ್ಯೂಟಿ ಪಾರ್ಲರ್‌ನಲ್ಲಿಯೆ ಉಳಿದುಕೊಳ್ಳುತ್ತಿದ್ದರು. ಸಿಸಿಟಿವಿ ಪರಿಶೀಲಿಸಿದಾಗ … Read more

ಶಿವಮೊಗ್ಗದಲ್ಲಿ ಬೈಕ್‌ ಖರೀದಿಗೆ ಬಂದವನು ಟ್ರಯಲ್‌ ನೋಡಲು ಕೊಂಡೊಯ್ದ, ಹಿಂತಿರುಗಲೇ ಇಲ್ಲ, ಹೇಗಾಯ್ತು ಘಟನೆ?

crime name image

ಶಿವಮೊಗ್ಗ : ಖರೀದಿಸುವವನಂತೆ ಬಂದು ಬೈಕ್‌ ಟ್ರಯಲ್‌ (Trail) ನೋಡಲು ಕೊಂಡೊಯ್ದವನು ಹಿಂತಿರುಗಿಲ್ಲ ಎಂದು ಆರೋಪಿಸಿ ಬೈಕ್‌ ಮಾಲೀಕ ದೂರು ನೀಡಿದ್ದಾನೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸನಗರದ ಪ್ರಮೋದ್‌ ಭಟ್‌ ಎಂಬುವವರು ತಮ್ಮ ಪಲ್ಸರ್‌ ಬೈಕ್‌ ಮಾರಾಟ ಮಾಡಲು ನಿರ್ಧರಿಸಿ ಫೇಸ್‌ಬುಕ್‌ನಲ್ಲಿ ವಿವರ ಪ್ರಕಟಿಸಿದ್ದರು. ಬೆಂಗಳೂರು ವಾಸಿ ನವೀನ್‌ ಎಂಬಾತ ಇದಕ್ಕೆ ರಿಪ್ಲೆ ಮಾಡಿ, ಬೈಕ್‌ನ ವಿವರ ಪಡೆದುಕೊಂಡಿದ್ದ. ಮಾ.30ರಂದು ಶಿವಮೊಗ್ಗಕ್ಕೆ ಬರುವುದಾಗಿ ಆತ ತಿಳಿಸಿದ್ದರಿಂದ ಪ್ರಮೋದ್‌ ಭಟ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ … Read more

ಶಿವಮೊಗ್ಗದ ಜೆಡಿಎಸ್‌ ಮುಖಂಡ ಸಿದ್ದಪ್ಪ ವಿಧಿವಶ

jDS-Leader-Siddappa-No-more

ಶಿವಮೊಗ್ಗ : ಜೆಡಿಎಸ್‌ ಮುಖಂಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದಪ್ಪ (62) ನಿಧನರಾಗಿದ್ದಾರೆ (No More). ಅನಾರೋಗ್ಯದ ಹಿನ್ನೆಲೆ ಬೆಳಗಿನ ಜಾವ ಸಿದ್ದಪ್ಪ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸಿದ್ದಪ್ಪ ಬಹುಕಾಲದಿಂದ ಜೆಡಿಎಸ್‌ ಪಕ್ಷದಲ್ಲಿ ಸಕ್ರಿಯವಾಗಿದ್ದರು. ಜಿಲ್ಲಾ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಸದ್ಯ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಸಿದ್ದಪ್ಪ ನಿಧನಕ್ಕೆ ಪಕ್ಷದ ಪ್ರಮುಖರು, ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್‌ … Read more

ಸರ್ಕಾರಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ

Minister-Madhu-Bangarappa-works-for-school-compound-at-huruli-in-soraba

ಸೊರಬ : ಶಾಲೆ ಕಾಂಪೌಂಡ್‌ ನಿರ್ಮಾಣ ಕಾರ್ಯಕ್ಕೆ ಶಿಕ್ಷಣ ಸಚಿವರೆ ಗುದ್ದಲಿ, ಪಿಕಾಸಿ ಹಿಡಿದು, ಮಣ್ಣು ಹೊತ್ತು ಹಾಕಿ ಕೂಲಿ ಕಾರ್ಮಿಕನಂತೆ (Wage Worker) ಕೆಲಸ ಮಾಡಿದ್ದಾರೆ. ಸಚಿವ ಮಧು ಬಂಗಾರಪ್ಪ ಶ್ರಮದಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೊರಬ ತಾಲೂಕು ಹುರುಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಮತ್ತು ಅಡುಗೆ ಮನೆ ನಿರ್ಮಾಣ ಕಾರ್ಯಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿದರು. ಗುದ್ದಲಿ, ಪಿಕಾಸಿ, ಬುಟ್ಟಿ ಹಿಡಿದ ಮಿನಿಸ್ಟರ್‌ ಗುದ್ದಲಿ ಪೂಜೆ … Read more

ಶಿವಮೊಗ್ಗದಲ್ಲಿ ಸದ್ಯಕ್ಕೆ ತಂಪು ತಂಪು ವಾತಾವರಣ, ಇವತ್ತೂ ಮಳೆಯಾಗುತ್ತಾ?

