ಬಿಳಿ ಕಾಮಾಲೆಗೆ ತೀರ್ಥಹಳ್ಳಿಯ ವಿದ್ಯಾರ್ಥಿನಿ ಸಾವು

Thirthahalli-News-Update

ತೀರ್ಥಹಳ್ಳಿ : ಬಿಳಿ ಕಾಮಾಲೆ ಕಾಯಿಲೆಯಿಂದ (Jaundice) ಬಳಲುತ್ತಿದ್ದ ವಿದ್ಯಾರ್ಥಿನಿ ಐಸಿರಿ ಹೆಚ್.ಯು. (14) ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ. ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್‌ಇ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಕೆಲವು ದಿನಗಳ ಹಿಂದೆ ಶಾಲೆಯಲ್ಲಿ ತಲೆಸುತ್ತು ಬಂದು ಬಿದ್ದಿದ್ದಳು. ಪೋಷಕರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದರು. ಐಸಿರಿ, ಹೆಗ್ಗೋಡು ಗ್ರಾಮದ ಪ್ರತಿಮಾ ಮತ್ತು ಉಪೇಂದ್ರ ದಂಪತಿಯ ಪುತ್ರಿ. ಇದನ್ನೂ ಓದಿ » ಅಪಘಾತ ತಪ್ಪಿಸಲು ರಸ್ತೆ ಕ್ಲೀನ್‌ ಮಾಡಿದ ಶಿವಮೊಗ್ಗದ … Read more

ಯಡಿಯೂರಪ್ಪ ಜನ್ಮದಿನ, ವಿಷ್‌ ಮಾಡಿದ್ರಾ ಈ‍ಶ್ವರಪ್ಪ? ಏನಂದ್ರು?

Former-Minister-KS-Eshwarappa

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನಕ್ಕೆ (Birthday) ಶುಭಕೋರಿದರಾ ಎಂಬ ಪ್ರಶ್ನೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತುಸು ಸಿಡಿಮಿಡಿಗೊಂಡರು. ಅಲ್ಲದೆ ಎಲ್ಲವನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದನ್ನು ಬಿಡಬೇಕು ಎಂದು ತಿಳಿಸಿದರು. ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಈಶ್ವರಪ್ಪ ಅವರಿಗೆ ಪತ್ರಕರ್ತರು, ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ವಿಷ್‌ ಮಾಡಿದ್ರಾ ಎಂದು ಪ್ರಶ್ನಿಸಿದರು. ಆಗ ಈಶ್ವರಪ್ಪ, ಇವತ್ತು ನಾನು ಈ ಸ್ಥಿತಿಯಲ್ಲಿ ಇರಲು ಯಡಿಯೂರಪ್ಪ ಕೂಡ ಕಾರಣ ಎಂದರು. ಈಶ್ವರಪ್ಪ ಏನೆಲ್ಲ ಹೇಳಿದರು? ಯಡಿಯೂರಪ್ಪ ನನ್ನ ಗುರು. … Read more

ಅಡಿಕೆ ಧಾರಣೆ | 27 ಫೆಬ್ರವರಿ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ : ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 17515 30189 ಬೆಟ್ಟೆ 43110 56200 ರಾಶಿ 30009 51669 ಸರಕು 52199 91770 ಇದನ್ನೂ ಓದಿ » ಅಡಿಕೆ ಧಾರಣೆ | 25 ಫೆಬ್ರವರಿ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ಅಪಘಾತ ತಪ್ಪಿಸಲು ರಸ್ತೆ ಕ್ಲೀನ್‌ ಮಾಡಿದ ಶಿವಮೊಗ್ಗದ ಸಂಚಾರ ಪೊಲೀಸರು, ಆಗಿದ್ದೇನು?

