ಶಿವಮೊಗ್ಗ ಸಿಟಿಯಲ್ಲಿ ಬೆಳಗ್ಗೆಯಿಂದ ಮೋಡ, ಮಧ್ಯಾಹ್ನದ ಹೊತ್ತಿಗೆ ಮಳೆ ಅಬ್ಬರ

Lady-holding-umbrella-and-walking-on-the-road-during-rainfall

ಶಿವಮೊಗ್ಗ: ಕಳೆದ ಎರಡು ದಿನದಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆ (Rain) ಶಿವಮೊಗ್ಗ ಸಿಟಿಯಲ್ಲಿ ಪುನಃ ಪ್ರತ್ಯಕ್ಷವಾಗಿದೆ. ನಗರದ ವಿವಿಧೆಡೆ ಬೆಳಗ್ಗೆಯಿಂದ ಮಳೆಯಾಗುತ್ತಿದೆ. ಸಿಟಿಯಲ್ಲಿ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಮಳೆ ಅರಂಭವಾಗಿದೆ. ಜೋರು ಮಳೆಯಾಗಿ ಸ್ವಲ್ಪ ಬಿಡುವು ನೀಡುತ್ತಿದೆ. ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯು ಸಾಧಾರಣದಿಂದ ಜೋರು ಮಳೆಯಾಗುತ್ತಿದೆ. ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ವಿವಿಧೆಡೆಯು ಮಳೆಯಾಗುತ್ತಿದೆ. ಇದನ್ನೂ ಓದಿ » ಇನ್‌ಸ್ಟಾಗ್ರಾಂನಲ್ಲಿ ಸಹೋದರಿಯ ಫೋಟೊ ಕಂಡು ಯುವಕನಿಗೆ ಶಾಕ್‌, … Read more

ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗರಂ, ಏನಂದ್ರು ಸದಸ್ಯ ಶಶಿಧರ ಕೋಸಂಬೆ?

Shashidhar-Kosambe-speaks-about-9-standard-student

ಬೆಂಗಳೂರು: ಶಿವಮೊಗ್ಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿ (Student) ಗಂಡು ಮಗುವಿಗೆ ಜನ್ಮ ನೀಡಿರುವ ಪ್ರಕರಣ ಸಂಬಂಧ ತಕ್ಷಣ ಪ್ರಕರಣ ದಾಖಲು ಮಾಡಿಕೊಂಡು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಶಶಿಧರ ಕೋಸಂಬೆ, ಪೋಕ್ಸೊ ಕಾಯ್ದೆ ಪ್ರಕಾರ ಘಟನೆ ನಡೆದು 24 ಗಂಟೆಯೊಳಗೆ ಪ್ರಕರಣ ದಾಖಲಿಸಿಕೊಳ್ಳಬೇಕು. ತ್ವರಿತವಾಗಿ ತನಿಖೆ ನಡೆಸಬೇಕು. ಘಟನೆ ಕುರಿತು ಶಿವಮೊಗ್ಗದ ಹೆಚ್ಚುವರಿ ರಕ್ಷಣಾಧಿಕಾರಿ ಜೊತೆ ಚರ್ಚೆ ಮಾಡಿದ್ದೇನೆ. ಈವರೆಗೆ ಪ್ರಕರಣ … Read more

ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ, ಮಾಜಿ ಕಾರ್ಪೊರೇಟರ್‌ ಗರಂ, ವಿಶ್ವಾಸ್‌ ಏನೆಲ್ಲ ಹೇಳಿದರು?

Former-Corporator-E-Vishwas.

ಶಿವಮೊಗ್ಗ: ಮಹಾನಗರ ಪಾಲಿಕೆ ಚುನಾವಣೆ ನಡೆಯದೆ ವರ್ಷಗಳೇ ಉರುಳಿವೆ. ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಕೂಡಲೇ ಪಾಲಿಕೆಗೆ ಚುನಾವಣೆ ನಡೆಸಬೇಕು. ಆಯುಕ್ತರು ಭ್ರಷ್ಟಾಚಾರ (Corruption) ತಡೆಗೆ ಮತ್ತು ನಗರದ ಅವ್ಯವಸ್ಥೆ ಸರಿಪಡಿಸಲು ಗಮನಹರಿಸಬೇಕು ಎಂದು ರಾಷ್ಟ್ರಭಕ್ತ ಬಳಗದ ಮುಖಂಡ ಈ. ವಿಶ್ವಾಸ್ ಆಗ್ರಹಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಾಸ್‌, ಇಲ್ಲಿನ ಸಮುದಾಯ ಸಂಘಟನಾಧಿಕಾರಿ ಎ.ಪಿ.ಶಶಿಧರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಸಾಕ್ಷಿ ಸಮೇತ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಶ್ವಾಸ್‌ ಏನೆಲ್ಲ … Read more

ಇನ್‌ಸ್ಟಾಗ್ರಾಂನಲ್ಲಿ ಸಹೋದರಿಯ ಫೋಟೊ ಕಂಡು ಯುವಕನಿಗೆ ಶಾಕ್‌, ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

Instagram-Cyber-Crime-Shimoga-Station.