WEATHER-REPORT-SHIMOGA-

ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಶನಿವಾರ ಉತ್ತಮ ಮಳೆಯಾಗಿದೆ. ಇದರಿಂದ ವಾತಾವರಣ ತಂಪಾಗಿದೆ. ಆದರೆ ತಾಪಮಾನ ಇಳಿಕೆಯಾಗಿಲ್ಲ. ಇವತ್ತೂ ಜಿಲ್ಲೆಯ ವಿವಿಧೆಡೆ ಮಳೆಯಾಗುವ ಮುನ್ಸೂಚನೆ ಇದೆ. (Weather Report). ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 33 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.  ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ … Read more

ಉದ್ಯೋಗ ಖಾತ್ರಿ ಯೋಜನೆ ಅಡಿ ಇಬ್ಬರು ಸಚಿವರಿಂದ ಶ್ರಮದಾನಕ್ಕೆ ದಿನಾಂಕ ಫಿಕ್ಸ್‌, ಎಲ್ಲಿ?

Madhu-Bangarappa-Shramadana-in-Soraba

ಸೊರಬ : ಉದ್ಯೋಗ ಖಾತ್ರಿ ಯೋಜನೆ ಅಡಿ ಶಾಲೆಯ ಕಾಂಪೌಂಡ್‌ ಮತ್ತು ಅಡುಗೆ ಮನೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಏ.7ರಂದು ಬೆಳಗ್ಗೆ 8ಕ್ಕೆ ಸೊರಬ ತಾಲೂಕು ಹುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (School) ಕಾರ್ಯಕ್ರಮ ನಡೆಯಲಿದೆ. ಅಂದು ಇಬ್ಬರು ಸಚಿವರು ಶ್ರಮದಾನ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಶಾಲೆಯ ಕಾಂಪೌಂಡ್‌ ನಿರ್ಮಾಣ ಮತ್ತು ಅಡುಗೆ ಮನೆ ನಿರ್ಮಾಣ ಕಾಮಗಾರಿಗೆ ಶ್ರಮದಾನ ಮಾಡಲಿದ್ದಾರೆ. ಕಾಂಗ್ರೆಸ್‌ ಪಕ್ಷದ … Read more

ಆರೋಪ ಸಾಬೀತು, ಭದ್ರಾವತಿಯ ಯುವಕನಿಗೆ 10 ವರ್ಷ ಜೈಲು, 1 ಲಕ್ಷ ರೂ. ದಂಡ, ಏನಿದು ಕೇಸ್‌?

Shivamogga-Court-Balaraja-Urs-Road

ಶಿವಮೊಗ್ಗ : ಓಮ್ನಿ ಕಾರಿನಲ್ಲಿ ಗಾಂಜಾ ಸಾಗಿಸಿದ್ದ ಆರೋಪ ಸಾಬೀತಾದ ಹಿನ್ನೆಲೆ ಭದ್ರಾವತಿಯ ಕಲ್ಲಹಳ್ಳಿಯ ಮುರುಗ ಎಂಬಾತನಿಗೆ ಶಿವಮೊಗ್ಗ ನ್ಯಾಯಾಲಯ (Court) ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಆಂಧ್ರದಿಂದ ತರುತ್ತಿದ್ದ ಗಾಂಜಾ ಮರುಗ ಎಂಬಾತ ಆಂಧ್ರದ ರಾಜಮಂಡ್ರಿಯಿಂದ 50 ಕೆ.ಜಿ 430 ಗ್ರಾಂ ತೂಕದ ಗಾಂಜಾವನ್ನು ಓಮ್ನಿ ಕಾರಿನಲ್ಲಿ ತರಲಾಗುತ್ತಿತ್ತು. 33 ಪ್ಯಾಕೆಟ್‌ ಮಾಡಿ ವ್ಯಾನ್‌ನ ಡಿಕ್ಕಿ ಮತ್ತು ತುಂಡಾದ ಪೆಟ್ರೋಲ್‌ ಟ್ಯಾಂಕಿನಲ್ಲಿ ತುಂಬಿಕೊಂಡು ತಂದಿದ್ದ. ಖಚಿತ ಮಾಹಿತಿ ಮೇರೆಗೆ ಸೊರಬ ವಲಯ ಅಬಕಾರಿ ನಿರೀಕ್ಷಕರ … Read more

ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಕುರಿತು ಷಡಾಕ್ಷರಿ ಮಹತ್ವದ ಹೇಳಿಕೆ, ಏನದು?