Traffic-Police-clean-the-road-at-ayanuru-circle-in-Shimoga-sagara-road

ಶಿವಮೊಗ್ಗ : ರಸ್ತೆ ಮೇಲೆ ಆಯಿಲ್‌ (Oil) ಚೆಲ್ಲಿ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗುತ್ತಿದ್ದರಿಂದ ಸಂಚಾರ ಠಾಣೆ ಪೊಲೀಸರೆ ರಸ್ತೆ ಕ್ಲೀನ್‌ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯ ಆಯನೂರು ಸರ್ಕಲ್‌ ಸಮೀಪ ಇಂದು ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕಳೆದ ಎರಡು ದಿನದ ಹಿಂದೆ ವಾಹನವೊಂದರಲ್ಲಿ ಆಯಿಲ್‌ ಸಾಗಿಸುತ್ತಿದ್ದಾಗ ಆಯನೂರು ಸರ್ಕಲ್‌ನಲ್ಲಿ ಚೆಲ್ಲಿತ್ತು. ಸರ್ಕಲ್‌ನಲ್ಲಿ ವಾಹನಗಳು ಸಾಗುವಾಗ ಸ್ಕಿಡ್‌ ಆಗುತ್ತಿತ್ತು. ಈ ಸಂಬಂಧ ದೂರು ಬಂದಿತ್ತು. ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದರಿಂದ ಇವತ್ತು … Read more

ತ್ಯಾವರೆಕೊಪ್ಪ ಮೃಗಾಲಯದ ಮತ್ತೊಂದು ಹುಲಿ ಸಾವು, ಈ ವರ್ಷದಲ್ಲಿ ಎರಡನೇ ಟೈಗರ್‌ ಕೊನೆಯುಸಿರು

tiger-vijay-succumbed-at-Tyavarekoppa

ಶಿವಮೊಗ್ಗ : ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಏಕೈಕ ಗಂಡು ಹುಲಿ (Tiger) ವಿಜಯ್‌ ಇಂದು ಕೊನೆಯುಸಿರೆಳೆದಿದೆ ಎಂದು ಹುಲಿ ಮತ್ತು ಸಿಂಹಧಾಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಜನಿಸಿದ್ದ ವಿಜಯ್‌ (17), ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಕಳೆದ ಒಂದು ತಿಂಗಳಿಂದ ವಿಜಯ್‌ ನಿಯಮಿತವಾಗಿ ಆಹಾರ ಸೇವಿಸುತ್ತಿರಲಿಲ್ಲ. ಸ್ನಾಯುಗಳಲ್ಲಿ ಸಮಸ್ಯೆ ಉಂಟಾಗಿತ್ತು ಎಂದು ತಿಳಿಸಲಾಗಿದೆ. ಮೃಗಾಲಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು ವಿಜಯ್‌ ಹುಲಿ. ಇಡೀ ಜೀವನ ಪ್ರಕೃತಿ ಶಿಕ್ಷಣ ಉದ್ದೇಶಕ್ಕೆ ಮೀಸಲಾಗಿತ್ತು. ವಿಜಯ್‌ ಸಾವಿನಿಂದ ಮೃಗಾಲಯಕ್ಕೆ ದೊಡ್ಡ … Read more

ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

Shivamogga-Court-Balaraja-Urs-Road

ಶಿವಮೊಗ್ಗ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ (Jail) ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿದೆ. ಏನಿದು ಕೇಸ್‌? 2022ರಲ್ಲಿ ಭದ್ರಾವತಿ ನ್ಯೂ ಟೌನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 19 ವರ್ಷದ ಯುವಕನೊಬ್ಬ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಬಾಲಕಿ ನೀಡಿದ್ದ ದೂರಿನ ಹಿನ್ನೆಲೆ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. … Read more

ಫೆ.26, 27ರಂದು ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ

Shimoga-Police-Barricade-Checkpost

ಶಿವಮೊಗ್ಗ : ಫೆ.26 ಮತ್ತು 27 ರಂದು ಶಿವಮೊಗ್ಗ ನಗರದ  ಹರಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ನಿಮತ್ತ ಜಾತ್ರೆ ನಡೆಯಲಿದೆ. ಆದ್ದರಿಂದ ಫೆ.26ರ ಬೆಳಗ್ಗಿನ ಜಾವ 4 ರಿಂದ 27ರ ಬೆಳಗಿನ ಜಾವದವರೆಗೆ ದೊಡ್ಡ ಸಂಖ್ಯೆಯ ಭಕ್ತರು ಭೇಟಿ ನೀಡಲಿದ್ದಾರೆ. (Route Change) ಇನ್ನು, ಸೂಳೆಬೈಲು ಬೆಟ್ಟದ ಮಲ್ಲೇಶ್ವರ ದೇವಾಲಯಕ್ಕೂ ಅಧಿಕ ಸಂಖ್ಯೆಯ ಭಕ್ತರು ಭೇಟಿ ನೀಡಲಿದ್ದಾರೆ. ಆದ್ದರಿಂದ ವಿವಿಧೆಡೆ ತಾತ್ಕಾಲಿಕವಾಗಿ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ … Read more