ಶಿವಮೊಗ್ಗ: ಮಹಿಳೆಯೊಬ್ಬರ ಫೋಟೊ ಮೇಲೆ ಅಶ್ಲೀಲವಾಗಿ ಬರೆದು ಇನ್‌ಸ್ಟಾಗ್ರಾಂ (Instagram) ಖಾತೆಯೊಂದರಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಶಿವಮೊಗ್ಗದ ಗೃಹಿಣಿಯ (ಹೆಸರು ಗೌಪ್ಯ) ಸಹೋದರ ಇನ್‌ಸ್ಟಾಗ್ರಂ ನೋಡುತ್ತಿದ್ದಾಗ ಅವರ ಸಹೋದರಿಯ ಫೋಟೊ ಕಾಣಿಸಿದೆ. ಅದರ ಮೇಲೆ ಆಶ್ಲೀಲ ಬರೆವಣಿಗೆ ಇತ್ತು. ಇದನ್ನು ಸಹೋದರಿಗೆ ತೋರಿಸಿದ್ದ. ಹಾಗಾಗಿ, ತನ್ನ ಫೋಟೊವನ್ನು ಕದ್ದು ಅನುಮತಿ ಇಲ್ಲದೆ ಅಪ್ಲೋಡ್‌ ಮಾಡಿದ್ದಲ್ಲದೆ ಅದರ ಮೇಲೆ ಆಶ್ಲೀಲವಾಗಿ ಬರೆಯಲಾಗಿದೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ. … Read more

ಶಿವಮೊಗ್ಗದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ

SHIMOGA-NEWS-UPDATE

ಶಿವಮೊಗ್ಗ: ಯಾದಗಿರಿ ಜಿಲ್ಲೆಯಲ್ಲಿ 9ನೇ ತರಗತಿ ಬಾಲಕಿ ಮಗುವಿನ ಜನ್ಮ ನೀಡಿದ ಪ್ರಕರಣದ ಬೆನ್ನಿಗೆ ಶಿವಮೊಗ್ಗದಲ್ಲಿಯು ಇಂತಹುದೆ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಎರಡು ದಿನದ ಹಿಂದೆ 9ನೇ ತರಗತಿಯ ವಿದ್ಯಾರ್ಥಿನಿ (Student) ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. 15 ವರ್ಷದ ಬಾಲಕಿಯೊಬ್ಬಳು ಈಚೆಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಕಳೆದ ಎರಡು ದಿನದ ಹಿಂದೆ ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. 7 ತಿಂಗಳ ಗಂಡು ಶಿಶು 1.8 ಕೆ.ಜಿ ತೂಕವಿದೆ. ಕೂಡಲೆ ಮಗು ಮತ್ತು ಬಾಲಕಿಯನ್ನು … Read more

ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿಗಳು

Speed News - Shivamogga District

ಶಿವಮೊಗ್ಗ: ಜಿಲ್ಲೆಯಲ್ಲಿ ಈವರೆಗು ಏನೇನಾಯ್ತು? ಇಲ್ಲಿದೆ ಸ್ಪೀಡ್‌ ನ್ಯೂಸ್‌. (Speed News) ಇದನ್ನೂ ಓದಿ » ಶಿವಮೊಗ್ಗದಲ್ಲಿ ಸರ್ಕಾರಿ ಆಂಬುಲೆನ್ಸ್‌ ಚಾಲಕನಿಗೆ ₹10,000 ದಂಡ, ಕಾರಣವೇನು? Shivamogga Speed News

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್‌ ಸ್ಪೋಟ, ಯುವಕನಿಗೆ ತೀವ್ರ ಗಾಯ

sagara-generator-incident-one-admitted-to-hospital.

ಸಾಗರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಳೆದ ರಾತ್ರಿ ಜನರೇಟರ್‌ (Generator) ಸ್ಪೋಟಗೊಂಡು ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡಿದ್ದಾರೆ. ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲೋಕೇಶ್‌ ಡಿಗಟೆಕೊಪ್ಪ ಎಂಬವವರು ತೀವ್ರ ಗಾಯಗೊಂಡಿದ್ದಾರೆ. ಮಾಸ್ತಿಕಂಬ ಗಣೇಶೋತ್ಸವ ಸಮಿತಿಯ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಡಿಗಟೆಕೊಪ್ಪ ಗ್ರಾಮದಲ್ಲಿ ಘಟನೆಯಾಗಿದೆ. ಜನರೇಟರ್‌ ಸ್ಪೋಟದಿಂದ ಲೋಕೇಶ್‌ ಗಾಯಗೊಂಡಿದ್ದರು. ಗಾಯಾಳುವನ್ನು ಸ್ಥಳೀಯ ಯುವಕರು ಕೂಡಲೆ ಅಂಬುಲೆನ್ಸ್‌ನಲ್ಲಿ ಸಾಗರದ ಆಸ್ಪತ್ರೆಗೆ ರವಾನಿಸಿದ್ದರು. ಅದೃಷ್ಟವಶಾತ್‌ ದೊಡ್ಡ ಅನಾಹುತ … Read more