CS-Shadakshari-in-Shimoga-Nehru-stadium

ಶಿವಮೊಗ್ಗ : ಸಂಬಳ ಪ್ಯಾಕೇಜ್‌ ಯೋಜನೆಗೆ ಸರ್ಕಾರಿ ನೌಕರರು ಶೀಘ್ರ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ವೇತನ (Salary) ತಡೆ ಹಿಡಿಯುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಎಚ್ಚರಿಸಿದರು. ನೆಹರು ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಸ್.ಷಡಾಕ್ಷರಿ, ವೇತನ ಪ್ಯಾಕೇಜ್‌ ಯೋಜನೆಯಿಂದ ನೌಕರರಿಗೆ ಅನೇಕ ಅನುಕೂಲವಿದೆ. ಆದ್ದರಿಂದ ಈ ತಿಂಗಳ ಅಂತ್ಯದೊಳಗೆ ಎಲ್ಲರು ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸದ ನೌಕರರ … Read more

ಶಿವಮೊಗ್ಗ ಸಿಟಿಯಲ್ಲಿ ಜೋರು ಮಳೆ, ತೀರ್ಥಹಳ್ಳಿಯಲ್ಲು ವರ್ಷಧಾರೆ, ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಳೆಯಾಗ್ತಿದೆ?

rain-in-shimoga-city-near-vidyanagara-flyover

ಶಿವಮೊಗ್ಗ : ಸಂಜೆ ವೇಳೆಗೆ ಶಿವಮೊಗ್ಗ ನಗರದ ವಿವಿಧೆಡೆ ಜೋರು ಮಳೆ (Rain) ಸುರಿಯುತ್ತಿದೆ. ಇದರಿಂದ ಸಿಟಿಯಲ್ಲಿ ವಾತಾವರಣ ತುಸು ತಂಪಾಗಿದೆ. ಶಿವಮೊಗ್ಗ ಸಿಟಿಯಲ್ಲಿ ದಟ್ಟ ಮೋಡ ಆವರಿಸಿದ್ದು, ವಿವಿಧ ಬಡಾವಣೆಯಲ್ಲಿ ಜೋರು ಮಳೆಯಾಗುತ್ತಿದೆ. ಕಳೆದ ಕಲೆವು ದಿನದಿಂದ ಶಿವಮೊಗ್ಗದಲ್ಲಿ ಮೋಡ ಆವರಿಸಿದ್ದರು ಮಳೆಯಾಗಿರಲಿಲ್ಲ. ಮೂರು ದಿನದ ಹಿಂದ ರಾತ್ರಿ ವೇಳೆ ಹಲವು ಕಡೆ ಮಳೆಯಾಗಿತ್ತು (Rain). ಇನ್ನು, ತೀರ್ಥಹಳ್ಳಿ ತಾಲೂಕಿನ ಹಲವು ಕಡೆ ಇವತ್ತು ಮಳೆಯಾಗುತ್ತಿದೆ. ಭಾಂಡ್ಯ ಕುಕ್ಕೆ, ತೀರ್ಥಹಳ್ಳಿ, ಬೆಜ್ಜವಳ್ಳಿ, ಸಾಲ್ಗಡಿ, ತೀರ್ಥಮತ್ತೂರು, ಹೊನ್ನೇತಾಳು, … Read more

ಪ್ರಿಯಾ ಹೆಸರಿನ ಗ್ರೂಪ್‌ ಸೇರಿದ್ದ ಶಿವಮೊಗ್ಗದ ಯುವಕನಿಗೆ ಸ್ವಲ್ಪ ದಿನದ ಬಳಿಕ ಕಾದಿತ್ತು ಬಿಗ್‌ ಶಾಕ್‌, ಆಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ : ಆನ್‌ಲೈನ್‌ ಜಾಬ್‌ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬನಿಗೆ 6.43 ಲಕ್ಷ ರೂ. ವಂಚಿಸಲಾಗಿದೆ. ಆನ್‌ಲೈನ್‌ ಜಾಬ್‌ (Online Job) ಎಂದು ವಾಟ್ಸಪ್‌ಗೆ ಬಂದ ಲಿಂಕ್‌ ಕ್ಲಿಕ್‌ ಮಾಡಿದಾಗ ಟೆಲಿಗ್ರಾಂನಲ್ಲಿ ಪ್ರಿಯಾ ಎಂಬ ಗ್ರೂಪ್‌ಗೆ ಯುವಕನ ನಂಬರ್‌ ಜಾಯಿನ್‌ ಮಾಡಲಾಗಿತ್ತು. ಬಳಿಕ ಯುವಕನ ವಿಳಾಸ ಸೇರಿದಂತೆ ಅಗತ್ಯ ಮಾಹಿತಿ ಪಡೆದು ರಿವ್ಯು ಮಾಡಿದರೆ ಸಂಬಳ ನೀಡುವುದಾಗಿ ನಂಬಿಸಲಾಯಿತು. ಆರಂಭದಲ್ಲಿ ಒಂದೆರಡು ಸ್ಕ್ರೀನ್‌ ಶಾಟ್‌ ಕಳುಹಿಸಿ ರಿವ್ಯು ಪಡೆದುಕೊಂಡರು. 100 ರೂ. ಅನ್ನು ಯುವಕನ ಬ್ಯಾಂಕ್‌ ಖಾತೆಗೆ … Read more