ಅಡಿಕೆ ಧಾರಣೆ | 25 ಫೆಬ್ರವರಿ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ : ಶಿವಮೊಗ್ಗ ಮತ್ತು ಸಾಗರ ಮಾರುಕಟ್ಟೆಯಲ್ಲಿ ಇವತ್ತು ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 16211 30189 ಬೆಟ್ಟೆ 47589 56750 ರಾಶಿ 32009 51669 ಸರಕು 52000 92996 ಸಾಗರ ಮಾರುಕಟ್ಟೆ ಕೆಂಪುಗೋಟು 8700 17569 ಚಾಲಿ 29899 32849 ಬಿಳೆ ಗೋಟು 14800 18501 ರಾಶಿ 43009 50619 ಸಿಪ್ಪೆಗೋಟು 5020 16401 ಇದನ್ನೂ ಓದಿ » ಶಿವಮೊಗ್ಗ ಬಸ್‌ ನಿಲ್ದಾಣದ ಮುಂದೆ ಪ್ರತಿಕೃತಿಗೆ ಬೆಂಕಿ, ಮಹಾರಾಷ್ಟ್ರ ಬಸ್‌ ಸಿಬ್ಬಂದಿಗೆ … Read more

ಶಿವಮೊಗ್ಗ ಬಸ್‌ ನಿಲ್ದಾಣದ ಮುಂದೆ ಪ್ರತಿಕೃತಿಗೆ ಬೆಂಕಿ, ಮಹಾರಾಷ್ಟ್ರ ಬಸ್‌ ಸಿಬ್ಬಂದಿಗೆ ಮಸಿ ಬಳಿಯುವ ವಾರ್ನಿಂಗ್

Karave-Protest-in-Shimoga-against-MES-and-maharashtra.

ಶಿವಮೊಗ್ಗ : ಮರಾಠಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ KSRTC ಬಸ್‌ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ ಮರಾಠಿ ಪುಂಡರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು, ದಾಳಿಕೋರರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ‘ಬಸ್ಸುಗಳ ಸಿಬ್ಬಂದಿಗೆ ಮಸಿ ಬಳಿಯುತ್ತೇವೆʼ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರನ್ನು … Read more

ಶಿವಮೊಗ್ಗದಿಂದ ಹೊರಟ ವಿಶೇಷ ರೈಲು, ಕುಂಭ ಮೇಳದತ್ತ ಸಾವಿರಕ್ಕೂ ಹೆಚ್ಚು ಭಕ್ತರು

special-train-to-mahakumba-mela-flagged-by-BY-Raghavendra-from-shimoga.

ಶಿವಮೊಗ್ಗ : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಸಾವಿರಕ್ಕೂ ಅಧಿಕ ಜನರು ಇವತ್ತು ಶಿವಮೊಗ್ಗದಿಂದ ವಿಶೇಷ ರೈಲಿನಲ್ಲಿ (Special Train) ತೆರಳಿದರು. ಸಂಸದ ಬಿ.ವೈ.ರಾಘವೇಂದ್ರ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಸಂಜೆ 4.40ಕ್ಕೆ ಉತ್ತರ ಪ್ರದೇಶದಿಂದ ಪ್ರಯಾಗ್‌ರಾಜ್‌ಗೆ ರೈಲು ಹೊರಟಿತು. ಸೆಲ್ಫಿ, ಫೋಟೊ ತೆಗೆದು ಸಂಭ್ರಮ ಕುಂಭ ಮೇಳ ಕಣ್ತುಂಬಿಕೊಳ್ಳಲು ಮತ್ತು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಜಿಲ್ಲೆಯ ವಿವಿಧೆಡೆಯ ಸಾವಿರಕ್ಕೂ ಅಧಿಕ ಮಂದಿ ಶಿವಮೊಗ್ಗದಿಂದ … Read more