ಶಿವಮೊಗ್ಗದಲ್ಲಿ ಬೈಕ್‌ಗಳು ಮುಖಾಮುಖಿ ಡಿಕ್ಕಿ, ನ್ಯಾಮತಿಯ ವ್ಯಕ್ತಿ ಸಾವು

ACCIDENT-NEWS-GENERAL-IMAGE.

ಶಿವಮೊಗ್ಗ: ಓವರ್‌ ಟೇಕ್‌ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಮತ್ತೊಂದು ಬೈಕ್‌ ಡಿಕ್ಕಿ (Mishap) ಹೊಡೆದಿದೆ. ಘಟನೆಯಲ್ಲಿ ಓರ್ವ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಗೆಜ್ಜೇನಹಳ್ಳಿ ಮತ್ತು ಜಕಾತಿಕೊಪ್ಪ ಮಧ್ಯೆ ಘಟನೆ ಸಂಭವಿಸಿದೆ. ನ್ಯಾಮತಿಯ ಚಿನ್ನಿಕಟ್ಟೆ ನಿವಾಸಿ ನರಸಿಂಹ (25) ಎಂಬಾತ ಮೃತಪಟ್ಟಿದ್ದಾರೆ. ಕೆಲಸದ ನಿಮಿತ್ತ ನರಸಿಂಹ ತೆರಳುತ್ತಿದ್ದ ಬೈಕ್‌ಗೆ ಎದುರಿನಿಂದ ಬಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ನರಸಿಂಹಗೆ ತೀವ್ರ ಗಾಯವಾಗಿತ್ತು. ಕೂಡಲೆ ಆತನನ್ನು ಮೆಗ್ಗಾನ್‌ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಕಡಿಮೆಯಾದ ಮಳೆ, ಇವತ್ತು ಏನಿದೆ ಅಲರ್ಟ್?‌ ತಾಪಮಾನ ಎಷ್ಟಿರುತ್ತೆ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ. ಇದರ ಬೆನ್ನಿಗೆ ಬಿಸಿಲು ಆವರಿಸಿದೆ. (Weather) ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವು ದಿನದಿಂದ ಭಾರಿ ಮಳೆಯಾಗಿತ್ತು. ಆದರೆ ಎರಡು ದಿನದಿಂದ ಮಳೆ ಕಡಿಮೆಯಾಗಿದೆ. ಇನ್ನು, ಹವಾಮಾನ ಇಲಾಖೆ ಇವತ್ತು ಜಿಲ್ಲೆಗೆ ಯಾವುದೇ ಅಲರ್ಟ್‌ ಪ್ರಕಟಿಸಿಲ್ಲ. ಆದರೆ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 28 ಡಿಗ್ರಿ … Read more

ಶಿವಮೊಗ್ಗದಲ್ಲಿ ಸರ್ಕಾರಿ ಆಂಬುಲೆನ್ಸ್‌ ಚಾಲಕನಿಗೆ ₹10,000 ದಂಡ, ಕಾರಣವೇನು?

Fine-for-108-Ambulance-driver-in-Shimoga

ಶಿವಮೊಗ್ಗ: ಮದ್ಯ ಸೇವನೆ ಮಾಡಿ ಆಂಬುಲೆನ್ಸ್‌ ಚಾಲನೆ ಮಾಡುತ್ತಿದ್ದ ಚಾಲಕನಿಗೆ ₹10,000 ದಂಡ (Fine) ವಿಧಿಸಲಾಗಿದೆ. ಆ.25ರಂದು ವಾಹನಗಳ ತಪಾಸಣೆ ವೇಳೆ ಸರ್ಕಾರಿ ಆಂಬುಲೆನ್ಸ್‌ ಚಾಲಕನೊಬ್ಬ ಮದ್ಯ ಸೇವಿಸಿರುವ ಅನುಮಾನ ಬಂದಿತ್ತು. ಆಂಬುಲೆನ್ಸ್‌ ತಡೆದು ಚಾಲಕನನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯ ಸೇವಿಸಿರುವುದು ದೃಢವಾಗಿದೆ. ಈ ಹಿನ್ನೆಲೆ ಪಿಎಸ್‌ಐ ತಿರುಮಲೇಶ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆಂಬುಲೆನ್ಸ್‌ ಚಾಲಕನಿಗೆ ದಂಡ ವಿಧಿಸಿದೆ. ವಾಹನ ತಪಾಸಣೆ ವೇಳೆ ಪಶ್ಚಿಮ ಸಂಚಾರ … Read more